ಬಿಗ್‌ಬಾಸ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಸ್ಪರ್ಧಿ

ಸ್ಪರ್ಧಿಗಳನ್ನು ವಿವಿಧ ರೀತಿಯ ಸನ್ನಿವೇಶಗಳಲ್ಲಿ ಸಿಲುಕಿಸಿ ಆಯಾ ಸನ್ನಿವೇಶಕ್ಕೆ ಆ ಸ್ಪರ್ಧಿಗಳು ಹೇಗೆ ವರ್ತಿಸುತ್ತಾರೆ ಎಂಬುದನ್ನು ವೀಕ್ಷಿಸಿಗೆ ತೋರಿಸುವ ರಿಯಾಲಿಟಿ ಶೋ ಬಿಗ್‌ಬಾಸ್. ಭಾರತದ ಅತಿ ಹೆಚ್ಚು ಟಿಆರ್‌ಪಿ ಪಡೆವ ಶೋಗ ಇದಾಗಿದೆ.

ನೂರಾರು ಕ್ಯಾಮೆರಾಗಳ ಮಧ್ಯೆ, ಕೋಟ್ಯಂತರ ಜನರು ತಮ್ಮ ಪ್ರತಿ ಕದಲಿಕೆಯನ್ನೂ ನೋಡುತ್ತಿರುತ್ತಾರೆ ಎಂಬ ಎಚ್ಚರಿಕೆಯ ಮಧ್ಯೆ, ಬಿಗ್‌ಬಾಸ್ ನೀಡುವ ಚಿತ್ರ-ವಿಚಿತ್ರ ಟಾಸ್ಕ್‌ ಹಾಗೂ ಇತರ ಸ್ಪರ್ಧಿಗಳು ತಮ್ಮ ಬಗ್ಗೆ ಹೊಂದಿರುವ ಅಭಿಪ್ರಾಯ, ನಾಮಿನೇಶನ್ ಭೀತಿ ಇನ್ನೂ ಹಲವು ಒತ್ತಡಗಳ ನಡುವೆ ಬಿಗ್‌ಬಾಸ್ ಶೋ ನಲ್ಲಿ ಸ್ಪರ್ಧಿಗಳು ಆಡುತ್ತಿರುತ್ತಾರೆ.

ಸ್ಪರ್ಧಿಗಳು ತೀವ್ರ ಒತ್ತಡದಲ್ಲಿರುತ್ತಾರಾದ್ದರಿಂದ ಕೆಲವೊಮ್ಮೆ ಬೇರೆ ರೀತಿಯಾಗಿಯೇ ಸ್ಪರ್ಧಿಗಳು ವರ್ತಿಸುತ್ತಾರೆ. ಖಿನ್ನತೆಯ ಸಂಭವವೂ ಇರುತ್ತದೆ. ಇದೀಗ ಬಿಗ್‌ಬಾಸ್ ಹಿಂದಿ ರಿಯಾಲಿಟಿ ಶೋ ನಡೆಯುತ್ತಿದ್ದು, ಶೋನ ಸ್ಪರ್ಧಿಯೊಬ್ಬರು ಬಿಗ್‌ಬಾಸ್‌ ಮನೆಯ ಒಳಗೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

Bigg Boss Contestant Abhijit Threatens To Consume Poison In Bigg Boss House

ಅಭಿಜಿತ್ ಬಿಚುಕಲೆ, ತಾನು ಬಿಗ್‌ಬಾಸ್ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸಹ ಸ್ಪರ್ಧಿ ನಿಶಾಂತ್ ಭಟ್ ಬಳಿ ಹೇಳಿದ್ದಾರೆ. ಇದು ಬಿಗ್‌ಬಾಸ್ ಮನೆಯಲ್ಲಿ ಆತಂಕ ಉಂಟುಮಾಡಿದೆ.

ನಿಶಾಂತ್ ಭಟ್ ಬಳಿ ಕೂದಲಿಗೆ ಹಾಕುವ ಕಲರ್ (ಹೇರ್‌ ಡೈ) ಕೇಳಿದ ಅಭಿಜಿತ್ ಬಿಚುಕಲೆ ಆ ಹೇರ್‌ ಡೈ ಅನ್ನು ವಿಷದ ರೂಪದಲ್ಲಿ ಕುಡಿಯುವುದಾಗಿ ಹೇಳಿದ್ದಾರೆ.

ಅಭಿಜಿತ್‌ನ ಈ ಮಾತು ಕೇಳಿ ಆತಂಕಕ್ಕೆ ಒಳಗಾಗಿರುವ ನಿಶಾಂತ್ ಭಟ್, ಅಭಿಜಿತ್‌ಗೆ ಸಮಾಧಾನದ ಮಾತುಗಳನ್ನು ಹೇಳಿದ್ದಾರೆ. 'ಇನ್ನು ಮುಂದೆ ಈ ರೀತಿಯ ಆಲೋಚನೆ ಮಾಡಬೇಡ' ಎಂದು ಅಭಿಜಿತ್‌ಗೆ ನಿಶಾಂತ್ ಬುದ್ಧಿ ಹೇಳಿದ್ದಾರೆ. ಅಭಿಜಿತ್ ಸಹ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ ವಿಷಯವನ್ನು ಯಾರೊಂದಿಗೂ ಹೇಳಿಕೊಳ್ಳಬೇಡ ಎಂದು ನಿಶಾಂತ್ ಬಳಿ ಮನವಿ ಮಾಡಿದ್ದರು. ಆದರೆ ನಿಶಾಂತ್ ಈ ವಿಷಯವನ್ನು ಮನೆಯ ಸದಸ್ಯರ ಮುಂದೆ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಮ್ಯೂಸಿಯಂ ಟಾಸ್ಕ್ ಎಂಬ ವಿಶೇಷ ಟಾಸ್ಕ್ ಅನ್ನು ಮನೆಯ ಸದಸ್ಯರಿಗೆ ಬಿಗ್‌ಬಾಸ್ ನೀಡಿದ್ದರು. ಆ ಟಾಸ್ಕ್‌ನಲ್ಲಿ ಭಾಗವಹಿಸಿದ್ದ ಅಭಿಜಿತ್, ಸಹಸ್ಪರ್ಧಿ ದಿವೋಲಿನಾ ಅವರ ಕಲಾಕೃತಿಗಳನ್ನು ಕದ್ದಿದ್ದರು. ತಮ್ಮ ಕಲಾಕೃತಿಗಳನ್ನು ವಾಪಸ್ ಕೊಡುವಂತೆ ಕೇಳಿದಾಗ, ತನಗೆ ಮುತ್ತು ಕೊಟ್ಟರೆ ಮಾತ್ರವೇ ಕಲಾಕೃತಿಗಳನ್ನು ವಾಪಸ್ ಕೊಡುವುದಾಗಿ ಅಭಿಜಿತ್ ಹೇಳಿದ್ದರು. ಇದು ದಿವೋಲಿನಾಳನ್ನು ಕೆರಳಿಸಿತ್ತು.

''ಅಭಿಜಿತ್‌ ವರ್ತನೆ ಸರಿಯಿಲ್ಲ. ಅವರ ಉದ್ದೇಶಗಳು ಕೆಟ್ಟ ರೀತಿಯಾಗಿವೆ. ಅವನೊಂದಿಗೆ ನಾನು ಮಾತನಾಡುವುದಿಲ್ಲ. ಅವನೊಂದಿಗೆ ಸ್ನೇಹವನ್ನೂ ಸಹ ಬೆಳೆಸುವುದಿಲ್ಲ'' ಎಂದು ದಿವೋಲಿನಾ ಹೇಳಿದ್ದರು. ಮನೆಯ ಇತರ ಸದಸ್ಯರು ಸಹ ಅಭಿಜಿತ್‌ನ ವರ್ತನೆಯನ್ನು ಖಂಡಿಸಿದ್ದರು.

ಆ ನಂತರ ಅಭಿಜಿತ್ ಈ ಘಟನೆ ಬಗ್ಗೆ ಕ್ಷಮೆ ಕೇಳಿದರಾದರೂ ಸಹ ಸ್ಪರ್ಧಿಗಳ ವರ್ತನೆಗಳಲ್ಲಿ ಬದಲಾಗಲಿಲ್ಲ. ಹಾಗಾಗಿ ಖಿನ್ನತೆಗೆ ಒಳಗಾಗಿರುವ ಅಭಿಜಿತ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಬಿಗ್‌ಬಾಸ್ ಮನೆಯಲ್ಲಿದ್ದ ಪಂಜಾಬಿ ಗಾಯಕಿ ಅಫ್ಸಾನಾ ಸಹ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದರು. ಚಾಕು ಹಿಡಿದುಕೊಂಡು ಆತ್ಮಹತ್ಯೆಗೆ ಮುಂದಾಗಿದ್ದರು ಅಫ್ಸಾನಾ. ಅವರನ್ನು ಮನೆಯ ಇತರೆ ಸ್ಪರ್ಧಿಗಳು ಹಿಡಿದು ಸಮಾಧಾನಗೊಳಿಸಿದರು. ಆದರೆ ಅಫ್ಸಾನಾ ಅಂದು ವರ್ತಿಸಿದ ರೀತಿ ಮನೆಯ ಇತರ ಸದಸ್ಯರಿಗೆ ತೀವ್ರ ಆತಂಕ ತಂದಿತ್ತು. ಜೊತೆಗೆ ಆಯೋಜಕರಿಗೆ ಆತಂಕ ತಂದಿತ್ತು ಹಾಗಾಗಿ ಅಫ್ಸಾನಾರನ್ನು ಮನೆಯಿಂದ ಹೊರಗೆ ಕಳುಹಿಸಲಾಗಿದೆ.

More from Filmibeat

English summary
Bigg Boss Hindi contestant Abhijit threatens to consume poison in Bigg Boss house. Abhijit said he would drink hair color as poison.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X