twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್‌ ಬಾಸ್‌ನಲ್ಲಿ ಬೈಕರ್ ಐಶ್ವರ್ಯಾ ಪಿಸೆ: ಕಿಚ್ಚ ಸುದೀಪ್‌ ಕೂಡ ಮೆಚ್ಚಿರುವ ಇವರ ಸಾಧನೆಗಳೇನು..?

    |

    ಬಿಗ್‌ ಬಾಸ್‌ ಸೀಸನ್‌ 9 ಈಗಾಗಲೇ ಆರಂಭವಾಗಿದೆ. ಹಲವು ಕಾರಣಗಳಿಂದ ಈ ಬಾರಿಯ ಬಿಗ್‌ ಬಾಸ್‌ ಭಿನ್ನವಾಗಿದೆ. ಪ್ರೋಮೋದಲ್ಲೇ ಕುತೂಹಲ ಹುಟ್ಟು ಹಾಕಿದ್ದ ಬಿಗ್‌ ಬಾಸ್‌ ಸೀಸನ್‌ 9ರಲ್ಲಿ ವಿಭಿನ್ನ ವ್ಯಕ್ತಿತ್ವಗಳನ್ನು ಒಗ್ಗೂಡಿಸಲಾಗಿದೆ. ಬಿಗ್‌ ಬಾಸ್‌ ಹಳೆಯ ಸೀಸನ್‌ ಸ್ಫರ್ಧಿಗಳು, ಓಟಿಟಿಯಿಂದ ಬಂದ ಸ್ಫರ್ಧಿಗಳ ಜೊತೆ ಹೊಸಬರು ಸೇರಿ ಒಟ್ಟು 18 ಸ್ಫರ್ಧಿಗಳು ಈಗಾಗಲೇ ಬಿಗ್‌ ಬಾಸ್‌ ಮನೆಯೊಳಗೆ ಪ್ರವೇಶಿಸಿದ್ದಾರೆ.

    ನಟಿ ಮಯೂರಿ, ಸೈಕ್‌ ನವಾಜ್‌, ನಟ ದರ್ಶ ಚಂದ್ರಪ್ಪ, ಕಮಲಿ ಧಾರಾವಾಹಿ ನಟಿ ಅಮೂಲ್ಯ, ಹಾಸ್ಯ ನಟ ವಿನೋದ್‌ ಗೊಬ್ಬರ, ಲಕ್ಷ್ಮೀ ಬಾರಮ್ಮ ಖ್ಯಾತಿಯ ನೇಹಾ ಗೌಡ, ಕನ್ನಡ ಪರ ಹೋರಾಟಗಾರ ರೂಪೇಶ್‌ ರಾಜಣ್ಣ, ಬೈಕರ್‌ ಐಶ್ವರ್ಯಾ ಪಿಸೆ, ಮಂಗಳ ಗೌರಿ ಖ್ಯಾತಿಯ ಕಾವ್ಯಾಶ್ರೀ, ಮೊದಲ ಬಾರಿಗೆ ಬಿಗ್‌ ಬಾಸ್‌ ಮನೆಗೆ ಬಂದ ಸ್ಫರ್ಧಿಗಳಾಗಿದ್ದಾರೆ.

    ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಆಗಮಿಸಿರುವ 9 ಮಂದಿ 'ನವೀನರು' ಯಾರು, ಅವರ ಹಿನ್ನೆಲೆಯೇನು?ಬಿಗ್ ಬಾಸ್ ಮನೆಗೆ ಇದೇ ಮೊದಲ ಬಾರಿಗೆ ಆಗಮಿಸಿರುವ 9 ಮಂದಿ 'ನವೀನರು' ಯಾರು, ಅವರ ಹಿನ್ನೆಲೆಯೇನು?

    ಈ ಬಾರಿಯ ಒಂದೊಂದು ಸ್ಫರ್ಧಿಯೂ ಒಂದೊಂದು ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದು, ಈ ಪೈಕಿ ಬೈಕರ್‌ ಐಶ್ವರ್ಯಾ ಪಿಸೆ ಎಲ್ಲರ ಗಮನ ಸೆಳೆದಿದ್ದಾರೆ. ಐಶ್ವರ್ಯಾ ಪಿಸೆ ಯಾರು..? ಈಕೆಯ ಸಾಧನೆ ಏನು ಎನ್ನುವ ಕುತೂಹಲ ಎಲ್ಲರಲ್ಲಿದೆ. ಈಗಾಗಲೇ ಬೈಕರ್‌ ಐಶ್ವರ್ಯಾ ಬಗ್ಗೆ ಗೂಗಲ್‌ ಸರ್ಚ್‌ ಆರಂಭವಾಗಿದ್ದು, ಐಶ್ವರ್ಯಾ ಪಿಸೆ ಸಾಧನೆ ಬಗ್ಗೆ ಹುಡುಕಾಟ ಆರಂಭವಾಗಿದೆ.

    Bigg Boss Contestant Biker Aishwarya Pissay Achievements

    ಐಶ್ವರ್ಯಾ ಪಿಸೆ ಬಿಗ್‌ ಬಾಸ್‌ ವೇದಿಕೆಯ ಮೇಲೆ ತಮ್ಮ ಸಾಧನೆಯ ಒಂದಿಷ್ಟು ತುಣುಕುಗಳನ್ನು ಹೇಳಿಕೊಂಡಿದ್ದು, ಕಿಚ್ಚ ಸುದೀಪ್‌ ಕೂಡ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಮೂಲತಃ ಬೆಂಗಳೂರಿನವರೇ ಆದ ಐಶ್ವರ್ಯಾ ಪಿಸೆ, ಎಲ್ಲರಿಗಿನ್ನ ವಿಭಿನ್ನವಾದ ಕ್ಷೇತ್ರವನ್ನು ಆಯ್ದುಕೊಂಡರು. ತಮ್ಮ ತಂದೆಯನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡ ಐಶ್ವರ್ಯಾ, ವಿರೋಧಗಳ ನಡುವೆಯೇ ಬೈಕರ್‌ ಆದರು.

    ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚಿರುವ ಈ ಕನ್ನಡತಿಯ ಸಾಧನೆ ನಿಜಕ್ಕೂ ಎಲ್ಲರು ಮೆಚ್ಚುವಂತದ್ದು. ತಮ್ಮ 18ನೇ ವಯಸ್ಸಿಗೆ ಬೈಕ್‌ ರೈಸಿಂಗ್‌ ಆಯ್ಕೆ ಮಾಡಿಕೊಂಡ ಐಶ್ವರ್ಯಾ, 9 ವರ್ಷಗಳ ಸತತ ಪರಿಶ್ರಮದಿಂದ ಇಂದು ವಿಶ್ವ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಹಿಳಾ ಮೋಟಾರ್ ಸೈಕಲ್ ರೇಸರ್ ಆಗಿದ್ದಾರೆ.

    ವರ್ಲ್ಡ್ ಚಾಂಪಿಯನ್ ಆದ ಮೊದಲ ಭಾರತೀಯ ಮೋಟಾರ್ ಸ್ಪೋರ್ಟ್ಸ್ ಅಥ್ಲೀಟ್ ಆಗಿರುವ ಐಶ್ವರ್ಯಾ ಪಿಸೆ, ರೋಡ್ ರೇಸಿಂಗ್ ಮತ್ತು ರಾಲಿ ಚಾಂಪಿಯನ್‌ಶಿಪ್‌ನಲ್ಲೂ ನ್ಯಾಷನಲ್ ಚಾಂಪಿಯನ್ ಆಗಿದ್ದಾರೆ. ವಿಶ್ವಕಪ್‌ನಲ್ಲಿ ಭಾಗವಹಿಸಿ ಮಹಿಳೆಯರ ವಿಭಾಗದಲ್ಲಿ ಐಶ್ವರ್ಯಾ 1ನೇ ಸ್ಥಾನ ಪಡೆದಿದ್ದಾರೆ. ಅಲ್ಲದೇ ಜೂನಿಯರ್ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದ್ದರು. 10 ನ್ಯಾಷನಲ್ ಚಾಂಪಿಯನ್‌ಶಿಪ್, 2 ವಲ್ಡ್‌ ಚಾಂಪಿಯನ್‌ಶಿಪ್ ಗೆದ್ದಿರುವುದು ಐಶ್ವರ್ಯಾ ಪಿಸೆ ಅವರ ಸಾಧನೆಯಾಗಿದೆ.

    ಸ್ಪೇನ್‌ನಲ್ಲಿ ನಡೆದ ಬಾಜಾ ಅರೆಗಾನ್ ರ್ಯಾಲಿಯಲ್ಲಿ ಭಾಗವಹಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಅಷ್ಟೇ ಅಲ್ಲದೆ ಐಶ್ವರ್ಯಾ ಪಿಸೆ 2017 ರಿಂದ 2021 ರವರೆಗೆ ಸತತವಾಗಿ ಇಂಡಿಯನ್ ನ್ಯಾಷನಲ್ ರ್ಯಾಲಿ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ತಮ್ಮ ಕ್ಷೇತ್ರದಲ್ಲೇ ಕಠಿಣ ಪ್ರರಿಶ್ರಮದಿಂದ ಸಾಧನೆ ಮಾಡಿರುವ ಐಶ್ವರ್ಯಾ ಪಿಸೆ ಅವರು ಈಗಾಗಲೇ ಕ್ರೀಡಾ ವಿಭಾಗದ ಅನೇಕ ಅತ್ಯುನ್ನತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

    ಈ ಹಿಂದೆ ಬರಿ ನಟ-ನಟಿಯರು, ಸಂಗೀತಗಾರರಿಗೆ ಮೀಸಲಾಗಿದ್ದ ಬಿಗ್‌ ಬಾಸ್‌ನಲ್ಲಿ, ಕಳೆದ ಕೆಲ ಸೀಸನ್‌ಗಳಿಂದ ವಿವಿಧ ಕ್ಷೇತ್ರದ ಸ್ಫರ್ಧಿಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಈ ಹಿಂದಿನ ಸೀಸನ್‌ನಲ್ಲಿ ಕ್ರೀಡಾ ವಿಭಾಗದಿಂದ ಬೈಕರ್‌ ಅರವಿಂದ್‌ ಕೆ.ಪಿ ಅವರು ಸ್ಫರ್ಧಿಸಿ ರನ್ನರ್‌ ಅಪ್‌ ಆಗಿದ್ದರು. ಈ ಬಾರಿಯೂ ಕೂಡ ಮತ್ತೊಬ್ಬ ಬೈಕರ್‌ಗೆ ಬಿಗ್‌ ಬಾಸ್‌ ಮನೆಯಲ್ಲಿ ಅವಕಾಶ ನೀಡಲಾಗಿದ್ದು, ಮಹಿಳಾ ಬೈಕರ್‌ ಆಗಿರುವ ಐಶ್ವರ್ಯಾ ಪಿಸೆ ಇತರ ಸ್ಫರ್ಧಿಗಳನ್ನು ಹೇಗೆ ಎದುರಿಸಲಿದ್ದಾರೆ ಎಂದು ಕಾದು ನೋಡಬೇಕಿದೆ.

    English summary
    Bigg Boss Kannada session 9 Contestant Biker Aishwarya Pissay Achievements in bike racing
    Monday, September 26, 2022, 17:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X