ಆಡಿಕೊಂಡವರ ಬಾಯಿಗೆ ಬೀಗ ಜಡಿದ ಪ್ರತಾಪ್, ಕೊನೆಗೂ ಹಾರಿದ ಡ್ರೋನ್...!
ಡ್ರೋನ್ ಪ್ರತಾಪ್ ಭೂತಕಾಲ ಏನೇ ಇರಲಿ, ಆದರೆ ವರ್ತಮಾನದಲ್ಲಿ ಡ್ರೋನ್ ಪ್ರತಾಪ್ ಬಗ್ಗೆ ಸಾರ್ವತ್ರಿಕ ವಲಯದಲ್ಲಿಇದ್ದ ಅಭಿಪ್ರಾಯಗಳು ಬದಲಾಗಿವೆ. ಇವತ್ತು ಡ್ರೋನ್ ಪ್ರತಾಪ್ ಅನೇಕರ ಕಣ್ಣಿಗೆ ಸಾಧಕನಂತೆ, ಇನ್ನೂ ಕೆಲವರ ಕಣ್ಣಿಗೆ ಬುದ್ದಿವಂತನಂತೆ, ಮತಷ್ಟು ಜನರ ಕಣ್ಣಿಗೆ ಮುಗ್ದನಂತೆ ಕಾಣ್ತಿದ್ದಾರೆ. ಒಂದರ್ಥದಲ್ಲಿ ಗಂಗೆಯಲ್ಲಿ ಮುಳುಗಿ ಎದ್ದರೆ ಮಾಡಿದ ಎಲ್ಲ ಪಾಪ ಪರಿಹಾರ ಆಗುತ್ತೆ ಎಂಬ ಮಾತಿನಂತೆ, ಬಿಗ್ ಬಾಸ್ ಮನೆಯಲ್ಲಿ ಇದ್ದು ಬಂದ ನಂತರ ಡ್ರೋನ್ ಪ್ರತಾಪ್ ಬದುಕು ಬದಲಾಗಿದೆ.
ಇಂಥಾ ಡ್ರೋನ್ ಪ್ರತಾಪ್ ಕಳೆದ ವರ್ಷ ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಗೆ ತೆರಳಿದ್ದರು. ಆಗ ಡ್ರೋನ್ ಪ್ರತಾಪ್ ಅವರನ್ನು ತುಕಾಲಿ ಸಂತೋಷ್, ವರ್ತೂರ್ ಪ್ರಕಾಶ್ ಸೇರಿ ಅನೇಕರು ಗೇಲಿ ಮಾಡಿದ್ದರು. ಡ್ರೋನ್ ಹೆಸರಿನಲ್ಲಿ ಎಲ್ಲರ ಕಣ್ಣಿಗೆ ಮಣ್ಣೆರಚಿದ್ದೇ ನಿನ್ನ ಬದುಕಿನ ಸಾಧನೆ ಎಂಬಂರ್ಥದಲ್ಲಿ ಕಾಲೆಳೆದಿದ್ದರು. ಡ್ರೋನ್ ಪ್ರತಾಪ ಅವರ ಮನಸನ್ನು ನೋಯಿಸಿದ್ದರು. ಈಗ ಒಂದು ವರ್ಷದ ಬಳಿಕ ತನ್ನನ್ನೂ ಆಡಿಕೊಂಡವರಿಗೆ ಡ್ರೋನ್ ಪ್ರತಾಪ್ ತಮ್ಮ ಕೆಲಸದ ಮೂಲಕ ಉತ್ತರ ನೀಡಿದ್ದಾರೆ. ಡ್ರೋನ್ ಹಾರಿಸಿ ಕಾಲರ್ ಮೇಲೆತ್ತಿದ್ದಾರೆ.

ಹೌದು, ಅಸಲಿಗೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಡ್ರೋನ್ ಪ್ರತಾಪ್ ತಾವು ಡ್ರೋನ್ ತಯಾರಿಸುತ್ತಿರುವುದಾಗಿ ಹೇಳಿದ್ದರು. ಕೃಷಿ ಸಂಬಂಧಿತ ಚಟುವಟಿಕೆಗಳಿಗೆ, ಅಡಿಕೆ ಮರಗಳಿಗೆ ನಾನು ತಯಾರಿಸಲಿರುವ ಡ್ರೋನ್‌ದಿಂದ ತುಂಬಾ ಪ್ರಯೋಜನವಾಗುತ್ತೆ ಎಂದು ಹೇಳುತ್ತಿದ್ದರು. ನಾನು ತಯಾರಿಸುತ್ತಿರುವ ಡ್ರೋನ್ ತುಂಬಾ ಎತ್ತರದ ಮರಳಿಗೆ ಕೂಡ ಔಷಧಿಯನ್ನು ಸಿಂಪಡನೆ ಮಾಡುತ್ತೆ ಎಂದು ಹೇಳುತ್ತಿದ್ದರು. ಆದರೆ, ಡ್ರೋನ್ ಅವರ ಈ ಮಾತನ್ನು ಬಿಗ್ ಬಾಸ್‌ನಲ್ಲಿ ಯಾರೆಂದರೆ ಯಾರು ನಂಬಿರಲಿಲ್ಲ. ಬದಲಿಗೆ ಇವನದ್ದು ಅದೇ ರಾಗ ಅದೇ ಹಾಡು ಎಂದಿದ್ದರು. ಆದರೆ ಈಗ ಡ್ರೋನ್ ಪ್ರತಾಪ್ ತಾವು ಹೇಳಿದಂತೆ ಡ್ರೋನ್ ಹಾರಿಸಿದ್ದಾರೆ. ಡ್ರೋನ್ ಮೂಲಕ ಎತ್ತರದ ಮರಗಳಿಗೆ ಔಷಧಿಯನ್ನು ಕೂಡ ಸಿಂಪಡಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿರುವ ಡ್ರೋನ್ ಪ್ರತಾಪ್, ಹಿರಿಯರ ಜೊತೆ ಸೇರಿ ಡ್ರೋನ್‌ಗೆ ಪೂಜೆ ಮಾಡಿದ್ದಾರೆ. ಶ್ರದ್ಧಾ ಮತ್ತು ಭಕ್ತಿಯಿಂದ ಆರತಿಯನ್ನು ಎತ್ತಿದ್ದಾರೆ. ಆ ನಂತರ ಆ ಡ್ರೋನ್‌ನ ಹಾರಿಸಿದ್ದಾರೆ. ಮೇಲ್ನೋಟಕ್ಕೆ ಈ ಡ್ರೋನ್ ಹಲವಾರು ವಿಶೇಷತೆಗಳನ್ನು ಹೊಂದಿರುವಂತಹದ್ದು ಎನ್ನುವುದು ಸ್ಪಷ್ಟವಾಗುತ್ತೆ. ದೊಡ್ಡದಾದ ಬಾಡಿ, ಅಗಲವಾದ ರೆಕ್ಕೆ, ಲೋಹದ ಸ್ಟ್ಯಾಂಡ್ ಕಾಣಿಸುತ್ತೆ. ಇನ್ನೂ ಎಣ್ಣೆಯ ಕ್ಯಾನ್ ನಂತೆ ಕಾಣುವ ಜಾಗದಲ್ಲಿ ಔಷಧಿಯನ್ನು ಶೇಖರಿಸಿ ಆ ಮೂಲಕ ಸಿಂಪಡನೆ ಮಾಡುವ ತಂತ್ರಜ್ಞಾನವನ್ನು ಅಭಿವೃದ್ದಿ ಮಾಡಲಾಗಿದೆ ಎನ್ನುವುದು ಗೊತ್ತಾಗುತ್ತೆ.
ಸದ್ಯಕ್ಕೆ ಡ್ರೋನ್ ಪ್ರತಾಪ್ ಹಂಚಿಕೊಂಡಿರುವ ಈ ವಿಡಿಯೋಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಇದು ಸಾಧನೆ ಎಂದರೆ ಎನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಒಬ್ಬರು ನಿಧಾನವಾಗಿ ಬೆಳೆದರೂ ನಿಯತ್ತಾಗಿ ಬೆಳೆಯಬೇಕು ಎನ್ನುವುದಕ್ಕೆ ನೀವೆ ಸಾಕ್ಷಿ ಎಂದರೆ ಮತ್ತೊಬ್ಬರು ಆಡಿಕೊಂಡವರ ಮುಂದೆ ಬೆಳೆದು ತೋರಸುವುದೇ ನಿಜವಾದ ಸಾಧನೆ ಎಂದಿದ್ದಾರೆ. ಇನ್ನೊಬ್ಬರು ಅವಮಾನ ಮಾಡಿದವರು ಆರಾಧಿಸುವಂಥಾಗುವುದೇ ನಿಜವಾದ ಸಾಧನೆ ಎಂದರೆ ಮತ್ತೊಬ್ಬರು ಬೆಳೆಯುವ ತಾಖತ್ತು ನಿಂಗೆ ಇದೆ ಅಣ್ಣ ನೀನು ಇನ್ನೂ ಬೆಳಿಯೋದನ್ನು ನಾನು ನೋಡಬೇಕು ಲವ್ ಯೂ ಅಣ್ಣ ಎಂದಿದ್ದಾರೆ. ಎಷ್ಟೆಲ್ಲ ಟೀಕೆ ವ್ಯಕ್ತವಾದರು ಅದೆಲ್ಲವನ್ನು ಸಹಿಸಿಕೊಂಡು ತಾಳ್ಮೆಯನ್ನು ಕಾಪಾಡಿಕೊಂಡು ಇವತ್ತು ಈ ರೀತಿ ಉತ್ತರ ಕೊಟ್ಟಿದ್ದೀರಾ ಬ್ರದರ್ ಎಂದು ಕಾಮೆಂಟ್ ಮಾಡಿದ್ದಾರೆ.


Click it and Unblock the Notifications










