ಬಿಗ್ ಬಾಸ್ ಸ್ಪರ್ಧಿಯಾಗಿದ್ದ ನಿರ್ಮಲಾ ಚೆನ್ನಪ್ಪ ಕಿರುತೆರೆಯ ಸ್ಟಾರ್ ನಿರ್ಮಾಪಕಿ: ಯಾವುದದು?
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿ ಸದ್ಯಕ್ಕೆ ಬಹಳ ಸದ್ದು ಮಾಡುತ್ತಿದೆ. ಇತ್ತೀಚೆಗಷ್ಟೇ ನೂರು ಎಪಿಸೋಡ್‌ಗಳನ್ನು ದಾಟಿರುವ ಸಂಭ್ರಮದಲ್ಲಿರುವ ಈ ಧಾರಾವಾಹಿ ಈಗಾಗಲೇ ಎರಡು ಮೂರು ಟ್ರ್ಯಾಕ್‌ನಲ್ಲಿ ಕಥೆಯನ್ನು ನಡೆಸುತ್ತಿದೆ. ಬೇರೆಲ್ಲಾ ಧಾರಾವಾಹಿಗಳಿಗಿಂತಲೂ ವಿಭಿನ್ನವಾಗಿ ಮೂಡಿಬರುತ್ತಿರುವ ಈ ಧಾರಾವಾಹಿ ಮಿಡಲ್ ಕ್ಲಾಸ್ ಜನರ ಜೀವನಕ್ಕೆ ಬಹಳ ಹತ್ತಿರವಾಗಿದೆ. ಹಾಗಾಗಿ ಪ್ರೇಕ್ಷಕರನ್ನು ಹೆಚ್ಚೆಚ್ಚು ತನ್ನತ್ತ ಸೆಳೆಯುತ್ತಿದೆ.
ಟಿಆರ್‌ಪಿಯಲ್ಲಿಯೂ ಬೇರೆ ಧಾರಾವಾಹಿಗಳಿಗೆ ಒಳ್ಳೆಯ ಸ್ಪರ್ಧೆ ನೀಡುತ್ತಿರುವ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಹಿಂದಿನ ಧನ ಶಕ್ತಿ ಯಾರು? ಅಂದರೆ, ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿರುವವರು ಯಾರು ಎಂಬ ಪ್ರಶ್ನೆ ಬಹುತೇಕರಲ್ಲಿ ಮೂಡಿದೆ.

ಆದರ್ಶ ಹೆಗಡೆ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಲಕ್ಷ್ಮೀ ನಿವಾಸ' ಧಾರಾವಾಹಿಯನ್ನು ಕನ್ನಡದ ಬಿಗ್ ರಿಯಾಲಿಟಿ ಶೋ ಎಂದೇ ಜನಪ್ರಿಯತೆ ಪಡೆದಿರುವ ಬಿಗ್ ಬಾಸ್ ನ ಸ್ಪರ್ಧಿ ಒಬ್ಬರು ನಿರ್ಮಾಣ ಮಾಡಿದ್ದಾರೆ. ಹೌದು ಅವರೇ ನಿರ್ಮಲಾ ಚೆನ್ನಪ್ಪ.
ನಿರ್ಮಲಾ ಚನ್ನಪ್ಪ ಅವರು ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ಮಾಪಕರಾಗಿಯೂ ಈಕೆ ಗುರುತಿಸಿಕೊಳ್ಳುತ್ತಿದ್ದಾರೆ. ಹಲವಾರು ಸಿನಿಮಾ, ಧಾರಾವಾಹಿಗಳು ಸೇರಿದಂತೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿಯೂ ಕಾಣಿಸಿಕೊಂಡ ಈಕೆ ಇದೀಗ ನಿರ್ಮಾಪಕಿಯಾಗಿ ತಮ್ಮ ಐಡೆಂಟಿಟಿಯನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ.

ಈ ಹಿಂದೆ ನಟ ತ್ರಿವಿಕ್ರಮ್ ಹಾಗೂ ನಟಿ ದೀಪ್ತಿ ಮಾನ್ನೆ ಅವರ ನಟನೆಯ ಪದ್ಮಾವತಿ ಧಾರಾವಾಹಿಗೆ ಹಣ ಹೂಡಿದ್ದರು ನಟಿ ನಿರ್ಮಾಪಕ ನಿರ್ಮಲಾ ಚನ್ನಪ್ಪ. ಕನ್ನಡದ ಸಿಂಗಿಂಗ್ ರಿಯಾಲಿಟಿ ಶೋ 'ಕನ್ನಡ ಕೋಗಿಲೆ'ಗೂ ನಿರ್ಮಾಪಕಿಯಾಗಿದ್ದ ನಿರ್ಮಲಾ ಚೆನ್ನಪ್ಪ ಅವರು ಇದೀಗ ನಿರ್ಮಾಪಕಿಯಾಗಿಯೇ ಕಿರುತೆರೆಯಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಇವರ ಪತಿ ಸತ್ಯ ಅವರು ಬೇರೆ ಬೇರೆ ಭಾಷೆಗಳಲ್ಲಿ ನಟಿಸುವುದಲ್ಲದೆ ಹೆಂಡತಿಗೆ ನಿರ್ಮಾಣದಲ್ಲಿ ಸಾತ್ ನೀಡಿದ್ದಾರೆ.


Click it and Unblock the Notifications