ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಂತರ ಮತ್ತೊಂದು ಬಿಗ್ ಬಾಸ್ ಜೋಡಿಯ ದಾಂಪತ್ಯದಲ್ಲಿ ಬಿರುಕು ?

ಊಹಾಪೋಹಗಳು, ಗಾಳಿಸುದ್ದಿಗಳು ಗ್ಲಾಮರ್ ಜಗತ್ತಿನಲ್ಲಿ ಮತ್ತು ಸೆಲೆಬ್ರೆಟಿಗಳ ಜೀವನದಲ್ಲಿ ಕಾಮನ್ನೋ ಕಾಮನ್ನು. ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಒಂದು ಬೊಂಬೆಯ ಜತೆಗೆ ಆಟವಾಡಿದರೂ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗಬಹುದು. ಟ್ರೋಲಿಗರ ಹಸಿವಿಗೆ ಆಹಾರವೂ ಆಗಬಹುದು. ಇನ್ನೂ .. ಮದುವೆಯಾಗಿದ್ದರಂತೂ ಮುಗಿದೇ ಹೋಯ್ತು. ಜೊತೆಯಲ್ಲಿ ಓಡಾಡಿದರೂ .. ಓಡಾಡದೇ ಇದ್ದರೂ .. ಹತ್ತಾರು ಮಾತು ಕೇಳಿ ಬರುತ್ತಾನೇ ಇರ್ತಾವೆ.

ಇವರ ಸಾಮಾಜಿಕ ಜಾಲತಾಣದ ಮೇಲೆ ಸಮಾಜದ ಒಂದು ವರ್ಗ ಯಾವತ್ತು ಒಂದು ಕಣ್ಣಿಟ್ಟಿರುತ್ತೆ. ಯಾಕೆಂದರೆ, ಸಿನಿಮಾ ಮಂದಿಗೆ ಮದ್ವೆ.. ಪ್ರೀತಿ.. ಬಟ್ಟೆ ಬದಲಿಸಿದಷ್ಟೇ ಸುಲಭ ಸಾಧ್ಯ. ಹೀಗಾಗಿಯೇ ಯಾವ ಕ್ಷಣದಲ್ಲಾದರೂ ಡಿವೋರ್ಸ್ ಸುದ್ದಿ ಹೊರ ಬರಬಹುದು ಎಂದು ಕಾಯುವ ಅನೇಕರು ಸೆಲೆಬ್ರೀಟಿಗಳ ಕುರಿತು ವಿಚ್ಛೇದನದ ವದಂತಿಯನ್ನೂ ಹಬ್ಬಿಸುತ್ತಾರೆ. ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ಅವರ ವಿಚಾರದಲ್ಲಿ ಕೂಡ ಸದ್ಯ ಇದೇ ಆಗಿದೆ.

Bigg Boss Couple Aishwarya Sharma amp amp Neil Bhatt Spark Divorce Rumours with Solo Post

ಹೌದು, ಐಶ್ವರ್ಯ ಶರ್ಮಾ- ನೀಲ್ ಭಟ್.. ಹಿಂದಿ ಕಿರುತೆರೆಯ ಖ್ಯಾತ ಜೋಡಿ. ''ಘುಮ್ ಹೈ ಕಿಸಿಕೇ ಪ್ಯಾರ್ ಮೇ'' ಧಾರಾವಾಹಿಯಲ್ಲಿ ಜೊತೆಯಾಗಿ ಅಭಿನಯಿಸಿದವರು ಇಬ್ಬರು. ಧಾರಾವಾಹಿಯಲ್ಲಿ ಅಭಿನಯಿಸುತ್ತಲೇ ಪ್ರೀತಿಯಲ್ಲಿ ಬಿದ್ದು ಆ ನಂತರ 2021ರಲ್ಲಿ ಮದುವೆಯಾದ ಇಬ್ಬರು ''ಬಿಗ್ ಬಾಸ್‌'' ಮನೆಯನ್ನು ಕೂಡ ಒಟ್ಟಿಗೆ ಪ್ರವೇಶಿಸಿದ್ದರು. ಹಿಂದಿಯ ''ಬಿಗ್ ಬಾಸ್'' ಸೀಸನ್ 17ರಲ್ಲಿ ಜೊತೆಯಾಗಿಯೇ ಭಾಗವಹಿಸಿದ್ದರು.

ಹೆಚ್ಚು ಕಡಿಮೆ ಹನ್ನೊಂದು ವಾರ ''ಬಿಗ್ ಬಾಸ್'' ಮನೆಯಲ್ಲಿ ಜೊತೆಯಾಗಿಯೇ ಇದ್ದ ಇಬ್ಬರು ತಮ್ಮ ಅಭಿಮಾನಿಗಳ ಹೃದಯಕ್ಕೆ ಈ ಕಾರ್ಯಕ್ರಮದ ಮೂಲಕ ಇನ್ನೂ ಹತ್ತಿರವಾಗಿದ್ದರು. 70ನೇ ದಿನಕ್ಕೆ ಮನೆಯಿಂದ ಐಶ್ವರ್ಯ ಶರ್ಮಾ ಹೊರ ಬಂದರೆ ಆ ನಂತರ ನೀಲ್ ಭಟ್ ಮನೆಯಿಂದ ಎಲಿಮಿನೇಟ್ ಆಗಿದ್ದರು.

ಇಂಥಾ ಐಶ್ವರ್ಯ ಶರ್ಮಾ ಮತ್ತು ನೀಲ್ ಭಟ್ ಅವರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಸುದ್ದಿ ಕಳೆದ ಕೆಲ ದಿನಗಳಿಂದ ಚಾಲ್ತಿಯಲ್ಲಿದೆ. ಇದಕ್ಕೆ ಪೂರಕವಾಗಿ ಇವರಿಬ್ಬರ ನಡೆ ಮತ್ತು ನುಡಿ ಕೂಡ ಹಾಗೇ ಇದೆ. ಕಳೆದ ಹಲವು ದಿನಗಳಿಂದ ಜೊತೆಯಾಗಿ ಇಬ್ಬರು ಕಾಣಿಸಿಕೊಂಡಿಲ್ಲ. ಒಟ್ಟಿಗೆ ಇರುವ ಫೋಟೊವನ್ನು ಹಂಚಿಕೊಂಡಿಲ್ಲ. ಹೀಗಾಗಿ ಹಲವರಲ್ಲಿನ ಅನುಮಾನ ಹೆಚ್ಚಾಗಿದೆ. ಹೀಗಿರುವಾಗ ಇದೀಗ ಐಶ್ವರ್ಯ ಶರ್ಮಾ ಏಕಾಂಗಿಯಾಗಿ ಗಣೇಶ ಹಬ್ಬವನ್ನು ಆಚರಿಸಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಹಬ್ಬದ ಸಂಭ್ರಮದ ಫೋಟೊಗಳನ್ನು ಕೂಡ ಹಂಚಿಕೊಂಡಿದ್ದಾರೆ.

ಐಶ್ವರ್ಯ ಶರ್ಮಾ ಹಂಚಿಕೊಂಡ ಈ ಫೋಟೊಗಳಿಂದ ಇವರ ಅಭಿಮಾನಿಗಳ ಆತಂಕ ಈಗ ಇನ್ನೂ ಹೆಚ್ಚಾಗಿದೆ. ಐಶ್ವರ್ಯ ಮತ್ತು ನೀಲ್ ಭಟ್ ಡಿವೋರ್ಸ್ ವಿಚಾರ ಈ ಮೂಲಕ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

bigg-boss-couple-aishwarya-sharma-neil-bhatt-spark-divorce-rumours-with-solo-post

ಇದಕ್ಕೆ ಕೈಗನ್ನಡಿ ಎಂಬಂತೆ ಹಲವರು ನೀಲ್ ಎಲ್ಲಿ..? ಎನ್ನುವ ಪ್ರಶ್ನೆಯನ್ನು ಐಶ್ವರ್ಯ ಅವರಲ್ಲಿ ಕೇಳಿದ್ದಾರೆ. ಇಷ್ಟೇ ಅಲ್ಲ ಹಬ್ಬದ ಸಂಭ್ರಮದಲ್ಲಿ ಅವರು ಯಾಕೆ ಭಾಗಿಯಾಗಿಲ್ಲ..? ನಿಜವಾಗಿಯೂ ನೀವು ವಿಚ್ಚೇದನ ಪಡೆಯುತ್ತಿದ್ದೀರಾ..? ಅವರ ಜೊತೆ ಫೋಟೊ ಯಾಕೆ ನೀವು ಹಂಚಿಕೊಳ್ಳುತ್ತಿಲ್ಲ..? ಸೋಶಿಯಲ್ ಮೀಡಿಯಾದಲ್ಲಿ ನೀಲ್ ಯಾಕೆ ಆಕ್ಟಿವ್ ಆಗಿಲ್ಲ..? ಹೀಗೆ ಹತ್ತಾರು ಪ್ರಶ್ನೆಗಳನ್ನು ಸದ್ಯ ಹಲವರು ಐಶ್ವರ್ಯ ಅವರಲ್ಲಿ ಕೇಳುತ್ತಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗಳಿಗೆ ಐಶ್ವರ್ಯ ಉತ್ತರ ಕೊಡುವ ಗೋಜಿಗೆ ಹೋಗಿಲ್ಲ. ಐಶ್ವರ್ಯ ಅವರ ಈ ಮೌನ ಅಭಿಮಾನಿಗಳ ಆತಂಕವನ್ನು ಇನ್ನೂ ಹೆಚ್ಚಿಸಿರುವುದು ಕೂಡ ಸುಳ್ಳಲ್ಲ.

ಅಂದ್ಹಾಗೇ ಕೆಲ ದಿನಗಳ ಹಿಂದೆಯಷ್ಟೇ ಐಶ್ವರ್ಯ ಶರ್ಮಾ ತಮ್ಮ ಗಂಡ ನೀಲ್ ಭಟ್ ಅವರಿಂದ ದೂರವಾಗಿ ಮಲಾಡ್‌ನಲ್ಲಿ ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ಆಗ ಈ ಕುರಿತು ಮಾತನಾಡಿದ್ದ ಐಶ್ವರ್ಯ ಶರ್ಮಾ ಸಂಸಾರ ಅಂದ ಮೇಲೆ ಚಿಕ್ಕ ಪುಟ್ಟ ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತಾವೆ, ಎಲ್ಲರಂತೆ ನಮ್ಮ ಸಂಸಾರದಲ್ಲಿ ಕೂಡ ಇವೆ ಎಂದು ಹೇಳಿದ್ದರು. ಹಾಗಂಥ ವಿಚ್ಛೇದನ ಪಡೆಯುವಷ್ಟು ನಮ್ಮ ನಡುವೆ ಜಗಳಗಳಾಗಿಲ್ಲ ಎಂದು ಹೇಳಿದ್ದ ಐಶ್ವರ್ಯ ಶರ್ಮಾ, ಜೊತೆಯಾಗಿರುವ ಫೋಟೋಗಳನ್ನು ಹಂಚಿಕೊಂಡಿಲ್ಲ ಎಂದರೆ ನಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂದು ಅರ್ಥ ಅಲ್ಲ ಎಂದು ಕೂಡ ಹೇಳಿದ್ದರು.

More from Filmibeat

English summary
Aishwarya Sharma and Neil Bhatt divorce rumors are swirling again after the actress shared a solo Ganesh Chaturthi post. Find out why fans are worried about the popular Bigg Boss couple
Read more about: divorce biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X