Deepika Das: ದೀಪಿಕಾ ದಾಸ್ ಬ್ಯೂಟಿಗೆ ಫಿದಾ ಆದ ನೆಟ್ಟಿಗರು
ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ದೀಪಿಕಾ ದಾಸ್ ಏನು ಮಾಡ್ತಾರೆ ಎಂಬುದು ಅವರ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲವನ್ನ ಕೆರಳಿಸಿತ್ತು. ಮತ್ತೆ ಸೀರಿಯಲ್ ಕಡೆ ಮುಖ ಮಾಡ್ತಾರಾ ಅಥವಾ ಫಿಲಂ ಇಂಡಸ್ಟ್ರಿಗೆ ಬರ್ತಾರಾ ಎಂಬ ಪ್ರಶ್ನೆಗೆ ದೀಪಿಕಾ ದಾಸ್ ಅವರೇ ತೆರೆಯನ್ನು ಎಳೆದಿದ್ದಾರೆ. ಹೌದು, ಹೊಸ ಚಿತ್ರ ಪಾಯಲ್‌ನಲ್ಲಿ ನಟಿಸುವ ಮೂಲಕ ತಮ್ಮ ಅಭಿಮಾನಿಗಳಿಗೆ ಉತ್ತರ ಕೊಟ್ಟಿದ್ದಾರೆ.
ಇನ್ನು ದೀಪಿಕಾ ದಾಸ್ ತಮ್ಮ ವೆಕೇಷನ್‌ನ್ನು ದುಬೈ, ಉತ್ತರಖಂಡ ಸುತ್ತಾಡಿ ವಾಪಸ್ ಈಗ ಬೆಂಗಳೂರಿಗೆ ಬಂದಿದ್ದಾರೆ. ಸುತ್ತಾಡಿದ ಫೋಟೋ ಹಾಗೂ ವಿಡಿಯೋಗಳನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ದೀಪಿಕಾ ದಾಸ್ ಹಂಚಿಕೊಂಡಿರುವ ಫೋಟೋಗಳು ಅವರ ಅಭಿಮಾನಿಗಳಿಗೆ ಇಷ್ಟವಾಗಿವೆ.

ದೀಪಿಕಾ ದಾಸ್ ರವರು ಸದಾಕಾಲವೂ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿ ಇರುತ್ತಾರೆ. ತಮ್ಮ ಅಭಿಮಾನಿಗಳ ಜೊತೆಗೆ ಯಾವಾಗಲೂ ಒಂದು ಒಡನಾಟವನ್ನ ಇಟ್ಟುಕೊಳ್ಳುತ್ತಿರುತ್ತಾರೆ. ಅದೇ ರೀತಿ ಅವರು ಈಗ ಬೋಲ್ಡ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ. ಕಪ್ಪು ಬಣ್ಣದ ಡ್ರೆಸ್ ನಲ್ಲಿ ಹೊಸದಾಗಿ ಫೋಟೋಶೂಟ್ ಮಾಡಿಸಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋಗಳನ್ನು ಹರಿಬಿಟ್ಟಿದ್ದಾರೆ.
ದೀಪಿಕಾ ದಾಸ್ ಫೋಟೋಶೂಟ್ ಮಾಡಿಸಿದ್ದಾರೆ. ಬೋಲ್ಡ್ ಲುಕ್ ನಲ್ಲಿ ಮಿಂಚುತ್ತಿರುವ ಫೋಟೋವನ್ನು ನೋಡಿದ ಅಭಿಮಾನಿಗಳು ತಮ್ಮ ಪ್ರೀತಿಯನ್ನ ಕಾಮೆಂಟ್ ಗಳ ಮೂಲಕ ವ್ಯಕ್ತಪಡಿಸಿದ್ದಾರೆ. ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಹೇಳುವ ಮೂಲಕ ದೀಪಿಕಾ ದಾಸ್ ಅವರಿಗೆ ತಮ್ಮ ಅಭಿಮಾನದ ಹೊಳೆಯನ್ನ ಹರಿಸಿದ್ದಾರೆ. ಇನ್ನು ಕೆಲವು ಅಭಿಮಾನಿಗಳು ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ.
ದೀಪಿಕಾ ದಾಸ್ ಹೊಸ ಫೋಟೋಶೂಟ್ ಗೆ ಕಾಮೆಂಟ್ ಮಾಡಿರುವ ಅಭಿಮಾನಿಗಳು ನಮ್ಮ ನಾಗಿಣಿ ಎಂದು ಕಮೆಂಟ್ ಮಾಡಿದ್ದಾರೆ. ಜೊತೆಗೆ ನೀವು ತುಂಬಾ ಚೆನ್ನಾಗಿ ಕಾಣುತ್ತಿದ್ದೀರಿ ಎಂದು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ. ಇದಕ್ಕೆ ದೀಪಿಕಾ ದಾಸ್ ಸಹ ಧನ್ಯವಾದಗಳನ್ನು ತಮ್ಮ ಫ್ಯಾನ್ಸ್‌ಗೆ ತಿಳಿಸಿದ್ದಾರೆ.

ನಟಿ ದೀಪಿಕಾ ದಾಸ್ ಪಾಯಲ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜಾಕೆಟ್ ತೊಟ್ಟು ಕೈಗೆ ಗ್ಲೌಸ್ ಹಾಕಿಕೊಂಡು ಟ್ರಾವೆಲರ್ ಬ್ಯಾಗ್ ಅನ್ನು ಬೆನ್ನಿಗೇರಿಸಿಕೊಂಡು ನಿಂತಿರುವ ದೀಪಿಕಾ ದಾಸ್ ಲುಕ್‌ಗೆ ಅವರ ಫ್ಯಾನ್ ಫಿದಾ ಆಗಿದ್ದಾರೆ. ಬಿಡುಗಡೆಯಾಗಿರುವ ಪೋಸ್ಟರ್‌ನಲ್ಲಿ ದೀಪಿಕಾ ಕೈಗೆ ಗ್ಲೌಸ್ ಹಾಕಿಕೊಂಡು, ಬೆಟ್ಟದ ತಪ್ಪಲಿನಲ್ಲಿ ಫೈಯರ್ ಕ್ಯಾಂಪ್ ಮಾಡಿ ಅದರ ಪಕ್ಕದಲ್ಲಿಯೇ ಬೈಕ್‌ಗೆ ಒರಗಿ ಕುಳಿತಿದ್ದಾರೆ. ಇನ್ನು ಅಲ್ಲಿಯೇ ಟೆಂಟ್ ಕೂಡ ಇದ್ದು ಹಿಮ ಪರ್ವತವನ್ನು ಸಹ ಕಾಣಬಹುದಾಗಿದೆ.
ಹೊಸ ರೀತಿಯ ಲುಕ್‌ನ್ನು ಅವರ ಫ್ಯಾನ್ಸ್ ಇಷ್ಟಪಟ್ಟಿದ್ದು, ಇನ್ನೇನಿದ್ದರೂ ಸಿನಿಮಾದ ಲಾಂಚ್ ಆಗುವುದಕ್ಕೆ ಬಾಕಿ ಇದೆ. ಒಂಟಿ ಪಯಣದ ಹಿಂದೆ ಯಾವ ರೀತಿ ಆ ರೋಚಕ ತಿರುವುಗಳಿವೆ ಎಂಬುದು ಸಿನಿಮಾದಲ್ಲಿ ಗೊತ್ತಾಗಲಿದೆ.
ಹೊಸ ರೀತಿಯ ಸಿನಿಮಾ ಮಾಡುತ್ತಿರುವುದಕ್ಕೆ ಅಭಿಮಾನಿಗಳು ದೀಪಿಕಾ ದಾಸ್‌ಗೆ ಶುಭ ಹಾರೈಸಿದ್ದಾರೆ. ನಿಮ್ಮ ಚಿತ್ರ ಯಶಸ್ವಿಯಾಗಿ ಸೆಟ್ಟೇರಲಿ ಎಂದು ಹಾರೈಸುವ ಮೂಲಕ ನಿಮ್ಮ ಜೊತೆ ನಾವು ಎಂದೆಂದಿಗೂ ಇರುತ್ತೇವೆ ಎನ್ನುವ ಸಂದೇಶ ನೀಡಿದ್ದಾರೆ. ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ದೀಪಿಕಾ ದಾಸ್ ಅವರಿಗೆ ನಮ್ಮ ಕಡೆಯಿಂದಲೂ ಶುಭಾರೈಕೆಗಳು.


Click it and Unblock the Notifications











