ಪೂಜಾಗಾಂಧಿ, ಗಣೇಶ್, ಭಟ್ಟರ ಕಾಲೆಳೆದ ಬಿಗ್ ಬಾಸ್
ಟಾಸ್ಕ್ ನಲ್ಲಿ ಯಾರನ್ನೂ ಅಣಕಿಸುವಂತಿಲ್ಲ ಎಂದಿದ್ದರೂ ಬಹುತೇಕ 'ಮುಂಗಾರು ಮಳೆ' ಟೀಂನ್ನು ಅಣಕಿಸುವಂತೆ ಮಾಡಿ ತೋರಿಸಿದರು. ಅನುಕರಣೆ ಮಾಡದೆ ಇರುವಂತಹ ಒಂದೇ ಒಂದು ಪಾತ್ರ ಎಂದರೆ ದೇವದಾಸ್ ಮೊಲದ ಪಾತ್ರ. ಹಿಂಗಾರು ಮಳೆಯಲ್ಲಿ ಅದರ ಹೆಸರನ್ನು ನಿದ್ರಾಸ್.
ಮುಂಗಾರು ಮಳೆ ಚಿತ್ರದ ಬಹುತೇಕ ಡೈಲಾಗ್ ಗಳು, ಹಾಡುಗಳನ್ನು ಇಲ್ಲಿ ಬಳಸಿಕೊಳ್ಳಲಾಯಿತು. ಇಲ್ಲಿ ಎಲ್ಲರೂ ಮುಂಗಾರು ಮಳೆ ಚಿತ್ರದ ರೀತಿಯಲ್ಲೇ ಮಾಡಿ ತೋರಿಸಿದರು. ನಿರ್ದೇಶಕ ನಾಗರಾಜ್ ನಟ್ ಅವರು ಸೋಜಾಗಾಂಧಿ ತಾಯಿ ಮಜಾಗಾಂಧಿ ಜೊತೆ ಒಂದೆರಡು ಹೆಜ್ಜೆಯನ್ನೂ ಹಾಕಿದರು.

ಒಟ್ಟಾರೆಯಾಗಿ ಇದೊಂದು ಅಸಂಬದ್ಧ ಟಾಸ್ಕ್ ನಂತೆ ತೋರುತ್ತಿತ್ತು. ನಿದ್ರಾಸ್ ಮೊಲ ಆಗಾಗ ಕ್ಯಾರೆಟ್ ಕೇಳುತ್ತಿತ್ತು. ದಿನ ಕಳೆದಂತೆ ಬಿಗ್ ಬಾಸ್ ಕಾರ್ಯಕ್ರಮ ವೀಕ್ಷಕರನ್ನು ಹಿಡಿದಿಡುವಲ್ಲಿ ಹರಸಾಹಸ ಪಡುತ್ತಿರುವುದು ಈ ಟಾಸ್ಕ್ ನಿಂದ ಮನದಟ್ಟಾಗುತ್ತದೆ.
ಅಂದಹಾಗೆ ಇದು ಈ ವಾರದ ಎರಡನೇ ಟಾಸ್ಕ್. ಈ ಬಾರಿ ಮನೆಯಿಂದ ಹೊರಹೋಗಲು ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ. ನಿಕಿತಾ, ನರೇಂದ್ರ ಬಾಬು ಶರ್ಮಾ, ಚಂದ್ರಿಕಾ ಹಾಗೂ ವಿಜಯ್ ರಾಘವೇಂದ್ರ.
ಇನ್ನು ವಿಶೇಷ ಅಧಿಕಾರದ ಮೂಲಕ ಅರುಣ್ ಸಾಗರ್ ಫೈನಲ್ ತಲುಪಿದ್ದು ಅವರಿಗೆ ಹೆಚ್ಚಿನ ಶ್ರಮ ಇಲ್ಲದಂತಾಗಿದೆ. ಇಷ್ಟು ದಿನ ಅವರು ಎಲ್ಲ ಟಾಸ್ಕ್ ಗಳಲ್ಲಿ ಹೆಚ್ಚು ಜಾಗ್ರತೆ ವಹಿಸುತ್ತಿದ್ದರು. ಈಗ ಅವರಲ್ಲಿ ಬೇಜವಾಬ್ದಾರಿ ಎದ್ದು ಕಾಣುತ್ತಿದೆ.
ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ, ಇತಿಹಾಸ ನಿರ್ಮಿಸಿದ ಚಿತ್ರ ಮುಂಗಾರು ಮಳೆ. ಈ ಚಿತ್ರದ ಬಗ್ಗೆ ಲೇವಡಿ, ವ್ಯಂಗ್ಯ, ವಿಡಂಬನೆ ಮಾಡಲು ಹೊರಟಿದ್ದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ವೀಕ್ಷಕರನ್ನು ಕಾಡುತ್ತಿದೆ.


Click it and Unblock the Notifications











