BBK12: ಗಿಲ್ಲಿನ ಯಾರು ಮೀರಿಸೋಕ್ಕಾಗಲ್ಲ; ತಮ್ಮನ ಮಾತು ಕೇಳಿ ಕಾವ್ಯಾ ಬದಲಾದ್ರೆ ತಪ್ಪು- ಸೂರಜ್
ಬಿಗ್‌ಬಾಸ್ ಮನೆಯಲ್ಲಿ ಕಳೆದ ವೀಕೆಂಡ್ ಡಬಲ್ ಎಲಿಮಿನೇಷನ್ ನಡೆದಿದೆ. ಸೂರಜ್ ಹಾಗೂ ಮಾಳು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿ ಪಡೆದು ಹೋಗಿದ್ದ ಸೂರಜ್ ತಮ್ಮ ಆಟದಿಂದ ವೀಕ್ಷಕರ ಮನಗೆದ್ದಿದ್ದರು. ಇಷ್ಟು ಬೇಗ ಸೂರಜ್ ದೊಡ್ಮನೆಯಿಂದ ಹೊರಬಂದಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.
ರಾಶಿಕಾ ಹಾಗೂ ಸೂರಜ್ ಆತ್ಮೀಯ ಸ್ನೇಹಿತರಾಗಿದ್ದರು. ಎಲ್ಲೋ ಒಂದು ಕಡೆ ಅದೇ ಅವರ ಆಟವನ್ನು ಕೆಡಿಸಿತು ಎನ್ನುವವರು ಇದ್ದಾರೆ. ಇನ್ನು ಮನೆಯಿಂದ ಹೊರಬಂದ ಸೂರಜ್ ಸಾಕಷ್ಟು ಸಂದರ್ಶನಗಳಲ್ಲಿ ಮಾತನಾಡುತ್ತಿದ್ದಾರೆ. ಗಿಲ್ಲಿ ಆಟದ ಬಗ್ಗೆ ಮೆಚ್ಚಿಕೊಂಡಿದ್ದಾರೆ. ಇನ್ನು ತಮ್ಮ ಕುಟುಂಬದವರ ಮಾತು ಕೇಳಿ ಕಾವ್ಯಾ ಬದಲಾದರೆ ತಪ್ಪಾಗುತ್ತದೆ ಎಂದಿದ್ದಾರೆ. ನ್ಯೂಸ್ ಫಸ್ಟ್ ವಾಹಿನಿ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಗಿಲ್ಲಿ ಆಟದ ಬಗ್ಗೆ ಮಾತನಾಡಿರುವ ಸೂರಜ್ "ಗಿಲ್ಲಿ ಒಳ್ಳೆ ಆಟಗಾರ. ನಾನು ಮನೆ ಒಳಗೆ ಹೋದಾಗ ಯಾರೊಟ್ಟಿಗೆ ಫ್ರೆಂಡ್‌ಶಿಪ್ ಮಾಡ್ತೀರಾ ಅಂದಾಗ ನಾನು ಗಿಲ್ಲಿಗೆ ರೋಸ್ ಕೊಟ್ಟಿದ್ದೆ. ನಾನು ಗಿಲ್ಲಿ ಆಟವನ್ನು 10% ನೋಡ್ಕೊಂಡು ಹೋಗಿದ್ದೆ. ಒಳಗೆ 100% ನೋಡ್ದೆ. ಗೇಮ್ ಅಂತ ಬಂದ್ರೆ ಅವನನ್ನು ಮೀರಿಸೋಕೆ ಆಗಲ್ಲ. ಆಟದಲ್ಲಿ ಅವ್ನು ಈಗಾಗಲೇ ಊರುಬಿಟ್ಟು ಹೋಗಿದ್ದಾನೆ, ಉಳಿದವರು ಬಟ್ಟೆ ಪ್ಯಾಕ್ ಮಾಡ್ಕೊಂಡು ಮನೆಯಲ್ಲೇ ಇದ್ದಾರೆ. ನಾಮಿನೇಷನ್ ವೇಳೆ ರಜತ್ ಕಪಾಳಕ್ಕೆ ಹೊಡಿತ್ತಿದ್ದೆ ಎನ್ನುತ್ತಾರೆ. ಕೂಡಲೇ ಗಿಲ್ಲಿ ಹೋಗಿ ನಾನು ರಜತ್ ಅಣ್ಣನಿಗೆ ಕೊಡ್ತೀನಿ ಅಂತಾರೆ. ಅದನ್ನು ನಾವು ನಿರೀಕ್ಷಿಸಿರಲಿಲ್ಲ. ಗಿಲ್ಲಿ ಥಿಂಕಿಂಗ್ ನಾವು ಊಹಿಸೋಕೆ ಆಗಲ್ಲ" ಎಂದು ಸೂರಜ್ ಹೇಳಿದ್ದಾರೆ.
ಇತ್ತೀಚೆಗೆ ಫ್ಯಾಮಿಲಿ ರೌಂಡ್‌ನಲ್ಲಿ ಕಾವ್ಯಾ ತಾಯಿ ಹಾಗೂ ಸಹೋದರ ಹೋಗಿದ್ದರು. ಗಿಲ್ಲಿ ಜೊತೆ ಚೆನ್ನಾಗಿರು, ನಾಮಿನೇಟ್ ಮಾಡ್ಬೇಡ, ನಿಮ್ಮ ಕಾಂಬಿನೇಷನ್ ಚೆನ್ನಾಗಿ ವರ್ಕೌಟ್ ಆಗ್ತಿದೆ. ಅಣ್ಣ ಅನ್ನಬೇಡ ಎಂದಿದ್ದರು. ಇದೇ ಕಾರಣಕ್ಕೆ ಬಿಗ್‌ಬಾಸ್ ವಾರ್ನಿಂಗ್ ಕೊಟ್ಟಂತೆ ಕಂಡುಬಂದಿತ್ತು. ಇದು ಮುಂದೆ ಕಾವ್ಯಾ ಆಟವನ್ನು ಬದಲಿಸಬಹುದಾ ಎನ್ನುವ ಪ್ರಶ್ನೆಗೆ ಸೂರಜ್ ಉತ್ತರಿಸಿದ್ದಾರೆ. ಒಂದು ವೇಳೆ ಕಾವ್ಯಾ ಆ ರೀತಿ ಮಾಡಿದ್ರೆ ತಪ್ಪಾಗುತ್ತದೆ ಎಂದಿದ್ದಾರೆ.
"ಕಾವ್ಯಾ ಫ್ಯಾಮಿಲಿ ಹೇಳಿದ್ದನ್ನು ಜನ ಕೂಡ ನೋಡಿರ್ತಾರೆ. ಒಂದು ವೇಳೆ ಅವರ ಮಾತು ಕೇಳಿ ಕಾವ್ಯಾ ಆಟ ಬದಲಿಸಿದರೆ ಅದು ಸರಿಯಲ್ಲ. ಜನಕ್ಕೂ ಅದು ಗೊತ್ತು ಎನ್ನುವುದು ಕಾವ್ಯಾಗೂ ಗೊತ್ತಿರುತ್ತೆ. ಆದರೂ ಬದಲಾದರೆ ಅದು ಆಕೆಗೆ ತೊಂದರೆ ಆಗಲಿದೆ ಎಂದು ಸೂರಜ್ ವಿವರಿಸಿದ್ದಾರೆ. ಮನೆಮಂದಿ ಬಂದು ಆ ರೀತಿ ಕಾವ್ಯಾಗೆ ಹೇಳಿದ್ದು ಸರಿಯಲ್ಲ, ನಮ್ಮ ಪೇರೆಂಟ್ಸ್ ಬಂದಾಗ ಅವ್ರು ಏನೋ ಹೇಳಲು ಬಂದಾಗ ಅದೆಲ್ಲಾ ಮಾತನಾಡಬಾರದು ಎಂದು ನಾನೇ ಹೇಳಿದ್ದೆ ಎಂದು ಸೂರಜ್ ವಿವರಿಸಿದ್ದಾರೆ.
ಇನ್ನು ಸೂರಜ್ ಮನೆ ಹೊರಗೆ ತಮ್ಮ ಕ್ರೇಜ್ ಹೆಚ್ಚಾಗಿರುವುದು ನೋಡಿ ಖುಷಿಯಾಗಿದ್ದಾರೆ. ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಗ್‌ಬಾಸ್ ಮನೆ ಒಳಗೆ ಹೋಗುವಾಗ 18 ಸಾವಿರ ಮಂದಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಇದ್ರು. ಹೊರ ಬರುವ ವೇಳೆಗೆ 40 ಸಾವಿರ ಆಗಿರಬಹುದು ಅಂದುಕೊಂಡಿದ್ದೆ. ನೋಡಿದ್ರೆ 2 ಲಕ್ಷದ 80 ಸಾವಿರ ಫಾಲೋವರ್ಸ್ ಇದ್ದಾರೆ. ಅದನ್ನು ನಂಬೋಕೆ ಸಾಧ್ಯವಾಗಲಿಲ್ಲ. ಬಳಿಕ ಕಾಮೆಂಟ್ಸ್ ಎಲ್ಲಾ ನೋಡಿ ಜನ ತೋರಿಸುತ್ತಿರುವ ಪ್ರೀತಿಗೆ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ಬಿಗ್‌ಬಾಸ್ ಸೀಸನ್ 12 ಶೋ ಶುರುವಾಗಿ 22 ದಿನಗಳ ಬಳಿಕ ಸೂರಜ್ ಮನೆ ಒಳಗೆ ಹೋಗಿದ್ದರು. ಇದೀಗ 90ನೇ ದಿನಕ್ಕೆ ಮನೆಯಿಂದ ಹೊರ ಬಂದಿದ್ದಾರೆ. 68 ದಿನಗಳ ಕಾಲ ದೊಡ್ಮನೆ ಒಳಗೆ ಉಳಿದುಕೊಂಡಿದ್ದರು.


Click it and Unblock the Notifications











