ಸಿನಿಮಾಗಾಗಿ ಸಿಕ್ಕಾಪಟ್ಟೆ ಸಣ್ಣಗಾದ ದೀಪಿಕಾ ದಾಸ್; ತೂಕ ಇಳಿಸಿಕೊಂಡಿದ್ದೆಷ್ಟು ಕೆಜಿ?
'ನಾಗಿಣಿ' ಧಾರಾವಾಹಿಯ ಮೂಲಕ ಎಲ್ಲರ ಮನಗೆದ್ದ ಚೆಲುವೆ ದೀಪಿಕಾ ದಾಸ್. ಈ ನಟಿಯ ಮುದ್ದು ಮುದ್ದು ಮಾತುಗಳನ್ನು ಕೇಳುವುದಕ್ಕೆ ಸಾಕಷ್ಟು ಮಂದಿ ಅಭಿಮಾನಿಗಳಾಗಿದ್ದಾರೆ. ಇತ್ತೀಚಿಗೆ ದೀಪಿಕಾ ದಾಸ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಧಾರಾವಾಹಿ ಹಾಗೂ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದ ಈ ಚೆಲುವೆ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ.
ಮದುವೆಯಾದ ಬಳಿಕ ದೀಪಿಕಾ ದಾಸ್ ನಟನೆಗೆ ಬ್ರೇಕ್ ಕೊಟ್ಟಿದ್ದರು. ಈ ಗ್ಯಾಪ್ ಮತ್ತೆ ನಟನೆಗೆ ಕಮ್ ಬ್ಯಾಕ್ ಮಾಡಿದ್ದಾರೆ. ಹೌದು ದೀಪಿಕಾ ದಾಸ್ ಇದೀಗ ಸಿನಿಮಾದಲ್ಲಿ ನಟನೆ ಮಾಡುತ್ತಿದ್ದು ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್ ಕೊಟ್ಟಿದ್ದಾರೆ. ದೀಪಿಕಾ ನಟಿಸುತ್ತಿರುವ 'ಪಾರು ಪಾರ್ವತಿ' ಎಂಬ ಸಿನಿಮಾದ ಪೋಸ್ಟರ್ ಇತ್ತೀಚೆಗೆ ರಿಲೀಸ್ ಆಗಿತ್ತು. ಇನ್ನೂ ದೀಪಿಕಾ ದಾಸ್ ಅಭಿನಯಕ್ಕೆ ಮನಸೋಲದವರೇ ಇಲ್ಲ. ಧಾರಾವಾಹಿಗಳಲ್ಲಿ ನಟಿಸಿ, ಸೈ ಎನಿಸಿಕೊಂಡಿರುವ ನಟಿ ಇದೀಗ ಪಾರು ಪಾರ್ವತಿಯ ಮೂಲಕ ಜನರಿಗೆ ಮನರಂಜನೆಯನ್ನು ನೀಡಲು ಮುಂದಾಗಿದ್ದಾರೆ.

'ಪಾರು ಪಾರ್ವತಿ' ಸಿನಿಮಾದಲ್ಲಿ ದೀಪಿಕಾ ದಾಸ್ ಪ್ರಮುಖ ಪಾತ್ರದಲ್ಲಿ ನಟನೆ ಮಾಡುತ್ತಿದ್ದಾರೆ. ಇನ್ನೂ ಈ ಸಿನಿಮಾವನ್ನು ರೋಹಿತ್ ಕೀರ್ತಿ ನಿರ್ದೇಶನ ಮಾಡುತ್ತಿದ್ದಾರೆ. ಹಾಗೆಯೇ ಪೂನಂ ಸರ್‌ನಾಯಕ್, ಫವಾಜ್ ಅಶ್ರಫ್ ಚಿತ್ರದ ಮುಖ್ಯ ಪಾತ್ರಧಾರಿಯಾಗಿ ಅಭಿನಯ ಮಾಡಲಿದ್ದಾರೆ. ದೀಪಿಕಾ ದಾಸ್ ನಟಿಸುತ್ತಿರುವ ಈ ಸಿನಿಮಾ ಅಡ್ವೆಂಚರಸ್ ಆಗಿದ್ದು, ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
10 ಕೆಜಿ ತೂಕ ಇಳಿಸಿಕೊಂಡ ಚೆಲುವೆ
ಮೊದಲೇ ದೀಪಿಕಾ ದಾಸ್‌ಗೆ ದೇಶ ಸುತ್ತುವುದು, ಅಡ್ವೆಂಚರ್ ಅಂದರೆ ತುಂಬಾನೇ ಇಷ್ಟ. ಈಗ ಸಿನಿಮಾದಲ್ಲೂ ಕೂಡ ಅಂತಹದ್ದೇ ಪಾತ್ರ ಸಿಕ್ಕಿದೆ. ಇದರಿಂದ ಅಭಿಮಾನಿಗಳು ಬಹಳ ಖುಷಿಗೊಂಡಿದ್ದಾರೆ. ಇನ್ನೂ ಈ ಸಿನಿಮಾಗಾಗಿ ದೀಪಿಕಾ ದಾಸ್ ಬರೋಬ್ಬರಿ 10 ಕೆಜಿ ತೂಕ ಇಳಿಸಿಕೊಂಡಿದ್ದಾರೆ. ಇದನ್ನು ಸ್ವತಃ ದೀಪಿಕಾ ದಾಸ್ ಅವರೇ ಹೇಳಿಕೊಂಡಿದ್ದಾರೆ.
ಹಾಗೆಯೇ ಉದ್ದವಾಗಿದ್ದ ತಲೆಯ ಕೂದಲನ್ನು ಗಿಡ್ಡ ಮಾಡಿಕೊಂಡಿದ್ದಾರೆ. ದೀಪಿಕಾ ದಾಸ್, ನನಗೆ ಪ್ರವಾಸ ಎಂದರೆ ಬಹಳ ಇಷ್ಟ. ಈಗ ಅದೇ ರೀತಿ ನನಗೆ ಸಿನಿಮಾದಲ್ಲಿ ಕೂಡ ಅಭಿನಯ ಮಾಡಲು ಅವಕಾಶ ಸಿಕ್ಕಿದೆ. ನಾನು ಏಕಾಂಗಿಯಾಗಿ ಸಂಚಾರ ಮಾಡುವ ಪಾತ್ರದಲ್ಲಿ ನಾನು ಕಾಣಿಸಿಕೊಳ್ಳಲಿದ್ದೇನೆ. ಈ ಸಿನಿಮಾದಲ್ಲಿ ನಟಿಸುವುದಕ್ಕೆ ಒಂದು ತಿಂಗಳಲ್ಲಿ 10 ಕೆಜಿ ತೂಕವನ್ನು ಇಳಿಸಿಕೊಂಡಿದ್ದೇನೆ ಎಂದು ಹೇಳಿದ್ದಾರೆ.
ದೇಶಗಳನ್ನು ಸುತ್ತುವ ಬಯಕೆ
"ಹಾಗೆಯೇ ಇನ್ನೂ 198 ದೇಶಗಳನ್ನು ಸುತ್ತಬೇಕು ಎಂಬುದು ನನ್ನ ಜೀವನದ ಮಹಾದಾಸೆ" ಎಂದೂ ಹೇಳಿದ್ದಾರೆ. ಇನ್ನೂ ದೀಪಿಕಾ ದಾಸ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ಆಗಾಗ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿರುತ್ತಾರೆ. ಸದ್ಯ ಅವರಿಗೆ ಇನ್ನು ಹೊಸ ಹೊಸ ಸಿನಿಮಾಗಳು ಹುಡುಕಿಕೊಂಡು ಬರುತ್ತಿದ್ದು, ಸ್ಕ್ರಿಪ್ಟ್ ಗಳನ್ನು ಕೇಳುತ್ತಿದ್ದಾರೆ.


Click it and Unblock the Notifications











