Divya Uruduga: ಹೊಸ ಉದ್ಯಮ ಆರಂಭಿಸಿದ ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಉರುಡುಗ: ಏನದು ಹೊಸ ಬ್ಯುಸಿನೆಸ್?

By ಅನಿತಾ ಬನಾರಿ

ಕನ್ನಡ ಕಿರುತೆರೆಯ ಖ್ಯಾತ ನಟಿ ದಿವ್ಯಾ ಉರುಡುಗ. ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರಗೊಂಡಿದ್ದರು. ಇಷ್ಟು ನಟಿಯಾಗಿ ಕಂಡಿದ್ದ ದಿವ್ಯಾ ಇದೀಗ ಬಿಸ್ನೆಸ್ ವುಮನ್ ಆಗಿದ್ದಾರೆ.

ಹೌದು, ಬಿಗ್ ಬಾಸ್ ಸೀಸನ್ 8 ರಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದಿರೋ ನಟಿ ದಿವ್ಯಾ ಉರುಡುಗ ತಮ್ಮ ಸಹ ಸ್ಪರ್ಧಿ ಅರವಿಂದ್ ಕೆ ಪಿ ಅವರೊಂದಿಗೆ ಹೆಚ್ಚು ಕಾಣಿಸಿಕೊಂಡು ಸುದ್ದಿ ಮಾಡಿದ್ದರು. ಅದಕ್ಕೂ ಮೊದಲು ಕೆಲ ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 8ರಲ್ಲಿ ಭಾಗವಹಿಸಿ ಜನರ ಮೆಚ್ಚುಗೆ ಗಳಿಸಿದ್ದಾರೆ.

Bigg Boss fame actress Divya Uruduga opened nail art studio and turned entrepreneur

ಈಗಂತೂ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಹೊಸ ಹೊಸ ಪೋಸ್ಟ್ ಗಳೊಂದಿಗೆ ತಮ್ಮ ಫ್ಯಾನ್ಸ್ ಹಾಗೂ ಫಾಲೋವರ್ಸ್ ಅನ್ನು ಎಂಗೇಜ್ ಮಾಡುತ್ತಲೇ ಇರುತ್ತಾರೆ ದಿವ್ಯಾ ಉರುಡುಗ‌. ಒಟ್ಟಿನಲ್ಲಿ ಹೇಳುವುದಾದರೆ ನಟಿ ದಿವ್ಯಾ ಉರುಡುಗಗೆ ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್‌ನಿಂದಲೇ ಬಿಗ್ ಸಕ್ಸಸ್ ಹಾಗೂ ಫೇಮಸ್ ಸಿಕ್ಕಿತ್ತು.

ಬಿಗ್ ಬಾಸ್ ನಂತರ ಯಾವುದೇ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳದ ಇವರು ಇದೀಗ ಹೊಸದೊಂದು ಬುಸಿನೆಸ್‌ಗೆ ಕೈ ಹಾಕಿದ್ದಾರೆ. ಬೆಂಗಳೂರಿನಲ್ಲಿ ತಮ್ಮದೇ ಒಂದು ನೇಲ್ ಆರ್ಟ್ ಹಾಗೂ ಲಾಶ್ ಸ್ಟುಡಿಯೋವನ್ನು ತೆರೆದಿರುವ ನಟಿ ದಿವ್ಯಾ ಅವರು ಈ ಮೂಲಕ ಬಿಸಿನೆಸ್ ವುಮನ್ ಆಗಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಕಲೆ ಬಗ್ಗೆ ವಿಶೇಷ ಆಸಕ್ತಿ ಇದ್ದ ನಟಿ ದಿವ್ಯಾ ಉರುಡುಗ ನೈಲ್ ಆರ್ಟ್ ನಲ್ಲಿ ಹೆಚ್ಚು ಪರಿಣಿತಿ ಇತ್ತು. ಈ ಕಾರಣದಿಂದಲೇ ಬೆಂಗಳೂರಿನಲ್ಲಿ ತಮ್ಮದೇ ಒಂದು ಹೊಸ ಸ್ಟುಡಿಯೋ ಆರಂಭಿಸಿದ ಇವರು, ಈಗಾಗಲೇ ಓಪನಿಂಗ್ ಅನ್ನು ಮಾಡಾಗಿದೆ. ಈ ಹೊಸ ಸ್ಟುಡಿಯೋ ಓಪನಿಂಗ್‌ಗೆ ಸಿನಿಮಾ ರಂಗದ ಪ್ರಮುಖರು ಹಾಗೂ ದಿಗ್ಗಜರು ಭಾಗಿಯಾಗಿದ್ದರು.

Bigg Boss fame actress Divya Uruduga opened nail art studio and turned entrepreneur

ಚೆನ್ನಾಗಿ ತರಬೇತಿ ಪಡೆದ ಕೆಲಸದವರನ್ನು ಇಟ್ಟುಕೊಂಡು ತೆರೆದಿರುವ ಈ ನೈಲ್ ಆರ್ಟ್ ಸ್ಟುಡಿಯೋದಲ್ಲಿ ತುಂಬಾ ವೆರೈಟಿಯಾದ ನೈಲ್ ಆರ್ಟ್‌ಗಳು ಇದ್ದಾವೆ ಎಂದು ಕೇಳಿಬಂದಿದೆ. ಅಂದಹಾಗೆ ತಮ್ಮ ಸ್ಟುಡಿಯೋದಲ್ಲಿ ಬರೀ ಆರ್ಟ್ ಅಷ್ಟೇ ಅಲ್ಲದೆ ಹೈಜಿನಿಕ್ಕಾಗಿ ಶುದ್ಧ ಪರಿಸರದಲ್ಲಿ ಇವೆಲ್ಲವನ್ನು ಮಾಡುವುದಾಗಿಯೂ ಆಕೆ ಹೇಳಿಕೊಂಡಿದ್ದಾರೆ.

ಈಗಾಗಲೇ ನಟಿಗೆ ಅವರ ಫ್ಯಾನ್ಸ್ ನಿಂದ ಬಹಳಷ್ಟು ಸಪೋರ್ಟ್ ಬಂದಿದ್ದು ಸ್ಟುಡಿಯೋ ಚೆನ್ನಾಗಿ ನಡೆಯುತ್ತಿದೆ. ಜೊತೆಗೆ ನಟಿಯ ಸ್ನೇಹಿತರು ಸಹ ನಟರು ಕೂಡ ಇದಕ್ಕೆ ಬಹಳಷ್ಟು ಸಪೋರ್ಟ್ ಹಾಗೂ ತಮ್ಮ ಸೋಶಿಯಲ್ ಮೀಡಿಯಾಗಳ ಮೂಲಕ ಬೆಸ್ಟ್ ವಿಶಸ್ ಅನ್ನು ಕಳಿಸಿದ್ದಾರೆ.

'ಚಿಟ್ಟೆ ಹೆಜ್ಜೆ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಮಲೆನಾಡ ಬೆಡಗಿ ಮುಂದೆ 'ಅಂಬಾರಿ' ಧಾರಾವಾಹಿಯಲ್ಲಿ ನಾಯಕಿಯಾಗಿ ಮಿಂಚಿದರು. ತದ ನಂತರ 'ಖುಷಿ', 'ಓಂ ಶಕ್ತಿ ಓಂ ಶಾಂತಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ರಂಜಿಸಿರುವ ದಿವ್ಯಾ ಉರುಡುಗ ಹಿರಿತೆರೆಯಲ್ಲಿಯೂ ಮೋಡಿ ಮಾಡಿದ ಬೆಡಗಿ.

'ಹುಲಿರಾಯ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ದಿವ್ಯಾ ಉರುಡುಗ ಮುಂದೆ 'ಧ್ವಜ', 'ಫೇಸ್ 2 ಫೇಸ್' ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಕಿರುತೆರೆ, ಹಿರಿತೆರೆ ಜೊತೆಗೆ ರಿಯಾಲಿಟಿ ಶೋವಿನಲ್ಲಿಯೂ ಕಮಾಲ್ ಮಾಡಿರುವ ಈಕೆ 'ಸೂಪರ್ ಕಬಡ್ಡಿ' ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾಗಿ ಕಾಣಿಸಿಕೊಂಡು ವೀಕ್ಷಕರಿಗೆ ಮಗದಷ್ಟು ಹತ್ತಿರವಾದ ದಿವ್ಯಾ ಉರುಡುಗ ಬಿಗ್ ಬಾಸ್ ಸೀಸನ್ 9 ರ ಸ್ಪರ್ಧಿಯಾಗಿ ದೊಡ್ಮನೆಯೊಳಗೆ ಕಾಲಿಟ್ಟರು. ಆ ಸೀಸನ್‌ನಲ್ಲಿ 5ನೇ ಸ್ಥಾನ ಪಡೆದುಕೊಂಡ ಈಕೆ ಇದೀಗ ಉದ್ಯಮಿಯಾಗಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

More from Filmibeat

English summary
Bigg Boss fame actress Divya Uruduga opened nail art studio and turned entrepreneur
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X