ನಮ್ರತಾ ಗೌಡ ಸೀರೆ ಕಲೆಕ್ಷನ್ ನೋಡಿದ್ರಲ್ಲ, ಆ ಸೀರೆಗಳ ಬೆಲೆ ಇಲ್ಲಿದೆ ನೋಡಿ!

By ಎಸ್ ಸುಮಂತ್

'ಪುಟ್ಟಗೌರಿ ಮದುವೆ', 'ನಾಗಿಣಿ' ಧಾರಾವಾಹಿಗಳ ಮೂಲಕ ಖ್ಯಾತಿ ಪಡೆದಿದ್ದ ನಮ್ರತಾ ಗೌಡ, ಬಿಗ್ ಬಾಸ್ ಸೀಸನ್ 10 ಶೋಗೆ ಎಂಟ್ರಿ ಕೊಟ್ಟ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆಗಿದ್ದರು. ಅದರಲ್ಲೂ ನಮ್ರತಾ ಗೌಡ ಅಂದ್ರೆ ಬೇಗ ನೆನಪಾಗುವುದು ಸೀರೆಯಲ್ಲಿ. ದೇವಸ್ಥಾನ, ಇವೆಂಟ್ ಎಲ್ಲಿಯೇ‌ ಹೋದರೂ ಸೀರೆಯನ್ನೇ ಉಡುತ್ತಾರೆ. ಮತ್ತೆ ಕಡಿಮೆ ಮೊತ್ತದ ಸೀರೆಗಳಲ್ಲ, ಎಲ್ಲವೂ ಕಾಸ್ಟ್ಲೀ ಸೀರೆಗಳೇ ಆಗಿರುತ್ತವೆ.

ಸದಾ ಸೀರೆಯಲ್ಲಿಯೇ ಮಿಂಚುವ ನಮ್ರತಾ ಬಳಿ ಇನ್ನೆಷ್ಟು ಸೀರೆ ಇರಬಹುದು ಎಂಬ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಅದಕ್ಕೆ ಉತ್ತರವಾಗಿ ತನ್ನ ಬಳಿ ಇರುವ ಸೀರೆಗಳನ್ನೆಲ್ಲ ಒಂದು ಕಡೆ ಗುಡ್ಡೆ ಹಾಕಿಕೊಂಡು ಯಾವ ಥರದ ಸೀರೆ, ಯಾವಾಗ ತಗೊಂಡಿದ್ದು ಅಂತೆಲ್ಲ ಹೇಳಿದ್ರು. ಆದರೆ ಸೀರೆಯ ಬೆಲೆ ಮಾತ್ರ ಹೇಳಿರಲಿಲ್ಲ. ಇದೀಗ ಅವರ ಕಲೆಕ್ಷನ್ ಸೀರೆಯಲ್ಲಿ ಒಂದೆರಡು ಸೀರೆಗಳ ಬೆಲೆಯನ್ನ ನಿಮಗೆ ತಿಳಿಸಿಕೊಡ್ತೇ‌ನೆ.

Bigg Boss Fame Actress Namratha Gowda saree collection and price

ವೈಭವಿ ಸಿಲ್ಕ್‌ನಿಂದ ಸೀರೆ ಗಿಫ್ಟ್

ವೈಭವಿ ಸಿಲ್ಕ್ ಹೌಸ್ ಈಗಾಗಲೇ ಒಂದಷ್ಟು ಖ್ಯಾತಿಯನ್ನು ಪಡೆದಿದೆ. ವೈಭವಿ ಎಂಬುವವರು ಈ ಸೀರೆ ಬಿಸಿನೆಸ್ ಮಾಡುತ್ತಿದ್ದು, ಕಲೆಕ್ಷನ್ ವಿಚಾರದಲ್ಲಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಅವರ ಪೇಜ್ ನಲ್ಲಿ ಸೀರೆ ಸೆಲೆಕ್ಟ್ ಮಾಡಿ, ವಾಟ್ಸಾಪ್ ಮಾಡಿದ್ರೆ ನಿಮ್ಮ ಅಡ್ರೆಸ್‌ಗೆ ಸೀರೆ ಬರಲಿದೆ. ನಟಿಮಣಿಯರು ಕೂಡ ಇವರಿಂದ ಸೀರೆ ಕೊಳ್ಳುತ್ತಾರೆ. ಈಗ ನಮ್ರತಾ ಹಾಕಿರುವ ಸೀರೆ ಬೇಕು ಅಂದ್ರು ಈ ನಂಬರ್‌ಗೆ ವಾಟ್ಸಾಪ್ ಮಾಡಬಹುದು. ಆ ಸೀರೆಯ ಬೆಲೆ ಎಷ್ಟು ಎಂಬುದನ್ನ ಇಲ್ಲಿ ಹಾಕಿರ್ತೇವೆ.

ರೆಡ್ ರೇಷ್ಮೆ ಸೀರೆ ಬೆಲೆ ?

ನಮ್ರತಾ ಸೀರೆ ಕಲೆಕ್ಷನ್ ವಿಡಿಯೋ ಮಾಡುವಾಗ ರೇಷ್ಮೇ ಸೀರೆಗಳನ್ನೇ ಹೆಚ್ಚು ತೋರಿಸಿದ್ದರು. ಅದರಲ್ಲಿ ರೆಡ್ ಸೀರೆ ಕೂಡ ಒಂದು. ಆ ಸೀರೆ ನೋಡುವುದಕ್ಕೂ ತುಂಬಾನೇ ಆಕರ್ಷಣೀಯವಾಗಿತ್ತು. ಈ ಸೀರೆಯನ್ನ ವೈಭವಿ ಅವರು ಗಿಫ್ಟ್ ನೀಡಿದ್ದು, ಇದೇ ಥರದ ಸೀರೆ ಬೇಕು ಅಂದ್ರೆ ಅದರ ಬೆಲೆ ಇಲ್ಲಿದೆ ನೋಡಿ. ಬರೋಬ್ಬರಿ 12000 ರೂ. ಇದೆ.

ಈ ಸೀರೆ ಇಷ್ಟು ಕಮ್ಮಿನಾ?

ಇನ್ನು ನಮ್ರತಾ ಗೌಡ ಪರ್ಪಲ್ ಕ್ರೇಪ್ ಸೀರೆಯೊಂದನ್ನ ತೋರಿಸಿದ್ದರು. ಯಾವುದೋ ಶೋ ರೂಮ್ ಜಾಹೀರಾತಿಗಾಗಿ ಹಾಕಿದ್ದ ಸೀರೆಯದು. ಅದು ಸೂಪರ್ ಆಗಿ‌ಕಾಣಿಸ್ತಾ ಇತ್ತು. ಆ ಸೀರೆ ಬೆಲೆಯ ಬಗ್ಗೆ ಹಲವರು‌ ಕಮೆಂಟ್ ಹಾಕಿದ್ದರು. ಹೀಗಾಗಿ ಡಿಮ್ಯಾಂಡ್ ಇರುವ ಸೀರೆ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ. ಈ ಸೀರೆ ಸೆಮಿ ಕ್ರೇಪ್ ಆಗಿದೆ. ಇದರ ಬೆಲೆ ಬಂದು 2,600 ರೂಪಾಯಿ. ಇದು ಕೂಡ ವೈಭವಿನಲ್ಲೇ ಸಿಗುತ್ತೆ.

ನಮ್ರತಾ ರಾಯಲ್ ಲೈಫ್

ನಮ್ರತಾ ಗೌಡ ಬಿಗ್ ಬಾಸ್ ಆದ್ಮೇಲೆ ಸುವರ್ಣ ಚಾನೆಲ್‌ನ ಶೋನಲ್ಲಿ ಒಮ್ಮೆ ಕಾಣಿಸಿಕೊಂಡರು ಬಿಟ್ಟರೆ ಯಾವ ಧಾರಾವಾಹಿಯಲ್ಲೂ ಅಭಿನಯಿಸ್ತಾ ಇಲ್ಲ. ಆದರೆ ರಾಯಲ್ ಲೈಫ್ ಲೀಡ್ ಮಾಡ್ತಾರೆ. ಅವರೇ ಹೇಳಿಕೊಳ್ಳುವ ಹಾಗೇ, ಅವಕಾಶಗಳು ಬೇಕು ಅಂತ ಸಂಭಾವನೆಗೂ ಕಾಂಪ್ರಮೈಸ್ ಆಗಬಾರದು ಎನ್ನುತ್ತಾರೆ. ಇನ್ನು ಸೋಷಿಯಲ್ ಮೀಡಿಯಾದಲ್ಲಿ ದಿನೇ ದಿನೇ ಫಾಲೋವರ್ಸ್ ಕೂಡ ಜಾಸ್ತಿಯಾಗ್ತಾ ಇದ್ದು, ಜಾಹೀರಾತು ಕಂಪನಿಗಳಿಂದ ಡಿಮ್ಯಾಂಡ್ ಇದೆ. ಜಾಹೀರಾತು ಪ್ರಚಾರದಿಂದಾನೇ ಹೆಚ್ಚು ದುಡಿಯುತ್ತಾರೆ.

More from Filmibeat

English summary
Here is the details about Namratha gowda's silk saree collection;
Read more about: sumanth serial tv
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X