ಬ್ಲಾಕ್ ಬಾಡಿ ಸೂಟ್‌ನಲ್ಲಿ ಮಿಂಚಿದ ನಟಿ ಸಾನ್ಯಾ ಅಯ್ಯರ್; ಏನಂದ್ರು ಫ್ಯಾನ್ಸ್?
ನಟಿ ಸಾನ್ಯಾ ಅಯ್ಯರ್ ಆಲಿಯಾಸ್ ಪುಟ್ಟಗೌರಿ ಎಲ್ಲರಿಗೂ ಚಿರಪರಿಚಿತ. 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮೂಲಕ ದಶಕದ ಹಿಂದೆ ಕನ್ನಡ ಕಿರುತೆರೆ ಪ್ರೇಕ್ಷಕರ ಮನೆಮನೆ ಗೆದ್ದ ಈ ಕುವರಿ ಇದೀಗ ಸಿನಿಮಾಗಳಲ್ಲಿ ನಟಿಸುವಷ್ಟು ಬೆಳೆದಿದ್ದಾರೆ.
ಬಾಲನಟಿಯಾಗಿ ಬಣ್ಣದ ಲೋಕದ ನಂಟು ಬೆಳೆಸಿಕೊಂಡ ಸಾನ್ಯಾ ಹಲವಾರು ಧಾರಾವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡ ಬೆಡಗಿ.

'ಪುಟ್ಟ ಗೌರಿ ಮದುವೆ' ಧಾರಾವಾಹಿಯ ನಂತರ ಸಹಜವಾಗಿ ನಟನೆಯಿಂದ ದೂರವಿದ್ದ ಈಕೆ 'ಬಿಗ್ ಬಾಸ್ ಓಟಿಟಿ ಸೀಸನ್ 1'ರಲ್ಲಿ ಭಾಗವಹಿಸಿದ್ದರು. ಮುಂದೆ ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 9ಕ್ಕೆ ಕಾಲಿಟ್ಟು ಬಹಳಷ್ಟು ಸುದ್ದಿಯಾದರು. ಈಗ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಗೌರಿ' ಚಿತ್ರಕ್ಕೆ ನಾಯಕಿಯಾಗಿ ನಟಿಸುವ ಮೂಲಕ ಮತ್ತೆ ಚಿತ್ರರಂಗದಲ್ಲಿ ನಟಿ ಸಾನ್ಯಾ ಅಯ್ಯರ್ ಆ್ಯಕ್ಟಿವ್ ಅಗಲಿದ್ದಾರೆ .
ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್ ಅವರು ಈ ಚಿತ್ರದ ನಾಯಕನಾಗಿ ನಟಿಸಲಿದ್ದಾರೆ. ಅವರಿಗೆ ನಾಯಕಿಯಾಗಿ ಸಾನ್ಯಾ ಅಯ್ಯರ್ ಕಾಣಿಸಿಕೊಳ್ಳಲಿದ್ದಾರೆ. ಅಂದಹಾಗೆ ಸಿನಿಮಾದ ಫೋಟೋಶೂಟ್ ಗಳು ಈಗಾಗಲೇ ನಡೆದಿದ್ದು ಹಲವಾರು ಫೋಟೋಶೂಟ್ ಗಳು ಪ್ರೇಕ್ಷಕರ ಅಭಿಮಾನಿಗಳ ಮನೆ ಗೆದ್ದಿದೆ.
ಸದ್ಯಕ್ಕೆ ನಟಿ ಸಾನ್ಯಾ ಅಯ್ಯರ್ ಚಿತ್ರೀಕರಣದಲ್ಲಿ ಬ್ಯುಸಿ ಇದ್ದು, ಆಗಾಗ ಫೋಟೋಶೂಟ್ ಗಳನ್ನು ಮಾಡಿಸಿಕೊಂಡು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡುತ್ತಿರುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಅಂತೂ ಬಹಳಷ್ಟು ಆ್ಯಕ್ಟೀವ್ ಇರುವ ಈಕೆ ತಮ್ಮ ಅಭಿಮಾನಿಗಳನ್ನು, ಫಾಲೋವರ್ಸ್ ಗಳನ್ನು ಆಗಾಗ ತಮ್ಮ ಟ್ರೆಂಡಿ ಫೋಟೋಶೂಟ್‌ಗಳ ಮೂಲಕ ರಂಜಿಸುತ್ತಲೇ ಇರುತ್ತಾರೆ.

ಇತ್ತೀಚೆಗೆ ಬ್ಲಾಕ್ ಬಾಡಿ ಸೂಟ್ ಒಂದನ್ನು ಧರಿಸಿಕೊಂಡಿರುವ ನಟಿ ಸಾನ್ಯಾ ಹಲವಾರು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಬ್ಲಾಕ್ ಬಾಡಿ ಸೂಟ್ ತುಂಬಾ ಸ್ಟೋನ್ ವರ್ಕ್ ಇತ್ತು ಇದು ನಟಿ ಸಾನ್ಯಾರಿಗೆ ಬಹಳ ಚೆನ್ನಾಗಿ ಒಪ್ಪುತ್ತಿದೆ. ಇದರೊಂದಿಗಿನ ಫೋಟೋಶೂಟ್ ಗಳನ್ನು ಶೇರ್ ಮಾಡಿಕೊಂಡ ಈಕೆಗೆ ಕಾಮೆಂಟ್ ಗಳ ಸುರಿಮಳೆ ಸುರಿದಿದೆ.
ತಮ್ಮ ಕೆರಿಯರ್‌ಗಿಂತಲೂ ಫೋಟೋಶೂಟ್ ಮೂಲಕವೇ ಬಹಳಷ್ಟು ಸುದ್ದಿ ಆಗುವ ನಟಿ ಸಾನ್ಯಾ ಅಯ್ಯರ್ ಅವರನ್ನು ಬೋಲ್ಡ್ ಬ್ಯೂಟಿ ಎಂದು ಕರೆದರೆ ತಪ್ಪಾಗಲ್ಲ.
'ಪುಟ್ಟಗೌರಿ ಮದುವೆ' ಧಾರಾವಾಹಿ ನಂತರ ಶಿಕ್ಷಣದ ಕಡೆಗೆ ಹೆಚ್ಚು ಒತ್ತು ಕೊಟ್ಟ ನಟಿ ನಂತರ ಮಲಯಾಳಂನ 'ಆರಾರು ನೀ ಯಾರು' ಎಂಬ ಹಾಡಿನಲ್ಲಿ ನಟಿಸಿದರು. 'ಗುಲಾಬ್ ಜಾಮೂನ್' ಎಂಬ ಕಿರುಸಿನಿಮಾದಲ್ಲೂ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕೆಲ ಡ್ಯಾನ್ಸಿಂಗ್ ರಿಯಾಲಿಟಿ ಶೋಗಳಲ್ಲೂ ಸ್ಪರ್ಧಿಸಿರುವ ಇವರು ಬಿಗ್ ಬಾಸ್ ಮೂಲಕ ಬಹಳ ಸುದ್ದಿಯಾದರು. ಸದ್ಯಕ್ಕೆ ಅವರ ಗೌರಿ ಚಿತ್ರದ ಬಗ್ಗೆ ಪ್ರೇಕ್ಷಕರ ಅಭಿಮಾನಿಗಳ ಕುತೂಹಲ ಹೆಚ್ಚಿದೆ.


Click it and Unblock the Notifications











