ಪೊಲೀಸ್ ಗೆಟಪ್‌ನಲ್ಲಿ ಕಾಣಿಸಿಕೊಂಡ ತನಿಷಾ; ಬೆಂಕಿ ಲುಕ್‌ಗೆ ಅಭಿಮಾನಿಗಳು ಫಿದಾ ..!
ಬಿಗ್ ಬಾಸ್ ಮೂಲಕ ಎಲ್ಲರ ಮನಗೆದ್ದ ನಟಿ ತನಿಷಾ ಕುಪ್ಪಂಡ. ಒಂದಲ್ಲ ಒಂದು ವಿಚಾರದ ಮೂಲಕ ಸದ್ದು ಮಾಡುತ್ತಲೇ ಇರುವ ತನಿಷಾ ,ಸೋಷಿಯಲ್ ಮೀಡಿಯಾದಲ್ಲಿ ಸದಾ ಕಾಲ ಆಕ್ಟಿವ್ ಆಗಿರುವ ಹುಡುಗಿ ಅಭಿಮಾನಿಗಳ ಪ್ರಶ್ನೆಗೆ ಆಗಾಗ ಉತ್ತರವನ್ನು ನೀಡುತ್ತಾ ಇರುತ್ತಾರೆ. ಖಡಕ್ ಆಗಿ ಮಾತನಾಡುವ ಚೆಂದುಳ್ಳಿ ಚೆಲುವೆ ತನಿಷಾ ಕುಪ್ಪಂಡ ರೂಪದಲ್ಲಿ ಎಲ್ಲರನ್ನೂ ಮೀರಿಸುವ ಹಾಗೆ ಇದ್ದಾರೆ.
ಆಗಾಗ ಫೋಟೋ ಶೂಟ್ ಮಾಡಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುತ್ತಿದ್ದರು ತನಿಷಾ. ತನಿಷಾ ಮಾತಿಗೆ ಎದುರಾಡಿದರೆ ಆಕೆ ಮಾತ್ರ ಸುಮ್ಮನೆ ಕೂರುವವರೆ ಅಲ್ಲ. ಬಿಗ್ ಬಾಸ್ ನಲ್ಲಿ ಕೂಡ ಈ ಗುಣಕ್ಕೆ ಅಭಿಮಾನಿಗಳು ಬಹಳ ಖುಷಿ ವ್ಯಕ್ತ ಪಡಿಸಿದ್ದರು. ಆದ್ದರಿಂದಲೇ ತನಿಷಾ ಕುಪ್ಪಂಡ ಅವರನ್ನು ಬೆಂಕಿ ಎಂದೇ ಕರೆಯುತ್ತಾ ಇದ್ದರು.

ಇದೀಗ ಮತ್ತೊಮ್ಮೆ ತನಿಷಾ ಸುದ್ದಿಯಲ್ಲಿ ಇದ್ದಾರೆ. ಅದೇನೆಂದರೆ ತನಿಷಾ ಅವರು ಪೊಲೀಸ್ ಗೆಟಪ್ ನಲ್ಲಿ ಕಾಣಿಸಿಕೊಂಡು ಇದ್ದಾರೆ. ಅರೆರೇ ಇದೇನಿದು ಹೊಸ ಗೆಟಪ್ ತನಿಷಾ ಕುಪ್ಪಂಡ ಏನಾದರು ಹೊಸ ಸಿನಿಮಾಗಳಿಗೆ ಸಹಿ ಹಾಕಿದ್ದಾರ ಅಥವಾ ಧಾರಾವಾಹಿಯಲ್ಲಿ ಪೊಲೀಸ್ ಪಾತ್ರ ಸಿಕ್ಕಿರಬೇಕು ಎಂದು ಅನೇಕರು ಮಾತನಾಡಿಕೊಂಡು ಇರುತ್ತಾರೆ.
ಹೊಸ ಚಿತ್ರದಲ್ಲಿ ನಟಿಸುತ್ತಿರುವ ತನಿಷಾ ..!
ತನಿಷಾ ಪೊಲೀಸ್ ಗೆಟಪ್‌ನಲ್ಲಿ ಅಂದವಾಗಿ ಪೋನಿಟೈಲ್ ಹಾಕಿಕೊಂಡು, ನಾರ್ಮಲ್ ಮೇಕಪ್ ಮಾಡಿಕೊಂಡಿದ್ದಾರೆ. ಹಾಗೆಯೇ ಕೈಯಲ್ಲಿ ವಾಟರ್ ಬಾಟೆಲ್ ಹಿಡಿದುಕೊಂಡು ದಿಪ್ರೆಂಟ್ ಆಗಿ ಫೋಟೋ ಗೆ ಪೋಸ್ ನೀಡಿದ್ದಾರೆ. ಪೊಲೀಸ್ ಡ್ರೆಸ್ ನಲ್ಲಿ ಲೇಡಿ ಸಿಂಗಂ ಹಾಗೆ ಕಾಣಿಸುತ್ತಿರುವ ನಟಿಯ ಬೆಂಕಿ ನೋಟಕ್ಕೆ ಅನೇಕರು ಫಿದಾ ಆಗಿದ್ದಾರೆ ಇನ್ನೂ ನಟ ಕಿರಣ್ ರಾಜ್ ನಟನೆಯ 'ಶೇರ್' ಸಿನಿಮಾದಲ್ಲಿ ತನಿಷಾ ನಟಿಸಿದ್ದಾರೆ.
ಪೊಲೀಸ್ ಗೆಟಪ್ ನಲ್ಲಿ ತನಿಷಾ
ತನಿಷಾ ಖದರ್ ನೋಡಿ ಫ್ಯಾನ್ಸ್ ಗೆ ಕೂಡ ಬಹಳ ಖುಷಿ ಆಗಿದೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಪೋಸ್ಟ್ ಮಾಡಿದ ಅದರ ಕೆಳಗೆ ಸಣ್ಣ ಬರಹವನ್ನು ಬರೆದಿದ್ದಾರೆ. ನಿಮ್ಮ ಶತ್ರುವಿಗಾಗಿ ನೀವು ಹೊತ್ತಿಸುವ ಬೆಂಕಿಯು ಅವರಿಗಿಂತ ಹೆಚ್ಚಾಗಿ ನಿಮ್ಮನ್ನು ಸುಡುತ್ತದೆ ಎಂದು ಬರೆದುಕೊಂಡಿದ್ದಾರೆ . ತನಿಷಾ ಫೋಟೋ ಗೆ ಅಭಿಮಾನಿಗಳು ಬಹಳಷ್ಟು ಲೈಕ್ ಕಾಮೆಂಟ್ ಮಾಡ್ತಾ ಇದ್ದಾರೆ.

ತನಿಷಾ ಲುಕ್ ಗೆ ಅಭಿಮಾನಿಗಳ ಮೆಚ್ಚುಗೆ ..!
ತನಿಷಾ ಅವರ ಈ ಅವತಾರಕ್ಕೆ ಕೆಲವರು ಬೆಂಕಿ ಎಂದು ಹೇಳಿದರೆ , ಇನ್ನು ಕೆಲವರು ಲೇಡಿ ಸಿಂಗಂ, ಬೆಂಕಿ ತನಿಷ ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ. ತನಿಷಾ ಫೋಟೋಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದ್ದು ಅಭಿಮಾನಿಗಳು ಬಹಳ ಖುಷಿಗೊಂಡಿದ್ದಾರೆ. ಹಾಗೆಯೇ ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದ ತನಿಷ ತನ್ನ ಖಡಕ್ ಮಾತುಗಳಿಂದ ಎಲ್ಲರ ಮನ ಗೆದ್ದಿದ್ದಾರೆ. ತನಿಷಾ ಮಾಡಿ ಕೊಡಗಿನ ಕುವರಿ ಎಂದು ಹೇಳಿದರೆ ತಪ್ಪಾಗದು. ಮಂಗಳ ಗೌರಿ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ನಟಿ ತನಿಷಾ . ಪೂಜಾ ಗಾಂಧಿಯವರ ದಂಡುಪಾಳ್ಯ ಚಿತ್ರದ ಮೂಲಕ ತನಿಷಾ ಬೆಳ್ಳಿ ತೆರೆಗೆ ಎಂಟ್ರಿ ಕೊಟ್ಟರು.ತನಿಷಾ ಸಿನಿಮಾ ಹಾಗೂ ಬ್ಯುಸಿನೆಸ್ ನಲ್ಲಿ ಬ್ಯುಸಿಯಾಗಿ ತನ್ನನ್ನು ತೊಡಗಿಸಿಕೊಂಡಿರುವ ಬಹು ಬೇಡಿಕೆಯ ನಟಿಯಾಗಿದ್ದಾರೆ.ತನಿಷಾ, ಕಾರ್ತಿಕ್ ಜೊತೆ ಹೊಸ ಸಿನಿಮಾ ಮತ್ತು ವರ್ತೂರು ಸಂತೋಷ್ ಚಿತ್ರಕ್ಕೆ ನಟಿ ನಿರ್ಮಾಣ ಮಾಡೋದಾಗಿ ಹೇಳಿಕೊಂಡಿದ್ದಾರೆ.


Click it and Unblock the Notifications











