ಹೊಸ ವರ್ಷದಲ್ಲಿ ಹೊಸ ಜೀವವನ್ನು ಸ್ವಾಗತಿಸಲಿರುವ ಬಿಗ್ ಬಾಸ್ ಅಕ್ಷತಾ ಪಾಂಡವಪುರ
ಬಿಗ್ ಬಾಸ್ ಕನ್ನಡ ಆರನೇ ಆವೃತ್ತಿಯ ಸ್ಪರ್ಧಿ ಅಕ್ಷತಾ ಪಾಂಡವಪುರ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಅಕ್ಷತಾ ಅವರ ಸೀಮಂತ ಕಾರ್ಯಕ್ರಮ ನೆರವೇರಿದ್ದು, ಬಿಗ್ ಬಾಸ್ ಸ್ನೇಹಿತರು ಸೇರಿ ಹಲವರು ಭಾಗಿಯಾಗಿದ್ದರು.
ಇನ್ನು ತುಂಬು ಗರ್ಭಿಣಿಯ ಫೋಟೋಶೂಟ್ ಸಹ ಮಾಡಿಸಲಾಗಿದ್ದು, ಈ ಫೋಟೋಗಳನ್ನು ಸ್ವತಃ ಅಕ್ಷತಾ ಅವರೇ ತಮ್ಮ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ''ಈ ವಿಸ್ಮಯ ಜಗತ್ತಿನಲ್ಲಿ ಮತ್ತೊಂದು ವಿಸ್ಮಯ ಅಂದ್ರೆ ಮತ್ತೆಂದೂ ಬಾರದ ಈ ಘಳಿಗೆ...ಇನ್ನೂ ಜನವರಿ 2021ಕ್ಕೆ ಮತ್ತೊಂದು ವಿಶೇಷ ಘಳಿಗೆಯ ನಿರೀಕ್ಷೆಯಲ್ಲಿ.....'' ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ...

ಜನವರಿಯಲ್ಲಿ ಮಗುವಿಗೆ ಜನ್ಮ
ಸ್ವತಃ ಅಕ್ಷತಾ ಅವರೇ ಹೇಳಿರುವ ಪ್ರಕಾರ, ಜನವರಿಯಲ್ಲಿ ಚೊಚ್ಚಲ ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯ, ಅಕ್ಷತಾ ಅವರ ಗರ್ಭಿಣಿ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಕ್ಷತಾ ಅವರು ಮಗುವಿಗೆ ಜನ್ಮ ನೀಡುತ್ತಿರುವ ಸುದ್ದಿ ಕೇಳಿ ನೆಟ್ಟಿಗರು ಶುಭಕೋರುತ್ತಿದ್ದಾರೆ.

ಪ್ರಸನ್ನ-ಅಕ್ಷತಾ ಲವ್ ಮ್ಯಾರೇಜ್
ಅಂದ್ಹಾಗೆ, ರಂಗಭೂಮಿ ಕಲಾವಿದೆ ಅಕ್ಷತಾ ಅವರ ಪತಿ ರಂಗ ನಿರ್ದೇಶಕ ಪ್ರಸನ್ನ ಸಾಗರ್. ಮೂಲತಃ ಸಾಗರದವರು. ಇವರಿಬ್ಬರದ್ದು ಲವ್ ಮ್ಯಾರೇಜ್. ಏಂಟು ವರ್ಷಗಳ ಹಿಂದೆ ಇವರಿಬ್ಬರು ಮದುವೆಯಾಗಿದ್ದಾರೆ.

ಅಕ್ಷತಾ ಪಾಂಡವಪುರ ಕುರಿತು
ಅಕ್ಷತಾ ಮೂಲತಃ ಪಾಂಡವಪುರದ ಹುಡುಗಿ. ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಮೈಸೂರಿನ ಜೆ ಎಸ್ ಎಸ್ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮುಗಿಸಿದ ಅವರು ನಂತರ ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಂಡರು. ಪ್ರಾರಂಭದಲ್ಲಿ ಅಕ್ಷತಾ ಶಿವಮೊಗ್ಗ ಜಿಲ್ಲೆ, ಸಾಗರ ತಾಲೂಕ್ಕಿನ ನೀನಾಸಂ ನಲ್ಲಿ ರಂಗ ತರಬೇತಿ ಪಡೆದರು. ನಂತರ ದೆಹಲಿಯ ನ್ಯಾಷಿನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಮೂರು ವರ್ಷ ರಂಗಭೂಮಿಯ ಬಗ್ಗೆ ತಿಳಿದುಕೊಂಡರು.
Recommended Video

ರಾಜ್ಯ ಪ್ರಶಸ್ತಿ ಸಹ ಲಭಿಸಿದೆ
'ಒಬ್ಬಳು' ಅಕ್ಷತಾ ಪಾಂಡವಪುರ ಅವರ ಇತ್ತೀಚಿಗಿನ ನಾಟಕ. ಈ ನಾಟಕ ಏಕ ವ್ಯಕ್ತಿ ಪ್ರದರ್ಶನವಾಗಿದ್ದು, ಸುಮಾರು 30ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡಿದೆ. ಪ್ರಸನ್ನ ಡಿ ಈ ನಾಟಕದ ನಿರ್ದೇಶನ ಮಾಡಿದ್ದಾರೆ. ಇದು ಅಕ್ಷತಾರಿಗೆ ಒಳ್ಳೆಯ ಹೆಸರು ತಂದು ಕೊಟ್ಟಿದೆ. ನಾಟಕಗಳ ಜೊತೆ ಜೊತೆಗೆ ಸಿನಿಮಾಗಳಲ್ಲಿಯೂ ಅಕ್ಷತಾ ಅಭಿನಯಿಸಿದ್ದಾರೆ. 'ಪಲ್ಲಟ' ಎನ್ನುವ ಸಿನಿಮಾದ ನಟನೆಗೆ ಅವರಿಗೆ ರಾಜ್ಯ ಪ್ರಶಸ್ತಿ ಬಂದಿದೆ. ಎಸ್ ಪಿ ರಘು ಈ ಚಿತ್ರದ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದರು.


Click it and Unblock the Notifications











