Don't Miss!
- Technology
ಸಾವಿರಾರು ಕೋಟಿ ಮೌಲ್ಯದ ಐಫೋನ್ ರಫ್ತು ಮಾಡಿದ ಭಾರತ; ಸ್ಯಾಮ್ಸಂಗ್ಗೆ ಹಿನ್ನಡೆ!
- News
23 ದಿನಗಳಲ್ಲಿ 36 ಸಾಮೂಹಿಕ ಗುಂಡಿನ ದಾಳಿ: ಹುಚ್ಚರಂತಾಗಿರುವ ಯುವಕರು, ಬೆಚ್ಚಬಿದ್ದ ಅಮೆರಿಕ- ಭಾರತೀಯರೂ ಟಾರ್ಗೆಟ್
- Finance
ತೆರಿಗೆ ಉಳಿಸುವ ಎಫ್ಡಿ: ಈ ಬ್ಯಾಂಕುಗಳು ನೀಡಲಿವೆ ಶೇ 7.6ರ ವರೆಗೆ ಬಡ್ಡಿ- ಹಿರಿಯರಿಗೆ ಇನ್ನೂ ಅಧಿಕ
- Automobiles
ಬ್ರಿಟನ್ ಪ್ರಧಾನಿಗೆ ಟ್ರಾಫಿಕ್ ಪೊಲೀಸರ ದಂಡ: ಅವರ ವಿಡಿಯೋ ಅವರಿಗೆ ಕುತ್ತಾಯಿತು...
- Sports
ಉಜ್ಜೈನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಟೀಂ ಇಂಡಿಯಾ ಆಟಗಾರರು: ಪಂತ್ ಗುಣಮುಖವಾಗುವಂತೆ ಪ್ರಾರ್ಥನೆ
- Lifestyle
ಕುಂಭ ರಾಶಿಯಲ್ಲಿರುವ ಶನಿ: ಲಾಲ್ ಕಿತಾಬ್ ಪ್ರಕಾರ ದ್ವಾದಶ ರಾಶಿಗಳು ಈ ಪರಿಹಾರ ಮಾಡಿದರೆ ಕಷ್ಟ ದೂರಾಗಿ ಅದೃಷ್ಟ ಒಲಿಯಲಿದೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
Anupama Gowda : ನೀವೇ ಬಿಗ್ ಬಾಸ್ ವಿನ್ನರ್ ಎಂದ ಫ್ಯಾನ್ಸ್ :ಅನುಪಮಾ ಗೌಡಗೆ ಫುಲ್ ಶಾಕ್..!
ಬಿಗ್ ಬಾಸ್ ಸೀಸನ್ 9 ಮುಗಿದು ಕೆಲ ದಿನಗಳೆ ಉರುಳಿದೆ. ಆದರೆ ಕ್ರೇಜ್ ಮಾತ್ರ ಇನ್ನು ಕಡಿಮೆಯಾದಂತೆ ಕಾಣುತ್ತಿಲ್ಲ. ಬಿಗ್ ಬಾಸ್ ಬಗ್ಗೆ, ಬಿಗ್ ಬಾಸ್ ಕಂಟೆಸ್ಟೆಂಟ್ ಬಗ್ಗೆ ಮಾತನಾಡುವುದು ಕಡಿಮೆಯಾಗಿಲ್ಲ. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೂ ಅವರವರ ಅಭಿಮಾನಿಗಳು, ಹುಡುಕಿಕೊಂಡು ಹೋಗಿ ಇನ್ನು ವಿಶ್ ಮಾಡುತ್ತಿದ್ದಾರೆ. ಇದೀಗ ಅನುಪಮಾ ಆನಂದ್ ಕುಮಾರ್ ಅವರಿಗೂ ಫ್ಯಾನ್ಸ್ ಅರಸಿ ಬಂದಿದ್ದಾರೆ.
ಈ ಬಾರಿ ಬಿಗ್ ಬಾಸ್ ನಡೆದಿದ್ದೆ ವಿಭಿನ್ನವಾಗಿ. ಫಸ್ಟ್ ಟೈಮ್ ಎರಡು ರೀತಿಯಲ್ಲಿ ನಡೆದಿದೆ. ಒಂದು ಓಟಿಟಿಯಿಂದಾನೇ ಬಿಗ್ ಬಾಸ್ ಶುರುವಾಗಿತ್ತು. ಮತ್ತೊಂದು ನವೀನರು ಮತ್ತು ಪ್ರವೀಣರನ್ನು ಸೇರಿಸಿ ಬಿಗ್ ಬಾಸ್ ಆಯೋಜನೆ ಮಾಡಲಾಗಿತ್ತು. ಕೊನೆ ಕೊನೆಯಲ್ಲಿ ಟಫ್ ಕಾಂಪಿಟೇಷನ್ ಶುರುವಾದಾಗ ನೋಡುವುದಕ್ಕೆ ಮಜಾ ಎನಿಸುತ್ತಾ ಇತ್ತು.
ರಿಯಾಲಿಟಿ
ಶೋ
ಮೂಲಕ
ಕಿರುತೆರೆಗೆ
ಕಾಲಿಟ್ಟ
ಚಂದನ್
ನಟನೆಯಲ್ಲಿ
ಬ್ಯುಸಿ

ಅನುಪಮಾ ಔಟಾದಾಗ ಬೇಸರ
ಈ ಬಾರಿ ಬಿಗ್ ಬಾಸ್ ಮನೆಗೆ ನವೀನರು ಮತ್ತು ಪ್ರವೀಣರನ್ನು ಮಿಕ್ಸ್ ಮಾಡಿ ಕಳುಹಿಸಲಾಗಿತ್ತು. ಅದರಲ್ಲಿ ಅನುಪಮಾ ಗೌಡ ಪ್ರವೀಣರ ಸರತಿ ಸಾಲಿನಲ್ಲಿ ಇದ್ದರು. ಅದಾಗಲೇ ಆಟವನ್ನು ಅರಿತಿದ್ದರು. ಆಟದ ಜೊತೆಗೆ ಎಲ್ಲರಿಗೂ ಮೆಚ್ಚುಗೆಯಾಗುವಂತೆ ನಡೆದುಕೊಂಡಿದ್ದರು. ಆದರೆ ಅದ್ಯಾಕೋ ಈ ಬಾರಿಯೂ ಫಿನಾಲೆಗೆ ಮುತ್ತಿಡದೆ ಹನ್ನೆರಡನೇ ವಾರಕ್ಕೆ ಮನೆಯಿಂದ ಹೊರಗೆ ಬಂದಿದ್ದರು. ಇದು ನೋಡುವ ಜನರಿಗೂ ಬೇಸರ ತರಿಸಿತ್ತು.

ಅಭಿಮಾನಿಗಳಿಂದ ಸಂಭ್ರಮ
ಅನುಪಮಾ ಗೌಡ ಸದ್ಯ ಬಿಗ್ ಬಾಸ್ ಗುಂಗುನಿಂದ ಹೊರ ಬಂದು, ಮುಂದಿನ ಕೆಲಸಗಳತ್ತ ಗಮನ ಹರಿಸುತ್ತಿದ್ದಾರೆ. ಆದರೆ ಇದರ ನಡುವೆ ಅಭಿಮಾನಿಗಳ ದಂಡೇ ಬಂದಿದ್ದು, ಮತ್ತೆ ಬಿಗ್ ಬಾಸ್ ನೆನಪಿಸಿದ್ದಾರೆ. ರಿಯಲ್ ವಿನ್ನರ್ ಅಂತ ಟೀ ಶರ್ಟ್ ಮೇಲೆ ಬರೆದಿರುವ ಟೀ ಶರ್ಟ್ ತೊಟ್ಟು ಬಂದಿದ್ದಾರೆ. ಇದನ್ನು ಕಂಡು ಅನುಪಮಾ ಬಹಳ ಖುಷಿ ಪಟ್ಟಿದ್ದಾರೆ. ಅನುಪಮಾ ಗೌಡ ಅವರಿಗೂ ಈ ಬಾರಿ ಫೈನಲ್‌ನಲ್ಲಿ ಇರುತ್ತೀನಿ ಎಂಬ ನಂಬಿಕೆ ಇತ್ತು. ಆದರೆ ಅದು ಈಡೇರಲೇ ಇಲ್ಲ.

ಫ್ಯಾನ್ಸ್ ಸೆಲೆಬ್ರೆಷನ್ ಕಂಡು ಶಾಕ್
ಅಭಿಮಾನಿಗಳ ಪ್ಲ್ಯಾನಿಂಗ್ ಕಂಪ್ಲೀಟ್ ಆಗಿ ತಿಳಿಸದೆ ಮಾಡಿದ್ದಾರೆ. ಅನುಪಮಾ ಪ್ರಿಪರೇಷನ್ ಮಾಡಿರುವ ಜಾಗಕ್ಕೆ ಬರುತ್ತಿದ್ದಂತೆ ಒಬ್ಬೊಬ್ಬರೇ ಮುಂದೆ ಬಂದು ನಿಂತು, ಗುಲಾಬಿಯೊಂದನ್ನು ನೀಡಿ ವಿಶ್ ಮಾಡಿದ್ದಾರೆ. ಬಳಿಕ ಒಬ್ಬೊಬ್ಬರೇ ಹಿಂದೆ ತಿರುಗಿ ನಿಂತರೆ ಪರಾಮಶ್ಚರ್ಯವಾಗುವಂತ ಬಿರುದುಗಳು ಆ ಟೀ ಶರ್ಟ್ ಮೇಲೆ ಬರೆದಿತ್ತು. ಇಡೀ ಟೀಂ ಅನುಪಮಾ ಫೋಟೋ ಇರುವಂತ ಟೀ ಶರ್ಟ್ ತೊಟ್ಟಿದ್ದರು. ಆ ಟೀ ಶರ್ಟ್ ಹಿಂಭಾಗ, Prank Queen, Task Queen, Dancing Queen, ಕಿಚ್ಚನ ಚಪ್ಪಾಳೆ, Captain, True Caring Friend ಹೀಗೆ ಅನೇಕ ಸಾಲುಗಳನ್ನು ನೋಡಿ ಅನುಪಮಾ ಫುಲ್ ಖುಷಿಯಾಗಿದ್ದಾರೆ. ಎಲ್ಲರಿಗೂ ಪ್ರೀತಿಯ ಹಗ್ ಕೊಟ್ಟಿದ್ದಾರೆ.
ಅನುಪಮಾ ಬಗ್ಗೆ ಕಮೆಂಟ್‌ನಲ್ಲಿ ಬೇಸರ
ಈ ರೀತಿ ಸರ್ಪೈಸ್ ಆಗಿ ಸೆಲೆಬ್ರೇಟ್ ಮಾಡಿದಂತ ವಿಡಿಯೋವನ್ನು ಅನುಪಮಾ ಗೌಡ ಹಂಚಿಕೊಂಡಿದ್ದಾರೆ. ಇದಕ್ಕೆ ಹಲವಾರು ಜನ ಕಮೆಂಟ್ ಕೂಡ ಮಾಡಿದ್ದಾರೆ. "ಈ ಪ್ರೀತಿ, ವಿಶ್ವಾಸವನ್ನು ನೀವೂ ಹೀಗೆ ಉಳಿಸಿಕೊಂಡು ಹೋಗಿ, ಆದಷ್ಟು ಬೇಗ ಮತ್ತೆ ತೆರೆಮೇಲೆ ಕಾಣಿಸಿಕೊಳ್ಳಿ, ನಿಜವಾಗಲೂ ನೀವೂ ಗೆಲ್ಲಬೇಕಿತ್ತು" ಹೀಗೆ ಅನೇಕ ಕಮೆಂಟ್ಸ್ ಮಾಡಿದ್ದಾರೆ.