5ನೇ ಬಾರಿ ತಂದೆಯಾಗುತ್ತಿರುವ ಬಿಗ್ ಬಾಸ್ ಸ್ಫರ್ಧಿ ?

ಮತ್ತೊಬ್ಬರ ಖಾಸಗಿ ಬದುಕಿನ ಮೇಲಿರೋ ಮನುಷ್ಯ ಸಹಜ ಕುತೂಹಲವನ್ನೇ ಬಂಡವಾಳ ಮಾಡಿಕೊಂಡ ಕಾರ್ಯಕ್ರಮ ಬಿಗ್ ಬಾಸ್. ಅನೇಕರು ಈ ಕಾರ್ಯಕ್ರಮವನ್ನು ಬೈದುಕೊಂಡು ನೋಡುತ್ತಾರೆ, ಬೈಯುತ್ತಲೇ ಅಲ್ಲಿ ಸಿಗುವ ಮನರಂಜನೆಗೆ ಚಪ್ಪಾಳೆಯನ್ನು ಕೂಡ ಹೊಡೆಯುತ್ತಾರೆ. ಇಂಥಾ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆ ಭಾಷೆ ಈ ಭಾಷೆ ಎನ್ನದೇ ಪ್ರತಿ ವರ್ಷ ಚಿತ್ರ ವಿಚಿತ್ರ ವ್ಯಕ್ತಿತ್ವಗಳನ್ನು ಹುಡುಕಾಡಿ ತುಂಬಿಕೊಳ್ಳೋದು ವಾಡಿಕೆ.

ಎಲ್ಲರನ್ನೂ ಇರಿಟೇಟ್ ಮಾಡುವ .. ಪಕ್ಕಾ ನರಿ ಬುದ್ಧಿಯನ್ನು ಪ್ರದರ್ಶಿಸುವ.. ಅಸಹ್ಯವನ್ನೇ ಹಾಸ್ಯ ಅಂದುಕೊಂಡಿರುವ.. ಕಿರಿಕಿರಿಯುಂಟು ಮಾಡುವ.. ಮನೆಯಲ್ಲಿಯೇ ಎಲ್ಲರೆದುರು ರೊಮ್ಯಾನ್ಸ್ ಮಾಡಲು ಮುಂದಾಗುವ.. ಹೀಗೆ ಹಲವಾರು ಜನ ಇಲ್ಲಿಯವರೆಗೆ ಈ ಬಿಗ್ ಬಾಸ್‌ನ ಪ್ರಮುಖವಾದ ಭಾಗವಾಗಿದ್ದಾರೆ.

Bigg Boss Fame Armaan Malik Expecting Fifth Child Kritika s Video Fuels Speculation

ಆ ಪೈಕಿ ಒಬ್ಬರಾದ ಅರ್ಮಾನ್ ಮಲ್ಲಿಕ್ ಸದ್ಯ ಐದನೇ ಬಾರಿ ತಂದೆಯಾಗುತ್ತಿದ್ದಾರೆ. ಟ್ರೋಲಿಗರಿಗೆ ಈ ಮೂಲಕ ಆಹಾರವೂ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದಾರೆ.

ಹೌದು, ಅರ್ಮಾನ್ ಮಲ್ಲಿಕ್.. ತಮ್ಮ ಸಾಂಸಾರಿಕ ಬದುಕಿನ ಕಾರಣಕ್ಕೆ ಸದಾ ಸುದ್ದಿಯಾಗುವ ಹೈದರಾಬಾದ್ ಮೂಲದ ಯೂಟ್ಯೂಬರ್. 2011ರಲ್ಲಿ ಖಾಸಗಿ ಬ್ಯಾಂಕ್‌ ವೊಂದರಲ್ಲಿ ಕ್ಯಾಷಿಯರ್‌ ಆಗಿ ಕೆಲಸ ಮಾಡುತ್ತಲೇ ಅದೇ ಬ್ಯಾಂಕ್‌ ನಲ್ಲಿ ಕೆಲಸ ಮಾಡುತ್ತಿದ್ದ ಪಾಯಲ್‌ ಅವರನ್ನು ಮದ್ವೆಯಾದ ಅರ್ಮಾನ್, ಆ ನಂತರ .. ತಮ್ಮ ಹೆಂಡ್ತಿ ಪಾಯಲ್ ಅವರ ಸ್ನೇಹಿತೆ ಕೃತಿಕಾ ಅವರನ್ನೂ ಪ್ರೀತಿಸಿದರು. ಮೊದಲ ಪತ್ನಿ ಪಾಯಲ್ ಅವರನ್ನು ಒಪ್ಪಿಸಿ ಅವರ ಸಮ್ಮುಖದಲ್ಲಿಯೇ ಕೃತಿಕಾ ಜೊತೆ ಮದುವೆಯೂ ಆದರು.

ಇಲ್ಲಿಂದಾಚೆ ಇಬ್ಬರು ಹೆಂಡ್ತಿಯರ ಮುದ್ದಿನ ಗಂಡ ಎಂಬ ಕಾರಣಕ್ಕೆ ಎಲ್ಲರ ಗಮನ ಸೆಳೆಯುತ್ತಾ, ಆಗಾಗ ವಿವಾದಕ್ಕೀಡಾಗುತ್ತಾ ಬಂದ ಅರ್ಮಾನ್ ಮಲ್ಲಿಕ್ ಹಿಂದಿಯ ಬಿಗ್ ಬಾಸ್ ಓಟಿಟಿ ಸೀಸನ್‌ಗೆ ತಮ್ಮ ಇಬ್ಬರು ಹೆಂಡ್ತಿಯರ ಜೊತೆಯಲ್ಲಿಯೇ ತೆರಳಿದ್ದರು. ಆ ನಂತರ ಮೊದಲ ಪತ್ನಿ ಪಾಯಲ್ ಬಿಗ್ ಬಾಸ್ ಮನೆಯಿಂದ ಹೊರ ಬಿದ್ದ ನಂತರ ಎರಡನೇ ಪತ್ನಿ ಕೃತಿಕಾ ಜೊತೆ ಬಿಗ್ ಬಾಸ್ ಮನೆಯಲ್ಲಿ ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾಗಿದ್ದರು.

ಇಂಥಾ ಅರ್ಮಾನ್ ಮಲ್ಲಿಕ್-ಪಾಯಲ್ ಮತ್ತು ಕೃತಿಕಾ ಅವರ ಪ್ರೇಮ ಸಂಕೇತವಾಗಿ ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಈ ನಾಲ್ಕು ಮಕ್ಕಳಲ್ಲಿ ಮೂವರು ಮಕ್ಕಳಿಗೆ ಪಾಯಲ್ ಜನ್ಮ ನೀಡಿದ್ದರೆ ಇನ್ನೊಂದು ಮಗುವಿಗೆ ಕೃತಿಕಾ ಜನ್ಮ ನೀಡಿದ್ದಾರೆ.

ಇನ್ನು 2023ರಲ್ಲಿ ಪಾಯಲ್ ಮತ್ತು ಕೃತಿಕಾ ಒಟ್ಟಿಗೆ ಗರ್ಭಿಣಿಯಾಗಿದ್ದರು. ಆ ಸಮಯದಲ್ಲಿ ಈ ವಿಚಾರ ತುಂಬಾನೇ ಸದ್ದು ಮಾಡಿತ್ತು. ಅರ್ಮಾನ್ ಮಲ್ಲಿಕ್ ಅವರನ್ನು ಟ್ರೋಲ್ ಕೂಡ ಮಾಡಲಾಗಿತ್ತು.

ಆಗ ಪಾಯಲ್ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಕೃತಿಕಾ ಓರ್ವ ಮಗನಿಗೆ ಜನ್ಮ ನೀಡಿದ್ದರು. ಇದೀಗ ಎರಡು ವರ್ಷದ ನಂತರ ಕೃತಿಕಾ ಮತ್ತೆ ಗರ್ಭಿಣಿಯಾಗಿದ್ದಾರೆ ಎನ್ನುವ ಅನುಮಾನ ಸದ್ಯ ಅನೇಕರನ್ನು ಕಾಡುತ್ತಿದೆ.

ಯಾಕೆಂದರೆ ತಮ್ಮ ದಿನನಿತ್ಯದ ಚಟುವಟಿಕೆಯನ್ನೆಲ್ಲ ವಿಡಿಯೋ ಮೂಲಕ ಹಂಚಿಕೊಳ್ಳುವ ಈ ಕುಟುಂಬ ಎರಡು ಪ್ರಗ್ನೆನ್ಸಿ ಟೆಸ್ಟ್ ಕಿಟ್ ಬಳಸಿ ಫ್ರಾಂಕ್ ಮಾಡಿದೆ. ಈ ವಿಡಿಯೋವನ್ನು ನೋಡಿ ಸದ್ಯ ಅನೇಕರು ಗಲಿಬಿಲಿಗೊಂಡಿದ್ದು ಕೃತಿಕಾ ಮತ್ತೊಮ್ಮೆ ಗರ್ಭಿಣಿಯಾಗಿದ್ದಾರೆ ಎಂದುಕೊಂಡಿದ್ದಾರೆ.

ಕೃತಿಕಾ ಅಧಿಕೃತವಾಗಿ ನಾನು ಗರ್ಭಿಣಿ ಎಂದು ಹೇಳದಿದ್ದರೂ ಕೂಡ ಈ ವಿಚಾರವನ್ನು ಇಟ್ಟುಕೊಂಡು ಅನೇಕರು ಸದ್ಯ ಅರ್ಮಾನ್- ಪಾಯಲ್ ಮತ್ತು ಕೃತಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಇನ್ನೆಷ್ಟು ಮಕ್ಕಳಿಗೆ ಜನ್ಮ ನೀಡಬೇಕೆಂದುಕೊಂಡಿದ್ದೀರಾ, ಎನ್ನುವ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.ನಿಮ್ಮದೇ ಕ್ರಿಕೆಟ್ ಟೀಮ್ ರೆಡಿ ಮಾಡ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.ಸದ್ಯ ಕೃತಿಕಾ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

More from Filmibeat

English summary
Bigg Boss fame Armaan Malik is rumored to be expecting his fifth child after a recent video shared by his wife, Kritika, sparked speculation among fans. The video has led to widespread buzz on social media, with many wondering if another baby is on the way for the popular content creator.
Read more about: bigg boss biggboss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X