Bhoomi Shetty: 'ಕೆಂಡದ ಸೆರಗು' ಹಿಡಿದು ಕುಸ್ತಿಪಟುವಾದ ಭೂಮಿ ಶೆಟ್ಟಿ
ಸದ್ದಿಲ್ಲದೇ ಕುಸ್ತಿಪಟುವಾದ ಭೂಮಿ ಶೆಟ್ಟಿ ಇನ್ನೇನು ಕೆಲ ದಿನಗಳಲ್ಲೇ ನಿಮ್ಮ ಕಣ್ಣ ಮುಂದೆ ಬರಲಿದ್ದಾರೆ. ಭೂಮಿ ಶೆಟ್ಟಿ ಅವರ ಈ ಹೊಸ ಲುಕ್‌ಗೆ ಫಿದಾ ಆಗದವರೇ ಇಲ್ಲ. ಕರಾವಳಿ ಬೆಡಗಿ ಭೂಮಿ ಶೆಟ್ಟಿ ಸೈಲೆಂಟ್ ಆಗಿ ಚಿತ್ರವೊಂದರಲ್ಲಿ ನಟಿಸಿದ್ದಾರೆ. 'ಕಿನ್ನರಿ' ಬಳಿಕ ಭೂಮಿ ಬೇರೆ ಯಾವುದೇ ದೊಡ್ಡ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳಲಿಲ್ಲ.
ಧಾರಾವಾಹಿಗಳಲ್ಲಿ ನಟಿಸದೇ ಇದ್ದರೂ ಕೆಲ ಪ್ರಯೋಗಗಳನ್ನು ಮಾಡಿದರು. ನಿರೂಪಣೆ ಮಾಡುವ ಮೂಲಕ ತಮ್ಮನ್ನು ತಾವು ನಟನೆಯಿಂದ ಹೊರಗೂ ನೋಡಲು ಯತ್ನಿಸಿದರು. ಆದರೆ, ಅದ್ಯಾವುದೂ ವರ್ಕೌಟ್ ಆಗಲಿಲ್ಲ.

ಸಿನಿ ಜಗತ್ತಲ್ಲಿ ಬ್ಯುಸಿ
ಮೆಕಾನಿಕಲ್ ಇಂಜಿನಿಯರಿಂಗ್ ಓದುವ ನೆಪದಲ್ಲಿ ಬೆಂಗಳೂರಿಗೆ ಬಂದು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಪರಿಸರ ಪ್ರೇಮಿಯಾದ ಭೂಮಿ ಶೆಟ್ಟಿ ಸಣ್ಣ ವಯಸ್ಸಿನಲ್ಲೇ ಭರತನಾಟ್ಯ ಮತ್ತು ಯಕ್ಷಗಾನದಲ್ಲಿ ಪರಿಣಿತಿ ಪಡೆದವರು. ಹಲವು ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದು, ಸದ್ಯ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 'ಕಿನ್ನರಿ' ಧಾರಾವಾಹಿಯಲ್ಲಿ ಮಣಿ ಪಾತ್ರದ ಮೂಲಕ ಪ್ರೇಕ್ಷಕರ ಫೇವರಿಟ್ ನಟಿಯಾದರು. ತೆಲುಗು ಸೀರೀಯಲ್‌ನಲ್ಲೂ ನಟಿಸಿದ್ದು, 'ನಿನ್ನೇ ಪೆಲ್ಲಡತಾ' ಹಾಗೂ 'ಅಕ್ಕ ಚೆಲ್ಲಲ್ಲು' ಧಾರಾವಾಹಿಯಲ್ಲಿ ನಟಿಸಿದ್ದಾರೆ.
ಧಾರಾವಾಹಿಯಿಂದ ಸಿನಿಮಾವರೆಗೆ
ಆನಿಮೇಷನ್ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಇವರು ಸ್ಯಾಂಡಲ್‌ವುಡ್ ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದಾರೆ. ಯೋಗೇಶ್ ಅಭಿನಯದ 'ಲಂಬೋದರ' ಚಿತ್ರದ ಮೂಲಕ ಕಿರುತೆರೆಯ ಕಿನ್ನರಿ ಚಂದನವನ ಪ್ರವೇಶಿಸಿದರು. ಬಳಿಕ ಕೋವಿಡ್ ಸಂದರ್ಭದಲ್ಲಿ 'ಇಕ್ಕಟ್' ಎಂಬ ಚಿತ್ರದಲ್ಲಿ ನಟಿಸಿ ಸೈ ಎನಿಸಿಕೊಂಡರು. ಇದಕ್ಕೂ ಮೊದಲು ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ - 7 ಸೀಸನ್‌ನಲ್ಲಿ 9ನೇ ಸ್ಪರ್ಧಿಯಾಗಿ ಭಾಗವಹಿಸಿದ್ದರು. ಬರೋಬ್ಬರಿ 112 ದಿನಗಳ ಕಾಲ ದೊಡ್ಮೆನೆಯಲ್ಲಿ ಉಳಿದು ಎದುರಾಳಿಗಳಿಗೆ ಟಫ್ ಫೈಟ್ ಕೊಟ್ಟಿದ್ದರು. ಟಾಪ್- 5 ವರೆಗೂ ಬಂದಭೂಮಿ ಶೆಟ್ಟಿ, ಬಳಿಕ 'ಮಜಾಭಾರತ' ಕಾಮಿಡಿ ಶೋ ನಿರೂಪಣೆ ಮಾಡಿದರು.
ಕುಸ್ತಿಪಟು ಆದ ಕಿನ್ನರಿ
ಭೂಮಿ ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಕೊಟ್ಟು ತಮ್ಮ ಪ್ರಾಜೆಕ್ಟ್ ಬಗ್ಗೆ ಸೀಕ್ರೆಟ್ ಮೈಂಟೇನ್ ಮಾಡಿದ್ದರು. ಆದರೆ, ಇದೀಗ ಅವರು ಯಾವ ಚಿತ್ರದಲ್ಲಿ ನಟಿಸಿದ್ದಾರೆ ಎಂಬ ಸತ್ಯ ಎಲ್ಲರಿಗೂ ಗೊತ್ತಾಗಿದೆ. ಜಿಮ್ನ್ಯಾಸ್ಟಿಕ್, ಕಿಕ್ ಬಾಕ್ಸಿಂಗ್, ವೈಟ್ ಲಿಫ್ಟ್ ಸೇರಿದಂತೆ ಜಿಮ್‌ನಲ್ಲಿ ಸಕತ್ ವರ್ಕೌಟ್ ಮಾಡುತ್ತಿದ್ದಾರೆ. ಅಲ್ಲದೇ, ಬೈಕ್ ರೈಡ್ ಕೂಡ ಮಾಡಿದ್ದು, ಇದು ಭೂಮಿ ಶೆಟ್ಟಿ ಮುಂದಿನ ಪ್ರಾಜೆಕ್ಟ್‌ಗಾಗಿ ಮಾಡುತ್ತಿರುವ ವರ್ಕೌಟ್ ಎಂದು ಅಭಿಮಾನಿಗಳು ಮಾಡಿದ್ದ ಗೆಸ್ ನಿಜವಾಗಿದೆ. ಮಾಲಾಶ್ರೀ ಕಮ್ ಬ್ಯಾಕ್ ಮಾಡಿದ ಚಿತ್ರದಲ್ಲಿ ಭೂಮಿ ಶೆಟ್ಟಿ ಕೂಡ ಬಣ್ಣ ಹಚ್ಚಿದ್ದಾರೆ.

ಕೆಂಡದ ಸೆರಗಿನಲ್ಲಿ ಭೂಮಿ
ಹೌದು.. ಕಾದಂಬರಿ ಆಧಾರಿತ ಚಿತ್ರವಾದ 'ಕೆಂಡದ ಸೆರಗು' ಚಿತ್ರಕ್ಕೆ ಭೂಮಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಇದರಲ್ಲಿ ಭೂಮಿ ಶೆಟ್ಟಿ ಕುಸ್ತಿ ಪಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು ಭೂಮಿ ಖದರ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಷ್ಟೇ ಬಾಕಿ ಉಳಿದಿದ್ದು, ಇನ್ನೇನು ಸ್ವಲ್ಪ ಸಮಯದಲ್ಲೇ ಚಿತ್ರ ರಿಲೀಸ್ ಆಗಲಿದೆ. ಕುಸ್ತಿಪಟು ಲುಕ್‌ನಲ್ಲಿ ಭೂಮಿ ಶೆಟ್ಟಿ ಅವರು ಖದರ್ ಆಗಿ ಕಾಣಿಸಿಕೊಂಡಿದ್ದು, ಈ ಚಿತ್ರದ ಮೂಲಕ ಅಭಿಮಾನಿಗಳಿಗೆ ಖುಷಿ ಕೊಡುವುದಂತೂ ಪಕ್ಕಾ ಆಗಿದೆ.


Click it and Unblock the Notifications











