BBK 11: ಬಿಗ್ ಬಾಸ್ ಮನೆಯಿಂದ ಬಂದ ಕೂಡಲೇ ಚೈತ್ರಾಗೆ ಮದುವೆ? ತಾಯಿ ಹೇಳಿದ್ದೇನು?

By ಎಸ್ ಸುಮಂತ್

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಮಾತು ಜೋರು, ಆಟದಲ್ಲಿ ಅಷ್ಟಕ್ಕೆ ಅಷ್ಟೇ. ಕಳೆದ ಬಾರಿ ಗೌತಮಿ ತಂಡಕ್ಕೆ ಹೋದಂತ ಚೈತ್ರಾ, ಅಟ ಆಡುವುದಕ್ಕೆ ಕೊಡಲಿಲ್ಲ ಅಂತ ಕಣ್ಣೀರು ಹಾಕಿದ್ದರು. ಮಗುವಿನಂತೆ ಹಠ ಮಾಡಿದ್ದರು. ಉಸ್ತುವಾರಿ ಬೇಡ ಎಂದರು ಕೊಡುತ್ತಾರೆ ಎಂದು ಬ್ಯಾಗ್ ಪ್ಯಾಕ್ ಮಾಡಿಕೊಂಡು ಕೂತಿದ್ದರು. ಆದರೆ ಈ ವಾರ ಆಟ ಆಡುವುದಕ್ಕೆ ಅವಕಾಶ ಸಿಕ್ಕಿದೆ ಆದರೆ ಆಟ ಆಡುವುದಕ್ಕೆ ಆಗದೆ ಹಣೆ ಹಣೆ ಚಚ್ಚಿಕೊಂಡು ಕಣ್ಣೀರು ಹಾಕಿದ್ದಾರೆ.

ಬಿಗ್ ಬಾಸ್ ಮನೆಯೊಳಗೆ ಚೈತ್ರಾ ಮಾತು ಜೋರು. ಅವರ ಧ್ವನಿಯೇ ಕೊಂಚ ಕಿರಿಕಿರಿಯನ್ನುಂಟು ಮಾಡುತ್ತದೆ. ವೈಲ್ಡ್ ಕಾರ್ಡ್ ಮೂಲಕ ಬಂದಿರೋ ರಜತ್ ಸಿಕ್ಕಾಪಟ್ಟೆ ಟಕ್ಕರ್ ಕೊಡ್ತಾರೆ. ಬಾಸ್ ಬಾಸ್ ಅಂದ್ಕೊಂಡು ಅವರಿಗೆ ಕೋಪವನ್ನ ಹೆಚ್ಚು ಮಾಡ್ತಾನೆ ಇರ್ತಾರೆ. ಚೈತ್ರಾ ಬಿಗ್ ಬಾಸ್ ಮನೆಗೆ ಹೋದ್ಮೇಲೆ ಹೆಗ್ಗದ್ದೆ ಸ್ಟುಡಿಯೋ ಸಂದೀಪ್ ಅವರು ಚೈತ್ರಾ ತಾಯಿಯನ್ನು ಸಂದರ್ಶನ ಮಾಡಿದ್ದಾರೆ. ಅದರಲ್ಲಿ ಮದುವೆ, ಚೈತ್ರಾ ಹುಟ್ಟುಗುಣ, ಗಟ್ಟಿಗಿತ್ತಿ ಹೀಗೆ ಒಂದಷ್ಟು ವಿಶೇಷತೆ ಬಗ್ಗೆ ತಿಳಿಸಿದ್ದಾರೆ.

Bigg Boss Fame chaitra kundapura s mother s reaction to her daughter s wedding plans

ಮನೆಗೆ ಚೈತ್ರಾ ಹೆಸರು

ಚೈತ್ರಾ ಮನೆಯಲ್ಲಿ ಮೂವರು ಹೆಣ್ಣು ಮಕ್ಕಳು. ದೊಡ್ಡ ಮಗಳಿಗೆ ಅದಾಗಲೇ ಮದುವೆಯಾಗಿದೆ. ಕುಂದಾಪುರದ ಹತ್ತಿರಕ್ಕೆ ದೊಡ್ಡಮಗಳನ್ನು ಮದುವೆ ಮಾಡಿಕೊಟ್ಟಿದ್ದಾರೆ.‌ ಇನ್ನು ಎರಡನೇ ಮಗಳು ಚೈತ್ರಾ. ಮೂರನೇ ಮಗಳು ಓದುತ್ತಿದ್ದಾರೆ. ಎರಡನೇ ಮಗಳಾದ ಚೈತ್ರಾ ಅವರ ಹೆಸರನ್ನೇ ಮನೆಗೆ ಇಡಲಾಗಿದೆ. ಮನೆ ತುಂಬಾ ಚೈತ್ರಾ ಅವರ ಫೋಟೋಗಳೇ ಎದ್ದು ಕಾಣಿಸುತ್ತಿವೆ. ಆದರೆ ಅವರ ಅಮ್ಮ ಇನ್ನಷ್ಟು ಫೋಟೋಗಳನ್ನು ಮೂಟೆ ಕಟ್ಟಿ ಇಟ್ಟಿದ್ದಾರೆ.

ಚೈತ್ರಾ ಭಾಷಣ ಕಲಿತಿದ್ದೇಗೆ..?

ಚೈತ್ರಾ ತಮ್ಮ ಭಾಷಣದಿಂದಾನೇ ಖ್ಯಾತಿ ಪಡೆದವರು. ಭಟಷಣ ಕಲಿತದ್ದು ಹೇಗೆ ಎಂಬ ಬಗ್ಗೆ ಎಲ್ಲರಿಗೂ ಒಂದಷ್ಟು ಕುತೂಹಲವಿರುತ್ತದೆ. ಆ ಬಗ್ಗೆ ಅವರ ತಾಯಿ ಹೇಳಿದ್ದು ಹೀಗೆ, 'ಕಾಲೇಜಿಗೆ ಹೋಗುವಾಗಲೇ ಭಾಷಣ ಕಲಿತಿದ್ದಳು. ನಮ್ಮ ಸಪೋರ್ಟ್ ತುಂಬಾ ಇದೆ. ತುಂಬಾ ಒಳ್ಳೆಯ ಹುಡುಗಿ. ಕೆಲಸ ಮಾಡೋದು ಅಂದ್ರೆ ಅವಳಿಗೆ ತುಂಬಾ ಇಷ್ಟ. ಬರ್ತಾ ಇರಲಿಲ್ಲ‌. ಅವಳಿಗೆ ಬಂದರು ನಮಗೆ ಹೇಳ್ತಾ ಇರಲಿಲ್ಲ. ಅವಳಿಗೆ ಧೈರ್ಯ ಜಾಸ್ತಿ. ಮಾತಿಗೆಲ್ಲಾ ಯಾವ ಪ್ರಾಕ್ಟೀಸ್ ಮಾಡಿದ್ದೀಲ್ಲ. ಕಾಲೇಜಿಗೆ ಹೋಗ್ತಾನೆ ಟಿವಿ, ಪೇಪರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳು' ಎಂದು ತಾಯಿ ನೆನಪಿಸಿಕೊಂಡಿದ್ದಾರೆ.

ಬಿಗ್ ಬಾಸ್‌ ನೋಡ್ತಾರಾ..?

ಸಾಮಾನ್ಯವಾಗಿ ಚೈತ್ರಾಗೆ ಸಾಕಷ್ಟು ಬೆದರಿಕೆ ಕರೆಗಳು ಬಂದಿರುತ್ತವೆ. ಆ ಕರೆಗಳೇನಾದರೂ ಚೈತ್ರಾ ತಾಯಿಗೂ ಬಂದಿತ್ತಾ ಎಂಬುದಕ್ಕೆ ಅವರ ತಾಯಿ ನಂಗೆ ಬೆದರಿಕೆ ಕಾಲ್ಸ್ ಎಲ್ಲಾ ಬಂದಿಲ್ಲ. ಅವಳಿಗೆ ಬಂದಿರುತ್ತೇನೋ. ಆದರೆ ನಾವೂ ಹೆದರುತ್ತೀವಿ ಅಂತ ಹೇಳಿರಲ್ಲ ಎಂದಿದ್ದಾರೆ. ಹಾಗೆ ಬಿಗ್ ಬಾಸ್ ನ ದಿನಕ್ಕೆ‌ಮೂರ್ನಾಲ್ಕು ಸಲ ನೋಡ್ತಾರಂತೆ. ಯಾಕಂದ್ರೆ ಆ ಜಗಳ, ಆ ಮಾತುಗಳು ಬೇಗ ಅರ್ಥವಾಗುವುದಿಲ್ಲ ಅದಕ್ಕೆ ಅಂತಾರೆ. ಇನ್ನು ಸುದೀಪ್ ಅಂದ್ರೆ ಚೈತ್ರಾ ತಾಯಿಗೆ ತುಂಬಾ ಇಷ್ಟವಂತೆ.

ಚೈತ್ರಾ ಮದುವೆ ಬಗ್ಗೆ ಮಾತು

ಬಿಗ್ ಬಾಸ್ ಮನೆಯೊಳಗೆ ಚೈತ್ರಾ ಮದುವೆ ಬಗ್ಗೆ ಮಾತನಾಡಿದ್ದರು. ಆ ಬಗ್ಗೆ ಹೆಚ್ಚು ಸುದ್ದಿಯೂ ಆಗಿತ್ತು. ಚೈತ್ರಾಳ ಮದುವೆ ಬಗ್ಗೆ ಅವರವತಾಯಿ ಹೇಳಿದ್ದು ಹೀಗೆ, ಇನ್ನು ಮಾಡಿಲ್ಲ, ಆಗ್ಬೇಕು. ಅದಕ್ಕೆ ಹೇಳಿದ್ದಾಳೆ. ಕಳೆದೊತ್ತಿಗೆ ಹುಡುಕುತ್ತಾ ಇದ್ದೆವು. ಈಗ ಮಾಡಬೇಕು. ಅವಳು ಬಿಗ್ ಬಾಸ್ ಗೆ ಹೋಗೋದು ನಮಗೆ ಗೊತ್ತಿರಲಿಲ್ಲ. ಲಾಸ್ಟ್ ಮೂಮೆಂಟ್‌ನಲ್ಲಿ ಗೊತ್ತಾಗಿದ್ದು, ಇಲ್ಲಿಯೇ ಎಲ್ಲಾ ಶೂಟಿಂಗ್ ಮಾಡಿದ್ದು. ಇನ್ಮೇಲೆ ಮದುವೆಗೆ ನೋಡಬೇಕು' ಎಂದಿದ್ದಾರೆ.

More from Filmibeat

English summary
BBK 11: Here is the details about Will Chaitra kundapura marriage plans;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X