Chaitra Vasudevan:"ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ": ವಿಚ್ಛೇದನದ ಬಗ್ಗೆ ಚೈತ್ರಾ ವಾಸುದೇವನ್ ಬಹಿರಂಗ ಪತ್ರ

ಬಿಗ್‌ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದ್ದಾರೆ. ಪತಿ ಸತ್ಯ ನಾಯ್ಡುಗೆ ಡಿವೋರ್ಸ್ ನೀಡಿದ್ದು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಡಿವೋರ್ಸ್ ಘೋಷಿಸಿದ್ದಾರೆ. ಬಹಳ ಹಿಂದೆಯೇ ಚೈತ್ರಾ, ಸತ್ಯ ನಾಯ್ಡು ಮದುವೆ ಆಗಿತ್ತು. ಇಬ್ಬರು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ನಡೆಸುತ್ತಿದ್ದಾರೆ. ಜೊತೆಗೆ ಚೈತ್ರಾ ವಾಸುದೇವನ್ ನಿರೂಪಕಿಯಾಗಿಯೂ ಮಿಂಚುತ್ತಾ ಬರ್ತಿದ್ದಾರೆ.

ಖಾಸಗಿ ಸಮಾರಂಭವೊಂದರಲ್ಲಿ ಸತ್ಯ ಮತ್ತು ಚೈತ್ರಾ ಭೇಟಿಯಾಗಿದ್ದರು. ಚೈತ್ರಾನ ನೋಡಿ ಸತ್ ಇಷ್ಟಪಟ್ಟಿದ್ದರು. ಬಳಿಕ ಚೈತ್ರಾ ಪೋಷಕರನ್ನು ಒಪ್ಪಿಸಿ 2017ರ ನವೆಂಬರ್‌ನಲ್ಲಿ ಇಬ್ಬರ ಮದುವೆ ನಡೆದಿತ್ತು. ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ಜೊತೆ ಜೊತೆಗೆ ಜಾಹೀರಾತು, ಕ್ರೀಡಾ ನಿರೂಪಣೆ, ಫೋಟೊಶೂಟ್ ನಿರೂಪಣೆಯನ್ನು ಚೈತ್ರಾ ಮಾಡುತ್ತಿದ್ದಾರೆ. ಇದಕ್ಕೆ ತಮ್ಮ ಪತಿ ಹಾಗೂ ಅತ್ತೆ ಮಾವನ ಪ್ರೋತ್ಸಾಹ ಕೂಡ ಇದೆ ಎಂದು ಹೇಳುತ್ತಿದ್ದಾರೆ. ಬಿಗ್‌ಬಾಸ್ ಸೀಸನ್-7ರ ಸ್ಪರ್ಧಿಯಾಗಿ ಚೈತ್ರಾ ಕೆಲವು ವಾರ ದೊಡ್ಮನೆಯಲ್ಲಿ ಇದ್ದರು.

Bigg Boss Fame Chaitra Vasudevan announces divorce from husband Sathya naidu

ಇತ್ತೀಚೆಗೆ ಸೆಲೆಬ್ರೆಟಿಗಳು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಡಿವೋರ್ಸ್ ವಿಚಾರಗಳನ್ನು ಘೋಷಿಸುತ್ತಿದ್ದಾರೆ. ಇದೀಗ ಚೈತ್ರಾ ಕೂಡ ಅದನ್ನೇ ಮಾಡಿದ್ದಾರೆ. "ಎಲ್ಲರಿಗೂ ನಮಸ್ಕಾರ. ಹಲವಾರು ತಿಂಗಳುಗಳಿಂದ ಸಾಕಷ್ಟು ಯೋಚಿಸಿದ ನಂತರ ನಾನು ನನ್ನ ವಿಚ್ಛೇದನದ ಬಗ್ಗೆ ನಿಮಗೆ ಹೇಳಲು ಧೈರ್ಯವನ್ನು ತೆಗೆದುಕೊಂಡಿದ್ದೇನೆ. ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ. ನಿಂದನೆ /ದ್ವೇಷ ಬೇಡ ಎಂದು ನಿಮ್ಮಲ್ಲಿ ವಿನಂತಿಸಿಕೊಳ್ಳುತೇನೆ. ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ. ನಾನು ಈವೆಂಟ್ ಮತ್ತು ಟಿವಿ ಉದ್ಯಮದಲ್ಲಿ 10 ವರ್ಷಗಳಿಂದ ಕೆಲಸ ಮಾಡಿದ್ದೇನೆ. ನನ್ನ ಸೇವೆಯನ್ನು ಇನ್ನುಮುಂದೆಯೂ ಮುಂದುವರಿಸಲು ಬಯಸುತ್ತೇನೆ ಮತ್ತು ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ" ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಚೈತ್ರಾ ವಾಸುದೇವನ್ ಬರೆದುಕೊಂಡಿದ್ದಾರೆ.

ಮೂಲತಃ ಕುಂದಾಪುರದವರಾಗಿರುವ ನಿರೂಪಕಿ ಚೈತ್ರಾ ವಾಸುದೇವನ್ ಅವರು ಹುಟ್ಟಿ ಬೆಳೆದಿದ್ದೆಲ್ಲವೂ ಬೆಂಗಳೂರಿನಲ್ಲಿ. ಕಾಲೇಜಿನಲ್ಲಿರುವಾಗಲೇ ವಾಹಿನಿಯೊಂದಕ್ಕೆ ನಿರೂಪಣೆ ಮಾಡುವ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟರು. ಇನ್ನು ತಮ್ಮ ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆ ಮೂಲಕ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಅಂದಹಾಗೆ ಚೈತ್ರಾ ಹೆಸರು ತಂದೆಯ ಹೆಸರು ವಾಸುದೇವ. ಆದರೆ ಪಾಸ್‌ಪೋರ್ಟ್‌ನಲ್ಲಿ ಚೈತ್ರಾ ವಾಸುದೇವನ್ ಎಂದು ತಪ್ಪಾಗಿ ನಮೂದಿಸಲಾಗಿತ್ತು. ಅಂದಿನಿಂದ ಚೈತ್ರಾ ವಾಸುದೇವನ್ ಆಗಿಬಿಟ್ಟರು.

ಮೊದಲಿನಿಂದಲೂ ಸ್ವಾವಲಂಬಿಯಾಗಿ ಬದುಕಬೇಕು ಎನ್ನುವುದು ಚೈತ್ರಾ ಬಯಕೆ. ಪಿಯುಸಿ ಬಳಿಕ ತಮ್ಮ ವಿದ್ಯಾಭ್ಯಾಸಕ್ಕಾಗಿ ಬಿಟ್ಟರೆ ಮತ್ಯಾವುದಕ್ಕೂ ತಂದೆ ಬಳಿ ಕೂಡ ಆಕೆ ಹಣ ಕೇಳಿಲ್ಲವಂತೆ. ತಮ್ಮ ಈವೆಂಟ್ ಮ್ಯಾನೇಜ್‌ಮೆಂಟ್‌ನಲ್ಲಿ ಬರೀ ಶ್ರೀಮಂತರ ಮನೆ ಕಾರ್ಯಕ್ರಮಗಳನ್ನು ಮಾತ್ರ ನಡೆಸುತ್ತಿಲ್ಲ. ಬಜೆಟ್‌ಗೆ ಕೇಳಿ ಸಣ್ಣ ಕಾರ್ಯಕ್ರಮಗಳನ್ನು ಒಪ್ಪಿಕೊಳ್ಳುತ್ತಾರೆ. ತಮ್ಮ ಸಂಸ್ಥೆಯಲ್ಲಿ ಸಾಕಷ್ಟು ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾರೆ. ಇನ್ನು ಮುಂದೆ ಕೂಡ ಸತ್ಯ ಜೊತೆ ಸೇರಿ ಈವೆಂಟ್ ಮ್ಯಾನೇಜ್‌ಮೆಂಟ್ ಮುಂದುವರೆಸುತ್ತಾರಾ ಅನ್ನೋದು ಗೊತ್ತಿಲ್ಲ.

More from Filmibeat

English summary
Chaitra Vasudevan announces split from husband Sathya naidu. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X