ಮಾರ್ಡನ್ ರವಿಚಂದ್ರನ್ ಅಂತಲೇ ಟ್ರೆಂಡ್ ಆಗ್ತಿರೋ ಕಿಶನ್ ಬಿಳಗಲಿ ಬಹು ದೊಡ್ಡ ಶ್ವಾನ ಪ್ರೇಮಿ

By ಅನಿತಾ ಬನಾರಿ

ಡ್ಯಾನ್ಸರ್ ಕಿಶನ್ ಬಿಳಗಲಿ ಬಗ್ಗೆ ಗೊತ್ತಿಲ್ಲದವರಾರು ಹೇಳಿ? ಡ್ಯಾನ್ಸ್ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದ ಕಿಶನ್ ಬಿಳಗಲಿ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದು ಬಿಗ್ ಬಾಸ್ ಮೂಲಕ. ಬಿಗ್ ಬಾಸ್ ಸೀಸನ್ 7 ರ ಸ್ಪರ್ಧಿಯಾಗಿ ದೊಡ್ಮನೆಗೆ ಕಾಲಿಟ್ಟ ಕಿಶನ್ ಬಿಳಗಲಿ ತಮ್ಮ ನಡೆ ನುಡಿಯ ಮೂಲಕ ವೀಕ್ಷಕರ ಮನ ಸೆಳೆದಿದ್ದರು.

ಇನ್ನು ಕಿಶನ್ ಬಿಳಗಲಿಯವರು ಮೂಲತಃ ಚಿಕ್ಕಮಗಳೂರು ನಿವಾಸಿಯಾಗಿದ್ದು, ಕಳೆದ ಹಲವು ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ತುಂಬಾನೇ ಆ್ಯಕ್ಟೀವ್ ಆಗಿರುವ ಇವರು ಆಗಾಗ ಸೆಲೆಬ್ರಿಟಿಗಳೊಂದಿಗೆ ಡಾನ್ಸ್ ಕೊರಿಯೋಗ್ರಫಿ ಮಾಡಿ ಅದನ್ನು ತಮ್ಮ ಅಕೌಂಟಿನಲ್ಲಿ ಶೇರ್ ಮಾಡುತ್ತಿರುತ್ತಾರೆ.

Bigg Boss fame dancer Kishan Bilagali is a big dog lover

ಅದ್ಭುತ ನೃತ್ಯಗಾರ ಎಂದೆನಿಸಿಕೊಂಡಿರುವ ಕಿಶನ್ ಬಿಳಗಲಿ ಇತ್ತೀಚೆಗೆ ತಮ್ಮ ಪ್ರಾಣಿ ಪ್ರೀತಿ ಬಗ್ಗೆನೂ ಮಾತನಾಡಿದ್ದಾರೆ. ಹೌದು, ತಮ್ಮ ಬೆಂಗಳೂರಿನ ಮನೆಯಲ್ಲಿ ಒಂದು ನಾಯಿಯನ್ನು ಸಾಕಿಕೊಂಡಿರುವ ಕಿಶನ್ ಬಿಳಗಲಿ ಆ ಶ್ವಾನಕ್ಕೆ ಪ್ಯಾಂಥರ್ ಎಂಬ ಹೆಸರಿಟ್ಟಿದ್ದಾರೆ.

"ಚಿಕ್ಕಂದಿನಿಂದಲೂ ನನಗೆ ಪ್ರಾಣಿಗಳೆಂದರೆ ಬಹಳ ಇಷ್ಟ. ನಮ್ಮ ತಂದೆ ಕೃಷಿಕರಾಗಿರುವುದರಿಂದ ನಮ್ಮ ಹೊಲದ ತುಂಬಾ ಪ್ರಾಣಿಗಳಿವೆ. ಒಂದೇ ಒಂದು ದಿನವೂ ಸುತ್ತಮುತ್ತ ಪ್ರಾಣಿಗಳಿಲ್ಲದೆ ಕಳೆದ ನೆನಪೇ ನನಗಿಲ್ಲ. ಅದರಲ್ಲಿಯೂ ನಾಯಿಗಳೆಂದರೆ ನನಗೆ ಹೆಚ್ಚು ಪ್ರೀತಿ. ಹದಿನಾರನೇ ವರ್ಷಕ್ಕೆ ಬೆಂಗಳೂರಿಗೆ ಕಾಲಿಟ್ಟ ನನಗೆ ನನ್ನ ನಾಯಿ ಒಂಟಿತನವನ್ನು ದೂರ ಮಾಡಲು ಸಹಾಯ ಮಾಡಿತು. ಮನೆಯವರಿಂದ ದೂರ ಇದ್ದಾಗ ನಾಯಿ ಸದಾ ನನಗೆ ಪ್ರೀತಿ ಕೊಟ್ಟಿದೆ. ಮನೆಗೆ ಶೂಟಿಂಗ್ ಮುಗಿಸಿ ತೆರಳುವಾಗ ನನಗಾಗಿ ನನ್ನ ಮುದ್ದು ಪ್ಯಾಂಥರ್ ಕಾಯುತ್ತಿರುತ್ತಾನೆ. ಇದೊಂದು ರೀತಿ ಪರಸ್ಪರ ಪ್ರೀತಿ ಹಂಚುವ ಪರಿ" ಎಂದು ತಮ್ಮ ಶ್ವಾನ ಪ್ರೀತಿಯ ಬಗ್ಗೆ ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಕಿಶನ್ ಬಿಳಗಲಿ ಹೇಳಿಕೊಂಡಿದ್ದಾರೆ.

"ನಮ್ಮ ತೋಟದಲ್ಲಿಯೂ 10 ನಾಯಿಗಳಿವೆ. ಅದರಲ್ಲಿ ಎಂಟು ನಾಯಿಗಳು ಬೇರೆಯವರು ಸಾಕದೆ ಬಿಟ್ಟ ಬೀದಿ ನಾಯಿಗಳು. ಅದೆಷ್ಟೋ ಬಾರಿ ಜನರು ನಾಯಿ ಬೇಕೆಂದು ಸಾಕಲು ಆರಂಭಿಸುತ್ತಾರೆ. ದೊಡ್ಡ ದೊಡ್ಡ ಬ್ರೀಡ್ ನಾಯಿಗಳನ್ನೇ ಖರೀದಿಸುತ್ತಾರೆ. ಕಾಲ ಕ್ರಮೇಣ ಆ ನಾಯಿಗಳನ್ನು ಮೈನ್ಟೈನ್ ಮಾಡುವುದು, ಸಾಕುವುದು ಕಷ್ಟವಾಗುತ್ತಿದ್ದಂಗೆ ಬೀದಿಗೆ ಬಿಡುತ್ತಾರೆ. ಅಂತಹ ನಾಯಿಗಳನ್ನು ನಾವು ನಮ್ಮ ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದೇವೆ" ಎಂದು ಕಿಶನ್ ಬಿಳಗಲಿ ಹೇಳಿದ್ದಾರೆ .

Bigg Boss fame dancer Kishan Bilagali is a big dog lover

ಡ್ಯಾನ್ಸರ್ ಕಿಶನ್ ಬೆಳಗಲಿ ಈ ಪ್ರಾಣಿ ಪ್ರೇಮ ಹಲವರು ಅಭಿಮಾನಿಗಳಿಗೆ ಹಾಗೆ ಪ್ರೇಕ್ಷಕರಿಗೆ ಪ್ರೇರಣೆಯಾಗಲಿದೆ. ಅವರ ಸೋಶಿಯಲ್ ಮೀಡಿಯಾ ಅಕೌಂಟಿನಲ್ಲಿಯೂ ಆಗಾಗ ನಾಯಿಗಳೊಂದಿಗಿನ ಫೋಟೋಗಳನ್ನು ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದು ನೆಟ್ಟಿಗರ ಮನ ಸೆಳೆಯುತ್ತಿದೆ.

More from Filmibeat

English summary
Bigg Boss contestant Kishan says that the love of dogs has removed his loneliness
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X