ಯಶ್ ನಮ್ಮಣ್ಣ ಅಂತ ದೀಪಿಕಾ ದಾಸ್ ಎಲ್ಲೂ ಹೇಳಲ್ಲ ಯಾಕೆ?

ರಾಕಿಂಗ್ ಸ್ಟಾರ್ ಯಶ್ ಹಾಗೂ ಬಿಗ್‌ಬಾಸ್ ಖ್ಯಾತಿಯ ದೀಪಿಕಾ ದಾಸ್ ದೊಡ್ಡಮ್ಮ ಚಿಕ್ಕಮ್ಮನ ಮಕ್ಕಳು. ಆದರೆ ಯಾವತ್ತೂ ಯಶ್ ನಮ್ಮ ಅಣ್ಣ ಅಂತ ದೀಪಿಕಾ ದಾಸ್ ಹೇಳುವುದಿಲ್ಲ. ಈ ಬಗ್ಗೆ ಸಾಕಷ್ಟು ಜನರಿಗೆ ಗೊಂದಲವಿದೆ. ಈ ಬಗ್ಗೆ ಸ್ವತಃ ದೀಪಿಕಾ ಮಾತನಾಡಿದ್ದಾರೆ.

ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಗೆದ್ದ ದೀಪಿಕಾ ಬಳಿಕ ಬಿಗ್‌ಬಾಸ್ ಶೋ ಸ್ಪರ್ಧಿಯಾಗಿ ವೀಕ್ಷಕರ ಮುಂದೆ ಬಂದಿದ್ದರು. ಸದ್ಯ 'ಪಾರು ಪಾರ್ವತಿ' ಚಿತ್ರದಲ್ಲಿ ಆಕೆ ನಟಿಸಿದ್ದಾರೆ. ಆಕೆಯ ಪಾತ್ರದ ಸುತ್ತಾ ಇಡೀ ಸಿನಿಮಾ ಕಥೆ ಸುತ್ತುತ್ತದೆ. ಈ ವಾರ ಸಿನಿಮಾ ತೆರೆಗೆ ಬರ್ತಿದೆ. ಕೆಲ ಸಂದರ್ಶನಗಳಲ್ಲಿ ಭಾಗಿ ಆಗಿ ದೀಪಿಕಾ ಚಿತ್ರದ ಬಗ್ಗೆ ಮಾತನಾಡುತ್ತಿದ್ದಾರೆ.

Bigg Boss Fame Deepika das Responds On Issues With rocking star Yash

ಹಾಸನದಲ್ಲಿ ಹುಟ್ಟಿ ಬೆಳೆದವರು ದೀಪಿಕಾ ದಾಸ್. ಆಕೆಯ ಒಬ್ಬ ಸಹೋದರ ಕೂಡ ಇದ್ದಾರೆ. ಹೈಸ್ಕೂಲ್ ವೇಳೆಗೆ ದೀಪಿಕಾ ಬೆಂಗಳೂರಿಗೆ ಬಂದರು. ಇಲ್ಲೇ ಕಾಲೇಜು ವಿದ್ಯಾಭ್ಯಾಸ ಮುಗಿಸಿದ್ದರು. ಕಾಲೇಜು ದಿನಗಳಲ್ಲೇ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದರು. ಹಾಗಾಗಿ ನಿಧಾನವಾಗಿ ಮಾಡೆಲಿಂಗ್ ಕಡೆ ಮುಖ ಮಾಡಿದ್ದರು. ಆದರೆ ಮೊದಲಿಗೆ ಧಾರವಾಹಿಗಳಲ್ಲಿ ನಟಿಸಿದರು. ನಟಿಯಾದ ಬಳಿಕವೇ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡರು.

'ಕೃಷ್ಣ ರುಕ್ಮಿಣಿ' ಧಾರಾವಾಹಿಯಲ್ಲಿ ಮೊದಲಿಗೆ ದೀಪಿಕಾ ದಾಸ್ ನಟಿಸಿದ್ದರು. ಆ ಧಾರಾವಾಹಿಯಲ್ಲಿ ತಂಗಿ ಪಾತ್ರದಲ್ಲಿ ಮಿಂಚಿದ್ದರು. 'ಬೆಂಗಳೂರು ಮೆಟ್ರೋ' ಎಂಬ ಚಿತ್ರದಲ್ಲಿ ಮೊದಲಿಗೆ ನಟಿಸಿದ್ದರು. ಆದರೆ ಅದು ಬಿಡುಗಡೆ ಆಗಲೇಯಿಲ್ಲ. ಆ ನಂತರ 'ನಾಗಿಣಿ' ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಮಿಂಚಿದರು. 5 ವರ್ಷಗಳ ಕಾಲ ಇದಕ್ಕಾಗಿ ಕೆಲಸ ಮಾಡಿದ್ದರು. ಈ ಧಾರಾವಾಹಿ ಒಳ್ಳೆ ಹೆಸರು ತಂದುಕೊಟ್ಟಿತ್ತು.

'ನಾಗಿಣಿ' ಧಾರಾವಾಹಿ ಬಳಿಕ ಬಿಗ್‌ಬಾಸ್ ಕನ್ನಡ 11 ಶೋಗೆ ಎಂಟ್ರಿ ಕೊಟ್ಟರು. ಇನ್ನು ನಟ ಯಶ್ ಹಾಗೂ ದೀಪಿಕಾ ದಾಸ್ ಅಣ್ಣ, ತಂಗಿ ಎಂದು ಬಹಳ ಜನರಿಗೆ ಗೊತ್ತಿಲ್ಲ. ಯಾಕೆ ಹೀಗೆ? ಯಾಕೆ ಈ ಬಗ್ಗೆ ಎಲ್ಲೂ ಮಾತನಾಡಲ್ಲ, ಏನಾದರೂ ಜಗಳ ಆಗಿದ್ಯಾ? ಎನ್ನುವ ಪ್ರಶ್ನೆಗೆ ರಾಜೇಶ್ ಗೌಡ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ದೀಪಿಕಾ ಪ್ರತಿಕ್ರಿಯಿಸಿದ್ದಾರೆ.

"ಯಾವುದೇ ಜಗಳ ನಮ್ಮ ನಡುವೆ ಇಲ್ಲ. ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ. ಪ್ರೋಫೆಷನ್ ಅಂದಾಗ ಪ್ರತ್ಯೇಕವಾಗಿ ಇರಲು ಪ್ರಯತ್ನಿಸುತ್ತೇವೆ. ಪರಸ್ಪರ ಗೌರವ ಇದೆ. ಎಲ್ಲೂ ತಂಗಿ ಅಂತೆ, ಅಣ್ಣ ಅಂತೆ, ಅಮ್ಮ, ದೊಡ್ಡಮ್ಮ ಎಂದು ಹೇಳಿಕೊಳ್ಳಲು ಇಷ್ಟ ಇರಲಿಲ್ಲ. ಅದನ್ನು ಪಾಲಿಸಿಕೊಂಡು ಬರುತ್ತಿದ್ದೀನಿ. ಈಗ ಕೂಡ ಮುಂದುವರೆಸುತ್ತೇವೆ ಅಷ್ಟೆ" ಎಂದು ದೀಪಿಕಾ ದಾಸ್ ಹೇಳಿದ್ದಾರೆ.

"ನಾನು ಏನಾದರೂ ಒಳ್ಳೆ ಕೆಲಸ ಮಾಡಿದಾಗ ಅವರು ಪ್ರಶಂಸಿಸುತ್ತಾರೆ. ಆದರೆ ಅದನ್ನು ಪಬ್ಲಿಕ್ ಮಾಡಿಕೊಳ್ಳಲು ನಮಗೆ ಇಷ್ಟವಿಲ್ಲ. ಅದು ಬಿಟ್ಟು ಬೇರೆ ಏನು ಇಲ್ಲ, ನಮ್ಮಿಂದ ಏನಾದರೂ ಒಳ್ಳೆಯದು ಆದರೆ ಜನ ಹೇಗೆ ಸ್ವೀಕರಿಸುತ್ತಾರೋ, ನೆಗೆಟಿವ್ ಆದರೂ ಅದೇ ರೀತಿ ಹಬ್ಬುತ್ತದೆ. ನಮ್ಮಿಂದ ಒಳ್ಳೆದು ಆಗದಿದ್ದರೂ ಕೆಟ್ಟದು ಆಗಬಾರದು. ನಮ್ಮ ಮನೆ, ಯಶ್ ಮನೆ ಬೇರೆ ಬೇರೆ ಕಡೆ ಇರ್ತಿದ್ವಿ. ಹಾಗಾಗಿ ಆಗೊಮ್ಮೆ ಈಗೊಮ್ಮೆ ಭೇಟಿ ಮಾಡುತ್ತಿದ್ದೆವು ಅಷ್ಟೇ" ಎಂದು ದೀಪಿಕಾ ವಿವರಿಸಿದ್ದಾರೆ.

ಮಾತು ಮುಂದುವರೆಸಿರುವ ದೀಪಿಕಾ "ಯಶ್ ಅವರು ಇರುವ ಇಂಡಸ್ಟ್ರಿಯಲ್ಲಿ ನಾನು ಇರೋದು ಸಂತೋಷ, ಇವತ್ತು ಕನ್ನಡ ಚಿತ್ರರಂಗವನ್ನು ಅವರು ಎಲ್ಲಿಗೋ ತಗೊಂಡು ಹೋಗಿದ್ದಾರೆ. ಅದು ನನಗೂ ಪ್ರೇರಣೆ. ಮುಂದೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸದ್ದು ಮಾಡಲಿ ಎಂದು ಶುಭ ಕೋರುತ್ತೇನೆ" ಎಂದಿದ್ದಾರೆ.

More from Filmibeat

English summary
Actor Yash is my brother, there in no any rift between us, says actress Deepika das;
Read more about: yash actress sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X