'ನಾಗಿಣಿ' ದೀಪಿಕಾ ದಾಸ್ ನ್ಯೂ ಲುಕ್‌ಗೆ ಅಭಿಮಾನಿಗಳು ಫಿದಾ
ನಾಗಿಣಿ ಧಾರಾವಾಹಿ ಖ್ಯಾತಿಯ ದೀಪಿಕಾ ದಾಸ್ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸದ್ದು ಮಾಡುತ್ತಲೇ ಇರುತ್ತಾರೆ. ದೀಪಿಕಾ ಇದೀಗ ಮತ್ತೊಮ್ಮೆ ಫೋಟೋಶೂಟ್ ಮಾಡಿಸಿ ಶೇರ್ ಮಾಡಿದ್ದಾರೆ. ಟ್ರೆಡಿಷನಲ್ ಲುಕ್‌ನಲ್ಲಿ ಮಿಂಚಿದ ಸುಂದರಿಯ ನೋಟಕ್ಕೆ ಅನೇಕರು ಫಿದಾ ಆಗಿದ್ದಾರೆ. ದೀಪಿಕಾ ದಾಸ್ ಆಗಾಗ ಟ್ರಕ್ಕಿಂಗ್ ಹಾಗೆಯೇ ವಿದೇಶ ಪ್ರಯಾಣದಲ್ಲಿ ಕಾಲ ಕಳೆಯುತ್ತಿದ್ದಾರೆ.
ಸಿನಿಮಾ ಹಾಗೂ ಧಾರಾವಾಹಿಗಳಿಂದ ಕೊಂಚ ದೂರ ಆಗಿರುವ ನಟಿ ದೀಪಿಕಾ ದಾಸ್ ಆಗಾಗ ಉತ್ತಮ ಜಾಗಗಳಿಗೆ ಟ್ರಿಪ್ ಹೋಗುತ್ತಾರೆ. ಆಕೆ ಬಿಗ್‌ಬಾಸ್ ಸ್ಪರ್ಧಿಯಾಗಿ ದೊಡ್ಮೆನೆಯಲ್ಲಿಯೂ ಮಿಂಚಿದ್ದರು. ಶೋನಲ್ಲಿ ಉತ್ತಮ ಪ್ರದರ್ಶನ ತೋರಿ ಮನರಂಜನೆ ನೀಡಿದ್ದರು ಎಂದರೆ ತಪ್ಪಾಗದು. ಇದೀಗ ದೀಪಿಕಾ ನೇರಳೆ ಬಣ್ಣದ ಲೆಹಂಗಾ ತೊಟ್ಟು ಮಿಂಚಿದ್ದಾರೆ.

ದೀಪಿಕಾ ದಾಸ್ ನೋಡಿದ ಅಭಿಮಾನಿಗಳು ಅಪ್ಸರೆ ಹಾಗೆ ಕಾಣಿಸುತ್ತಾ ಇದ್ದಿರಿ ಎಂದು ಕಾಮೆಂಟ್ ಮಾಡಿದ್ದಾರೆ. ಹೌದು ನೇರಳೆ ಬಣ್ಣದ ಡ್ರೆಸ್‌ನಲ್ಲಿ ಮಿರ ಮಿರ ಮಿಂಚುತ್ತಿರುವ ಚೆಲುವೆಯ ನಗುವಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ವಿವಿಧ ರೀತಿಯಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ ಈ ಮುದ್ದು ಮುಖದ ಚೆಲುವೆ.
ದೀಪಿಕಾ ಫೋಟೋ ನೋಡಿದ ಅಭಿಮಾನಿಗಳು ಫಿದಾ
ದೀಪಿಕಾ ದಾಸ್ ಹೊಸ ಫೋಟೋಗೆ ಸುಮಾರು 52 ಸಾವಿರ ಲೈಕ್ ಬಂದಿದೆ. ಇನ್ನು ಕೆಲವು ಅಭಿಮಾನಿಗಳು ಕಾಮೆಂಟ್ ಮಾಡುತ್ತಾರೆ. ಡಾನ್ಸಿಂಗ್ ಕ್ವೀನ್, ತುಂಬಾ ಸುಂದರವಾಗಿ ಕಾಣಿಸುತ್ತ ಇದ್ದೀರಿ ಎಂದು ಅಭಿಮಾನಿಗಳು ಬರೆದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ವೀಟ್ ಆಗಿರುವ ಚೆಲುವೆ ಆಗಾಗ ಫೋಟೋ ಶೂಟ್‌ಗಳನ್ನು ಮಾಡಿ ಅಭಿಮಾನಿಗಳ ಮನಗೆಲ್ಲುತ್ತಿದ್ದಾರೆ.

ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾದ ದೀಪಿಕಾ
ನಗು ಮೊಗದ ಚೆಲುವೆಯನ್ನು ಬಣ್ಣಿಸಲು ಸಾಧ್ಯ ಆಗುವುದು ಇಲ್ಲ. ಈ ಫೋಟೋ ಶೂಟ್ ವೇಳೆ ಮಾಡುವಾಗ ಸಿಂಪಲ್ ಮೇಕಪ್ ಮಾಡಿಕೊಂಡು ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ. ನೇರಳೆ ಬಣ್ಣದ ಡಿಸೈನರ್ ಲೆಹಂಗಾ ತೊಟ್ಟು, ಹಣೆಗೆ ಗಿಳಿ ಹಸಿರು ಬಣ್ಣದ ಬೊಟ್ಟು ಇಟ್ಟುಕೊಂಡಿದ್ದಾರೆ.
ಮುದ್ದಾಗಿ ಕಾಣಿಸುತ್ತಿರುವ ನಟಿ
ಈ ತಿಲಕ ಆಕೆಗೆ ಇನ್ನಷ್ಟು ಮೆರಗನ್ನು ತಂದುಕೊಟ್ಟಿದೆ. ಕೈಗೆ ಬಳೆಯನ್ನು ತೊಟ್ಟುಕೊಂಡು ಇದ್ದು ನಗುವನ್ನು ತಡೆದುಕೊಳ್ಳುವ ಪ್ರಯತ್ನಿಸುತ್ತಿರುವ ಫೋಟೋ ಮಾತ್ರ ಬಹಳ ಚೆನ್ನಾಗಿದೆ. ಹಾಗೆಯೇ ಕುತ್ತಿಗೆಗೆ ಹಾಕಿಕೊಂಡಿರುವ ನೆಕ್ಲೆಸ್ ನಾಗಿಣಿ ಚೆಲುವನ್ನು ಮತ್ತಷ್ಟು ಹೆಚ್ಚಿಸಿದೆ. ಓಪನ್ ಹೇರ್ ಬಿಟ್ಟು ಬಿಟ್ಟು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಇವರ ಅಂದವನ್ನು ಪದಗಳಲ್ಲಿ ವರ್ಣಿಸಲು ಆಗದು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.


Click it and Unblock the Notifications











