ತಂದೆಯಾದ ಸಂತಸದಲ್ಲಿ 'ಬಿಗ್ ಬಾಸ್' ಖ್ಯಾತಿಯ ನಟ ಧನರಾಜ್

ಬಿಗ್ ಬಾಸ್ ಕನ್ನಡ ಸೀಸನ್-6 ಸ್ಪರ್ಧಿ ಧನರಾಜ್ ಮನೆಯಲ್ಲಿ ಸಂತಸ, ಸಂಭ್ರಮ ಮನೆ ಮಾಡಿದೆ. ಹೌದು, ಧನರಾಜ್ ತಂದೆಯಾದ ಖುಷಿಯಲ್ಲಿದ್ದಾರೆ. ಇತ್ತೀಚಿಗಷ್ಟೆ ಧನರಾಜ್ ಮನೆಯಲ್ಲಿ ಪತ್ನಿ ಶಾಲಿನಿ ಅವರ ಸೀಮಂತ ಕಾರ್ಯ ಅದ್ದೂರಿಯಾಗಿ ನಡೆಸಿದ್ದರು. ಸೀಮಂತ ಫೋಟೋಗಳನ್ನು ಧನರಾಜ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Recommended Video

ಡಿಬಾಸ್ ದರ್ಶನ್ ಮುಂದಿನ ಸಿನಿಮಾದಲ್ಲಿ ಫಾರೆಸ್ಟ್ ಆಫೀಸರ್ | Filmibeat Kannada

ಇದೀಗ ಮನೆಗೆ ಹೊಸ ಅತಿಥಿ ಎಂಟ್ರಿ ಕೊಟ್ಟ ವಿಚಾರವನ್ನು ಹೇಳಿಕೊಂಡಿದ್ದಾರೆ. ಧನರಾಜ್ ಪತ್ನಿ ಶಾಲಿನಿ ಇಂದು (ಜುಲೈ 30) ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಶಾಲಿನಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿರುವುದಾಗಿ ಮಾಹಿತಿ ತಿಳಿದುಬಂದಿದೆ. ಮುಂದೆ ಓದಿ..

ಧನರಾಜ್-ಶಾಲಿನಿ ಅವರದ್ದು ಪ್ರೇಮ ವಿವಾಹ

ಧನರಾಜ್-ಶಾಲಿನಿ ಅವರದ್ದು ಪ್ರೇಮ ವಿವಾಹ

ಧನರಾಜ್ ಮತ್ತು ಶಾಲಿನಿ ಇಬ್ಬರು ಪರಸ್ಪರ ಪ್ರೀತಿ ಮದುವೆಯಾದವರು. ಬಿಗ್ ಬಾಸ್ ಎಂಟ್ರಿ ಕೊಡುವ ಮೊದಲು ಧನರಾಜ್ ಯಾರು ಎಂದು ಕನ್ನಡಿಗರಿಗೆ ಗೊತ್ತಿರಲಿಲ್ಲ. ಆದರೆ ಬಿಗ್ ಬಾಸ್ ಸೀಸನ್ 6ಗೆ ಎಂಟ್ರಿ ಕೊಟ್ಟ ನಂತರ ಧನರಾಜ್ ಖ್ಯಾತಿಗಳಿಸಿದ್ದಾರೆ. ಅಂದ್ಹಾಗೆ ಬಿಗ್ ಮನೆಗೆ ಧನರಾಜ್ ತನ್ನ ಪ್ರೀತಿಯ ವಿಚಾರವನ್ನು ಆಗಾಗ ಹೇಳಿಕೊಳ್ಳುತ್ತಿದ್ದರು. ಪತ್ನಿ ಶಾಲಿನಿ ಕೂಡ ಬಿಗ್ ಮನೆಯಲ್ಲಿ ಕಾಣಿಸಿಕೊಂಡಿದ್ದರು.

ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಮನೆಗೆ ಎಂಟ್ರಿ

ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಮನೆಗೆ ಎಂಟ್ರಿ

ಧನರಾಜ್ ಸಾಮಾನ್ಯ ವ್ಯಕ್ತಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಬಿಗ್ ಮನೆಯಲ್ಲಿ ಧನರಾಜ್ ಸಹ ಸ್ಪರ್ಧಿಗಳ ಮನಗೆದ್ದಿರುವುದಲ್ಲದೆ, ಪ್ರೇಕ್ಷಕರ ನೆಚ್ಚಿನ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು. ಕವಿತಾ ಗೌಡ, ಶಶಿ ಮತ್ತು ಧನರಾಜ್ ಮೂವರು ಉತ್ತಮ ಸ್ನೇಹಿತರಾಗಿದ್ದರು.

More from Filmibeat

English summary
Bigg Boss Kannada season 6 fame Dhanraj and his wife Shalini blessed with baby boy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X