ತಡರಾತ್ರಿ ರಸ್ತೆಯಲ್ಲಿ ಚಡ್ಡಿ ಹಿಡಿದು ಯುವಕನ ಕುಚೇಷ್ಟೆ; ಬಿಗ್‌ಬಾಸ್ ಖ್ಯಾತಿಯ ದಿವ್ಯಾ ಸುರೇಶ್‌ ಬೇಸರ

ಬಿಗ್‌ಬಾಸ್ ಖ್ಯಾತಿಯ ನಟಿ ದಿವ್ಯಾ ಸುರೇಶ್‌ಗೆ ಕಹಿ ಅನುಭವ ಎದುರಾಗಿದೆ. ತಡರಾತ್ರಿ ರಸ್ತೆಯಲ್ಲಿ ಆಕೆ ಹೋಗುವಾಗ ಯುವಕನೊಬ್ಬ ವಿಕೃತವಾಗಿ ವರ್ತಿಸಿದ್ದಾನೆ. ಅದನ್ನು ವೀಡಿಯೋ ಮಾಡಿ ಆಕೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮಹಿಳೆಯರಿಗೆ ಬೆಂಗಳೂರು ಎಷ್ಟು ಸುರಕ್ಷಿತ ಎಂದು ಪ್ರಶ್ನೆ ಎತ್ತಿದ್ದಾರೆ. ಬೆಂಗಳೂರು ಪೊಲೀಸರನ್ನು ಟ್ಯಾಗ್ ಮಾಡಿ ಇನ್‌ಸ್ಟಾಗ್ರಾಮ್‌ ಸ್ಟೋರಿ ಹಾಕಿದ್ದಾರೆ.

ನಿನ್ನೆ(ಭಾನುವಾರ) ತಡರಾತ್ರಿ ಕನಕಪುರ ರಸ್ತೆಯಲ್ಲಿ ಈ ಘಟನೆ ನಡೆದಿದೆ. ದಿವ್ಯಾ ಸುರೇಶ್ ತಮ್ಮ ಸಹೋದರಿ ಜೊತೆ ರಾತ್ರಿ 11.30ರ ಸುಮಾರಿಗೆ ತಮ್ಮ ಕಾರಿನ ಕಡೆ ಹೋಗುತ್ತಿದ್ದಾಗ ಯುವಕನೊಬ್ಬ ಅವರಿಬ್ಬರನ್ನು ಹಿಂಬಾಲಿಸಿದ್ದಾನೆ. ಒಂದು ಕೈಯಲ್ಲಿ ಮೊಬೈಲ್ ಹಿಡಿದು ಮತ್ತೊಂದು ಕೈಯಲ್ಲಿ ಪದೇ ಪದೆ ತನ್ನ ಚಡ್ಡಿ ಹಿಡಿದು ವಿಚಿತ್ರವಾಗಿ ವರ್ತಿಸಿದ್ದಾನೆ. ದಿವ್ಯಾ ಹಾಗೂ ಆಕೆಯ ಸಹೋದರಿ ಕಾರ್ ಏರಿ ಒಳಗೆ ಕುಳಿತರೂ ತನ್ನ ಹುಚ್ಚಾಟ ಆತ ಬಿಟ್ಟಿಲ್ಲ. ಇದನ್ನು ದಿವ್ಯಾ ವೀಡಿಯೋ ಮಾಡಿದ್ದಾರೆ. ಕೂಡಲೇ ಸಹಾಯಕ್ಕಾಗಿ ಕೂಗಿದ್ದಾರೆ. ಬಳಿಕ ಆತ ಅಲ್ಲಿಂದ ಓಡಿ ಹೋಗಿದ್ದಾನೆ.

Bigg Boss Fame Divya Suresh Alleges Harassment on Bengaluru Road Questions Women s Safety

ನಮ್ಮನ್ನು ಫಾಲೋ ಮಾಡ್ಕೊಂಡು ಬಂದ. ಅವನ ಕೈ ನೋಡಿ, ಕೈ ನೋಡಿ ಎಂದು ಅಲ್ಲಿದ್ದವರಿಗೆ ದಿವ್ಯಾ ಕೂಗಿ ಹೇಳಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ. ವೀಡಿಯೋ ಮಾಡುತ್ತಿದ್ದರೂ ಆ ಯುವಕ ಪದೇ ಪದೆ ಚಡ್ಡಿ ಹಿಡಿದು ಏನೇನೊ ಸನ್ನೆ ಮಾಡುವ ಪ್ರಯತ್ನ ಮಾಡಿದ್ದಾನೆ. ಕುಡಿದು ಈ ರೀತಿ ವರ್ತಿಸಿರುವಂತೆ ಕಾಣ್ತಿದೆ. ಇಬ್ಬರು ಹೆಣ್ಣಿಮಕ್ಕಳು ಇರುವುದನ್ನು ನೋಡಿ ಆತ ಹೀಗೆ ಹುಚ್ಚಾಟ ಮೆರೆದಿರುವುದು ಗೊತ್ತಾಗುತ್ತಿದೆ. ಯುವಕನ ಹುಚ್ಚಾಟ ಅತಿಯಾಗುತ್ತಿದ್ದಂತೆ ದಿವ್ಯಾ ಕೂಗು ಕೇಳಿ ಸಾರ್ವಜನಿಕರು ಜಮಾಯಿಸಿದ್ದು ಬಳಿಕ ಆತ ಓಡಿ ಹೋಗಿದ್ದಾನೆ.

ಯುವಕನ ಚೇಷ್ಟೆ ಬಗ್ಗೆ ನಟಿ ದಿವ್ಯಾ ಸುರೇಶ್ ಬೇಸರ ಹೊರ ಹಾಕಿದ್ದಾರೆ. "ಇಂದು ರಾತ್ರಿ, ನನ್ನ ಸೋದರಸಂಬಂಧಿ ಮತ್ತು ನಾನು ರಾತ್ರಿ 11:30ರ ಸುಮಾರಿಗೆ ನಮ್ಮ ಕಾರಿನ ಕಡೆಗೆ ನಡೆದುಕೊಂಡು ಹೋಗುತ್ತಿದ್ದಾಗ, ಒಬ್ಬ ವ್ಯಕ್ತಿ ನಮ್ಮನ್ನು ಹಿಂಬಾಲಿಸಲು ಪ್ರಾರಂಭಿಸಿದ. ಈ ವೇಳೆ ಬಹಿರಂಗವಾಗಿ ತನ್ನನ್ನು ಮುಟ್ಟಿಕೊಳ್ಳುತ್ತಿದ್ದ. ನಾವು ಅದನ್ನು ತಕ್ಷಣ ಗಮನಿಸಿ ಅವನಿಗೆ ಬೈದೆವು. ಆದ್ರು ಸುಮ್ಮನಾಗದೇ ಕುಚೇಷ್ಟೆ ಮುಂದುವರೆಸಿದ. ನಾವು ಕಾರನ್ನು ಹತ್ತುವವರೆಗೂ ಇದೇ ರೀತಿ ವರ್ತಿಸಿದ. ಮಹಿಳೆಯರಿಗೆ ಇಂತಹ ಘಟನೆಗಳು ಎದುರಾಗಬಾರದು. ಮಹಿಳೆಯರಿಗೆ ಸುರಕ್ಷತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಯಾಗಿ ದಿವ್ಯಾ ಗಮನ ಸೆಳೆದಿದ್ದರು. ಮಾಡೆಲ್ ಹಾಗೂ ನಟಿಯಾಗಿ ಆಕೆ ಗುರ್ತಿಸಿಕೊಂಡಿದ್ದಾರೆ. 'ತ್ರಿಪುರ ಸುಂದರಿ', 'ಶಾರದೆ' ಎಂಬ ಧಾರಾವಾಹಿಗಳಲ್ಲಿ ಆಕೆ ನಟಿಸಿದ್ದರು. ತೆಲುಗು ಧಾರಾವಾಹಿಗಳಲ್ಲಿ ಕೂಡ ಮಿಂಚಿದ್ದಾರೆ. 'ರೌಡಿ ಬೇಬಿ', 'ಹಿರಣ್ಯ', 'ಥರ್ಡ್ ಕ್ಲಾಸ್', '9 ಹಿಲ್ಟನ್ ಹೌಸ್' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಕೂಡ ದಿವ್ಯಾ ಬಣ್ಣ ಹಚ್ಚಿದ್ದರು. ತೆಲುಗಿನ 'ಡಿಗ್ರಿ ಕಾಲೇಜ್' ಎಂಬ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

Read more about: bigg boss kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X