ಡ್ರೋನ್ ಪ್ರತಾಪ್ ಕಾಲಿಟ್ಟಲೆಲ್ಲ ಜನ ; ಸೆಲ್ಫಿಗಾಗಿ ನೂಕು ನುಗ್ಗಲು
ಡ್ರೋನ್ ಪ್ರತಾಪ್ ಬದುಕು ಮೊದಲಿನಂತೆ ಇಲ್ಲ. ಬಿಗ್ ಬಾಸ್ ನಂತರ ಸಾಕಷ್ಟು ಬದಲಾಗಿದೆ. ವರ್ಚಸ್ಸು ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ. ಡ್ರೋನ್ ಪ್ರತಾಪ್ ಅವರ ಅಭಿಮಾನಿ ಬಳಗ ಕೂಡ ಹೆಚ್ಚಾಗ್ತಿದೆ. ಇದಕ್ಕೆ ಇನ್ನೊಂದು ಉದಾಹರಣೆ ಎಂಬಂತೆ ಡ್ರೋನ್ ಪ್ರತಾಪ್ ಜೊತೆ ಒಂದೇ ಒಂದು ಫೋಟೋ ಕ್ಲಿಕಿಸಿಕೊಳ್ಳಲು ಜನ ಮುಗಿ ಬಿದ್ದ ಘಟನೆ ನಡೆದಿದೆ.
ಹೌದು. ಕುಟುಂಬ ಹಾಗೂ ಊರು.. ಎರಡರಿಂದಲೂ ಅಂತರವನ್ನ ಕಾಪಾಡಿಕೊಂಡು, ಡ್ರೋನ್ ಗಾಗಿ ಹಗಲಿರುಳು ತಪಸ್ಸು ಮಾಡ್ತಿದ್ದ ಪ್ರತಾಪ್, ಇತ್ತೀಚೆಗೆ ಚಾಮರಾಜ ನಗರ ಜಿಲ್ಲೆಯಲ್ಲಿರುವ ಮಲೆ ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದರು. ವಿಶೇಷ ಅಂದರೆ ಇವರಿಗೆ ಇಲ್ಲಿ ಸೂಪರ್ ಸ್ಟಾರ್ ಗಳಿಗೆ ಸಿಗುವಂತಹ ಅದ್ಧೂರಿ ಸ್ವಾಗತ ಸಿಕ್ಕಿದೆ.

ಮಾದಪ್ಪನ ದರ್ಶನಕ್ಕೆ ಬಂದಿದ್ದ ಭಕ್ತರು, ಡ್ರೋನ್ ಪ್ರತಾಪ್ ಅವರನ್ನ ಕಣ್ತುಂಬಿಕೊಳ್ಳಲು ಮುಗಿ ಬಿದ್ದಿದ್ದರು. ಇನ್ನೂ.. ಚಿಕ್ಕವರು.. ದೊಡ್ಡವರು ಎಂಬ ಭೇದ ಭಾವ ಇಲ್ಲದೇ ಸೆಲ್ಫಿ ದಂಡು ಪ್ರತಾಪ್ ಜೊತೆ ಫೋಟೋಗಾಗಿ ಹಾತೊರೆಯುವ ದೃಶ್ಯ, ಪ್ರತಾಪ್ ಜನಪ್ರಿಯತೆಗೆ ಕೈಗನ್ನಡಿಯೆಂಬಂತೆ ಕಾಣಿಸಿದ್ದು ಸುಳ್ಳಲ್ಲ.
ಮಾದೇಶ್ವರನ ಬೆಟ್ಟದಲ್ಲಿ ಹರಿದು ಬಂದ ಈ ಅಭಿಮಾನದ ಸಾಗರ ಕಂಡು, ಖುದ್ದು ಡ್ರೋನ್ ಪ್ರತಾಪ್ ಕೂಡ ಅರೆಕ್ಷಣ ವಿಚಲಿತರಾದಂತೆ ಕಂಡು ಬಂದರು. ಆದರೂ ಕೋಪ-ತಾಪವನ್ನ ಮಾಡಿಕೊಳ್ಳದ ಪ್ರತಾಪ್, ಸಮಾಧಾನದಿಂದ ಎಲ್ಲರ ಜೊತೆ ಫೋಟೋಗೆ ಫೋಸ್ ಕೊಟ್ಟರು. ಅಭಿಮಾನಿಗಳ ಅಭಿಮಾನ ಕಂಡು ಕೈ ಮುಗಿದರು.
ಬಿಗ್ ಬಾಸ್ ನಿಂದ ಬದಲಾದ ಬದುಕು
ಬಿಗ್ ಬಾಸ್ ಮನೆಗೆ ತೆರಳುವ ಮುನ್ನ ಡ್ರೋನ್ ಪ್ರತಾಪ್, ಅನೇಕರ ಕಣ್ಣಿಗೆ ಖಳನಾಯಕನಂತೆ ಕಂಡಿದ್ದರು. ಡ್ರೋನ್ ಹೆಸರಿನಲ್ಲಿ ಪ್ರತಾಪ್ ಹೇಳಿದ್ದ ಸುಳ್ಳು ಅನೇಕ ಜನರನ್ನ ಕೆರಳಿಸಿತ್ತು. ಆದರೆ, ಬಿಗ್ ಬಾಸ್ ಭೂತಕಾಲದ ತಪ್ಪುಗಳನ್ನೆಲ್ಲ ತೊಳೆದು ಹಾಕಿತು. ಒಡೆದು ಹೋಗಿದ್ದ ಮನಗಳನ್ನ ಒಗ್ಗೂಡಿಸಿತು. ಮರಳಿ ಮನೆಗೆ ಸೇರಿಸಿತು. ಅಷ್ಟೇ ಅಲ್ಲ ಪ್ರತಾಪ್ ಅವರಿಗೆ ಹೀರೋ ಪಟ್ಟವನ್ನೂ ತಂದು ಕೊಟ್ಟಿತು.

ಸದ್ಯಕ್ಕೆ ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಬಿಗ್ ಬಾಸ್ ನಿಂದ ಸಿಕ್ಕ ಜನಪ್ರಿಯತೆಯನ್ನ ಹಾಗೇ ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಪ್ರಯತ್ನವನ್ನೂ ಮಾಡ್ತಿದ್ದಾರೆ. ಗಿಚ್ಚಿ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಪ್ರತಾಪ್ ಸಂಪಾದಿಸಲಿರುವ ಜನರ ಪ್ರೀತಿ, ಪ್ರತಾಪ್ ಅವರ ಮುಂದಿನ ಭವಿಷ್ಯ ನಿಂತಿರೋದು ಸುಳ್ಳಲ್ಲ


Click it and Unblock the Notifications











