ಬಿಗ್‌ಬಾಸ್ ವಿನ್ನರ್ ಗಿಲ್ಲಿ ಕೊರಳಿಗೆ ಲಕ್ಷ ಲಕ್ಷ ಬೆಲೆಬಾಳುವ ಚಿನ್ನದ ಸರಗಳನ್ನು ಹಾಕಿದ ಸರವಣ!

ಎಲ್ಲೆಲ್ಲೂ ಗಿಲ್ಲಿ ದರ್ಬಾರ್ ಜೋರಾಗಿದೆ. ಬಿಗ್‌ಬಾಸ್ ಟ್ರೋಫಿ ಗೆದ್ದು ಬಂದ ಗಿಲ್ಲಿ ಕ್ರೇಜ್ ಬಗ್ಗೆ ಬಿಡಿಸಿ ಹೇಳುವುದು ಬೇಕಿಲ್ಲ. ಇದೇ ಜನಪ್ರಿಯತೆಯನ್ನು ಎನ್‌ಕ್ಯಾಶ್ ಮಾಡಿಕೊಳ್ಳುವ ಪ್ರಯತ್ನ ನಡೀತಿದೆ. ಕನಕಪುರ ರಸ್ತೆಯಲ್ಲಿ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹೊಸ ಮಳಿಗೆ ಉದ್ಘಾಟನೆಯಾಗಿದೆ. ಕಾರ್ಯಕ್ರಮಕ್ಕೆ ಗಿಲ್ಲಿ ಹಾಗೂ ರಕ್ಷಿತಾ ಅತಿಥಿಗಳಾಗಿ ಹೋಗಿದ್ದರು.

ಬಿಗ್‌ಬಾಸ್ ರನ್ನರ್ ಅಪ್ ರಕ್ಷಿತಾಗೆ ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮುಖ್ಯಸ್ಥ ಸರವಣ 20 ಲಕ್ಷ ರೂ. ಬಹುಮಾನದ ಹಣ ಕೊಟ್ಟಿದ್ದಾರೆ. ಆದರೆ ಗಿಲ್ಲಿಗೆ ಬಹುಮಾನ ಕೊಟ್ಟ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಹೊಸ ಮಳಿಗೆ ಉದ್ಘಾಟನೆಗೆ ಬಂದ ಗಿಲ್ಲಿ ನಟನ್ನು ನೋಡಲು ಅಭಿಮಾನಿಗಳು ಮುಗಿಬಿದ್ದರು.

Bigg boss Fame Gilli Steals the Spotlight with Dazzling Gold Chains at Sri Sai Gold Palace Opening

ಇನ್ನು ಉದ್ಘಾಟನೆ ಸಮಯದಲ್ಲಿ ಗಿಲ್ಲಿ ಕೊರಳಿಗೆ ಬೆಲೆಬಾಳುವ ಚಿನ್ನದ ಸರಗಳನ್ನು ಸರವಣ ಹಾಕಿದ್ದಾರೆ. ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗ್ತಿದೆ. ದಪ್ಪ ದಪ್ಪ ಚಿನ್ನದ ಸರಗಳನ್ನು ನೋಡುತ್ತಿದ್ದರೆ 50 ಲಕ್ಷಕ್ಕೂ ಹೆಚ್ಚು ಬೆಲೆ ಇರಬಹುದು ಎನಿಸುತ್ತಿದೆ. ಇತ್ತೀಚೆಗೆ ಚಿನ್ನದ ಬೆಲೆ ಗಗನಕ್ಕೆ ಏರುತ್ತಿದೆ. ಇಂತಹ ಸಮಯದಲ್ಲಿ ಗಿಲ್ಲಿ ಕೊರಳಿಗೆ ಸರವಣ ಹೀಗೆ ಚಿನ್ನದ ಸರಗಳನ್ನು ಹಾಕಿರುವುದು ಅಭಿಮಾನಿಗಳ ಹುಬ್ಬೇರಿಸಿದೆ.

ಗಿಲ್ಲಿಗೆ ದುಬಾರಿ ಬೆಲೆಯ ಚಿನ್ನದ ಸರಗಳನ್ನು ಸರವಣ ಉಡುಗೊರೆಯಾಗಿ ಕೊಟ್ರಾ? ಎನ್ನುವ ಅನುಮಾನ ಕೆಲವರನ್ನು ಕಾಡುತ್ತಿದೆ. ಆದರೆ ಸುಮ್ಮನೆ ಹೀಗೆ ಸರವಣ ಚಿನ್ನದ ಸರಗಳನ್ನು ಗಿಲ್ಲಿ ಕೊರಳಿಗೆ ಹಾಕಿರುವುದು ಸ್ಪಷ್ಟವಾಗುತ್ತಿದೆ. ಇಂದು ಕ್ಷಣ ಗಿಲ್ಲಿಗೂ ಇದು ಅಚ್ಚರಿ ತಂದಿತ್ತು. ಸರವಣ ಸರ ಹಾಕಿದ್ದಾಗ "ಇದು ನಂಗೇನಾ?" ಎಂದು ಗಿಲ್ಲಿ ಕೇಳಿರುವುದು ವೈರಲ್ ಆಗ್ತಿದೆ. "ಗಿಲ್ಲಿನೇ ಚಿನ್ನ, ಆತನಿಗೆ ಚಿನ್ನ ಯಾಕೆ ಎಂದು ಸರವಣ" ಎಂದಿದ್ದಾರೆ.

ಮಾಜಿ ಸಚಿವೆ ಶೋಭಾ ಕರಂದ್ಲಾಜೆ, ವಿನಯ್ ಗುರೂಜಿ, ನಟಿ ರುಕ್ಮಿಣಿ ವಸಂತ್ ಕೂಡ ಕಾರ್ಯಕ್ರಮದಲ್ಲಿ ಹಾಜರಿದ್ದರು. ಎಷ್ಟು ಗ್ರಾಂ ಚಿನ್ನ ತಗೋತ್ತೀರಾ ಇವತ್ತು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ "ಈಗಾಗಲೇ ನನ್ನ ಕೊರಳಿಗೆ ಹಾಕಿದ್ದಾರಲ್ಲ" ಎಂದು ಗಿಲ್ಲಿ ತಮಾಷೆ ಮಾಡಿದ್ದಾರೆ. "ಗಿಲ್ಲಿನೇ ಬಂಗಾರ ಅವರಿಗೆ ಯಾವ ಬಂಗಾರ, ಅವ್ರು ಏನಂದ್ರು ಓಕೆ" ಎಂದು ಸರವಣ ನಕ್ಕಿದ್ದಾರೆ. ನನಗೆ ಚಿನ್ನ ಅಲ್ಲ ಜನರು ಅಂದ್ರೆ ಇಷ್ಟ ಎಂದು ಗಿಲ್ಲಿ ಹೇಳಿದ್ದಾರೆ.

ಕಾರ್ಯಕ್ರಮ ಮುಗಿದ ಬಳಿಕ ನ್ಯೂಸ್ 18 ಕನ್ನಡ ವಾಹಿನಿ ಸಂದರ್ಶನದಲ್ಲಿ ಗಿಲ್ಲಿ ನಟ ಭಾಗಿ ಆಗಿದ್ದರು. ಈ ವೇಳೆ ಚಿನ್ನದ ಸರಗಳ ಬಗ್ಗೆ ಪ್ರಶ್ನೆ ಎದುರಾಗಿತ್ತು. "ಚಿನ್ನದ ಅಂಗಡಿ ಉದ್ಘಾಟನೆ ಎನ್ನುವ ಕಾರಣಕ್ಕೆ ಫೋಟೊಗಾಗಿ ಚಿನ್ನದ ಸರ, ಉಂಗುರ ಹಾಕಿದ್ದರು. ನನಗೆ ಆಶ್ಚರ್ಯ ಆಗಿತ್ತು. ಏನು ಇಷ್ಟೆಲ್ಲಾ ಹಾಕ್ತಿದ್ದಾರೆ ಅಂತ. ನನ್ನ ಜೀವನದಲ್ಲೇ ಮೊದಲ ಬಾರಿ ಹಾಕಿದ್ದು ಅಷ್ಟು ಚಿನ್ನ. ಒಂದು ಉಂಗುರ ಬಿಟ್ಟು ಬೇರೆ ಹಾಕುತ್ತಿರಲಿಲ್ಲ. ವಾಪಸ್ ಕೇಳ್ತಿಲ್ಲ ಅಲ್ವಾ? ಮೋಸ್ಟ್ಲಿ ನನಗೆ ಇರಬಹುದು ಅಂದುಕೊಂಡೆ. ಬಳಿಕ ಬರುವಾಗ ವಾಪಸ್ ಕೊಟ್ಟು ಬಂದೆ" ಎಂದು ಗಿಲ್ಲಿ ನಕ್ಕಿದ್ದಾರೆ.

ಬಿಗ್‌ಬಾಸ್ ಶೋ ಗೆದ್ದ ಗಿಲ್ಲಿಗೆ 50 ಲಕ್ಷ ರೂ. ನಗದು ಹಾಗೂ ಒಂದು ಕಾರು ಬಹುಮಾನವಾಗಿ ಸಿಕ್ಕಿದೆ. ನಟ ಕಿಚ್ಚ ಸುದೀಪ್ ಕೂಡ ವೈಯಕ್ತಿಕವಾಗಿ 10 ಲಕ್ಷ ರೂ. ಹಣ ಕೊಟ್ಟಿದ್ದಾರೆ. ಆ ಮೂಲಕ ಭಾರೀ ಮೊತ್ತದ ಹಣ ಗಿಲ್ಲಿಗೆ ಸಿಕ್ಕಂತೆ ಆಗಿದೆ. ಶೇಕಡಾ 30 ಟ್ಯಾಕ್ಸ್ ಕಟ್ ಆಗಿ ಉಳಿದ ಹಣ ಆತನಿಗೆ ಸಿಗಲಿದೆ. ಇನ್ನು ಟ್ಯಾಕ್ಸ್ ಕಟ್ಟಿ ಗಿಲ್ಲಿ ಕಾರ್ ಅನ್ನು ತೆಗೆದುಕೊಳ್ಳಬೇಕಿದೆ.

More from Filmibeat

Read more about: bigg boss 12 gilli bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X