ಏನ್ ಗುರೂ ಇದು ಕ್ರೇಜ್; ಬಿಗ್‌ಬಾಸ್ ವಿನ್ನರ್ ಗಿಲ್ಲಿ ಈಗ ಮಿಲಿಯನ್ ಲೈಕ್ಸ್ ಸ್ಟಾರ್

ಎಲ್ಲೆಲ್ಲೂ ಗಿಲ್ಲಿ ಜಪ ನಡೀತಿದೆ. ಸೋಶಿಯಲ್ ಮೀಡಿಯಾದಲ್ಲೂ ಬಿಗ್‌ಬಾಸ್ ವಿನ್ನರ್ ಗಿಲ್ಲಿ ಹಾವಳಿ ಜೋರಾಗಿದೆ. 3 ತಿಂಗಳಲ್ಲಿ ಮಂಡ್ಯದ ಹೈದ ಜಾದೂ ಮಾಡಿಬಿಟ್ಟಿದ್ದಾನೆ. ಹೋದಲ್ಲಿ ಬಂದಲ್ಲಿ ಅಭಿಮಾನಿಗಳು ಮುತ್ತಿಕೊಳ್ಳುತ್ತಿದ್ದಾರೆ. ಗಿಲ್ಲಿ ಫೋಟೊ, ವಿಡಿಯೋ ಫೇಸ್‌ಬುಕ್, ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗ್ತಿದೆ.

ಬಿಗ್‌ಬಾಸ್ ಮನೆ ಒಳಗೆ ಹೋಗುವ ಮುನ್ನ ಒಂದೆರಡು ಲಕ್ಷಗಳಲ್ಲಿ ಇದ್ದ ಗಿಲ್ಲಿ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆ ಈಗ 20 ಲಕ್ಷ ದಾಟಿದೆ. ಅದರೂ ಕೂಡ ಕೇವಲ 3 ತಿಂಗಳಲ್ಲಿ ಅನ್ನುವುದು ವಿಶೇಷ. ಬರೀ ತಮ್ಮ ಮಾತುಗಾರಿಕೆಯಿಂದ ಗಿಲ್ಲಿ ಅಷ್ಟರಮಟ್ಟಿಗೆ ಗಮನ ಸೆಳೆಯುತ್ತಿರುವುದು ವಿಶೇಷ. ಸ್ಟಾರ್ ನಟರಿಗೂ 20 ಲಕ್ಷ ಇನ್‌ಸ್ಟಾ ಫಾಲೋವರ್ಸ್ ಗಳಿಸಲು ವರ್ಷಗಳೇ ಬೇಕಾಯಿತು. ಇನ್ನು 20 ಲಕ್ಷ ಫಾಲೋವರ್ಸ್ ಇಲ್ಲದ ಸೆಲೆಬ್ರೆಟಿಗಳು ಇದ್ದಾರೆ.

Bigg Boss fame Gilli Turns Million-Like Star Every Post Crossing 1 Million Likes on Social Media

ಇದೆಲ್ಲ ಅತಿಯಾಯಿತು ಎಂದು ಕೆಲವೊಮ್ಮೆ ಅನ್ನಿಸಬಹುದು. ಆದರೂ ಗಿಲ್ಲಿ ಕ್ರೇಜ್ ಜೋರಾಗಿರುವುದು ಜಗಜ್ಜಾಹೀರಾಗಿದೆ. ಗಿಲ್ಲಿಗೆ ಬಿಗ್‌ಬಾಸ್ ಶೋನಲ್ಲಿ ಸಿಕ್ಕ ವೋಟ್‌ಗಳಿಂದ ಆತನ ಜನಪ್ರಿಯತೆ ಜೋರಾಗಿದೆ ಎಂದು ಸ್ವತಃ ಸಿಎಂ ಸಿದ್ದರಾಮಯ್ಯ ಇತ್ತೀಚೆಗೆ ಹೇಳಿದ್ದರು. ಇನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಗಿಲ್ಲಿ ಆಗೊಮ್ಮೆ ಈಗೊಮ್ಮೆ ಪೋಸ್ಟ್ ಮಾಡುತ್ತಿದ್ದಾರೆ.

ಗಿಲ್ಲಿ ಮಾಡುತ್ತಿರುವ ಪೋಸ್ಟ್‌ಗಳೆಲ್ಲಾ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಕೆಲ ಪೋಸ್ಟ್‌ಗಳಿಗೆ 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಸಿಗುತ್ತಿರುವುದು ವಿಶೇಷ. ಸ್ಟಾರ್ ನಟರ ಪೋಸ್ಟ್‌ಗಳಿಗೆ ಮಾತ್ರ ಈ ಪಾಟಿ ಕ್ರೇಜ್ ಇರುತ್ತದೆ. ಆದರೆ ಇದೀಗ ಅದೇ ರೀತಿ ಗಿಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಹುಟ್ಟಾಕ್ಕಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಇದ್ದಾಗ ಗಿಲ್ಲಿ ಕಾಣಿಸಿಕೊಂಡಿದ್ದ 3 ಪ್ರೋಮೊಗಳು 1 ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಗಿಟ್ಟಿಸಿತ್ತು. ಆ ಮೂಲಕ ಹ್ಯಾಟ್ರಿಕ್ ಬಾರಿಸಿದ್ದರು ಗಿಲ್ಲಿ.

ಕಲರ್ಸ್ ಕನ್ನಡ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಆಗುವ ಪ್ರೊಮೊಗಳು ವೈರಲ್ ಆಗುತ್ತವೆ. ಆದರೆ ಗಿಲ್ಲಿ ಪ್ರೋಮೊಗಳುಗೆ ಅದ್ಧುತ ರೆಸ್ಪಾನ್ಸ್ ಸಿಕ್ತಿತ್ತು. ಗಿಲ್ಲಿ ತಂದೆ ತಾಯಿ ಮನೆ ಒಳಗೆ ಹೋಗಿದ್ದ ಪ್ರೋಮೊ, ಗಿಲ್ಲಿ ಅಂತಿಮವಾಗಿ ಅಭಿಮಾನಿಗಳ ಎದುರು ಬಂದು ವೋಟ್ ಕೇಳಿದ್ದ ಪ್ರೋಮೊ, ಇನ್ನು ವೀಕೆಂಡ್ ಪಂಚಾಯ್ತಿ ವೇಳೆ ಸುದೀಪ್ ಅವರನ್ನು ಗಿಲ್ಲಿ ಅನುಕರಣೆ ಮಾಡಿದ್ದರು. ಆ ಪ್ರೊಮೊಗೂ 1 ಮಿಲಿಯನ್ ಲೈಕ್ಸ್ ಸಿಕ್ಕಿತ್ತು.

ಬಿಗ್‌ಬಾಸ್ ಮನೆಯಿಂದ ಹೊರಬಂದ ಬಳಿಕ ಶಿವಣ್ಣ, ಸಿಎಂ ಸಿದ್ದರಾಮಯ್ಯ ಸೇರಿ ಹಲವು ಗಣ್ಯರನ್ನು ಗಿಲ್ಲಿ ಭೇಟಿ ಮಾಡಿ ಬಂದಿದ್ದಾರೆ. ಕಂಠೀರವ ಸ್ಟುಡಿಯೋದಲ್ಲಿರುವ ಪುನೀತ್ ರಾಜ್‌ಕುಮಾರ್ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಪುನೀತ್ ಸಮಾಧಿ ಮುಂದೆ ಬಿಗ್‌ಬಾಸ್ ಟ್ರೋಫಿ ಹಿಡಿದು ಗಿಲ್ಲಿ ಫೋಟೊ ಕ್ಲಿಕ್ಕಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ಎನರ್ಜಿಗೆ ಪವರ್ ಹೌಸ್ ಆಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಪುಣ್ಯಭೂಮಿ ಭೇಟಿ ನೀಡಿ ಆಶೀರ್ವಾದ ಪಡೆದ ನಮ್ಮ ಹಾಸ್ಯಾಧಿಪತಿ ಗಿಲ್ಲಿ" ಎಂದು ಕ್ಯಾಪ್ಷನ್ ಕೊಟ್ಟಿದ್ದಾರೆ. ಆ ಪೋಸ್ಟ್ ಒಂದೇ ದಿನದಲ್ಲಿ ಬರೋಬ್ಬರಿ 1 ಮಿಲಿಯನ್ ಲೈಕ್ಸ್ ಗಿಟ್ಟಿಸಿದೆ.

ಇನ್ನು ಗಿಲ್ಲಿ ಬಿಗ್‌ಬಾಸ್ ಮನೆಯಿಂದ ಹೊರ ಬಂದ ಬಳಿಕ ಧನ್ಯವಾದ ತಿಳಿಸಿ ಒಂದು ವೀಡಿಯೋ ಮಾಡಿದ್ದರು. ಅದು ಕೂಡ ಒಂದು ಮಿಲಿಯನ್ ಲೈಕ್ಸ್ ಗಿಟ್ಟಿಸಿದೆ. ಗಿಲ್ಲಿಗೆ ಟ್ಯಾಗ್ ಮಾಡಿ ಬಿಗ್‌ಬಾಸ್ ಸ್ಪರ್ಧಿ ಸೂರಜ್ ಮಾಡಿದ್ದ ಪೋಸ್ಟ್‌ಗೂ 1 ಮಿಲಿಯನ್ ಲೈಕ್ಸ್ ಪಡೆದುಕೊಂಡಿದೆ. ಗಿಲ್ಲಿ ಫಿನಾಲೆಯಲ್ಲಿ ಗೆದ್ದ ವೀಡಿಯೋ ಕೂಡ ಮಿಲಿಯನ್‌ಗೂ ಹೆಚ್ಚು ಲೈಕ್ಸ್ ಪಡೆದಿರುವುದು ವಿಶೇಷ.

ಹೀಗೆ ಗಿಲ್ಲಿ ಪೋಸ್ಟ್‌ಗಳೆಲ್ಲಾ ಮಿಲಿಯರ್‌ಗಟ್ಟಲೆ ಲೈಕ್ಸ್ ಸಾಧಿಸುತ್ತಿರುವುದು ಆತನ ಕ್ರೇಜ್ ಹೇಗಿದೆ ಎನ್ನುವುದನ್ನು ಸಾರಿ ಹೇಳ್ತಿದೆ. ಬಿಗ್‌ಬಾಸ್ ಶೋ ಗೆದ್ದು ಲಕ್ಷ ಲಕ್ಷ ಬಹುಮಾನ ಪಡೆದ ಗಿಲ್ಲಿ ಈಗ ಮುಟ್ಟಿದ್ದೆಲ್ಲಾ ಮಿಲಿಯನ್ ಆಗ್ತಿದೆ. ಪುನೀತ್ ರಾಜ್‌ಕುಮಾರ್ ಬಗ್ಗೆ ಮಾಡಿರುವ ಪೋಸ್ಟ್ ಶೀಘ್ರದಲ್ಲೇ 20 ಲಕ್ಷ ಅಂದರೆ 2 ಮಿಲಿಯನ್ ಲೈಕ್ಸ್ ಗಿಟ್ಟಿಸುವ ಸಾಧ್ಯತೆಯಿದೆ. ಒಟ್ಟಾರೆ ಸೋಶಿಯಲ್ ಮೀಡಿಯಾದಲ್ಲೀಗ ಮಿಲಿಯನ್ ಸ್ಟಾರ್ ಆಗಿಬಿಟ್ಟಿದ್ದಾರೆ ಗಿಲ್ಲಿ ನಟ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X