Gilli Nata: "ಒಂದು ವಿಶೇಷ ಘೋಷಣೆ" ಎಂದ ಗಿಲ್ಲಿ; ಯಾಕೋ ಹವಾ ಕಮ್ಮಿ ಆಯ್ತು ಎಂದು ಚರ್ಚೆ
ಬಿಗ್‌ಬಾಸ್ ಕನ್ನಡ ಸೀಸನ್ 13 ಶೀಘ್ರದಲ್ಲೇ ಶುರುವಾಗಲಿದೆ. ಈಗಾಗಲೇ ಈ ಬಗ್ಗೆ ಅಧಿಕೃತ ಘೋಷಣೆ ಬಂದಿದೆ. ಮೊನ್ನೆ ಮೊನ್ನೆ ಸೀಸನ್ 12 ಮುಗೀತು ಅಷ್ಟು ಬೇಗ ಮತ್ತೊಂದು ಸೀಸನ್ ಶುರುನಾ? ಎನ್ನುವವರು ಇದ್ದಾರೆ. ಗಿಲ್ಲಿ ನಟ ಕಾರಣಕ್ಕೆ ಕಳೆದ ಸೀಸನ್ ವೀಕ್ಷಕರ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ದಾಖಲೆ ಪ್ರಮಾಣದಲ್ಲಿ ಗಿಲ್ಲಿ ಮತಗಳನ್ನು ಪಡೆದು ಗೆದ್ದು ಟ್ರೋಫಿ ಎತ್ತಿ ಹಿಡಿದಿದ್ದು ಗೊತ್ತೇಯಿದೆ.
ಬಿಗ್‌ಬಾಸ್ ಟ್ರೋಫಿ ಗೆಲ್ಲುತ್ತಿದ್ದಂತೆ ಗಿಲ್ಲಿ ಎಲ್ಲಿಗೋ ಹೋಗಿಬಿಡ್ತಾರೆ, ಹೀರೊ ಆಗಿ ಸಿನಿಮಾ ಮಾಡ್ತಾರೆ, ಕೊನೆಪಕ್ಷ ಸಿಕ್ಕ ಕ್ರೇಜ್ ಅನ್ನು ಬಳಸಿಕೊಂಡು ಮತ್ತಷ್ಟು ಶೋಗಳಲ್ಲಿ ಕಾಣಿಸಿಕೊಂಡು ರಂಜಿಸ್ತಾರೆ ಎಂದು ಕೆಲವರು ಭಾವಿಸಿದ್ದರು. ಆದರೆ ಅದು ಸುಳ್ಳಾಯಿತು. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಮೇಲೆ ಒಂದಷ್ಟು ವೇದಿಕೆ ಕಾರ್ಯಕ್ರಮಗಳಲ್ಲಿ ಮಾತ್ರ ಗಿಲ್ಲಿ ಮಿಂಚಿದರು. ಹೋದಲ್ಲಿ ಬಂದಲ್ಲಿ ಜನ ಜೈಕಾರ ಹಾಕಿದ್ದರು. ಸ್ವತಃ ಗಿಲ್ಲಿ ಹೇಳಿಕೊಂಡಂತೆ ಜನರ ಆ ಪ್ರೀತಿ ಕಂಡು ಅವಕ್ಕಾಗಿದ್ದರು. ಅನಿರೀಕ್ಷಿತ ಕ್ರೇಜ್ ನೋಡಿ ಮುಂದೇನು ಎನ್ನುವ ಬಗ್ಗೆ ಕ್ಲಾರಿಟಿ ಇಲ್ಲದಂತಾಗಿತ್ತು. ರಾತ್ರೋರಾತ್ರಿ ಯಾವುದೇ ಸಿನಿಮಾ ಘೋಷಣೆ ಮಾಡಲಿಲ್ಲ. ಮತ್ಯಾವುದೇ ರಿಯಾಲಿಟಿ ಶೋಗು ಹೋಗಲಿಲ್ಲ.

ಇದೀಗ ದಿಢೀರನೆ ಗಿಲ್ಲಿ ನಟ ಒಂದು ಘೋಷಣೆ ಮಾಡಿದ್ದಾರೆ. ಅದು ಏನು ಎನ್ನುವ ಬಗ್ಗೆ ಕುತೂಹಲ ಹುಟ್ಟು ಹಾಕಿದ್ದಾರೆ. "ಒಂದು ವಿಶೇಷ ಘೋಷಣೆ, 16 ಜೂನ್ 2026, ಸಂಜೆ 6.15ಕ್ಕೆ.. ಇಂತಿ ನಿಮ್ಮ ಪ್ರೀತಿಯ ಗಿಲ್ಲಿ" ಎಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಏನಪ್ಪಾ ಇದು "ವಿಶೇಷ ಘೋಷಣೆ" ಎಂದು ಅಭಿಮಾನಿಗಳು ಕಾಯುವಂತಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಗಿಲ್ಲಿ ಅಷ್ಟೇನು ಆಕ್ಟೀವ್ ಆಗಿ ಇರಲಿಲ್ಲ. ಇದ್ದಕ್ಕಿಂತೆ ಪೋಸ್ಟ್ ಮಾಡಿದ್ದು ಬಹುತೇಕರಿಗೆ ಗೊತ್ತಾಗಲಿಲ್ಲ. ಹಾಗಾಗಿ ಪೋಸ್ಟ್ ಅಂತಹ ಜಾದೂ ಮಾಡಲಿಲ್ಲ.
ಬಿಗ್‌ಬಾಸ್ ಮನೆ ಒಳಗೆ ಇದ್ದಾಗ ಗಿಲ್ಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ಬರುತ್ತಿದ್ದ ಪೋಸ್ಟ್‌ಗಳು ಸೂಪರ್ ಹಿಟ್ ಆಗ್ತಿತ್ತು. ಗಿಲ್ಲಿ ದೊಡ್ಮನೆಯಿಂದ ಹೊರ ಬಂದಮೇಲೆ ಕೂಡ ಮಾಡಿದ್ದು ನಾಲ್ಲೈದು ಪೋಸ್ಟ್ ಮಾತ್ರ. ಎಲ್ಲದ್ದಕ್ಕೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಒಂದೆರಡು ಪೋಸ್ಟ್ ಅಂತೂ ಮಿಲಿಯನ್‌ಗಟ್ಟಲೆ ಲೈಕ್ಸ್ ಗಿಟ್ಟಿಸಿತ್ತು. ಗಿಲ್ಲಿ ಕುರಿತಾದ ಬಿಗ್‌ಬಾಸ್ ಪ್ರೋಮೊಗಳು ಕೂಡ ಭಾರೀ ರೆಸ್ಪಾನ್ಸ್ ಪಡೆದುಕೊಳ್ಳುತ್ತಿತ್ತು. ಕಲರ್ಸ್ ಕನ್ನಡ ವಾಹಿನಿ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದ 3 ಪ್ರೋಮೊ ತಲಾ 1 ಮಿಲಿಯನ್ ವೀವ್ಸ್ ಗಿಟ್ಟಿಸಿತ್ತು. ಆದರೆ "ವಿಶೇಷ ಘೋಷಣೆ" ಎಂದು ಗಿಲ್ಲಿ ಹಾಕಿರುವ ಪೋಸ್ಟ್‌ಗೆ ಅಷ್ಟಾಗಿ ರೀಚ್ ಸಿಕ್ಕಿಲ್ಲ. ಹಾಗಾಗಿ ಗಿಲ್ಲಿ ಹವಾ ಮುಗೀತಾ? ಎನ್ನುವ ಚರ್ಚೆ ಕೂಡ ಶುರುವಾಗಿದೆ.
ಗಿಲ್ಲಿ ಯಾವ ಮಾಹಿತಿ ಕೊಡಲು ಹೊರಟ್ಟಿದ್ದಾರೆ. ಏನಿದು "ವಿಶೇಷ ಘೋಷಣೆ" ಎನ್ನುವ ಚರ್ಚೆ ಸಹ ಆರಂಭವಾಗಿದೆ. ಗಿಲ್ಲಿ ಹೀರೊ ಆಗಿ ಹೊಸ ಸಿನಿಮಾ ಘೋಷಣೆ ಆಗುತ್ತಾ? ಹೊಸ ರಿಯಾಲಿಟಿ ಶೋ ಬರುತ್ತಾ? ಏನಪ್ಪಾ ಇದು ಎನ್ನುವ ಚರ್ಚೆ ಜೋರಾಗಿದೆ. ಎಲ್ಲದ್ದಕ್ಕೂ ಕೆಲವೇ ಘಂಟೆಗಳಲ್ಲಿ ಉತ್ತರ ಸಿಗಲಿದೆ.
ಕಲರ್ಸ್ ಕನ್ನಡ ವಾಹಿನಿಯ ಚಿತ್ತಾರ ಸ್ಟಾರ್ ಅವಾರ್ಡ್ಸ್ 2026 ಕಾರ್ಯಕ್ರಮದಲ್ಲಿ ಗಿಲ್ಲಿ ಭಾಗವಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದ ಪ್ರೋಮೊಗಳು ಬಿಡುಗಡೆಯಾಗಿ ವೈರಲ್ ಆಗ್ತಿದೆ. ಗಿಲ್ಲಿ ನಟನನ್ನು ಹೈಲೆಟ್ ಮಾಡಿ ಪ್ರೋಮೊ ಕಟ್ ಮಾಡಿರುವುದು ಗೊತ್ತಾಗುತ್ತಿದೆ. ಇದೇ ಭಾನುವಾರ ಸಂಜೆ 5 ಗಂಟೆಗೆ ಶೋ ಪ್ರಸಾರ ಆಗಲಿದೆ. ಗಿಲ್ಲಿ ಈಗಾಗಲೇ ಕೆಲ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರಬಂದ ಮೇಲೆ ಅಂತಹ ಒಂದೆರಡು ಸಿನಿಮಾ ಬಿಡುಗಡೆ ಸಹ ಆಗಿತ್ತು. ಆದರೆ ಹೇಳಿಕೊಳ್ಳುವಂತಹ ಮ್ಯಾಜಿಕ್ ಏನು ಆಗಲಿಲ್ಲ.


Click it and Unblock the Notifications