ಹನುಮಂತನ ಜೊತೆ ಸೀರಿಯಸ್ ಸ್ಕಿಟ್ ಮಾಡೋದಕ್ಕೆ ಸಾಧ್ಯವಾ? ಶಕುಂತಲೇ ಸುಸ್ತು!
ಹನುಮಂತ ಲಾಮಣಿ ಈಗಂತು ಮನೆ ಮನೆಯಲ್ಲೂ ಎಲ್ಲರ ಅಚ್ಚುಮೆಚ್ಚು. ಟಿವಿ ಲೋಕಕ್ಕೆ ಪರಿಚಿತರಾದಾಗ ಸಂಗೀತ ಪ್ರಿಯರ ಮನಸ್ಸನ್ನು ಗೆದ್ದಿದ್ದರು. ಪಕ್ಕ ಹಳ್ಳಿ ಸೊಗಡಿನ ಹಾಡುಗಳನ್ನ ಹಾಡುತ್ತಿದ್ದ ಈ ಹೈದ ಹಾಡು ಅಂದ್ರೆ ಹನುಮಂತ ಎಂಬಂತೆ ಮಾಡಿಕೊಂಡಿದ್ದರು. ಅಂದು ಕೂಡ ಅದೇ ಮುಗ್ಧತೆ. ಅದರಲ್ಲೂ ಸರಿಗಮಪ ಗೆದ್ದರೂ ಕೂಡ ಕೊಂಚವೂ ಬದಲಾವಣೆ ಆಗಿರಲಿಲ್ಲ.
ಅದೇ ಸಕ್ಸಸ್‌ನಿಂದ ಬಿಗ್‌ಬಾಸ್‌ಗೂ ಬಂದರು. ಬಿಗ್ ಬಾಸ್‌ಗೆ ಬಂದ ಮೇಲಂತೂ ಪೆದ್ದು ಅಂತ ಒಂದಷ್ಟು ಜನ ಅಂದ್ರೆ ಬುದ್ದಿವಂತ ಆದರೆ ಏನು ಗೊತ್ತಿಲ್ಲದ ರೀತಿ ಆಡ್ತಾರೆ ಅಂತೆಲ್ಲಾ ಮಾತುಗಳು ಬಂದವು. ಆದರೆ ಹನುಮಂತ ಸಿಕ್ಕಾಪಟ್ಟೆ ಬುದ್ದಿವಂತೆ. ಎಲ್ಲಿ ಹೇಗಿರಬೇಕು, ಏನು ಮಾಡಬೇಕು ಎಂಬೆಲ್ಲಾ ಕಲ್ಪನೆಗಳಿದ್ದರು, ಎಲ್ಲಿಯೂ ತನ್ನ ಮುಗ್ಧತೆಯನ್ನು ಕಳೆದುಕೊಂಡಿಲ್ಲ. ಇದೀಗ ದುಶ್ಯಂತ - ಶಾಕುಂತಲೆ ನಾಟಕದಲ್ಲಿ ನಕ್ಕು ನಕ್ಕು ಸುಸ್ತಾಗುವಂತೆ ಮಾಡಿದ್ದಾರೆ.

ದುಷ್ಯಂತನಾದ ಹನುಮಂತ
ಹನುಮಂತ ಲಾಮಣಿ ಬಿಗ್ ಬಾಸ್ ಮುಗಿದ ಮೇಲೆ 'ಬಾಯ್ಸ್ ವರ್ಸಸ್ ಗರ್ಲ್ಸ್' ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಾರೆ. ಇವತ್ತಿನ ಎಪಿಸೋಡ್ ನಲ್ಲಿ ದುಷ್ಯಂತನಾಗಿ ಹನುಮಂತ ಕಾಣಿಸಿಕೊಂಡಿದ್ದಾರೆ. ಶಾಕುಂತಲೆ ಹಾಗೂ ದುಷ್ಯಂತ ನಾಟಕ ಎಷ್ಟು ಸೀರಿಯಸ್ ವಿಚಾರ ಹೇಳಿ. ಆದರೆ ಆ ಸ್ಕಿಟ್ ನಲ್ಲಿ ಹನುಮಂತ ನಟಿಸಿದ ರೀತಿಗೆ ಸೀರಿಯಸ್ ಟಾಪಿಕ್ ಹೋಗಿ ಕಾಮಿಡಿ ಟಾಪಿಕ್ ಆಗೋಯ್ತು.
ಶಾಕುಂತಲೆಯಾದ ಚಂದನ
ಇಲ್ಲಿ ಹನುಮಂತನಿಗೆ ಜೋಡಿಯಾಗಿ ಚಂದನ ಗೌಡ ಕಾಣಿಸಿಕೊಂಡಿದ್ದಾರೆ. ಪಕ್ಕಾ ಶಾಕುಂತಕೆಯಂತೆ ಡ್ರೆಸ್ ಹಾಕಿದ್ದಾರೆ, ಮೇಕಪ್ ಮಾಡಿಕೊಂಡಿದ್ದಾರೆ. ಶಾಕುಂತಲೆಯ ಬ್ಯೂಟಿಗೆ ಸ್ಟೇಜ್ ನಲ್ಲಿದ್ದವರೇ ಮಾರು ಹೋಗಿದ್ದಾರೆ. ಹನುಮಂತುನ ಈಗ ಮನವೊಲಿಸುವ ಟಾಸ್ಕ್ ಚಂದನಾ ಅವರದ್ದಾಗಿದೆ. ಉಂಗುರ ಕಳೆದು ಹೋದಂತ ದೃಶ್ಯವನ್ನ ರಿಕ್ರಿಯೇಟ್ ಮಾಡಿದ್ದಾರೆ. ಚಂದನಾ ಇಲ್ಲಿ ಶಾಕುಂತಲೆಯಾಗಿ ನಟಿಸಿದ್ದಾರೆ. ದುಶ್ಯಂತನಾಗಿ ನಟಿಸಿರೋ ಹನುಮಂತುಗೆ ಹಳೆಯ ನೆನಪುಗಳನ್ನ ಮರುಕಳುಹಿಸುವ ಟಾಸ್ಕ್ ಅದು. ಆಂಕರ್ ಅನುಪಮಾ ಗೌಡ ಕೂಡ ಟ್ರೆಡಿಷನಲ್ ಲುಕ್‌ನಲ್ಲಿ ಸಖತ್ತಾಗಿನೆ ಕಾಣಿಸ್ತಾ ಇದಾರೆ.
ಹನುಮಂತ ಕಾಮಿಡಿ
ಹನುಮಂತಣ್ಣ ಹೇಳಿ ಕೇಳಿ ನಗಿಸುವುದಕ್ಕೇನೆ ಫೇಮಸ್. ಅವರಾಡುವ ಒಂದೊಂದು ಮಾತುಗಳು ಎದುರಿದ್ದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡುತ್ತದೆ. ಇನ್ನಹ ಹಾಡು ಹಾಡಿದರೆ ಕುಂತಲ್ಲಿಯೇ ಕಳೆದೋಗುವಂತೆ ಮಾಡುತ್ತದೆ. ಈಗ ದುಷ್ಯಂತನಾದರೂ ಹನುಮಂತನಿಗೆ ಆ ಸೀರಿಯಸ್ ನೆಸ್ ಬಂದಿಲ್ಲ. ಶಾಕುಂತಲೆ ಬಂದು ಮಾತಾಡಿಸಿದರೂ ನೋ ರಿಯಾಕ್ಷನ್. ಇದು ಫಸ್ಟ್ ಟೇಕ್. ಸರಿ ನೆಕ್ಸ್ಟ್ ಟೇಕ್ ಶುರುವಾಯ್ತು. ಅದರಲ್ಲಿ ನಾ ನಿನಗೆ ನೆನಪಿಲ್ವಾ. ನೀವೂ ನನಗೆ ಗಂದರ್ಭ ವಿವಾಹವಾಗಿದ್ದೀರಿ. ಉಂಗುರ ಎಲ್ಲಿ ಹೋಯ್ತು ಅಂತ ಚಂದನಾ ಹುಡುಕುತ್ತಿರುವಾಗ ದುಷ್ಯಂತನಾದ ಹನುಮಂತನು ಇಲ್ಲ ಬೇ ಅಂತ ಕಾಮಿಡಿ ಮಾಡುತ್ತಿದ್ದರು.
ಆ ದಿನಗಳ ನೆನಪು
ಶಾಕುಂತಲೆಯ ಪಾತ್ರ ಮಾಡಿದ ಚಂದನ ಗೌಡ ಅವರಿಗೇನೆ ಆ ಕಾಮಿಡಿಯನ್ನ ತಡೆದುಕೊಳ್ಳುವುದಕ್ಕೆ ಆಗಲಿಲ್ಲ. ನಕ್ಕು ಸುಸ್ತಾಗಿ ಹೋದರು. ಆದರೂ ಆ ನಗುವಿನಲ್ಲಿಯೇ ಪರ್ಫಾಮೆನ್ಸ್ ಮಾಡಿ ಮುಗಿಸಿದರು. ಇಲ್ಲಿ ಹನುಮಂತನ ಪರ್ಫಾಮೆನ್ಸ್ ಅನ್ನು ನಿಜಕ್ಕೂ ಸಿಕ್ಕಾಪಟ್ಟೆ ಎಂಜಾಯ್ ಮಾಡಿದ್ದು ದೋಸ್ತಾ ಧನಂಜಯ. ಚಂದನಾ ಮುಟ್ಟುವುದಕ್ಕೆ ಹೋದರೇನೆ ಕಂಬಳಿ ಹುಳ ಬಿಟ್ಟವನಂತೆ ಆಡುತ್ತಿದ್ದ ಹನುಮಂತನನ್ನ ಕಂಡು ದೋಸ್ತನಿಗೆ ಮಜ. ಬಿಗ್ ಬಾಸ್ ಮನೆಯಲ್ಲಂತು ಇಬ್ಬರು ಒಬ್ಬರನ್ನೊಬ್ಬರು ಬಿಟ್ಟು ಇರ್ತಾ ಇರಲಿಲ್ಲ. ಬಿಗ್ ಬಾಸ್ ನೋಡ್ತಾ ಇದ್ದದ್ದೆ ಎಷ್ಟೋ ಜನ ಈ ಇಬ್ಬರ ಸ್ನೇಹಕ್ಕೆ. ಇಬ್ಬರಲ್ಲೂ ನಿಶ್ಕಲ್ಮಶ ಗೆಳೆತನ ಎಲ್ಲರ ಗಮನ ಸೆಳೆದಿತ್ತು. ಇದೀಗ ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಮತ್ತೆ ದೋಸ್ತಿಗಳನ್ನ ನೋಡುವಂತಾಗಿದೆ.


Click it and Unblock the Notifications











