ಬಿಗ್‌ಬಾಸ್ ವೇದಿಕೆಯಲ್ಲಿ ಕುಣಿದಿದ್ದ 'ಕಲ್ಲೇಗ ಟೈಗರ್ಸ್' ಹುಲಿವೇಷ ತಂಡದ ನಾಯಕನ ಹತ್ಯೆ
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆಯಾಗಿದೆ. ಸಣ್ಣ ಜಗಳ ವಿಕೋಪಕ್ಕೆ ತಿರುಗಿ ಪುತ್ತೂರಿನ ಕಲ್ಲೇಗ ಟೈಲರ್ ಮುಖ್ಯಸ್ಥ ಅಕ್ಷಯ್ ಕಲ್ಲೇಗ (26) ಎಂಬುವವರನ್ನು ತಲವಾರಿನಿಂದ ಕಡಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ತಾಲೂಕಿನ ನೆಹರು ನಗರ ಜಂಕ್ಷನ್‌ನಲ್ಲಿ ಸೋಮವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮಾಣಿ ಮೈಸೂರು ಹೆದ್ದಾರಿಯ ನೆಹರು ನಗರ ಜಂಕ್ಷನ್‌ನಲ್ಲಿ ದುಷ್ಕರ್ಮಿಗಳು ಅಟ್ಟಾಡಿಸಿ ಅಕ್ಷಯ್ ಕಲ್ಲೇಗ ಕೊಲೆಗೈದಿದ್ದಾರೆ. ಹತ್ಯೆಗೈದ ಬನ್ನೂರು ನಿವಾಸಿ ಮನೀಷ್, ಚೇತು ಘಟನೆಯ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾರೆ. ಮತ್ತೋರ್ವ ಆರೋಪಿ ತಲೆಮಲೆಸಿಕೊಂಡಿರೋ ಮಾಹಿತಿ ಲಭ್ಯವಾಗುತ್ತಿದೆ.

ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತ ವಿಚಾರದಲ್ಲಿ ಗಲಾಟೆ ಶುರುವಾಗಿದೆ. ಈ ಸಂದರ್ಭ ಎರಡು ಸಾವಿರ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ತಿರುಗಿದ್ದು ಬಸ್ ಚಾಲಕ ಚೇತು ಎಂಬಾತನ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ನಡೆದಿದೆ. ಕೊನೆಗೆ ಅಕ್ಷಯ್ ನನ್ನ ಅಟ್ಟಾಡಿಸಿ ತಲವಾರಿನಿಂದ ಮೂರಕ್ಕೂ ಅಧಿಕ ಮಂದಿಯ ತಂಡ ದಾಳಿ ನಡೆಸಿ ಕೊಂದಿದ್ದಾರೆ. ಬರೀ ಅಪಘಾತದ ಕಾರಣಕ್ಕೆ ನಡೆದ ಜಗಳ ಅಕ್ಷಯ್ ಕಲ್ಲೇಗ ಹತ್ಯೆಗೆ ಪ್ರೇರಿಸಿತ್ತಾ? ಅಥವಾ ಈ ಹತ್ಯೆಗೆ ಬೇರೆ ಕಾರಣಗಳು ಇದೆಯಾ ಎಂಬ ಬಗ್ಗೆ ಪೊಲೀಸರ ತನಿಖೆ ನಡೆಸುತ್ತಿದ್ದಾರೆ.
ಹುಲಿಕುಣಿತದಲ್ಲಿ 'ಕಲ್ಲೇಗ ಟೈಗರ್ಸ್' ತಂಡದ ನೇತೃತ್ವ ವಹಿಸಿಕೊಂಡಿದ್ದ ಅಕ್ಷಯ್ ಕಲ್ಲೇಗ ವಹಿಸಿಕೊಂಡಿದ್ದರು. ಸದ್ಯ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆದಿದ್ದಾರೆ. ಕಳೆದ ಬಾರಿ ಬಿಗ್‌ಬಾಸ್ ಶೋನಲ್ಲಿ ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡ ಭಾಗಿ ಆಗಿತ್ತು.
ರೂಪೇಶ್ ಶೆಟ್ಟಿ ಕಳೆದ ಸೀಸನ್‌ನಲ್ಲಿ ಬಿಗ್‌ಬಾಸ್ ಫೈನಲ್‌ಗೆ ತಲುಪಿದ್ದರು. ರೂಪೇಶ್ ಆಸೆಯಂತೆ ಹುಲಿ ನೃತ್ಯಕ್ಕೆ ಅವಕಾಶ ನೀಡಿದ್ದರು. ಈ ನೃತ್ಯಕ್ಕೆ ಪುತ್ತೂರಿನ ಕಲ್ಲೇಗ ಟೈಗರ್ಸ್ ಆಯ್ಕೆ ಆಗಿತ್ತು. ಮಂಗಳೂರು ದಸರಾ ಪ್ರಮುಖ ಆಕರ್ಷಣೆ ಹುಲಿ ಕುಣಿತ. ಈ ಹುಲಿವೇಷ ಧರಿಸಿ ಬಿಗ್‌ಬಾಸ್ ಮನೆಯಲ್ಲಿ ಹುಲಿ ನೃತ್ಯಗಾರರೊಂದಿಗೆ ತಾವು ಹೆಜ್ಜೆ ಹಾಕಬೇಕು ಎಂದು ರೂಪೇಶ್ ಮನವಿ ಮಾಡಿದ್ದರು. ಅದನ್ನು ಬಿಗ್‌ಬಾಸ್ ಪೂರೈಸಿತ್ತು. ದೊಡ್ಮನೆಯಲ್ಲಿ ತಾಸೆಯ ಪೆಟ್ಟಿಗೆ ಪಿನಲಿಕೆಗೆ 'ಕಲ್ಲೇಗ ಟೈಗರ್ಸ್' ಅವಕಾಶ ಸಿಕ್ಕಿತ್ತು.
ಅಕ್ಷಯ್ ಕಲ್ಲೇಗ ಹತ್ಯೆ ವಿಚಾರ ತಿಳಿದು ಪುತ್ತೂರು ಬೆಚ್ಚಿ ಬಿದ್ದಿದೆ. 24 ಹರೆಯದ ಅಕ್ಷಯ್ ತಾಲೂಕಿನ ವಿವೇಕಾನಂದ ಕಾಲೇಜ್ ಬಳಿಯ ನಿವಾಸಿ. ತಂದೆ ಚಂದ್ರಶೇಖರ, ತಾಯಿ ಕುಸುಮಾ. ಕಳೆದ 6 ವರ್ಷಗಳಿಂದ ಅಕ್ಷಯ್, 'ಕಲ್ಲೇಗ ಟೈಗರ್ಸ್' ತಂಡವನ್ನು ಮುನ್ನಡೆಸುತ್ತಿದ್ದರು. ಈ ತಂಡ ತಾಲೂಕಿನಲ್ಲಿ ಭಾರೀ ಜನಪ್ರಿಯತೆ ಪಡೆದಿತ್ತು. ಸಾಕಷ್ಟು ಸ್ಪರ್ಧೆಗಳಲ್ಲಿ ಗೆಲುವು ಸಾಧಿಸಿತ್ತು. ಇದೇ ಕಾರಣಕ್ಕೆ ಈ ತಂಡಕ್ಕೆ ಸ್ಟಾರ್‌ಗಿರಿ ಸಿಕ್ಕಿತ್ತು.


Click it and Unblock the Notifications











