ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್‌ಬಾಸ್ ಸಿರಿ; "ಇಂತಹ ಹೆಂಡತಿ ಪಡೆಯೋದಕ್ಕೆ ಅದೃಷ್ಟ ಮಾಡಿದ್ದೀರಿ" ಎಂದ ನೆಟ್ಟಿಗರು

By ಅನಿತಾ ಬನಾರಿ

ನಟಿ ಸಿರಿ ಅಲಿಯಾಸ್ ಸಿರಿಜಾ ಕಿರುತೆರೆ ಪ್ರೇಕ್ಷಕರ ಮನೆ ಮಗಳಂತೆ ಎಂದರೆ ತಪ್ಪಾಗಲ್ಲ. ಹಲವಾರು ವರ್ಷಗಳಿಂದ ಕಿರುತೆರೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ನಟಿ ಎಂದರೆ ಅದು ಸಿರಿ. ಇತ್ತೀಚೆಗೆ ಬಿಗ್ ಬಾಸ್ ಸೀಸನ್ ಹತ್ತಕ್ಕೆ ಬಂದು ಸಿರಿ ಬಹಳಷ್ಟು ಪಾಪ್ಯುಲಾರಿಟಿಯನ್ನು ಪಡೆದರು. ಬಿಗ್ ಬಾಸ್ ಮನೆಯಲ್ಲಿ ತಮ್ಮ ವಿನಯ, ತಾಳ್ಮೆ ಹಾಗೂ ಉತ್ತಮ ನಡತೆಗೆ ಜನಮನ ಗೆದ್ದಿದ್ದರು ನಟಿ ಸಿರಿ.

ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ಮದುವೆ ಪ್ರಸ್ತಾಪವಾದಾಗ ಮದುವೆ ಆಗಲ್ಲ ಅಂತೇನಿಲ್ಲ ಆದರೆ ಒಳ್ಳೆಯ ಹುಡುಗನಿಗೆ ಕಾಯುತ್ತಿದ್ದೇನೆ ಎಂದಷ್ಟೇ ಹೇಳಿದರು ನಟಿ ಸಿರಿ. ಅದಾದ ಕೆಲವೇ ತಿಂಗಳಿಗೆ ಮದುವೆಯಾಗಿರುವ ನಟಿ ಸಿರಿ ಇದೀಗ ತಮ್ಮ ಗಂಡನೊಂದಿಗೆ ಫೋಟೋಸ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಸ್ ಈಗಾಗಲೇ ವೈರಲ್ ಆಗಿದ್ದು, ಸಿರಿ ಅವರ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ.

Bigg Boss fame Kannada Actress Siri shared photos with her husband

ಅಂದಹಾಗೆ ಇದೇ ಜೂನ್ 13ರಂದು ಸಿರಿ ತಮ್ಮ ಗೆಳೆಯ ಪ್ರಭಾಕರ್ ಎನ್ನುವವರೊಂದಿಗೆ ಬಹಳ ಸರಳವಾಗಿ ವಿವಾಹವಾಗಿದ್ದರು. ಮೀಡಿಯಾ ಸೇರಿದಂತೆ ಎಲ್ಲಾ ಸದ್ದು ಗದ್ದಲದಿಂದ ದೂರವೇ ಉಳಿದು ಸರಳವಾಗಿ ಆದ ಈ ವಿವಾಹಕ್ಕೆ ನೆಟ್ಟಿಗರು ಹಾಗೂ ಅಭಿಮಾನಿಗಳು ಶುಭಾಶಯ ಕೋರಿದ್ದರು.

ಅದಾದ ನಂತರ ಈಗ ತನ್ನ ಪತಿ ಪ್ರಭಾಕರ್ ಒಂದಿಗಿನ ಮುದ್ದಾದ ಫೋಟೋ ಶೇರ್ ಮಾಡಿರುವ ನಟಿ ಸಿರಿ ಮತ್ತೆ ಸದ್ದು ಮಾಡಿದ್ದಾರೆ. ಬಿಳಿ ಬಣ್ಣದ ಲೆಹೆಂಗಾ ತೊಟ್ಟಿರುವ ಸಿರಿ ನಗುನಗುತ್ತಾ ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ಪತಿ ಪ್ರಭಾಕರ್ ಕಪ್ಪು ಟಿ-ಶರ್ಟ್ ಗೆ ಬಿಳಿ ಪ್ಯಾಂಟ್ ಧರಿಸಿ ಮೇಲೊಂದು ಬಿಳಿ ಜಾಕೆಟ್ ಕೂಡ ಧರಿಸಿ ಹೆಂಡತಿಯ ಉಡುಗೆಗೆ ಸರಿಯಾದ ಕಲರ್ ಮ್ಯಾಚ್ ಮಾಡಿದ್ದಾರೆ.

Bigg Boss fame Kannada Actress Siri shared photos with her husband

ಈ ಫೋಟೋವನ್ನು ಸ್ವತಃ ಸಿರಿ ಅವರೇ ತಮ್ಮ ಸೋಶಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದು, ನೆಟ್ಟಿಗರು, ಅಭಿಮಾನಿಗಳು ತಮ್ಮ ತಮ್ಮ ಅಭಿಪ್ರಾಯ ಹಾಗೂ ಶುಭ ಹಾರೈಕೆಗಳನ್ನು ಕಾಮೆಂಟ್ ಮೂಲಕ ತಿಳಿಸಿದ್ದಾರೆ. ನಟಿ ಸಿರಿಜಾ ಅವರು ಕಳೆದ ಹತ್ತು ವರ್ಷಕ್ಕಿಂತಲೂ ಹೆಚ್ಚಿನ ಕಾಲದಿಂದಲೂ ಕಿರುತೆರೆಯಲ್ಲಿ ಹಲವಾರು ಧಾರಾವಾಹಿಗಳಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 'ರಂಗೋಲಿ', 'ಬದುಕು', 'ಮನೆಯೊಂದು ಮೂರು ಬಾಗಿಲು', 'ರಾಮಾಚಾರಿ' ಇತ್ಯಾದಿಗಳು ನಟಿಸಿರುವ ಪ್ರಮುಖ ಧಾರಾವಾಹಿಗಳು.

ಇವರ ಪತಿ ಪ್ರಭಾಕರ್ ಮೂಲತಃ ಮಂಡ್ಯದವರಾಗಿದ್ದು, ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದಾರೆ. ಈ ಮೊದಲು ಇವರು ಸಿರಿ ಅವರೊಂದಿಗೆ ಒಂದು ಧಾರಾವಾಹಿಯಲ್ಲಿ ನಟಿಸಿದ್ದರಂತೆ. "ಸಿರಿ ಅಂತಹ ಹೆಂಡತಿಯನ್ನು ಪಡೆಯೋದಕ್ಕೆ ನೀವು ಅದೃಷ್ಟ ಮಾಡಿದ್ದೀರಿ", "ನಿಮ್ಮ ದಾಂಪತ್ಯ ಜೀವನ ಸುಖಕರವಾಗಿರಲಿ" ಎಂಬಿತ್ಯಾದಿ ಶುಭ ಹಾರೈಕೆಗಳ ಮಳೆಯು ಸಿರಿ ಅವರ ಪೋಸ್ಟ್‌ಗೆ ಸಿಕ್ಕಿದೆ.

ಇನ್ನು ಸಿರಿ ಅವರು ಫೋಟೋಗಳ ಪೋಸ್ಟ್ ಗೆ "ಪ್ರೀತಿ ಅಂದರೇನು ಅಂತ ಗೊತ್ತಾಗಿದ್ದೇ ನಿನ್ನಿಂದ" ಎಂಬ ಸಿರಿ ಅವರ ಕ್ಯಾಪ್ಷನ್ ನೆಟ್ಟಿಗರ ಹಾಗೂ ಅಭಿಮಾನಿಗಳ ಗಮನ ಸೆಳೆದಿದೆ.

More from Filmibeat

English summary
Actress Siri said that I know what love is because of you,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X