Ninagagi: 'ನಿನಗಾಗಿ' ಧಾರಾವಾಹಿಗೆ ಬಿಗ್ ಬಾಸ್ ಸ್ಪರ್ಧಿ ಕಿಶನ್ ಎಂಟ್ರಿ; ನಟನೆಗೆ ಸಿಕ್ತು ಫುಲ್ ಮಾರ್ಕ್ಸ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ನಿನಗಾಗಿ ಸೀರಿಯಲ್ ಆರಂಭದಲ್ಲಿಯೇ ಒಳ್ಳೆಯ ಮೈಲೇಜ್ ಪಡೆದುಕೊಂಡಿತ್ತು. ಮಧ್ಯದಲ್ಲಿ ಕೊಂಚ ಟಿಆರ್ಪಿಯಲ್ಲಿ ಏರು ಪೇರಾಗಿತ್ತು. ಈಗ ಮತ್ತೆ ಎಲ್ಲರಿಗೂ ಇಷ್ಟವಾಗುವಂತೆ ಕಥೆಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಈ ಧಾರಾವಾಹಿಯಲ್ಲಿ ಕೃಷ್ಣಾ ಪಾತ್ರವೇ ಸಿಕ್ಕಾಪಟ್ಟೆ ಹೈಲೇಟ್. ಆ ಮಗುವಿನ ಮುಗ್ಧತೆ, ನಗು, ಫೇಸ್ ಎಕ್ಸ್‌ಪ್ರೆಷನ್ ಎಲ್ಲವೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತಿದೆ.
'ನಿನಗಾಗಿ' ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿರುವುದು ಸಂಪೃಥ್ವಿ. ಈಗಾಗಲೇ ಹಲವು ಧಾರಾವಾಹಿಗಳನ್ನು ನಿರ್ದೇಶನ ಮಾಡಿದ ಅನುಭವ ಇದೆ. ಅದರಲ್ಲೂ 'ನಮ್ಮ ಲಚ್ಚಿ' ಧಾರಾವಾಹಿಯ ಸೂತ್ರಧಾರ ಕೂಡ ಇವರೇ.

ಮಕ್ಕಳ ಧಾರಾವಾಹಿ ಮಾಡುವುದರಲ್ಲಿ ಸಂಪೃಥ್ವಿ ನಿಸ್ಸೀಮರು. ಮಕ್ಕಳಿಂದ ಹೇಗೆ ನಟನೆ ತೆಗೆಸಬೇಕೆಂಬ ಚಾಲಾಕಿ ತನ ಇವರಿಗೆ ಗೊತ್ತಿದೆ. ಹಠ ಮಾಡುವ ಮಕ್ಕಳಲ್ಲೂ ಮಕ್ಕಳಾಗಿಯೇ ನಿರ್ದೇಶನ ಮಾಡುತ್ತಾರೆ. ಅದೇ ಥರ ನಿನಗಾಗಿ ಧಾರಾವಾಹಿಯಲ್ಲೂ ಮಕ್ಕಳೇ ಹೈಲೇಟ್ ಆಗಿದ್ದಾರೆ.
ನಿನಗಾಗಿ ಧಾರಾವಾಹಿಗೆ ಕಿಶನ್ ಎಂಟ್ರಿ
ಕಿಶನ್ ಬಿಳಗಲಿ ಬಿಗ್ ಬಾಸ್ ಕನ್ನಡ ಸೀಸನ್ -7 ಸ್ಪರ್ಧಿಯಾಗಿದ್ದರು. ಒಳ್ಳೆಯ ಡ್ಯಾನ್ಸರ್ ಕೂಡ. ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿರುತ್ತಾರೆ. ಅದರಲ್ಲೂ ನಮ್ರತಾ ಜೊತೆಗೆ ಒಳ್ಳೊಳ್ಳೆ ರೆಟ್ರೋ ಸ್ಟೈಲ್ ಹಾಡುಗಳಿಗೆಲ್ಲಾ ಹೆಜ್ಜೆ ಹಾಕಿ ಸುದ್ದಿಯಲ್ಲಿದ್ದಾರೆ. ಇದೀಗ ಸೀರಿಯಲ್ ಲೋಕಕ್ಕೆ ಹೆಜ್ಜೆ ಇಟ್ಟಿದ್ದಾರೆ. ನಿನಗಾಗಿ ಧಾರಾವಾಹಿಗೆ ಬಂದಿದ್ದಾರೆ.
ನೆಗೆಟಿವ್ ಪಾತ್ರದಲ್ಲಿ ಕಿಶನ್
ಕಿಶನ್ ಎಂಟ್ರಿಯೇ ಮಸ್ತ್ ಆಗಿತ್ತು. ಕ್ಯಾಮರಾಮೆನ್ ಕೂಡ ಸಖತ್ ಕಷ್ಟ ಪಟ್ಟು ಶೂಟ್ ಮಾಡಿದ್ದಾರೆ. ಅಷ್ಟು ಬಿಲ್ಡಪ್ ಕೊಟ್ಟು, ಕಿಶನ್ ಅವರನ್ನು ಇಂಟ್ರೂಡ್ಯೂಸ್ ಮಾಡಲಾಗಿದ್ದು, ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಿಶನ್ 'ನಿನಗಾಗಿ' ಧಾರಾವಾಹಿಯಲ್ಲಿ ಖಳನಾಯಕರಾಗಿದ್ದಾರೆ. ಸೂಪರ್ ಸ್ಟಾರ್ ರಚನಾಳನ್ನು ಮದುವೆಯಾಗುವುದಕ್ಕೆ ಬಂದಿರುವ ಗಂಡು. ವಜ್ರೇಶ್ವರಿಯ ಅಣ್ಣನ ಮಗ. ಇದೆಲ್ಲಾ ಪ್ಲ್ಯಾನ್ ಮಾಡಿರುವುದು ವಜ್ರೇಶ್ವರಿಯೇ. ಬೇರೆಯವರಿಗೆ ಮಗಳನ್ನು ಮದುವೆ ಮಾಡಿಕೊಟ್ಟರೆ ಸಿನಿಮಾ ನಿಲ್ಲಿಸಿ ಬಿಡುವ ಭಯ ಅವಳದ್ದು.

ಜೀವನಿಗೆ ಎದುರಾದ ಕಿಶನ್
ರಚನಾಳನ್ನು ಮದುಯವೆಯಾಗಬೇಕೆಂದು ಬಂದಿರುವ ಅಶ್ವಿನ್‌ಗೆ ಆರಂಭದಲ್ಲಿಯೇ ದ್ವೇಷ ಹುಟ್ಟಿಕೊಂಡಿರುವುದು ಜೀವಾನ ಮೇಲೆ. ಒಮ್ಮೆ ಮಾಲ್‌ನಲ್ಲಿ ಜೀವ, ರಚನಾಳನ್ನು ಕಾಪಾಡಿದ. ಅದನ್ನೇ ಅಶ್ವಿನ್ ತಪ್ಪಾಗಿ ತಿಳಿದು. ಜೊತೆಗೆ ಅಂದು ರಚನಾ, ಜೀವ ಬಳಿ ಕ್ಷಮೆ ಕೇಳುತ್ತಾ ಒಂದಷ್ಟು ಸಮಯ ನಿಂತಳು. ಅದನ್ನು ನೋಡಿ ತಪ್ಪಾಗಿ ಭಾವಿಸಿ, ಜೀವನನ್ನು ಟಾರ್ಗೆಟ್ ಮಾಡಿದ್ದಾನೆ. ಅದಕ್ಕೆ ಜೀವನಿಗೆ ಆಧಾರವಾಗಿದ್ದ ಮೊಬೈಲ್ ಕ್ಯಾಂಟಿನ್ ಅನ್ನು ಹೊಡೆದು ಹಾಕಿ ಬಂದಿದ್ದಾನೆ. ಇನ್ಮೇಲೆ ನನ್ನ ನಿನ್ನ ಆಟ ಶುರು ಅಂತ ಬೇರೆ ಹೇಳಿದ್ದಾನೆ.
ಕಿಶನ್‌ಗೆ ಮಹಿಳಾ ಮಣಿಗಳೇ ಫ್ಯಾನ್ಸ್
ಇನ್ನು ಟ್ರೋಲ್ ಪೇಜ್ ಒಂದು ಕಿಶನ್ ಸೀರಿಯಲ್‌ಗೆ ಎಂಟ್ರಿ ಕೊಟ್ಟಿರುವ ಬಗ್ಗೆ ಪೋಸ್ಟ್ ಒಂದನ್ನು ಹಾಕಿದೆ. ಕಿಶನ್ 'ನಿನಗಾಗಿ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ನಟನೆಗೆ ನೀವೆಷ್ಟು ಮಾರ್ಕ್ಸ್ ಕೊಡುತ್ತೀರಿ ಎಂದು ಕೇಳಿದ್ದಾರೆ. ಅದಕ್ಕೆ ಹೆಚ್ಚು ಕಮೆಂಟ್ ಹಾಕಿರುವುದೇ ಮಹಿಳಾ ಮಣಿಗಳು. ಎಲ್ಲರೂ ಹತ್ತಕ್ಕೆ ಹತ್ತು ಮಾರ್ಕ್ಸ್ ಕೊಟ್ಟಿದ್ದಾರೆ. ಅಂದ್ರೆ ಮಹಿಳಾ ಮಣಿಗಳ ಹೃದಯವನ್ನು ಕಿಶನ್ ಗೆದ್ದಿದ್ದಾರೆ ಎಂದರ್ಥ.


Click it and Unblock the Notifications











