ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಿದ್ದ ಮಂಜು ಪಾವಗಡ ಈಗ ಫುಲ್ ಸೀರಿಸ್.. ಎಲ್ಲಾ 'ಅಂತರಪಟ' ಮಹಿಮೆ

By ಅನಿತಾ ಬನಾರಿ

ಕಾಮಿಡಿ ಪಾತ್ರಗಳನ್ನು ಬಿಟ್ಟು ಸೀರಿಯಸ್ ಪಾತ್ರ ಒಂದಕ್ಕೆ ಜೀವ ತುಂಬುತ್ತಿದ್ದಾರೆ ನಟ ಮಂಜು ಪಾವಗಡ. ಅದು ಕೂಡಾ ಮೊದಲ ಬಾರಿಗೆ! ಹೌದು, 'ಅಂತರಪಟ' ಎಂಬ ಧಾರಾವಾಹಿ ಮೂಲಕ ಕಿರುತೆರೆ ಕ್ಷೇತ್ರಕ್ಕೆ ಕಾಲಿಟ್ಟಿರುವ ಹಾಸ್ಯ ನಟ ಮಂಜು ಪಾವಗಡ ಅವರು ಇದೀಗ ಬಹಳ ಸೀರಿಯಸ್ ಪಾತ್ರ ಒಂದನ್ನು ಮಾಡುವುದರ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆಯುತ್ತಿದ್ದಾರೆ.

ಟಾಪ್ ಟು ಟಾಪ್ ಕಾಮಿಡಿ ಪಾತ್ರಗಳಲ್ಲೇ ಕಾಣಿಸಿಕೊಂಡಿರುವ ನಟ ಮಂಜು ಪಾವಗಡ, ಮಂಜ ಎಂದೇ ಫೇಮಸ್ಸು! ಇವರು ಬಿಗ್ ಬಾಸ್‌ಗೆ ಹೋಗಿ ಬಂದ ಮೇಲಂತೂ ಇವರ ಪಾಪ್ಯುಲರಿಟಿ ಇನ್ನಷ್ಟು ಹೆಚ್ಚಾಯಿತು. ಬಿಗ್ ಬಾಸ್ ನಂತರ ನಟನಾಗುವ ಅವಕಾಶ ಅದಾಗಿಯೇ ಅರಸಿ ಬಂದಾಗ ಬೇಡ ಎನ್ನದ ಮಂಜು ಪಾವಗಡ ಸದ್ಯ ನಟನೆಯ ಮೂಲಕ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.

Bigg Boss Fame Manju Pavagada say I am happy to have entered entertainment field

ಅಂದ ಹಾಗೇ ಮಂಜು ಪಾವಗಡಗೆ ನಟನಾಗಬೇಕೆಂಬ ಆಸೆ ಇರಲಿಲ್ಲ. ಆದರೆ, ಸಿನಿಮಾ ಹುಚ್ಚು ಹೆಚ್ಚಿತ್ತು. ಚಿಕ್ಕಂದಿನಿಂದಲೂ ತುಂಬಾ ಸಿನಿಮಾಗಳನ್ನು ನೋಡುತ್ತಿದ್ದ ಮಂಜು ಇಂದು ನಟನಾಗಲು ಆ ಹುಚ್ಚೇ ಕಾರಣ. ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಮಂಜು ಪಾವಗಡ ಕಾಮಿಡಿ ರಿಯಾಲಿಟಿ ಶೋ 'ಮಜಾಭಾರತ'ದ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಲಾರಂಭಿಸಿದರು.

ಮಂಜು ಪಾವಗಡ ಅವರು ಇಂದು ಕಿರುತೆರೆಯ ಜೊತೆಗೆ ಹಿರಿತೆರೆಯಲ್ಲಿಯೂ ಗುರುತಿಸಿಕೊಂಡಿರುವ ಪ್ರತಿಭೆ. ನಾನಿಂದು ಕಿರುತೆರೆ ಮಾತ್ರವಲ್ಲದೇ ಬೆಳ್ಳಿತೆರೆಯಲ್ಲಿಯೂ ಗುರುತಿಸಿಕೊಂಡಿದ್ದೇನೆ ಎಂದರೆ ಅದಕ್ಕೆ ಪ್ರೇಕ್ಷಕರೇ ಮೂಲ ಕಾರಣ. ಅವರ ಪ್ರೋತ್ಸಾಹದಿಂದಲೇ ಇದೆಲ್ಲಾ ಸಾಧ್ಯವಾಯಿತು ಎಂಬುದು ಮಂಜು ಅವರ ಅಂಬೋಣ.

Bigg Boss Fame Manju Pavagada say I am happy to have entered entertainment field

ಮನರಂಜನಾ ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಕ್ಕೆ ಬಹಳ ಸಂತೋಷವಂತೂ ಇದೆ ಎಂದು ಸಂತಸದಿಂದ ಹೇಳುವ ಮಂಜು ಪಾವಗಡ ಮೊದಲ ಬಾರಿಗೆ ಸೀರಿಯಸ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇಷ್ಟು ದಿನಗಳ ಕಾಲ ಕಾಮಿಡಿ ಪಾತ್ರಗಳಲ್ಲಿಯೇ ಮಂಜು ನೋಡಿರುವ ಪ್ರೇಕ್ಷಕರು ಇದೀಗ ಸಡನ್ ಆಗಿ ಸೀರಿಯಸ್ ಪಾತ್ರದಲ್ಲಿ ನೋಡುತ್ತಿದ್ದಾರೆ. ಆದರೆ, ಬಹಳಷ್ಟು ಜನರು, ಕಲಾವಿದರಿಗೆ ಬದಲಾವಣೆ ಬೇಕು ಎಂಬುದನ್ನು ಅರಿತು ಮಂಜು ಪಾವಗಡ ಸೀರಿಯಸ್ ಲುಕ್ ಅನ್ನು ಒಪ್ಪಿಕೊಂಡಿದ್ದಾರೆ.

ಇನ್ನು, ಇದರ ಹೊರತಾಗಿ ಹಲವಷ್ಟು ಜನರು ನೀವು ಕಾಮಿಡಿ ಪಾತ್ರಗಳಲ್ಲಿ ಚೆನ್ನಾಗಿ ಕಾಣಿಸಿಕೊಳ್ಳುತ್ತಿದ್ದೀರಿ ಎಂಬ ಅಭಿಪ್ರಾಯವನ್ನು ಕೂಡಾ ವ್ಯಕ್ತಪಡಿಸಿದ್ದಾರೆ. ಆದರೆ ಕ್ರಮೇಣ ಅವರು ಕೂಡ ಮಂಜು ಅವರನ್ನು ಇಂತಹ ಸೀರಿಯಸ್ ವಿಲನ್ ಪಾತ್ರದಲ್ಲಿ ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಮಂಜು ಅವರಿಗಿದೆ.

ಕಲಾವಿದನಿಗೆ ಯಾವಾಗಲೂ ಬೇರೆ ಬೇರೆ ವಿಭಿನ್ನ ಪಾತ್ರಗಳ ಅವಶ್ಯಕತೆ ಇರುತ್ತದೆ. ಒಂದೇ ರೀತಿಯ ಪಾತ್ರದಲ್ಲೇ ಸದಾ ಇರಬೇಕು ಎಂದು ಅಪೇಕ್ಷಿಸುವುದು ತಪ್ಪಾಗುತ್ತದೆ. ಈಗ ಈ ಪಾತ್ರ ಮಾಡುವ ಮೂಲಕ ನನಗೆ ಹಲವಾರು ಬೇರೆ ಬೇರೆ ರೀತಿಯ ಪಾತ್ರಗಳನ್ನು ಮಾಡಲು ಆತ್ಮ ವಿಶ್ವಾಸ ಬಂದಿದೆ ಎಂದಿದ್ದಾರೆ ನಟ ಮಂಜು ಪಾವಗಡ.

ಇಲ್ಲಿಯ ತನಕ 7 ರಿಂದ 8 ಸಿನಿಮಾಗಳಲ್ಲಿ ನಟಿಸಿದ್ದಾರೆ ನಟ ಮಂಜು ಪಾವಗಡ. ಹೆಚ್ಚಿನದೆಲ್ಲವೂ ಹಾಸ್ಯ ಪಾತ್ರವೇ ಎನ್ನುವುದು ವಿಶೇಷ. ನನ್ನ ಮೊದಲ ಸಿನಿಮಾ 'ರುದ್ರಾಕ್ಷಿಪುರ'. ಸದ್ಯಕ್ಕೆ ಚಂದನ್‌ ಶೆಟ್ಟಿ ನಟನೆಯ 'ಎಲ್ರ ಕಾಲೆಳಿಯತ್ತೆ ಕಾಲ', ಅರ್ಜುನ್‌ ಜನ್ಯ ನಿರ್ದೇಶನದ '45', ಕೋಮಲ್‌ ಜತೆಗೆ 'ಎಲಾ ಕುನ್ನಿ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮತ್ತಷ್ಟು ಸಿನಿಮಾಗಳಿಂದ ಅವಕಾಶ ಬಂದಿದ್ದು, ಕಿರುತೆರೆ ಮತ್ತು ಹಿರಿತೆರೆ ಎರಡನ್ನೂ ಬ್ಯಾಲೆನ್ಸ್ ಮಾಡಬೇಕಿದೆ.

More from Filmibeat

English summary
Bigg Boss Fame Manju Pavagada say I am happy to have entered entertainment field,know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X