ನಮ್ರತಾ ಗೌಡ ಮದುವೆಯಾಗುವ ಹುಡುಗ ಹೇಗಿರಬೇಕು ? ಷರತ್ತುಗಳು ಅನ್ವಯ..

ವಯಸ್ಸಿಗೆ ಬಂದ ಹುಡುಗ ಇರಲಿ ಅಥವಾ ಹುಡುಗಿ ಇರಲಿ ಮದುವೆಯಾಗುವವರೆಗೂ ಇನ್ನೂ ಮದುವೆ ಆಗಿಲ್ಲವಾ ಅನ್ನುವ ಪ್ರಶ್ನೆ ಮನೆಯೊಳಗೆ ಹಾಗೂ ಹೊರಗೆ ಕೇಳಿ ಬರ್ತಾನೆ ಇರುತ್ತೆ. ಕೇವಲ ಜನಸಾಮಾನ್ಯರಷ್ಟೇ ಅಲ್ಲ, ಸೆಲೆಬ್ರಿಟಿ ಪಟ್ಟಕ್ಕೇರಿದವರು ಕೂಡ ಈ ಪ್ರಶ್ನೆಯಿಂದ ತಪ್ಪಿಸಿಕೊಳ್ಳಲು ಸಾಧ್ಯ ಇಲ್ಲ. ಇದಕ್ಕೆ ಬಿಗ್ ಬಾಸ್ ಕನ್ನಡ 10ರ ಸ್ಫರ್ಧಿ ನಮ್ರತಾ ಗೌಡ ಇತ್ತೀಚಿನ ಉದಾಹರಣೆ.

ಹೌದು, ಬಿಗ್ ಬಾಸ್ ಮನೆಯಿಂದ ನಮ್ರತಾ ಹೊರ ಬಂದ ನಂತರ, ಅನೇಕರಿಗೆ ನಮ್ರತಾ ಮದುವೆಯ ಚಿಂತೆ ಶುರುವಾಗಿದೆ. ಇದಕ್ಕೆ ಪೂರಕವಾಗಿ ಮನೆಯಾಚೆ ಬಂದ ನಂತರ ಅನೇಕ ಬಾರಿ ನಮ್ರತಾ ಅವರಲ್ಲಿ ನಿಮ್ಮ ಮದುವೆ ಯಾವಾಗ ಎಂಬ ಪ್ರಶ್ನೆಯನ್ನಸಂದರ್ಶನಗಳಲ್ಲಿ ಕೇಳಲಾಗಿದೆ. ಹೀಗೆ ಕೇಳಲಾದ ಪ್ರಶ್ನೆಗೆ ಮದುವೆ ಬಗ್ಗೆ ಮೊದಲು ತುಂಬಾ ಆಸೆ ಇತ್ತು.

Bigg boss fame Namratha Gowda Opens up about her marriage plans

ಸಿಕ್ಕಾಪಟ್ಟೆ ಮದುವೆ ಬಗ್ಗೆ ಆಸೆ ಇಟ್ಟುಕೊಂಡಿದ್ದೆ, ಆದರೆ ಈಗ ಇದರಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ. ಸಾಧನೆ ಮಾಡಬೇಕು, ದೇಶ ಸುತ್ತಬೇಕು, ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಮದುವೆ ಬಗ್ಗೆ ನಂಬಿಕೆ ತರಿಸುವವರು ಸಿಕ್ಕರೆ ಯೋಚನೆ ಮಾಡ್ತೀನಿ ಎಂದು ಉತ್ತರವನ್ನ ಕೊಡ್ತಿದ್ದ ನಮ್ರತಾ, ಇದೀಗ ಮತ್ತೊಮ್ಮೆ ಮದುವೆಯ ಬಗ್ಗೆ ಮಾತನಾಡಿದ್ದಾರೆ. ಕನಸಿನ ಹುಡುಗನಿಗೆ ಇವೆಲ್ಲ ಲಕ್ಷಣಗಳು ಇರಬೇಕು ಎಂದಿದ್ದಾರೆ.

ನಮ್ರತಾ ಮದುವೆಯಾಗುವ ಹುಡುಗ ಹೇಗಿರಬೇಕು ?

ನನಗೆ ಮೈಸೂರು ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಮೈಸೂರಿನಲ್ಲೇ ಅಪ್ಪ, ಅಮ್ಮನ ಜೊತೆ ಮುಂದೊಂದು ದಿನ ನೆಲೆಯೂರುವ ಕನಸಿದೆ ಎಂದಿರುವ ನಮ್ರತಾ, ಮದುವೆಯಾಗುವ ಹುಡುಗ ಅಪ್ಪಟ ಕನ್ನಡದವನಾಗಿರಬೇಕು ಎಂದಿದ್ದಾರೆ. ಇನ್ನೂ ಮದುವೆಯಾಗುವ ಹುಡುಗ ಅವಿಭಕ್ತ ಕುಟುಂಬದವನಾಗಿದ್ದರೆ ಇನ್ನೂ ಚೆಂದ

Bigg boss fame Namratha Gowda Opens up about her marriage plans

ಬಿಗ್ ಬಾಸ್ ನಲ್ಲಿಯೂ ಮದುವೆ ಬಗ್ಗೆ ಮಾತನಾಡಿದ್ದ ನಮ್ರತಾ

ಇನ್ನೂ ಅಪ್ಪ ಹಾಗೂ ಅಮ್ಮನ ಮುದ್ದಿನ ಮಗಳಾಗಿರುವ ನಮ್ರತಾ, ಬಿಗ್ ಬಾಸ್ ಮನೆಯಲ್ಲಿದ್ದಾಗ ಹೆತ್ತವರನ್ನ ನೆನೆದು ಅನೇಕ ಬಾರಿ ಕಣ್ಣೀರಿಟ್ಟಿದ್ದರು. ಆಗ್ಲೂ ಕೂಡ ಮನೆಯಿಂದ ಪತ್ರ ಸಿಕ್ಕಾಗ ನಾನು ಮದುವೆಯಾದರೆ ಅಪ್ಪ ಅಮ್ಮನಿಂದ ದೂರವಾಗಬೇಕಾಗುತ್ತೆ.

ತಾಯಿ ಜೊತೆ ಇರೋಕೆ ಬಿಡಲ್ಲ ಎಂದು ನನಗೆ ಅನ್ಸುತ್ತೆ ಎಂದಿದ್ದರು. ನಮ್ರತಾ ಹೀಗೆ ಹೇಳಿದ್ದೇ ತಡ, ನೆಚ್ಚಿನ ನಾಗಿಣಿ ಮದುವೆಯಾಗದೇ ಇರಲು ಇದೇ ಕಾರಣವೆಂದು ಇವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯನ್ನ ಶುರು ಮಾಡಿದ್ದರು.

Bigg boss fame Namratha Gowda Opens up about her marriage plans

ಸ್ನೇಹಿತ್ ಜೊತೆ ಸ್ನೇಹ.. ಪ್ರೇಮ..?

ಹಾಗೇ ನೋಡಿದರೆ ಬಿಗ್ ಬಾಸ್ ಮನೆಯಲ್ಲಿದ್ದಾಗ ಸ್ನೇಹಿತ್ ಹಾಗೂ ನಮ್ರತಾ ನಡುವೆ ಆತ್ಮೀಯತೆ ಗಾಢವಾಗಿ ಬೇರೂರಿತ್ತು. ಇವರ ಆತ್ಮೀಯತೆಯನ್ನ ಕಂಡ ಬಿಗ್ ಬಾಸ್ ಪ್ರೇಕ್ಷಕರು ಇವರಿಬ್ಬರದ್ದು ಸ್ನೇಹಾನಾ .. ಪ್ರೀತಿನಾ ಎಂದು ಗೊಂದಲಕ್ಕೀಡಾಗಿದ್ದರು.

ಇನ್ನೂ ಸ್ನೇಹಿತ್ ಮನೆಯಾಚೆ ಹೋಗಬೇಕಾದ ಪರಿಸ್ಥಿತಿ ಬಂದಾಗ ನಮ್ರತಾ ಕಣ್ಣೀರಿಟ್ಟಿದ್ದರು. ಆದರೆ, ಆ ನಂತರ ಏನಾಯಿತು ಗೊತ್ತಿಲ್ಲ. ಸ್ನೇಹಿತ್‌ ಬಿಗ್ ಬಾಸ್‌ ಮನೆಯನ್ನ ಮರು ಪ್ರವೇಶಿಸಿದ ನಂತರ ನಮ್ರತಾ - ಸ್ನೇಹಿತ್ ಮಧ್ಯೆ ಸಂಬಂಧ ಹಳಸಿದೆ ಎಂಬ ಅನುಮಾನ ಅನೇಕರಿಗೆ ಕಾಡತೊಡಗಿತ್ತು.

Bigg boss fame Namratha Gowda Opens up about her marriage plans

ಸದ್ಯಕ್ಕೆ ನಮ್ರತಾ ಗೌಡ ಅವರ ಮದುವೆ ವಿಚಾರ ಇನ್ನೊಮ್ಮೆ ಮುನ್ನಲೆಗೆ ಬಂದಿದೆ. ನಮ್ರತಾ ಕೂಡ ಹುಡುಗ ಕನ್ನಡದವನಾಗಿರಬೇಕು ಎಂಬ ಷರತ್ತನ್ನೂ ವಿಧಿಸಿದ್ದಾರೆ. ಹಾಗಂಥ ನಮ್ರತಾ ಇನ್ನೇನು ಮದುವೆಯಾಗಿಯೇ ಬಿಡ್ತಾರೆ ಅಂತ ಅಂದುಕೊಳ್ಳುವಂತೆ ಇಲ್ಲ.

ಯಾಕೆಂದರೆ ಮದುವೆ ಬಗ್ಗೆ ಮಾತನಾಡಿರುವ ನಮ್ರತಾ ಇದೇ ಸಮಯದಲ್ಲಿ ನನ್ನ ಮದುವೆ ಸದ್ಯಕ್ಕಿಲ್ಲ. ಇನ್ನೂ ಎರಡು ವರ್ಷ ಕೆಲಸ ಮಾಡಬೇಕು. ಕೆಲಸ ಮಾಡುವ ಟೈಮ್‌ನಲ್ಲಿ ಮದುವೆ ಬೇಡ. ಹುಡುಗ ಸಿಕ್ಕಿದ್ಮೇಲೆ ನೋಡೋಣ ಎಂದು ಹೇಳಿದ್ದಾರೆ. ಈ ಕಾರಣಕ್ಕೆ ನಮ್ರತಾ ಕೈ ಹಿಡಿಯಲಿರುವ ಹುಡುಗ ಯಾರಿರಬಹುದು ಎಂಬ ವಿಚಾರದಲ್ಲಿ ಈಗಲೇ ತಲೆಕೆಡಿಸಿಕೊಳ್ಳುವುದು ವ್ಯರ್ಥ. ಅದಕ್ಕೆ ಇನ್ನೂ ಸಮಯ ಇದೆ

More from Filmibeat

English summary
Bigg Boss Kannada 10 Fame Namratha Gowda Revealed She Will Get Married Only After Two Years
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X