ನಮ್ರತಾ ಗೌಡ ಬಾಲ್ಯದಲ್ಲಿ ಹೇಗಿದ್ರು ನೋಡಿ : ಪಕ್ಕಾ ಹಳ್ಳಿ ಭಾಷೆಯಲ್ಲೇ ಕೊಡ್ತಿದ್ರು ಠಕ್ಕರ್!

By ಎಸ್ ಸುಮಂತ್

ನಮ್ರತಾ ಗೌಡ ಸ್ಟೈಲ್ ಐಕಾನ್ ಅಂದ್ರೆ ತಪ್ಪಗಲಾರದು. ಅವರ ಸ್ಟೈಲ್‌ಗೇನೆ ಅದೆಷ್ಟೋ ಜನ ಫಿದಾ ಆಗಿದ್ದಾರೆ. ಅವರಂತೆ ಡ್ರೆಸ್ ಮಾಡಿಕೊಳ್ಳುವುದಕ್ಕೆ ಶುರು ಮಾಡಿದ್ದಾರೆ. ಸೀರೆ ಹಾಕದವರಿಗೂ ಸೀರೆ ಮೇಲೆ ಕ್ರೇಜ್ ಹುಟ್ಟಿಸಿದ್ದಾರೆ‌. ಕಿರುತೆರೆಯ ಸ್ಟೈಲ್ ಐಕಾನ್ ಅಂದ್ರೆ ನಮ್ರತಾ ಗೌಡ. ಅವರ ಡ್ರೆಸ್ಸಿಂಗ್ ಸ್ಟೈಲ್, ಮೇಕಪ್, ಲೈಫ್ ಲೀಡ್ ಮಾಡೋ ರೀತಿ ಎಲ್ಲದನ್ನು ಸಾಕಷ್ಟು ಜನ ಸ್ಪೂರ್ತಿಯಾಗಿ ಪಡೆದಿದ್ದಾರೆ.

ನಮ್ರತಾ ಗೌಡ 'ನಾಗಿಣಿ' ಸೀರಿಯಲ್ ಆದ್ಮೇಲೆ ಯಾವ ಸೀರಿಯಲ್‌ನಲ್ಲೂ ಆಕ್ಟ್ ಮಾಡ್ತಾ ಇಲ್ಲ. ಆದ್ರೂ ಸದಾ ಟಾಕ್ ಕ್ರಿಯೇಟ್ ಮಾಡ್ತಾರೆ. ಸದ್ಯದ ಮಟ್ಟಿಗೆ ಬಹಳ ಜೂಮ್ ನಲ್ಲಿರುವ ಸೋಷಿಯಲ್ ಮೀಡಿಯಾ ಬಳಕೆ ಮಾಡುವ ಮೂಲಕ ನಮ್ರತಾ ಗೌಡ ಆಕ್ಟೀವ್ ಆಗಿದ್ದಾರೆ. ಈಗಿರುವ ನಮ್ರತಾ ಗೌಡ ಫುಲ್ ಸ್ಟೈಲಿಶ್. ಆದರೆ ಬಾಲ್ಯದ ನಮ್ರತಾ ಗೌಡ ಹೇಗಿದ್ರು ಗೊತ್ತಾ..?

Bigg Boss fame Namratha gowda s childwood video goes viral now

ಕಾರ್ ತಗೊಂಡ್ರು ಫುಲ್ ಬಿಂದಾಸ್

ನಮ್ರತಾ ಗೌಡ ತಮ್ಮದೇ ಆದ ಸೋಷಿಯಲ್ ಮೀಡಿಯಾ ಹೊಂದಿದ್ದಾರೆ. ಯೂಟ್ಯೂಬ್, ಇನ್ಸ್ಟಾಗ್ರಾಂ ಹೀಗೆ ಎಲ್ಲದರಲ್ಲೂ ಆಕ್ಟೀವ್ ಆಗಿದ್ದಾರೆ. ಹೋಗಿದ್ದು, ಬಂದಿದ್ದು, ಹಬ್ಬ ಹರಿದಿನಗಳ ವ್ಲೋಗ್ ಮಾಡ್ತಾ ಇರ್ತಾರೆ. ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋವರ್ಸ್ ಕೂಡ ಇದ್ದಾರೆ. ಈಗಾಗಲೇ ಮನೆ ಗೃಹ ಪ್ರವೇಶ ಮಾಡಿದ್ದಾರೆ, ಕಾರು ತಗೊಂಡಿದ್ದಾರೆ. ಹೈಫೈ ಲೈಫ್ ಲೀಡ್ ಮಾಡ್ತಾ ಇದಾರೆ.

ಬಾಲ ನಟಿಯಾಗಿ ಬಂದಿದ್ದ ನಮ್ರತಾ

ನಮ್ರತಾ ಗೌಡ ತಮ್ಮ ಬಾಲ್ಯದ ದಿನಗಳಲ್ಲಿಯೇ ನಟನೆಗೆ ಬಂದವರು. ನಟನೆಯಲ್ಲಿಯೇ ಏನಾದರೂ ಸಾಧಿಸಬೇಕು ಎಂದುಕೊಂಡಿದ್ದ ನಮ್ರತಾ ಮಾಡಿದ ಸೀರಿಯಲ್ ಬೆರಳೆಣಿಕೆಯಷ್ಟು. ಇತ್ತೀಚೆಗಂತು ಯಾವ ಸೀರಿಯಲ್ ನಲ್ಲಿಯೂ ಕಾಣಿಸಿಕೊಂಡಿಲ್ಲ. ಆದರೆ ನಮ್ರತಾ ಗೌಡ ಬಾಲ ನಟಿಯಾಗಿ ನಟಿಸಿದ್ದ ಮೊದಲ ಸೀರಿಯಲ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ.

ಪಕ್ಕ ಹಳ್ಳಿ ಭಾಷೆಯಲ್ಲಿ ಠಕ್ಕರ್

ನಮ್ರತಾ ಗೌಡ ಫಸ್ಟ್ ಸೀರಿಯಲ್‌ನಲ್ಲಿ ನಟಿಸಿದ್ದು ಸೃಷ್ಠಿ ಎಂದು. ಆ ಧಾರಾವಾಹಿಯಲ್ಲಿ ಶ್ರೀನಾಥ್ ವಸಿಷ್ಠ ಅವರ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಪಕ್ಕ ಹಳ್ಳಿ ಭಾಷೆ. ಆ ಧಾರಾವಾಹಿಯಲ್ಲಿ ನಮ್ರತಾ ಮಾತಾಡಿರುವ ಭಾಷೆ ಹೀಗಿದೆ ನೋಡಿ 'ಈ ಮನ್ಯಾಗೆ ಅಕ್ಕೋರ್ ಮಾತ್ರ ದುಡಿಮೆಗೋದ್ರು ನೀವ್ಯಾಕೆ ಮನೆಗೆ ಇದ್ದೀರಿ. ದಿಟವಾ.. ಹಂಗರೆ ಬಿಡಿ ಒಂದ್ ಪದವ ನಾನು ಕ್ಯೋಳ್ತೀನಿ' ಹಿಂಗೆ ಮಾತಾಡಿದ್ದು ಇದೇ ನಮ್ರತಾ ಗೌಡನೆ.

ವೈರಲ್ ಆದ ವಿಡಿಯೋಗೆ ಕಮೆಂಟ್ಸ್

ವೈರಲ್ ಆದಂತ ವಿಡಿಯೋದಲ್ಲಿ ನಮ್ರತಾ ಗೌಡ ಕೂಡ ಹಾಡು ಹಾಡಿದ್ದಾರೆ. ಸೇವಂತಿಯೇ ಸೇವಂತಿಯೇ ಎಂಟಾಣೆ ಸೆಂಟ್ ಹಾಕೊಂಡ್ ಗಮ್ ಅಂತಿಯೇ ಅಂತ. ಇದು ನೋಡುವುದಕ್ಕೂ ಒಂಥರ ಫನ್ ಆಗಿದೆ. ಈ ವಿಡಿಯೋಗೂ ಸಿಕ್ಕಾಪಟ್ಟೆ ಕಮೆಂಟ್ಸ್ ಬಂದಿದೆ. ಬಿಗ್ ಬಾಸ್ ನಲ್ಲಿದ್ದಾಗ ಮಾತಿನಿಂದಾನೇ ನಮ್ರತಾ ಟ್ರೋಲ್ ಆಗಿದ್ದರು. ನಮ್ರತಾ ಫುಲ್ ಸಾಫ್ಟ್ ಅಂದುಕೊಂಡಿದ್ದವರಿಗೆ ಅವರ ಮಾತು, ನಡೆ ಎರಡು ಆಶ್ಚರ್ಯ ಹುಟ್ಟು ಹಾಕಿದ್ದವು. ಹೀಗಾಗಿ ಈ ವಿಡಿಯೋಗೆ ಅದೇ ರೀತಿ ಕಮೆಂಟ್ಸ್ ಹಾಕಿದ್ದಾರೆ. ನಾವೂ ಲೈವ್ ನಲ್ಲಿಯೇ ನೋಡಿದ್ದೀವಿ ಬಿಡಿ ಇದನ್ನೆಲ್ಲ ಎಂದು ಹಲವರು ಹಾಕಿದ್ರೆ ಇನ್ನು ಕೆಲವರು ಅದ್ಭುತವಾಗಿ ನಟಿಸ್ತೀರಿ ನಮ್ರತಾ ಅಂತ ಹಾಕಿದ್ದಾರೆ.

More from Filmibeat

English summary
Here is the details about Namrata Gowda's first serial video goes viral;
Read more about: sumanth bigg boss actress
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X