ಸಿಲ್ಕ್ ಸೀರೆಗಳನ್ನೇ ಉಡುವ ನಮ್ರತಾ ಬಳಿ ಎಷ್ಟು ಕಲೆಕ್ಷನ್ ಇದೆ ನೋಡಿ; ಆದರೆ ರೇಟ್ ನೀವೇ ಹೇಳ್ಬೇಕು!
'ಪುಟ್ಟಗೌರಿ ಮದುವೆ', 'ನಾಗಿಣಿ' ಧಾರಾವಾಹಿಗಳ ಮೂಲಕ ಫೇಮಸ್ ಆಗಿದ್ದ ನಮ್ರತಾ ಗೌಡ ಬಿಗ್ ಬಾಸ್ ಮೂಲಕ ಮತ್ತಷ್ಟು ಖ್ಯಾತಿ ಪಡೆದರು. ಆದರೆ ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಆಕ್ಟೀವ್ ಆಗಿರ್ತಾರೆ. ತನ್ನದೇ ಆದ ಯೂಟ್ಯೂಬ್ ಕೂಡ ಹೊಂದಿರುವ ನಮ್ರತಾ ಸಿಕ್ಕಾಪಟ್ಟೆ ಫಾಲೋವರ್ಸ್ ಪಡೆದಿದ್ದಾರೆ.
ಸಾಕಷ್ಟು ಜನರಿಗೆ ಕಣ್ಣಿರುವುದು ನಮ್ರತಾ ಹಾಕುವ ಸೀರೆಗಳ ಮೇಲೆ. ಯಾಕಂದ್ರೆ ಫೋಟೋಗಳಲ್ಲಿ ಅತಿ ಹೆಚ್ಚಾಗಿ ನಮ್ರತ ಬಳಸುವುದು ಮೈಸೂರು ಸಿಲ್ಕ್ ಸೀರೆಯನ್ನೇ. ಮೈಸೂರ್ ಸಿಲ್ಕ್ ಸೀರೆ ಅಂದ್ರೆ ಗೊತ್ತಲ್ಲ ಪ್ಯೂರ್ ಸಿಲ್ಕ್ ಶುರುವಾಗುವುದೇ 35-40 ಸಾವಿರದಿಂದ. ಹೀಗಾಗಿ ಅಷ್ಟೊಂದು ಸೀರೆಗಳನ್ನ ತೆಗೆದುಕೊಂಡಿರುವುದಕ್ಕೆ ಎಲ್ಲರೂ ಆಶ್ಚರ್ಯ ಪಡ್ತಾರೆ.

ನಮ್ರತಾ ಬಳಿ ಇರುವುದು ನಿಜವಾಗಲೂ ಸಿಲ್ಕ್ ಸ್ಯಾರಿನ ಅಂತ ಅನುಮಾನ ಪಟ್ಟವರು ಇದ್ದಾರೆ. ಹಾಗಾದ್ರೆ ನಮ್ರತಾ ಬಳಿ ಇರುವ ಸೀರೆಗಳು ಯಾವುವು ಅನ್ನೋದನ್ನ ಹೇಳ್ತೀವಿ. ಅದರ ರೇಟ್ ಕಮೆಂಟ್ ಮೂಲಕ ನೀವ್ ಹೇಳಿ.
ನಮ್ರತಾಗೆ ಇಷ್ಟದ ಸೀರೆಗಳು
ನಮ್ರತಾ ತಮ್ಮ ಯೂಟ್ಯೂಬ್‌ನಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಕಾಂಚಿವರಂ ಸೀರೆಗಳೆಂದರೆ ನನಗೆ ಸಿಕ್ಕಾಪಟ್ಟೆ ಇಷ್ಟ. ಎರಡು ವರ್ಷದಿಂದ ಮೈಸೂರಿ ಸಿಲ್ಕ್ ಮೇಲೆ ಒಲವು ಮೂಡಿದೆ. ಹೀಗಾಗಿ ಮೈಸೂರಿಗೆ ಹೋದಾಗ, ಚನ್ನಪಟ್ಟಣ ಕಡೆ ಹೋದಾಗ ಅಲ್ಲಿಂದ ಮೈಸೂರು ಸಿಲ್ಕ್ ಸೀರೆ ತರ್ತಾರೆ. ನನ್ನ ಬಳಿ ರೆಡ್ ಮೈಸೂರು ಸಿಲ್ಕ್ ಸೀರೆ, ಪಿಂಕ್, ಪಿಂಕ್ ಮೈಸೂರು ಸಿಲ್ಕ್ ಸ್ಯಾರಿ ನನ್ನ ಫೇವರಿಟ್. ಗೃಹ ಪ್ರವೇಶದ ಹಿಂದಿನ ದಿನ ಹುಟ್ಟಿದ ಗೋಲ್ಡ್ ಕಲರ್ ಮೈಸೂರ್ ಸಿಲ್ಕ್ ಸ್ಯಾರಿ, ಇದು ಸಿಕ್ಕಾಪಟ್ಟೆ ಕಾಸ್ಟ್ಲೀ ಆಗಿದೆ. ಇನ್ನು ವೈಟ್, ಪಿಂಕ್, ಗ್ರೀನ್ ಕಾಂಬಿನೇಷನ್ ಮೈಸೂರು ಸಿಲ್ಕ್ ಸ್ಯಾರಿ ಎಲ್ಲರ ಫೇವರಿಟ್. ಇದಕ್ಕೆ ಫುಲ್ ಡಿಮ್ಯಾಂಡ್ ಇದೆ. ಎಲ್ಲಾ ಕಡೆ ನಮ್ರತಾ ಗೌಡ ಸ್ಯಾರಿ ಅಂತಾನೇ ಕೇಳ್ತಾರೆ. ಬಿಗ್ ಬಾಸ್ ನಿಂದ ಹೊರಗೆ ಬಂದ ಕೂಡಲೇ ತಗೊಂಡಿದ್ದು. ತ್ರಿ ಕಲರ್ ಇದ್ದದ್ದು ನಂಗೆ ತುಂಬಾ ಇಷ್ಟ' ಎಂದಿದ್ದಾರೆ.
ನೋಡುಗರೇ ಊಹಿಸಬೇಕಿದೆ ಬೆಲೆ!
'ಗೃಹಪ್ರವೇಶದಲ್ಲಿ ಹುಟ್ಟಿದ ಸೀರೆ ಕಂಚಿಯಲ್ಲಿ ತೆಗೆದುಕೊಂಡಿದ್ದು. ಸೀರೆಯ ಬೆಲೆಯನ್ನ ಹೇಳಲ್ಲ. ಆದರೆ ಸೀರೆಯ ಬಗ್ಗೆ ಪಕ್ಕ ತಿಳಿದುಕೊಂಡವರಿಗೆ ಒಂದೊಂದು ಸೀರೆಯ ಬೆಲೆ ಖಂಡಿತಾ ಗೊತ್ತಿರುತ್ತೆ. ಇನ್ನು ಗ್ರೀನ್ ಸೀರೆ ಬಂದು ವರಮಹಾಲಕ್ಷ್ಮೀ ಹಬ್ಬಕ್ಕೆ ತಂದಿದ್ದು. ಲಕ್ಷ್ಮೀ ಹಬ್ಬಕ್ಕೆ ಸೀರೆ ತೆಗೆದುಕೊಳ್ಳುವಾಗ ಕಾಂಪ್ರೂಮೈಸ್ ಆಗಲ್ಲ. ಇದು ಕೂಡ ಎಕ್ಸ್ ಪೆನ್ಸಿವ್. ಗೃಹ ಪ್ರವೇಶದ ದಿನ ಲಕ್ಷ್ಮೀಗೆ ಉಡಿಸಿದ್ದ ಸೀರೆ ಕೂಡ ಕಂಚಿಯಲ್ಲಿ ತೆಗೆದುಕೊಂಡಿದ್ದು' ಎಂದು ಮಾಹಿತಿ ನೀಡಿದ್ದಾರೆ.
ಫ್ಯೂಚರ್ ಯೋಚಿಸಿ ಸೀರೆ
'ಸುಮಾರು ಜನ ಹೇಳ್ತಾರೆ ಯಾಕೆ ಪ್ಯೂರ್ ಮೈಸೂರು ಸಿಲ್ಕ್, ಕಂಚಿ ಸೀರೆ ತಗೋಳ್ತಿಯಾ. ಅದಕ್ಕೆ ಇನ್ವೆಸ್ಟ್ ಮಾಡೋದು ವೇಸ್ಟ್ ಅಲ್ವಾ ಅಂತ. ಬಟ್ ಉಟ್ಟಾಗ ಸಿಕ್ಕಾಪಟ್ಟೆ ಗ್ರಾಂಡ್ ಆಗಿ ಕಾಣುತ್ತೆ ಅಲ್ವಾ. ಅಂಡ್ ಅದನ್ನ ವಾಪಸ್ ತೆಗೆದುಕೊಳ್ಳುತ್ತಾರೆ. ಕಂಚಿಗೆ ಸೀರೆ ತೆಗೆಯೋಕೆ ಅಂತ ಹೋದಾಗ ಅಮ್ಮನ ಸೀರೆಗಳಿಗೆ ಆಲ್ಮೋಸ್ಟ್ 60 ಸಾವಿರದ ತನಕ ಹಣ ಸಿಕ್ಕಿತ್ತು. ಹಾಗಾಗಿ ಇನ್ವೆಸ್ಟ್ ಮಾಡಿದ್ರು, ಮಾರಿದಾಗ ಅರ್ಧ ರೇಟ್‌ಗೆ ತೆಗೆದುಕೊಳ್ಳುತ್ತಾರೆ' ಎಂದು ನಮ್ರತಾ ವಿವರಿಸಿದ್ದಾರೆ.
ಬ್ಲೌಸ್ ಬಗ್ಗೆ ಕುತೂಹಲ
ನಮ್ರತಾ ಹಾಕಿರುವ ವಿಡಿಯೋ ಕೆಳಗೆ ಕಮೆಂಟ್ ಸೆಕ್ಷನ್ ತುಂಬಿ ತುಳುಕುತ್ತಿದೆ. ಸೀರೆ ಉಡುವುದು, ಬ್ಲೌಸ್ ಡಿಸೈನ್‌ಗಳ ವಿಡಿಯೋ ಮಾಡುವುದಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆ. ನಮ್ರತಾ ಸೀರೆಯಲ್ಲಿಯೇ ಹೆಚ್ಚಾಗಿ ಕಾಣಿಸಿಕೊಳ್ಳುವುದರಿಂದ ಅವರು ಸೀರೆ ಉಡುವ ರೀತಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.


Click it and Unblock the Notifications











