Namratha gowda: ಕಾಲೇಜಲ್ಲಿ ಆದ ಫಸ್ಟ್ ಲವ್‌ನಿಂದ ನಮ್ರತಾ ಈಗ್ಲೂ ಮದುವೆ ಆಗ್ತಿಲ್ವಾ?
ನಮ್ರತಾ ಗೌಡಗೆ ಸಾಕಷ್ಟು ಅಭಿಮಾನಿ ಬಳಗವಿದೆ. ಅದರಲ್ಲೂ ಅವರ ಮೇಕಪ್, ಡ್ರೆಸ್ಸಿಂಗ್ ಸೆನ್ಸ್‌ಗೆ ಫಿದಾ ಆಗಿರುವವರೇ ಹೆಚ್ಚು. ಅವರನ್ನ ಫಾಲೋ ಮಾಡುವ ಮಂದಿ ಕೂಡ ಇದ್ದಾರೆ.
ಬಿಗ್ ಬಾಸ್ ಹೋಗಿ ಬಂದಾಗಿನಿಂದ ಕ್ರೇಜ್ ಇನ್ನಷ್ಟು ಜಾಸ್ತಿಯಾಗಿದೆ. ಯಾವುದೇ ಸೀರಿಯಲ್ ನಲ್ಲಿ ನಮ್ರತಾ ನಟಿಸ್ತಿಲ್ಲ. ಈ ಹಿಂದೆ ಇಂಟರ್‌ವ್ಯೂ ಒಂದರಲ್ಲಿ ಆ ಬಗ್ಗೆ ಹೇಳಿದ್ದರು. ಕೇಳಿದ ಸಂಭಾವನೆ ಸಿಗದೆ ಹೋದರೆ ಕಾಂಪ್ರಮೈಸ್ ಆಗಲ್ಲ ಅಂತಾನು ಹೇಳಿದ್ದರು.

ನಮ್ರತಾ ಅವರ ಲೈಫ್ ಸ್ಟೈಲ್ ಚಂದ. ಹೀಗೆ ಬದುಕಬೇಕು ಎಂದುಕೊಂಡರೇ ಹಾಗೇ ಬದುಕಿ ತೋರಿಸುತ್ತಾರೆ. ಪೋಷಕರ ಬೆಂಬಲದಿಂದ ಇಂದು ಜೀವನದಲ್ಲಿ ಗಟ್ಟಿಯಾಗಿ ನಿಂತಿದ್ದಾರೆ. ಇದೀಗ ಆರ್ ಜೆ ರಾಜೇಶ್ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿರುವ ನಮ್ರತಾ, ಒಂದಷ್ಟು ವೈಯಕ್ತಿಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಪೋಷಕರಿಗೆ ಒಬ್ಬಳೇ ಮಗಳು
ನಾನು ನಮ್ಮ ಪೋಷಕರಿಗೆ ಒಬ್ಬಳೆ ಮಗಳು. ಸಿಬ್ಲಿಂಗ್ಸ್ ಇದ್ರೆ ಅಥವಾ ಬೇರೆ ಯಾರಾದ್ರೂ ಬಂದ್ರೆ ಚುಚ್ಚಿ ಸಾಯಿಸಿ ಬಿಡ್ತೀನಿ ಅಂತ ಹೇಳಿದ್ದೆ. ಪ್ರಾಬಬ್ಲಿ ಅವರಿಗೂ ನಾನೊಬ್ಬಳೇ ಸಾಕು ಅನ್ನಿಸಿದೆ ಅನ್ಸುತ್ತೆ. ಆದ್ರೆ ಈಗ ಅನ್ಸುತ್ತೆ ಯಾರಾದ್ರೂ ಒಬ್ಬರು ಇರಬೇಕಿತ್ತು ಅಂತ ಅನ್ನಿಸ್ತಾ ಇತ್ತು. ನಾನು ಬೆಳೆದ ಜಾಯಿಂಟ್ ಫ್ಯಾಮಿಲಿಯಲ್ಲಿ ಅಷ್ಟಾಗಿ ಪ್ರೀತಿ ಸಿಗ್ತಾ ಇರಲಿಲ್ಲ. ಹೆಣ್ಣು ಮಗು ಅಂದ್ರೆ ಬ್ಯಾಡ್ ಅಂತ ಫೀಲ್ ಮಾಡ್ತಾ ಇದ್ದರು. ಅಪ್ಪನ ಅಮ್ಮನ ಕಡೆಯಿಂದ ಹೆಣ್ಣು ಅಂದ್ರೆ ದುರಾದೃಷ್ಟ ಅಂತ ಹೇಳಿದ್ರು. ನಾನು ಹುಟ್ಟಿದಾಗ ಅವರಿಗೆ ಏನೋ ಆಕ್ಸಿಡೆಂಟ್ ಆಗಿತ್ತಂತೆ. ಅದನ್ನ ನನ್ನ ದುರಾದೃಷ್ಟ ಅನ್ನೋ ಥರ ಮಾತಾಡ್ತಾ ಇದ್ರು.
ನಮ್ರತಾ ಗೌಡ ಬ್ರ್ಯಾಂಡ್
ಚಿಕ್ಕವಳಿದ್ದಾಗಿನಿಂದಾನೇ ಲಿಪ್ ಸ್ಟಿಕ್ ಹಾಕೋಳೋದು, ಹೇರ್ ಸ್ಟೈಲ್ ಮಾಡ್ಕೊಳೋದು, ಅಮ್ಮನ ದುಪ್ಪಟ್ಟಾದಲ್ಲಿ ಸೀರೆ ಹಾಕೋದು, ಮಿರರ್ ಮುಂದೆ ನಿಂತು ಆಂಕರ್ ಗಳ ರೀತಿ ಮಾತಾಡೋದು ಮಾಡ್ತಾ ಇದ್ನಂತೆ. ಆ ವಯಸ್ಸಿನಿಂದಾನೂ ಆಕ್ಟರ್ ಅಥವಾ ಡ್ಯಾನ್ಸರ್ ಅಂತಾನೇ ತಲೆಯಲ್ಲಿತ್ತು. ಪಿಯು ಆದ್ಮೇಲೆ ಫ್ಯಾಷನ್ ಡಿಸೈನರ್ ಆಗಬೇಕು ಅಂತ. ಸ್ವಂತ ಬ್ರಾಂಡ್ ಮಾಡಬೇಕು ಅನ್ನೋದು. ಅದರ ಮೇಲೆ ಈಗ ಕೆಲಸ ನಡೆಯುತ್ತಾ ಇದೆ.
ಫಸ್ಟ್ ಲವ್ ಯಾವಾಗ?
ಈ ರಿಲೇಶನ್ ಶಿಪ್, ಲವ್ ಬಗ್ಗೆ ಮಾತಾಡೋದು ವೆರಿ ಅನ್ ಕಂಫರ್ಟಬಲ್. ನಾಚಿಕೆ ಅಂತ ಅಲ್ಲ. ನಾನು ಏನೇ ಮಾಡಿದರೂ ಅಮ್ಮ ಅಪ್ಪನಿಗೆ ಗೊತ್ತಿರುತ್ತೆ. ಒಂದೇ ರಿಲೇಷನ್ ಶಿಪ್ ಅದು ನನ್ನ ಜೀವನದಲ್ಲಿ. ಫಸ್ಟ್ ಅಂಡ್ ಲಾಸ್ಟ್. ಆಗ ತಾನೇ ಎಸ್ಎಸ್ಎಲ್ಸಿ ಮುಗಿದಿತ್ತು. ಅಲ್ಲಿಯ ತನಕ ಟಾಮ್ ಬಾಯ್. ಹೀಗಾಗಿ ಲವ್, ಕ್ರಶ್ ಫೀಲಿಂಗ್ಸ್ ಬಂದಿರಲಿಲ್ಲ. ಕಾಲೇಜಿಗೆ ಹೋದಾಗ ಲವ್ ಮಾಡೋ ಅಂತ ಪರಿಸ್ಥಿತಿ ಆಯ್ತು. ಹಿಂದೆ ಬಿದ್ದು ಲವ್ ಮಾಡೋ ರೀತಿ ಮಾಡಿದ್ದ. ಬಟ್ ಆರಂಭದಲ್ಲಿ ಅವನನ್ನ ದ್ವೇಷ ಮಾಡ್ತಾ ಇದ್ದೆ. ಇವ್ನ್ಯಾಕೆ ಹೀಗೆ ಹಿಂದೆ ಬೀಳ್ತಾನೆ ಅಂತ. ಆದ್ರೆ ಮೂರ್ನಾಲ್ಕು ತಿಂಗಳಾದ ಮೇಲೆ ನಂಗೂ ಫೀಲಿಂಗ್ಸ್ ಶುರುವಾಯ್ತು. ಆಮೇಲೆ ನಾನು ಎಸ್ ಅಂದೆ.
ನಮ್ರತಾ ಮದುವೆ ಯಾವಾಗ?
ಕಾಲೇಜಲ್ಲಿ ತುಂಬಾ ಫೇಮಸ್ ಆಗೋಗಿತ್ತು ಲವ್. ಅಮ್ಮ ಅಪ್ಪನಿಗೂ ವಿಚಾರ ತಿಳಿಸಿದ್ದೆ. ನಂಗೆ ಕಮಿಟ್ಮೇಂಟ್, ರಿಲೇಶನ್ ಶಿಪ್ ಅಂತ ಗೊತ್ತಿರಲಿಲ್ಲ. ಆಕ್ಚುಲಿ ಅದು ರಾಂಗ್ ಏಜ್. 16 ವರ್ಷ ಮೆಸೇಜ್, ಮಾತಾಡೋದು ಆಗ ಏನು ಗೊತ್ತಿರಲ್ಲ. ಪಿಯು ಆದ್ಮೇಲೆ ನಾನು ಆಕ್ಟರ್ ಆಗಿ ಕೆರಿಯರ್ ಶುರು ಮಾಡಿದೆ. ಆ ಮನುಷ್ಯನಿಗೆ ಟೈಮ್ ಕೊಡೋಕೆ ಆಗ್ತಾ ಇರಲಿಲ್ಲ. ಆಗ ತುಂಬಾ ಮೆಸ್ಸಿ ಟಾಕ್ಸಿಕ್ ರಿಲೇಷನ್ ಶಿಪ್ ಆಗೋಯ್ತು. ಇಬ್ಬರಿಗೂ ಆ ರಿಲೇಶನ್ ಶಿಪ್ ಹೇಗೆ ಹ್ಯಾಂಡಲ್ ಮಾಡೋದು ಗೊತ್ತಾಗ್ತಾ ಇರಲಿಲ್ಲ. ನಾನು ತುಂಬಾ ಟ್ರೈ ಮಾಡಿದೆ. ಆದ್ರೆ ಆಗ್ಲಿಲ್ಲ. ಬ್ರೇಕಪ್ ಮಾಡ್ಕೊಂಡೆ. ನಾನೊಬ್ಬಳೆ ಫೋರ್ಸ್ ಮಾಡಿ ರಿಲೇಷನ್ ಶಿಪ್ ಉಳಿಸಿಕೊಳ್ಳೋದಕ್ಕೆ ಟ್ರೈ ಮಾಡಿದೆ. ಆದರೆ ಆ ಮನುಷ್ಯ ಟ್ರೈ ಮಾಡಲಿಲ್ಲ. ಒಂದಿನ ಆ ಸಂಬಂಧ ಬಿಟ್ಟೆ. ಅಲ್ಲಿಂದ ಇಲ್ಲಿವರೆಗೂ ಆ ವ್ಯಕ್ತಿ ಎಲ್ಲಿದ್ದಾನೆ..? ಹೇಗಿದ್ದಾನೆ ಗೊತ್ತಿಲ್ಲ ಎಂದಿದ್ದಾರೆ.


Click it and Unblock the Notifications











