Saviruchi: ನಿವೇದಿತಾ ನಾನ್‌ವೆಜ್ ರೆಸಿಪಿ; ಜಾಹ್ನವಿ ಬಗ್ಗೆ ಫ್ಯಾನ್ಸ್ ಏನಂದ್ರು?

By ಎಸ್ ಸುಮಂತ್

ಬಿಗ್ ಬಾಸ್‌ನಿಂದ ಕರ್ನಾಟಕದ ಮನೆ ಮಾತಾಗಿದ್ದ ನಿವೇದಿತಾ ಗೌಡ ಅಲಿಯಾಸ್ ಗೊಂಬೆ 'ಗಿಚ್ಚಿ ಗಿಲಿಗಿಲಿ' ಮೂಲಕ ಇನ್ನಷ್ಟು ಫೇಮಸ್ ಆಗಿದ್ದಾರೆ. ನಿವೇದಿತಾ ತನ್ನ ಕನಸಿನಂತೆ ಸಿನಿಮಾದ ನಟಿ‌ ಕೂಡ ಆಗಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಇದರ ನಡುವೆ ಕಲರ್ಸ್ ಕನ್ನಡದ ಒಂದು ಭಾಗವಾಗಿದ್ದಾರೆ. ಎಲ್ಲಾ ಧಾರಾವಾಹಿಗಳ ಕುಟುಂಬದವರನ್ನು ಭೇಟಿ ಮಾಡುತ್ತಾ ಇದ್ದಾರೆ.

ಅನುಬಂಧ ಅವಾರ್ಡ್ ನಡೆಯುವ ಸಮಯದಲ್ಲಿ ನಿವೇದಿತಾ ಗೌಡ ಕಲರ್ಸ್ ಕನ್ನಡದ ಎಲ್ಲಾ ಕುಟುಂಬಸ್ಥರನ್ನು ಭೇಟಿ ಮಾಡಿದ್ದಾರೆ. ಅಂದರೆ ಎಲ್ಲಾ ಸೀರಿಯಲ್ ಸೆಟ್‌ಗೂ ಭೇಟಿ ನೀಡಿ, ಪ್ರೇಕ್ಷಕರಿಗಿದ್ದ ಕುತೂಹಲದ ಪ್ರಶ್ನೆಗಳನ್ನು ನಿವೇದಿತಾ ಅವರೇ ಕೇಳಿದ್ದಾರೆ. ಉತ್ತರವನ್ನು ಪಡೆದಿದ್ದಾರೆ. ಇದರ ಜೊತೆಗೆ ಒಂದಷ್ಟು ಎಂಟರ್ಟೈನ್ಮೆಂಟ್ ಕೂಡ ನೀಡಿದ್ದಾರೆ. ಈಗ ಅಡುಗೆ ಮಾಡುವುದಕ್ಕೆ ಬಂದಿದ್ದಾರೆ.

Bigg boss fame Nivedita Gowda Makes kashmiri chicken curry in Saviruchi show

ರುಚಿ ರುಚಿಯಾದ ಅಡುಗೆ ತಯಾರಿ

ಕಲರ್ಸ್ ಕನ್ನಡದಲ್ಲಿ 'ಸವಿರುಚಿ' ಅಡುಗೆ ಕಾರ್ಯಕ್ರಮ ಸದ್ಯ ಎಲ್ಲರ ಅಚ್ಚುಮೆಚ್ಚಿನ ಕಾರ್ಯಕ್ರಮವಾಗಿದೆ. ಅದರಲ್ಲೂ ಮಹಿಳೆಯರಿಗೆ ಈ ರೀತಿಯಾದ ಕಾರ್ಯಕ್ರಮ ಬೇಗನೇ ಇಷ್ಟವಾಗಿ ಬಿಡುತ್ತದೆ. ಯಾಕಂದ್ರೆ ಗೊತ್ತಿರುವ ಅಡುಗೆಯೇ ಆದರೂ ಅದೇ ಅಡುಗೆಗೆ ಒಬ್ಬೊಬ್ಬರೂ ಒಂದೊಂದು ರೀತಿಯ ಟಚ್ ಕೊಡುತ್ತಾರೆ. ಹೊಸ ಬಗೆಯ ಟೇಸ್ಟ್ ಹೇಳಿಕೊಡುತ್ತಾರೆ. ಹೀಗಾಗಿಯೇ 'ಸವಿರುಚಿ' ಸಕ್ಸಸ್ ಶೋ ಆಗಿದೆ.

ಸವಿ ರುಚಿಗೆ ಬಂದರು ನಿವೇದಿತಾ ಗೌಡ

'ಸವಿರುಚಿ' ಕಾರ್ಯಕ್ರಮಕ್ಕೆ ಈಗಾಗಲೇ ಸಾಕಷ್ಟು ಸೆಲೆಬ್ರೆಟಿಗಳು ಬಂದಿದ್ದಾರೆ. ವಿಭಿನ್ನ, ವಿಶೇಷ ಅಡುಗೆಗಳನ್ನು ಮಾಡಿ ಜಾಹ್ನವಿಗೆ ತಿನ್ನಿಸಿದ್ದಾರೆ. ಈ ಬಾರಿ ನಿವೇದಿತಾ ಗೌಡ ಬಂದಿದ್ದು, ಅವರು ಕಾಶ್ಮೀರಿ ಚಿಕನ್ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟಿದ್ದಾರೆ. ಕಾಶ್ಮೀರಿ ಚಿಕನ್‌ಗೆ ಏನೆಲ್ಲಾ ಬೇಕು, ಹೇಗೆಲ್ಲಾ ಮಾಡುವುದು ಎಂಬುದನ್ನು ಹೇಳಿಕೊಟ್ಟಿದ್ದು, ಜಾಹ್ನವಿ ಕೂಡ ನಿವೇದಿತಾ ಜೊತೆಗೆ ಕೈ ಜೋಡಿಸಿದ್ದಾರೆ.

ಜಾಹ್ನವಿ ಆರೋಗ್ಯದ ಬಗ್ಗೆ ಎಲ್ಲರ ಕಾಳಜಿ

ಜಾಹ್ನವಿಯೇ ಎಲ್ಲರೂ ಮಾಡಿದ ಅಡುಗೆಯ ಟೇಸ್ಟ್ ನೋಡುವುದು. ಈಗ ನಿವೇದಿತಾ ಮಾಡಿದ ಕಾಶ್ಮೀರಿ ಚಿಕನ್ ಅನ್ನು ಜಾಹ್ನವಿಯೇ ತಿಂದು ಟೇಸ್ಟ್ ಹೇಗಿದೆ ಅಂತ ಹೇಳಬೇಕು. ಇದನ್ನು ಕಂಡ ಅಭಿಮಾನಿಗಳಿಗೆ ಶಾಕ್ ಆಗಿದೆ. ಜಾನು ಬಗ್ಗೆ ಕಾಳಜಿ ಶುರುವಾಗಿದೆ. ಯಾಕಂದ್ರೆ ಅವರಿಗೆ ನಿವೇದಿತಾ ಅಡುಗೆ ಮೇಲೆ ನಂಬಿಕೆಯೇ ಇಲ್ಲದಂತೆ ಆಗಿದೆ. ಅದಕ್ಕೆ ಜಾಹ್ನವಿಗೆ ಕಮೆಂಟ್ ಮೂಲಕವೇ ಕಾಳಜಿ ತೋರಿಸುತ್ತಿದ್ದಾರೆ. ಜಾನು ನೀನು ಓಕೆನಾ.? ಆಂಬುಲೆನ್ಸ್ ಏನಾದರೂ ಕಳುಹಿಸಬೇಕಾ? ಜಾನು ನೀನ್ಯಾಕೆ ಆ ಕಾಶ್ಮೀರಿ ಚಿಕನ್ ತಿನ್ನೋಕೆ ಹೋದೆ..? ಹುಷಾರಾಗಿದ್ದೀಯಾ ಅಲ್ವಾ? ಅಂತೆಲ್ಲಾ ಕಮೆಂಟ್ ಗಳನ್ನ ಹಾಕಿದ್ದಾರೆ.

Bigg boss fame Nivedita Gowda Makes kashmiri chicken curry in Saviruchi show

ನಿವೇದಿತಾಗೆ ಅಡುಗೆ ಕಲಿಸಿಕೊಟ್ಟಿದ್ದು ಚಂದನ್?

ನಿವೇದಿತಾ ಫುಲ್ ಮಾಡ್ರನ್ ಹುಡುಗಿ. ರೀಲ್ಸ್ ಮಾಡುತ್ತಾ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಜೊತೆಗೆ ಸಿನಿಮಾಗಾಗಿ ಎಲ್ಲಾ ತಯಾರಿ ನಡೆಸುತ್ತಿದ್ದಾರೆ. ವರ್ಕೌಟ್, ರೀಲ್ಸ್, ಬ್ಯೂಟಿ ಮೆಂಟೈನ್ ಅಂತ ಬ್ಯುಸಿ ಇರುವ ನಿವೇದಿತಾ ಇನ್ನೇಗೆ ಅಡುಗೆ ಮಾಡಬಹುದು ಎಂಬ ಅನುಮಾನ ಅವರದ್ದು. ಆದರೆ ನಿವೇದಿತಾ, ಚಂದನ್ ಅವರನ್ನು ಮದುವೆಯಾದಾಗಿನಿಂದ ಅಡುಗೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದಾರೆ. ಆಗಾಗ ಚಂದನ್‌ಗಾಗಿ ಅಡುಗೆ ಮಾಡುತ್ತಿದ್ದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಇದೀಗ ಈ ಸವಿರುಚಿ ಪ್ರೋಮೋ ನೋಡಿದವರು ಕಾಶ್ಮೀರಿ ಚಿಕನ್ ಮಾಡುವುದನ್ನ ಚಂದನ್ ಹೇಳಿಕೊಟ್ಟಿದ್ರಾ? ಅಂತ ಕೂಡ ಪ್ರಶ್ನೆ ಮಾಡಿದ್ದಾರೆ.

More from Filmibeat

English summary
Netizens funny comments for Nivedita Gowda kashmiri chicken curry recipe
Read more about: filmibeat news tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X