ಬಾರ್ಬಿ ಡಾಲ್ ರೀತಿ ಪರ್ಪಲ್ ಕಲರ್‌ ಡ್ರೆಸ್‌ನಲ್ಲಿ ಮಿಂಚಿದ ನಿವೇದಿತಾ ಗೌಡ

By ಪ್ರಿಯಾ ದೊರೆ

ಪ್ರತಿ ವೀಕೆಂಡ್‌ನಲ್ಲೂ 'ಗಿಚ್ಚಿ ಗಿಲಿ ಗಿಲಿ' ಶೋ ಮೂಲಕ ವೀಕ್ಷಕರನ್ನು ನಗಿಸುವ ನಟಿ ನಿವೇದಿತಾ ಗೌಡ, ಆಗಾಗ ಬೇರೆ ಬೇರೆ ಕಾರಣಕ್ಕೂ ಸುದ್ದಿಯಲ್ಲಿರುತ್ತಾರೆ. ಅವರು ಮಾಡುವ ಸಣ್ಣ ಪುಟ್ಟ ಎಡವಟ್ಟುಗಳಿಂದಲೇ ಫೇಮಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸುವ ನಿವೇದಿತಾ ಗೌಡ ಇದೀಗ ಮತ್ತೆ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ಹೊಸ ರಿಯಾಲಿಟಿ ಶೋಗಳಲ್ಲಿ ಮಿಂಚುತ್ತಿದ್ದಾರೆ.

ನಿವೇದಿತಾ ಗೌಡ ರಿಯಾಲಿಟಿ ಶೋಗಳ ರಾಣಿ ಎಂದರೂ ತಪ್ಪಾಗಲಾರದೇನೊ. ಸುಮಾರು 5ಕ್ಕೂ ಅಧಿಕ ರಿಯಾಲಿಟಿ ಶೋಗಳಲ್ಲಿ ನಿವೇದಿತಾ ಗೌಡ ಅವರು ಭಾಗವಹಿಸಿದ್ದಾರೆ. ಒಂದಲ್ಲ ಒಂದು ವೀಡಿಯೋಗಳನ್ನು ಮಾಡಿ ಯೂಟ್ಯೂಬ್‌ನಲ್ಲಿ ಹರಿಬಿಡುವ ನಟಿ ನಿವೇದಿತಾ ಗೌಡ ಯಾವುದಾದರೂ ಒಂದು ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತಾರೆ. ಚಂದನ್ ಮತ್ತು ನಿವೇದಿತಾ ಮದುವೆ ಆಗಿ ಎರಡು ವರ್ಷ ಆಯ್ತು. 2020ರಲ್ಲಿ ಫೆಬ್ರವರಿ 26ರಂದು ಈ ಜೋಡಿ ಕುಟುಂಬಸ್ಥರು, ಗುರುಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದರು.

Bigg Boss Fame Niveditha gowda Latest Photoshoot Goes viral

ಮೈಸೂರಿನಲ್ಲಿ ಈ ಜೋಡಿ ವಿವಾಹ ಅದ್ದೂರಿಯಾಗಿ ನೆರವೇರಿತ್ತು. ಸಾಕಷ್ಟು ಸಿನಿಮಾ ತಾರೆಯರು ಕೂಡ ಇವರ ಮದುವೆ ಸಾಕ್ಷಿ ಆಗಿದ್ದರು.‌ ಮದುವೆಯಾಗಿ ಮೂರು ವರ್ಷವಾದ ಹಿನ್ನೆಲೆ ಇತ್ತೀಚೆಗಷ್ಟೇ ನಿವೇದಿತಾ ತಾಯಿ ಆಗುತ್ತಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ನಮ್ಮಿಂದ ಮಗುವನ್ನು ನೋಡಿಕೊಳ್ಳಲು ಸಾಧ್ಯವಿದೆ ಎಂದು ಅನಿಸಿದಾಗ ಮಾತ್ರವೇ ನಾವು ಮಗು ಮಾಡಿಕೊಳ್ಳುತ್ತೇನೆ ಎಂದು ಸ್ಪಷ್ಟನೆಯನ್ನು ಕೊಟ್ಟಿದ್ದರು.

ದಿನಚರಿ ಬಗ್ಗೆ ವೀಡಿಯೋ ಮಾಡುವ ನಿವ್ವಿ

ಇನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಮ್ಮ ದಿನಚರಿಯಿಂದ ಹಿಡಿದು ಪ್ರತಿಯೊಂದು ವಿಚಾರದ ಬಗ್ಗೆಯೂ ವೀಡಿಯೋ ಮಾಡುತ್ತಿರುತ್ತಾರೆ. ಇತ್ತೀಚೆಗೆ ಅವರ ಸಾಕು ನಾಯಿಗಳ ಬಗ್ಗೆ ಹಾಗೂ ತಾವು ಬಳಸುವ ಲಿಪ್ ಸ್ಟಿಕ್ ಬಗ್ಗೆಯೂ ವೀಡಿಯೋ ಮಾಡಿದ್ದರು. ವೀಡಿಯೋ ಮಾಡುವಾಗಿಯೇ ಅಡುಗೆ ಮನೆಗೂ ಎಂಟ್ರಿ ಕೊಟ್ಟ ನಿವೇದಿತಾ ಗೌಡ, ಬಿರಿಯಾನಿಯನ್ನೂ ಮಾಡಿದ್ದರು. ಅದರಲ್ಲೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಾಡಿದ ಬಿರಿಯಾನಿಯ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ನಿವೇದಿತಾ ರಾಜಾ ರಾಣಿ, ಬಿಗ್ ಬಾಸ್ ಸೇರಿದಂತೆ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ.

Bigg Boss Fame Niveditha gowda Latest Photoshoot Goes viral

ಕಿರುತೆರೆಯಲ್ಲಿ ಸಕತ್ ಬ್ಯುಸಿ

ನಿವೇದಿತಾ ಗೌಡಗೆ ಇನ್ಸ್ಟಾಗ್ರಾಮ್‌ನಲ್ಲಿ 1.6 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಅವರು ಪೋಸ್ಟ್ ಮಾಡುವ ಪೋಟೋ ಹಾಗೂ ವಿಡಿಯೋಗಳನ್ನು ಸಾವಿರಾರು ಮಂದಿ ಲೈಕ್ ಮಾಡುತ್ತಾರೆ. ಸಾಕಷ್ಟು ರೀಲ್ಸ್‌ ಮಾಡಿ ಅವರು ಪೋಸ್ಟ್ ಮಾಡುತ್ತಾರೆ. ಪತಿ ಚಂದನ್ ಶೆಟ್ಟಿ ಜತೆ ಜತೆ ಸಾಕಷ್ಟು ರೀಲ್ಸ್ ಮಾಡಿ ಅವರು ಹಾಕಿದ್ದಾರೆ. ಈ ಮೂಲಕವೂ ಅವರು ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ನಿವೇದಿತಾ ಏನೇ ಮಾಡಿದರೂ ಬೆನ್ನುತಟ್ಟುವ ಅಭಿಮಾನಿಗಳು ಅವರಿಗೆ ಇದ್ದಾರೆ. ಇದೀಗ ಕಿರುತೆರೆಯಲ್ಲಿ ನಿವೇದಿತಾ ಗೌಡ ಬ್ಯುಸಿಯಾಗಿದ್ದಾರೆ. ರಿಯಾಲಿಟಿ ಶೋಗಳ ಮೇಲೆ ರಿಯಾಲಿಟಿ ಶೋಗಳು ನಿವೇದಿತಾ ಅವರನ್ನು ಅರಸಿಕೊಂಡು ಬರುತ್ತಿದೆ.

ಪರ್ಪಲ್ ಡ್ರೆಸ್‌ನಲ್ಲಿ ಬಾರ್ಬಿ ಗರ್ಲ್

'ಗಿಚ್ಚಿ ಗಿಲಿ ಗಿಲಿ' ಕಾಮಿಡಿ ಶೋ ನಲ್ಲಿ ನಿವೇದಿತಾ ಗೌಡ ಅವರ ಸ್ಕಿಟ್‌ಗಳು ಪ್ರೇಕ್ಷಕರಿಗೆ ಮೆಚ್ಚುಗೆಯಾಗಿದೆ. ನಿವೇದಿತಾ ಗೌಡ ಅವರು ಪೇಪರ್ ಬಟ್ಟೆ, ಅವತಾರ್ ಡ್ರೆಸ್‌ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಬಾರ್ಬಿ ಡಾಲ್ ರೀತಿ ಆಗಾಗ ಡ್ರೆಸ್ ಮಾಡಿಸಕೊಂಡು ಫೋಟೋಶೂಟ್ ಗಳನ್ನು ಮಾಡಿಸುತ್ತಾರೆ. ಇತ್ತೀಚೆಗೆ ಪರ್ಪಲ್ ಕಲರ್ ಡ್ರೆಸ್‌ನಲ್ಲಿ ಫೋಟೋ ಶೂಟ್ ಮಾಡಿಸಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು, ಕ್ಯೂಟ್ ಗೊಂಬೆ, ಮುದ್ದು ಹುಡುಗಿ, ಚೆಂದ ಎಂದೆಲ್ಲಾ ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Bigg Boss Fame Niveditha gowda Latest Photoshoot Goes viral. actress stuns in new Look. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X