ಥೈಲ್ಯಾಂಡ್‌ನಲ್ಲಿ ನಿವೇದಿತಾ ನ್ಯೂ ಇಯರ್ ಸೆಲೆಬ್ರೇಷನ್; ಮಾಜಿ ಪತಿಯ ಸಾಂಗ್ ಹಾಡಲು ರಿಕ್ವೆಸ್ಟ್!

By ಎಸ್ ಸುಮಂತ್

ನಿವೇದಿತಾ ಗೌಡ ಈ ಮೊದಲು ಕೂಡ ಟ್ರೋಲ್ ಆಗ್ತಾ ಇದ್ರು. ಆದರೆ ಚಂದನ್ ಶೆಟ್ಟಿ ಜೊತೆಗೆ ಡಿವೋರ್ಸ್ ತೆಗೆದುಕೊಂಡ ಮೇಲೆ ಕೆಲವರು ಅವರನ್ನ ಟ್ರೋಲ್ ಮಾಡೋದಕ್ಕೆ ಅಂತಾನೆ ಸೋಷಿಯಲ್ ಮೀಡಿಯಾ ಫಾಲೋ ಮಾಡ್ತಾ ಇದಾರೆ ಅನ್ಸುತ್ತೆ. ಕುಂತ್ರು ನಿಂತ್ರು ಅವರ ಫೋಟೋ, ವಿಡಿಯೋಗಳಿಗೆ ಕಮೆಂಟ್ ಮಾಡ್ತಾ ಇರ್ತಾರೆ. ಆದರೆ ನಿವೇದಿತಾ ಗೌಡ ಇದಕ್ಕೆಲ್ಲ ಚಿಲ್ ಎಂದಿದ್ದು, ತಾವಾಯ್ತು, ತಮ್ಮ ಪಾಡಾಯ್ತು, ತಮ್ಮ ಮನರಂಜನೆ ಆಯ್ತು ಎಂಬಂತೆ ಇದ್ದಾರೆ.

2024 ಕಳೆಯೋದಕ್ಕೆ ಕೆಲವೇ ಗಂಟೆಗಳು ಬಾಕಿ ಇದಾವೆ. ಈಗಾಗಲೇ ಎಲ್ಲರೂ ಸೆಲೆಬ್ರೇಷನ್ ಮೂಡಿನಲ್ಲಿದ್ದಾರೆ. ಕೆಲವೊಂದಿಷ್ಟು ಮಂದಿ ಬೆಂಗಳೂರಿನಲ್ಲಿಯೇ ಸೆಲೆಬ್ರೇಷನ್ ಮಾಡಿದ್ರೆ, ಇನ್ನು ಹಲವರು ವಿದೇಶಗಳಲ್ಲಿ ಸೆಲೆಬ್ರೇಟ್ ಮಾಡುವುದಕ್ಕೆ ಪ್ಲ್ಯಾನ್ ಮಾಡಿರುತ್ತಾರೆ. ಅದೇ ರೀತಿ ನಿವೇದಿತಾ ಗೌಡ ಕೂಡ ಥೈಲ್ಯಾಂಡ್‌ನಲ್ಲಿ ಮಸ್ತ್ ಮಜಾ ಮಾಡ್ತಾ ಇದಾರೆ.

Bigg Boss fame Niveditha Gowda welcomes the New Year in Thailand

ಥೈಲ್ಯಾಂಡ್ ಪ್ರವಾಸದಲ್ಲಿ ನಿವ್ವಿ

ನಿವೇದಿತಾ ಗೌಡ ತಮ್ಮ ಲೈಫ್ ಅದ್ಭುತವಾಗಿ ಲೀಡ್ ಮಾಡ್ತಾ ಇದಾರೆ. ಈ ಮೊದಲೆಲ್ಲಾ ಕಿರುತೆರೆಯಲ್ಲಿ ಮಿಂಚ್ತಾ ಇದ್ರು. ರಿಯಾಲಿಟಿ ಶೋಗಳಲ್ಲಿ ಮನರಂಜನೆ ನೀಡ್ತಾ ಇದ್ರು. ಆದರೆ ಈಗ ಸ್ವಲ್ಪ ಬ್ರೇಕ್ ತೆಗೆದುಕೊಂಡಿದ್ದು, ಸ್ನೇಹಿತೆಯ ಜೊತೆ ಸೇರಿ ಟ್ರಿಪ್ ಎಂಜಾಯ್ ಮಾಡ್ತಾ ಇದಾರೆ. ಕಳೆದ ಒಂದು ವಾರದಿಂದ ಥೈಲ್ಯಾಂಡ್‌ನಲ್ಲಿಯೇ ಬೀಡು ಬಿಟ್ಟಿದ್ದಾರೆ.

ಥೈಲ್ಯಾಂಡ್‌ನಲ್ಲಿ ಸೆಲೆಬ್ರೇಷನ್

ಎಲ್ಲರಿಗೂ ನ್ಯೂ ಇಯರ್ ಸೆಲೆಬ್ರೇಷನ್ ಕ್ರೇಜ್ ಇರುತ್ತೆ. ಹಾಗೇ ನಿವೇದಿತಾಗೆ ಕೂಡ ಆ ಕ್ರೇಜ್ ಇದ್ದು, ಥೈಲ್ಯಾಂಡ್‌ನಲ್ಲಿ ಎಂಜಾಯ್ ಮಾಡ್ತಿದ್ದಾರೆ. ಕ್ರಿಸ್ಮಸ್ ಹಬ್ಬವನ್ನು ಅಲ್ಲೇ ಸೆಲೆಬ್ರೇಟ್ ಮಾಡಿರುವ ನಿವಿ ನ್ಯೂ ಇಯರ್‌ಗೂ ಅಲ್ಲಿಯೇ ಕ್ಲಾಪ್ ಮಾಡಲಿದ್ದಾರೆ. ಬೀಚ್‌ನಲ್ಲೆಲ್ಲಾ ಓಡಾಟ, ಬೋಟ್‌ನಲ್ಲಿ ಸುತ್ತಾಟ, ಹಾಟ್ ಫೋಟೋ ಪೋಸ್ ಹೀಗೆ ಎಲ್ಲಾ ಅಪ್ಡೇಟ್‌ ಕೊಡ್ತಾ ಇದ್ದಾರೆ. ಆದರೆ ನಿವೇದಿತಾ ಒಂದೇ ಒಂದು ಪೋಸ್ಟ್ ಹಾಕಿದ್ರು ತಕ್ಷಣವೇ ಕಮೆಂಟ್‌ಗಳ ಸುರಿಮಳೆಯೇ ಸುರಿಯುತ್ತದೆ.

ಇಂಗ್ಲಿಷ್ ಹಾಡಿಗೆ ಧ್ವನಿಯಾದ ನಿವೇದಿತಾ

ನಿವೇದಿತಾ ಗೌಡ ನೆಗೆಟಿವ್‌ಗಳಿಗೆ ತಲೆ ಕೆಡಿಸಿಕೊಳ್ಳದೆ ಪಾಸಿಟಿವ್ ಆಗಿ ಯೋಚನೆ ಮಾಡುತ್ತಾ, ಹಾಡುತ್ತಾ, ಕುಣಿಯುತ್ತಾ, ತಮಗೆ ಅಟ್ರಾಕ್ಟ್ ಆದ ಬಟ್ಟೆಗಳನ್ನೇ ಹಾಕುತ್ತಾ ಖುಷ್ ಖುಷಿಯಾಗಿದ್ದಾರೆ. ಥೈಲ್ಯಾಂಡ್‌ನಲ್ಲೂ ಅಷ್ಟೇ. ಸಿಂಗಿಂಗ್ ಪ್ರೋಗ್ರಾಂಗೆ ಹೋಗಿದ್ದ ನಿವಿ, ತಾವೂ ಒಂದು ಹಾಡನ್ನ ಹಂಗೆ ಬಿಟ್ಟಿದ್ದಾರೆ. ಆದರೆ ಆ ಹಾಡು ಇಂಗ್ಲಿಷ್ ಹಾಡಾಗಿದೆ. ಸೌಂಡ್ ಬೇರೆ ಸರೀಗೆ ಕೇಳ್ತಾ ಇಲ್ಲ ಅನ್ನೋದೆ ಅಭಿಮಾನಿಗಳ ಬೇಸರವಾಗಿದೆ.

ಕಾಟನ್ ಕ್ಯಾಂಡಿ ಹಾಡಿಗೆ ರಿಕ್ವೆಸ್ಟ್

ಇತ್ತೀಚೆಗಷ್ಟೇ ಒಳ್ಳೆ ಪಾರ್ಟಿ ಸಾಂಗ್ ಒಂದನ್ನ ಚಂದನ್ ಶೆಟ್ಟಿ ರಿಲೀಸ್ ಮಾಡಿದ್ದಾರೆ. 'ಕಾಟನ್ ಕ್ಯಾಂಡಿ' ರ್ಯಾಪ್ ಸಾಂಗ್. ನಿವೇದಿತಾ ಅಲ್ಲಿ ನಿಂತು ಥೈಲ್ಯಾಂಡ್‌ನಲ್ಲಿ ಹಾಡಿದ್ದೆ ತಡ, ಎಲ್ಲರಿಂದ ಡಿಮ್ಯಾಂಡ್ ಬಂದಿದೆ. ಕಾಟನ್ ಕ್ಯಾಂಡಿ ಹಾಡನ್ನು ಒಮ್ಮೆ ಹಾಡಿ ಮೇಡಂ ಎಂದಿದ್ದಾರೆ. ಇನ್ನು ಹಲವರು ಕನ್ನಡದ ಹಾಡನ್ನ ಹಾಡಿ ಮೇಡಂ ಎಂದಿದ್ದಾರೆ. ನಿವೇದಿತಾ ಹಾಗೂ ಚಂದನ್ ಒಬ್ಬರಿಗೊಬ್ಬರು ಗೌರವಯುತವಾಗಿಯೇ ದೂರಾಗಿದ್ದಾರೆ. ಇಬ್ಬರು ಒಂದೇ ಇಂಡಸ್ಟ್ರಿಯಲ್ಲಿಯೇ ಇದ್ದಾರೆ. ಹೀಗಾಗಿ ಹಾಡು ಹಾಡುದ್ರು ಹಾಡಬಹುದು.

More from Filmibeat

English summary
Here is the details about Nivedita Gowda celebrating New Year in Thailand
Read more about: tv sumanth niveditha gowda
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X