ಬಿಗ್ ಬಾಸ್‌ ಮನೆಯಲ್ಲಿ ಅರಳಿದ ಪ್ರೀತಿ, ಮದುವೆಯಾಗಲು ರೆಡಿಯಾದ ಖ್ಯಾತ ಜೋಡಿ...!

ಪ್ರೀತಿಯೇ ಸರ್ವಸ್ವವಲ್ಲ. ಆದರೆ ಬದುಕಿನ ಈ ಬಹುಮುಖ್ಯ ಅಧ್ಯಾಯವನ್ನು ಅಷ್ಟೇ ಜತನದಿಂದ, ಅದಕ್ಕಿರುವ ಆಳ- ಅರ್ಥವನ್ನೊಮ್ಮೆ ಮನಗಂಡ, ಆಲೋಚಿಸಿ, ಅಭ್ಯಸಿಸಿ ಆಯ್ದುಕೊಳ್ಳುವ ಪ್ರವೃತ್ತಿ ಪ್ರೀತಿಗೆ ಹೊಸ ಅರ್ಥವನ್ನು ತುಂಬಿದೆ. ಅದು ಕೇವಲ ಭಾವೋದ್ವೇಗದ ಭ್ರಮಾಲೋಕವಾಗಿ ಉಳಿದಿಲ್ಲ. ವಾಸ್ತವದ ಭೂತಗನ್ನಡಿಯಲ್ಲಿಟ್ಟು ಪರೀಕ್ಷಿಸಿ, ಒಪ್ಪಿಕೊಳ್ಳುವ, ಅಪ್ಪಿಕೊಳ್ಳುವ ಜಮಾನಾ ಈಗಿನದು. ಇದಕ್ಕೆ ಪಾವನಿ ರೆಡ್ಡಿ ಸದ್ಯದ ಉದಾಹರಣೆ.

ಹೌದು ಪಾವನಿ ರೆಡ್ಡಿ, ತೆಲುಗು ಕಿರುತೆರೆ ಮತ್ತು ಬೆಳ್ಳಿತೆರೆಯ ಪ್ರೇಕ್ಷಕರಿಗೆ ಚಿರಪರಿಚಿತವಾದ ಹೆಸರು. ಡಬಲ್ ಟ್ರಬಲ್, ಡ್ರೀಮ್, ಗರುಮ್, ಲಜ್ಜ, ಪ್ರೇಮಕು ರೈನ್ ಚೆಕ್, ಸೇನಾ ಪತಿ, ಮಲ್ಲಿ, ಹೀಗೆ ಹಲವು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಪಾವನಿ ತೆಲುಗು ಬಿಗ್‌ ಬಾಸ್‌ನ ಐದನೇ ಸೀಸನ್‌ನ ಸ್ಫರ್ಧಿ ಕೂಡ ಹೌದು. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಎರಡನೇ ರನ್ನರ್ ಅಪ್ ಆಗಿ ಹೊರ ಹೊಮ್ಮಿದವರು ಇವರು.

Bigg Boss fame Pavani Reddy announces her second marriage to choreographer and co-contestant Aamir

ಇಂಥಾ ಪಾವನಿ ಇದೇ ಬಿಗ್‌ ಬಾಸ್‌ ಮನೆಯಲ್ಲಿದ್ದಾಗ ನೃತ್ಯ ನಿರ್ದೇಶಕ ಆಮಿರ್ ಜೊತೆ ಪ್ರೀತಿಯಲ್ಲಿ ಬಿದ್ದಿದ್ದರು. ಬಿಗ್ ಬಾಸ್ ಇವರಿಬ್ಬರ ಪ್ರೇಮ ಕಥೆಗೆ ಸಾಕ್ಷಿಯಾಗಿತ್ತು. ಅಲ್ಲಿಂದ ಅಂದರೆ 2021ರಿಂದ ಇಲ್ಲಿಯವರೆಗೆ ಪ್ರೇಮದ ಅಲೆಯಲ್ಲಿ ತೇಲಿದ ಇಬ್ಬರು ಈಗ ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ. ಇದೇ ಏಪ್ರಿಲ್ 20ರಂದು ಹೊಸ ಬದುಕಿಗೆ ಮುನ್ನುಡಿಯನ್ನು ಬರೆಯಲಿದ್ದಾರೆ. ಮುದ್ದಾದ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ತಮ್ಮ ಮದುವೆಯ ವಿಚಾರವನ್ನು ಇನ್ಸ್ಟಾಗ್ರಾಮ್‌ ಮೂಲಕ ಪಾವನಿ ಬಹಿರಂಗಗೊಳಿಸಿದ್ದಾರೆ.

ಇನ್ನು ಬಿಗ್ ಬಾಸ್ ಮನೆಯಲ್ಲಿ ಇಬ್ಬರು ಇದ್ದಾಗ ಅನೇಕರು ಈ ಜೋಡಿಯನ್ನು ಮೆಚ್ಚಿಕೊಂಡಿದ್ದರು. ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಬ್ಬರು ಮದುವೆಯಾಗಬೇಕು ಎಂದು ಆಶಿಸಿದ್ದರು. ಈಗ ಮದುವೆಯಾಗುವ ನಿರ್ಧಾರಕ್ಕೆ ಬರುವ ಮೂಲಕ ತಮ್ಮ ಅಭಿಮಾನಿಗಳ ಆಸೆಯನ್ನು ಈಡೇರಿಸಿದ್ದಾರೆ ಇವರಿಬ್ಬರು.

ಅಂದ್ಹಾಗೇ 2013ರಲ್ಲಿ ಪಾವನಿ ರೆಡ್ಡಿ ತೆಲುಗು ಕಿರುತೆರೆಯ ನಟ ಪ್ರದೀಪ್ ಕುಮಾರ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರೇಮಿಗಳ ದಿನದಂದೇ ಪ್ರದೀಪ್ ಜೊತೆ ಸಪ್ತಪದಿ ತುಳಿದಿದ್ದರು. ಆದರೆ ಆ ನಂತರ ಅದೇನಾಯ್ತೋ ? 2017ರಲ್ಲಿ ಪ್ರದೀಪ್ ಕುಮಾರ್ ನೇಣಿಗೆ ಕೊರಳೊಡ್ಡಿದರು. ಹೈದರಾಬಾದ್‌ನ ಪುಷ್ಪಲ ಗುಡದಲ್ಲಿರುವ ತಮ್ಮ ನಿವಾಸದಲ್ಲಿ ಆತ್ಮಹತ್ಯೆಯನ್ನು ಮಾಡಿಕೊಂಡರು. ಈ ವಿಚಾರ ಆಗ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ತಮ್ಮ ಸ್ನೇಹಿತನ ಜೊತೆ ಪಾವನಿ ರೆಡ್ಡಿ ಅನೈತಿಕ ಸಂಬಂಧವನ್ನು ಹೊಂದಿರುವ ವಿಚಾರ ಗೊತ್ತಾಗಿ ಪ್ರದೀಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಹೈದರಾಬಾದ್‌ನಲ್ಲೆಡೆ ಗುಲ್ಲಾಗಿತ್ತು.ಗಂಡನ ಸಾವು, ಪೊಲೀಸರ ತನಿಖೆ, ಸಮಾಜ ನೋಡುವ ದೃಷ್ಟಿಕೋನದಿಂದ ಪಾವನಿ ಬದುಕು ಅಲ್ಲೋಲ ಕಲ್ಲೋಲವಾಗಿತ್ತು.

ಆ ನಂತರ ಆನಂದ್ ಜಾಯ್ ಜೊತೆ ಇವರ ಹೆಸರು ಥಳುಕು ಹಾಕಿಕೊಂಡಿತ್ತಾದರೂ ಇಬ್ಬರು ಹರಿದಾಡುತ್ತಿರುವ ಸುದ್ದಿ ನಿಜಾ ಅಲ್ಲ ಎಂದು ಸ್ಪಷ್ಟಪಡಿಸಿದ್ದರು. ಹೀಗೆ ವ್ಯೆಯಕ್ತಿಕ ಬದುಕಿನಲ್ಲಿ ಹಲವು ಏರಿಳಿತ ಕಂಡ ಪಾವನಿ ಆ ನಂತರ ಬಿಗ್ ಬಾಸ್ ಮನೆಯಲ್ಲಿ ಆಮಿರ್‌ಗೆ ಮನ ಸೋತರು.

ಸದ್ಯ ಇಬ್ಬರು ಮದುವೆಯಾಗು ತೀರ್ಮಾನವನ್ನು ಮಾಡಿದ್ದು ಅನೇಕರು ಇಬ್ಬರಿಗೆ ಶುಭಾಶಯಗಳನ್ನು ಹೇಳುತ್ತಿದ್ದಾರೆ. ಇನ್ನು, ಪಾವನಿ ಮತ್ತು ಆಮಿರ್ ಅವರದ್ದು ಅಂತರ ಧರ್ಮಿಯ ವಿವಾಹ. ಈ ಹಿನ್ನೆಲೆ ಕೆಲವರು ಅಪಸ್ವರ ತೆಗೆಯುತ್ತಿದ್ದು ಪಾವನಿ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ನಿಂದಿಸುತ್ತಿದ್ದಾರೆ. ನಿಮ್ಮ ದಾಂಪತ್ಯ ಹೆಚ್ಚು ದಿನ ಉಳಿಯಲ್ಲ ಎಂಬ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

More from Filmibeat

Read more about: bigg boss marriage filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X