ಮತ್ತೆ ಎಡವಟ್ಟು; ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ ದೂರು ದಾಖಲು

ಬಿಗ್‌ಬಾಸ್ ಸ್ಪರ್ಧಿಗಳ ವಿನಾಕಾರಣಕ್ಕೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಬಿಗ್‌ಬಾಸ್ ಶೋ ವೇಳೆ ಕೆಲ ದೂರುಗಳು ದಾಖಲಾಗಿದ್ದು ಗೊತ್ತೇಯಿದೆ. ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ತಪ್ಪಿಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ಜೈಲಿಗೂ ಹೋಗಿ ಬರುವಂತಾಯಿತು. ಇದೀಗ ಮೈಸೂರು ಹಳೆ ಜಿಲ್ಲಾಧಿಕಾರಿ ಕಚೇರಿ ಕಟ್ಟಡದ ಎದುರು ರೀಲ್ಸ್ ವೀಡಿಯೋ ಮಾಡಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಜತ್ ವಿರುದ್ಧ ದೂರು ದಾಖಲಾಗಿದೆ.

ರೀಲ್ಸ್ ಹುಚ್ಚಾಟಕ್ಕೆ ಸಾಕಷ್ಟು ಜನ ಕಾನೂನು ಸಂಕಷ್ಟ ಎದುರಿಸಿರುವ ಉದಾಹರಣೆಗಳಿವೆ. ರೀಲ್ಸ್ ವೈರಲ್ ಆಗಬೇಕು, ಲೈಕ್ಸ್, ವೀವ್ಸ್ ಹೆಚ್ಚು ಸಿಗಬೇಕು ಎಂದು ನಾನಾ ಸಾಹಸ ಮಾಡುತ್ತಾರೆ. ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೇ ತಪ್ಪು ಮಾಡಿ ತಗ್ಲಾಕಿಕೊಳ್ಳುತ್ತಾರೆ. 3 ದಿನಗಳ ಹಿಂದೆ ರೆಟ್ರೋ ಸ್ಟೈಲ್‌ನಲ್ಲಿ ರಜತ್ ಸ್ಪೆಷಲ್ ಫೋಟೊಶೂಟ್ ಮಾಡಿಸಿದ್ದರು. ಸೂಟು ಬೂಟು ಧರಿಸಿ ವಿಂಟೇಜ್ ಕಾರ್ ಇಳಿದು ಸನ್ ಗ್ಲಾಸ್ ಧರಿಸಿ ಖಡಕ್ ಪೋಸ್ ಕೊಟ್ಟಿದ್ದರು.

Bigg Boss Fame Rajath Faces Fresh Complaint Over Reel Shoot at Mysore Heritage Building

ಕುದುರೆ ಜೊತೆ ನಿಂತು, ಸಿಗರೇಟ್ ಹಿಡಿದು ಕ್ಯಾಮರಾ ಮುಂದೆ ನಿಂತಿದ್ದರು. ಫೋಟೊಗ್ರಫರ್ ಧನು ಫೋಟೊಗಳನ್ನು ಕ್ಲಿಕ್ಕಿಸಿದ್ದರು. ಫೋಟೊಗಳು ಹಾಗೂ ಆ ವೀಡಿಯೋ ಸಖತ್ ವೈರಲ್ ಆಗಿತ್ತು. ಆದರೆ ಇದೇ ಫೋಟೊಶೂಟ್ ಸಂಬಂಧ ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ರಜತ್ ವಿರುದ್ಧ ಮೈಸೂರು ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಎಫ್‌ಐಆರ್ ದಾಖಲಿಸುವಂತೆ ಪೊಲೀಸರಲ್ಲಿ ಆಗ್ರಹಿಸಿದ್ದಾರೆ.

"ಪಾರಂಪರಿಕ ಕಟ್ಟಡದ ಮುಂದೆ ಅನುಮತಿ ಇಲ್ಲದೇ ಬಿಗ್‌ಬಾಸ್ ಖ್ಯಾತಿಯ ರಜತ್ ವಿಡಿಯೋ ಮಾಡಿದ್ದಾರೆ. ಸಿಗರೇಟ್ ಸೇದುವ ಮೂಲಕ ತಮ್ಮ ಫಾಲೋವರ್ಸ್‌ಗೆ ಕೆಟ್ಟ ಸಂದೇಶ ನೀಡಿದ್ದಾರೆ. ಈ ಮೊದಲು ಕೂಡ ಮಚ್ಚು ಹಿಡಿದು ರೀಲ್ಸ್ ಮಾಡಿದ್ದಕ್ಕೆ ಎಫ್​ಐಅರ್ ದಾಖಲಾಗಿತ್ತು. ಇದೀಗ ಮತ್ತೆ ಅದೇ ರೀತಿ ತಪ್ಪು ಮಾಡಿದ್ದಾರೆ. ಅವರ ವಿರುದ್ದ ಕ್ರಮ ಕೈಗೊಳ್ಳಿ" ಕರ್ನಾಟಕ ಸೇನಾ ಪಡೆ ಕಾರ್ಯಕರ್ತರು ಪೊಲೀಸರಲ್ಲಿ ಮನವಿ ಮಾಡಿದ್ದಾರೆ.

ಕಳೆದ ವರ್ಷ ರಜತ್ ಹಾಗೂ ಮತ್ತೊಬ್ಬ ಬಿಗ್‌ಬಾಸ್ ಸ್ಪರ್ಧಿ ವಿನಯ್ ಗೌಡ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವೀಡಿಯೋ ವೈರಲ್ ಆಗಿ ವಿವಾದಕ್ಕೆ ಕಾರಣವಾಗಿತ್ತು. ಮಾರಕಾಸ್ತ್ರಗಳನ್ನು ಬಹಿರಂಗವಾಗಿ ಪ್ರದರ್ಶಿಸಿದ್ದಾರೆ ಎಂದು ಆರೋಪಿಸಿ ದೂರು ದಾಖಲಾಗಿತ್ತು. ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 270(ಸಾರ್ವಜನಿಕ ತೊಂದರೆ) ಮತ್ತು ಶಸ್ತ್ರಾಸ್ತ್ರ ಕಾಯ್ದೆಯ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಕಳೆದ ವರ್ಷ ಮಾರ್ಚ್ 20ರಂದು ಮಚ್ಚು ಹಿಡಿದು ರಜತ್, ವಿನಯ್ ರೀಲ್ಸ್ ಮಾಡಿದ್ದರು. ಮಾರ್ಚ್ 25ರಂದು ಇಬ್ಬರನ್ನು ಬಂಧಿಸಲಾಗಿತ್ತು. ಬಳಿಕ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು. ಹಾಗಾಗಿ ಇಬ್ಬರೂ ಪರಪ್ಪನ ಅಗ್ರಹಾರ ಜೈಲು ಸೇರುವಂತಾಗಿತ್ತು. ಬಳಿಕ ಜಾಮೀನು ಪಡೆದು ಇಬ್ಬರೂ ಬಿಡುಗಡೆ ಆಗಿದ್ದರು.

2011ರಲ್ಲಿ ಬಿಗ್‌ಬಾಸ್ ಮನೆಗೆ ರಜತ್ ಸ್ಪರ್ಧಿಯಾಗಿ ಹೋಗಿದ್ದರು. ವೈಲ್ಡ್‌ ಕಾರ್ಡ್ ಎಂಟ್ರಿಯಾಗಿ ಮನೆ ಒಳಗೆ ಪ್ರವೇಶಿಸಿದ್ದ ರಜತ್ ಸೆಕೆಂಡ್ ರನ್ನರ್ ಅಪ್ ಎನಿಸಿಕೊಂಡಿದ್ದರು. ಸೀಸನ್ 12ರಲ್ಲಿ ಕೂಡ ಬಿಗ್‌ಬಾಸ್ ಮನೆಗೆ ಅತಿಥಿಯಾಗಿ ಹೋಗಿದ್ದರು. ಉಗ್ರಂ ಮಂಜು, ಚೈತ್ರಾ ಜೊತೆ ರಜತ್ ಮನೆ ಪ್ರವೇಶಿಸಿದ್ದರು. 3 ವಾರಗಳ ಬಳಿಕ ಮನೆಯಿಂದ ಹೊರ ಬಂದಿದ್ದರು.

More from Filmibeat

Read more about: bigg boss kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X