ಟೆರೆಸ್‌ಗೆ ಬಟ್ಟೆ ಒಣ ಹಾಕಲು ಬಂದ ಹುಡುಗಿಯನ್ನೇ ಲವ್ ಮಾಡಿದ್ದ ಬಿಗ್ ಬಾಸ್ ರಜತ್!

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದಿದೆ. ಹನುಮಂತ ವಿನ್ನರ್ ಆಗಿದ್ರೆ, ತ್ರಿವಿಕ್ರಂ ಹಾಗೂ ರಜತ್ ಕಿಶನ್ ರನ್ನರ್ ಅಪ್ ಆಗಿದ್ದಾರೆ. ರಜತ್ ಮಾತುಗಳು ಬಾಲನ್ನು ಎತ್ತಿ ಗೋಡೆಗೆ ಹೊಡೆದಂತೆ ಇರುತ್ತವೆ. ಬಿಗ್ ಬಾಸ್ ಮನೆಗೆ ರಜತ್ ಬಂದದ್ದು ವೈಲ್ಡ್ ಕಾರ್ಡ್ ಮೂಲಕ. ರಜತ್ ಜೊತೆಗೆ ಶೋಭಾ ಶೆಟ್ಟಿ ಕೂಡ ಬಂದಿದ್ದರು. ಆದರೆ ಅವರು ನಿರೀಕ್ಷೆ ಮಾಡಿದಷ್ಟು ದಿನ ಮನೆಯಲ್ಲಿ ಉಳಿಯಲಿಲ್ಲ. ಅನಾರೋಗ್ಯದ ಕಾರಣಕ್ಕೆ ಹೊರಗೆ ಬಂದರು.

ರಜತ್ ಯಾವುದಕ್ಕೂ ಬಗ್ಗದೆ ಇರುವ ವ್ಯಕ್ತಿ. ಅವರು ಆಡುವ ಮಾತಿನಿಂದ ಎದುರು ಇರುವ ವ್ಯಕ್ತಿಗೆ ಹರ್ಟ್ ಆಗಬಹುದು ಎಂಬುದನ್ನು ತಲೆಗೆ ಹಾಕಿಕೊಳ್ಳುತ್ತಿರಲಿಲ್ಲ. ಸೀದಾ ಸಾದಾ ಮಾತಾಡ್ತಾ ಇದ್ರು. ರಜತ್ ವೈಫ್ ಕೂಡ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದವರು. ಇಬ್ಬರದ್ದು ಲವ್ ಮ್ಯಾರೇಜ್. ಆದರೆ ಇಬ್ಬರ ನಡುವೆ ಲವ್ ಆಗಿದ್ದೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ.

Bigg Boss Fame Rajath shares how his love story with Akshita started

ಪ್ರೀತಿಸಿ ಮದುವೆಯಾಗಿರುವ ದಂಪತಿ

ರಜತ್ ಕಿಶನ್ ಅವರನ್ನ ಬುಜ್ಜಿ ಅಂತ ಕೂಡ ಕರೆಯುತ್ತಾರೆ. ರಜತ್‌ಗೆ ಒಂದು ಮುದ್ದಾದ ಕುಟುಂಬವಿದೆ. ಪ್ರೀತಿಸಿ ಮದುವೆಯಾದ ಅಕ್ಷತಾ, ಇಬ್ಬರು ಮಕ್ಕಳು. ಸೋಷಿಯಲ್ ಮೀಡಿಯಾದಲ್ಲಿ ಅಕ್ಷತಾ ಹಾಗೂ ರಜತ್ ಇಬ್ಬರು ಆಕ್ಟೀವ್ ಆಗಿನೆ ಇರುತ್ತಾರೆ. ಫ್ಯಾಮಿಲಿ ಫೋಟೋಶೂಟ್‌ಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಾಕ್ತಾ ಇರುತ್ತಾರೆ. ಒಂದು ಗಂಡು, ಒಂದು ಹೆಣ್ಣು ಮಗು. ಇಬ್ಬರು ಕೂಡ ರಜತ್‌ಗೆ ಇನ್ನಿಲ್ಲದ ಪ್ರೀತಿ.

ಅಕ್ಷತಾ ಮೇಲೆ ಲವ್ವಾಗಿದ್ದೇಗೆ?

ತಮ್ಮ ಪ್ರೀತಿ ಬಗ್ಗೆ ಮಾತನಾಡಿರುವ ರಜತ್, ಅಕ್ಷತಾಗೂ ತನಗೂ ಲವ್ ಆಗಿದ್ದೇಗೆ ಎಂಬುದನ್ನು ತಿಳಿಸಿದ್ದಾರೆ. ಆಕ್ಚುಲಿ ಅಕ್ಷತಾ ಸಿಕ್ಕಿರುವುದು ನಿನ್ನೆ ಮೊನ್ನೆಯಲ್ಲ. ಚೈಲ್ಡ್ ವುಡ್ ಲೈಫ್‌ನಿಂದಾನೂ ಅಕ್ಷತಾ ರಜತ್ ಕ್ಲೋಸ್ ಇದಾರೆ. ಒಂದೇ ಏರಿಯಾದಲ್ಲಿದ್ದವರು. ರಜತ್ ಮನೆಯ. ಟೆರೆಸ್ ಮೇಲೆ ನಿಂತು ನೋಡಿದ್ರೆ ಅಕ್ಷತಾ ಕಾಣಿಸ್ತಾ ಇದ್ರಂತೆ. ಬಟ್ಟೆ ಒಣಗಿ ಹಾಕಲು ಬರುವಾಗ ನೋಡ್ತಾ ಇದ್ರಂತೆ ರಜತ್.

ಒಂದೇ ಕಡೆ ಟ್ಯೂಷನ್

ಆಗಿನ್ನೂ ಎಸ್ಎಸ್ಎಲ್ಸಿ ವಯಸ್ಸು. ಅಕ್ಷತಾ ಹಾಗೂ ರಜತ್ ಇಬ್ಬರೂ ಒಂದೇ ಕಡೆ ಟ್ಯೂಷನ್ ಹೋಗ್ತಾ ಇದ್ರಂತೆ. ಎದುರು ಬದುರು ನೋಡಿದಾಗಲೂ ರಜತ್‌ಗೆ ಯಾವ ಫೀಲಿಂಗ್ಸ್ ಇರಲಿಲ್ಲವಂತೆ. ಯಾಕಂದ್ರೆ ಎಸ್ಎಸ್ಎಲ್ಸಿನಲ್ಲಿ ಅಕ್ಷತಾ ನೋಡುವುದಕ್ಕೆ ಅಷ್ಟೊಂದು ಚೆನ್ನಾಗಿ ಇರಲಿಲ್ಲವಂತೆ. ಆದರೆ ಪಿಯುಸಿಗೆ ಬಂದ ಮೇಲೆ ಅಕ್ಷತಾ ದಿಢೀರನೇ ಸಖತ್ತಾಗಿ ಕಾಣಿಸಿಕೊಂಡರಂತೆ. ಇದೇ ಹುಡುಗಿ ಅಲ್ವಾ ನಮ್ಮ ಮನೆ ಹತ್ರ ಇರೋದು ಅಂತ ಬುಜ್ಜಿ ಆಶ್ಚರ್ಯ ಪಟ್ಟಿದ್ದರಂತೆ.

ಮೊದಲು ಪ್ರಪೋಸ್ ಮಾಡಿದ್ಯಾರು?

ಪಿಯುಸಿಗೆ ಬಂದ ಬಳಿಕ ರಜತ್ ಪ್ರಪೋಸ್ ಮಾಡಿದ್ದರಂತೆ. ಅಕ್ಷತಾ ತಕ್ಷಣಕ್ಕೆ ಒಪ್ಪಿಕೊಳ್ಳದೆ ಒಂದೆರಡು ದಿನ ಸಮಯ ತೆಗೆದುಕೊಂಡು ಒಪ್ಪಿದ್ದರಂತೆ. ಈ ಬಗ್ಗೆ ಒಂದು ಇಂಟರ್‌ವ್ಯೂನಲ್ಲಿ ರಜತ್ ಮಾತನಾಡಿದ್ದಾರೆ. ಸದ್ಯ ಗಂಡ ಹೆಂಡತಿ ಖುಷಿ ಖುಷಿಯಾಗಿ ಮಕ್ಕಳ ಜೊತೆಗೆ ಕಾಲ ಕಳೆಯುತ್ತಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ಬಿಸಿನೆಸ್‌ನಲ್ಲೂ ರಜತ್ ತಮ್ಮನ್ನು ತಾವೂ ತೊಡಗಿಸಿಕೊಂಡಿದ್ದಾರೆ. ಸದ್ಯ ಕಲರ್ಸ್ ಕನ್ನಡದ ರಿಯಾಲಿಟಿ ಶೋನಲ್ಲೂ ಭಾಗವಹಿಸುತ್ತಿದ್ದಾರೆ.

More from Filmibeat

English summary
Here is the details about Rajath kishan and akshatha love story;
Read more about: tv sumanth bigg boss kannada 11
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X