ಜನಮನ ಗೆದ್ದ ಸಿನಿಮಾ ಸೀಕ್ವೆಲ್‌ನಲ್ಲಿ ಹೀರೊ ಆಗಿ ರಾಕೇಶ್ ಅಡಿಗ

By ಪ್ರಿಯಾ ದೊರೆ

ನಟ ರಾಕೇಶ್‌ ಅಡಿಗ ಎಂದರೆ ಎಲ್ಲರಿಗೂ ಇಷ್ಟ. ಅದಕ್ಕೆ ಕಾರಣ ಬಿಗ್‌ ಬಾಸ್.‌ ಹೌದು ಕಳೆದ ವರ್ಷ ಪ್ರಸಾರವಾಗಿದ್ದ ಬಿಗ್‌ಬಾಸ್‌ ಶೋನಲ್ಲಿ ನಟ ರಾಕೇಶ್‌ ಅಡಿಗ ಭಾಗವಹಿಸಿದ್ದರು.

ರಾಕೇಶ್ ಅಡಿಗ ಕನ್ನಡ ಚಿತ್ರರಂಗದಲ್ಲಿ ನಟ ಮತ್ತು ಗಾಯಕರಾಗಿ ಸಕ್ರಿಯರಾಗಿದ್ದಾರೆ. 'ಜೋಶ್' ಚಿತ್ರದ ಮೂಲಕ ಚಿರಪರಿಚಿತರಾದ ರಾಕೇಶ್, ನಂತರ 'ಮನಸಾಲಜಿ', 'ಮಂದಹಾಸ' ಮುಂತಾದ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.

Bigg Boss Fame Rakesh Adiga on board for Naanu Mattu Gunda- 2

ಕೆಲ ಚಿತ್ರಗಳಲ್ಲಿ ಖಳನಾಯಕನಾಗಿಯೂ ನಟಿಸಿರುವ ರಾಕೇಶ್ 'ಕೋಟಿಗೊಂದು ಲವ್ ಸ್ಟೋರಿ' ಚಿತ್ರದಲ್ಲಿ ಹಿನ್ನಲೆ ಗಾಯಕರಾಗಿದ್ದರು. ರ್ಯಾಪ್ ಗೀತೆಗಳನ್ನು ಹಾಡಿ ಗಮನ ಸೆಳೆದಿದ್ದಾರೆ.


ಅಭಿಮಾನಿಗಳ ನೆಚ್ಚಿನ ನಟ ರಾಕೇಶ್

ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ ಭಾಗವಹಿಸಿ ಬಳಿಕ ಮುಂದುವರೆದು ಸೀಸನ್ 9ರಲ್ಲಿ ರನ್ನರ್‌ ಅಪ್‌ ಆದವರು ರಾಕೇಶ್‌ ಅಡಿಗ. ಬಿಗ್‌ ಬಾಸ್‌ ಮನೆಯಲ್ಲಿ ಕಿಚ್ಚನಿಂದ ಚಪ್ಪಾಳೆ ಪಡೆದ ರಾಕೇಶ್ ಅಭಿಮಾನಿಗಳ ಮನಸ್ಸನ್ನೂ ಗೆದ್ದಿದ್ದಾರೆ. ಶೋನಲ್ಲಿ ಅಡಿಗ ದಿ ಬೆಸ್ಟ್ ಕಂಟೆಸ್ಟೆಂಟ್ ಆಗಿದ್ದರು. ಯಾರೊಂದಿಗೂ ಜಗಳ ಮಾಡಿಕೊಳ್ಳದ, ಸದಾ ನಗುತ್ತಿರುವ ರಾಕೇಶ್ ಅಡಿಗ ಗೆಲ್ಲಬೇಕು ಎಂದು ಅಭಿಮಾನಿಗಳು ಬಯಸಿದ್ದರು. ಆದರೆ, ರಾಕೇಶ್‌ ರನ್ನರ್‌ ಅಪ್‌ ಆಗಿ ಹೊರ ನಡೆಯಬೇಕಾಯ್ತು.


ಬೇಸಿಗೆಯಲ್ಲಿ ರಿಲೀಸ್‌ ಸಾಧ್ಯತೆ

ಸಿನಿಮಾ, ಸಂಗೀತಾ ಎಂದು ತಮ್ಮ ಪಾಡಿಗೆ ತಾವಿರುವ ರಾಕೇಶ್‌ ಅಡಿಗ ಈಗ ಕನ್ನಡದ ಸಿನಿಮಾ ಒಂದಕ್ಕೆ ಮತ್ತೆ ಬಣ್ಣ ಹಚ್ಚಿದ್ದಾರೆ. ಈ ಬೇಸಿಗೆ ರಜೆ ಸಿನಿಮಾ ರಿಲೀಸ್‌ ಆಗುವುದು ಕೂಡ ಪಕ್ಕಾ ಆಗಿದೆ. ಅದು ಯಾವ ಸಿನಿಮಾ ಎಂದು ಆಲೋಚಿಸುತ್ತಿದ್ದೀರಾ.? 'ನಾನು ಮತ್ತು ಗುಂಡ- 2' ಎಂಬ ಸಿನಿಮಾದಲ್ಲಿ ರಾಕೇಶ್‌ ಅಡಿಗ ಅಭಿನಯಿಸುತ್ತಿದ್ದಾರೆ. ಈ ಚಿತ್ರ ಪುಟಾಣಿಗಳಿಗೆ ಹೆಚ್ಚು ಇಷ್ಟವಾಗಲಿದ್ದು, ಇದಕ್ಕೋಸ್ಕರವೇ ಬೇಸಿಗೆ ರಜೆಯಲ್ಲಿ ಸಿನಿಮಾವನ್ನು ರಿಲೀಸ್‌ ಮಾಡಲು ಚಿತ್ರತಂಡ ಆಲೋಚಿಸಿದೆ. ಸದ್ಯ ಇನ್ನೂ ಚಿತ್ರದ ಶೂಟಿಂಗ್‌ ಮುಂದುವರೆದಿದೆ.


ರಾಕೇಶ್ ಅಡಿಗ ನಾಯಕ

2020ರಲ್ಲಿ 'ನಾನು ಮತ್ತು ಗುಂಡ' ಸಿನಿಮಾ ಬಿಡುಗಡೆಯಾಗಿ ಎಲ್ಲರ ಮೆಚ್ಚುಗೆ ಗಳಿಸಿತ್ತು. ನಟ ಶಿವರಾಜ್ ಕೆ.ಆರ್. ಪೇಟೆ ಚಿತ್ರದ ನಾಯಕನಾಗಿ ನಟಿಸಿದ್ದು, ರಚನಾ ಇಂದೆರ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಅದೇ ಟೈಟಲ್‌ನಲ್ಲಿ ಹೊಸ ಸಿನಿಮಾ ಬರ್ತಿದೆ. ಈ ಸಿನಿಮಾವನ್ನೂ ಕೂಡ ರಘು ಹಾಸನ್ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಇದರ ನಾಯಕ ನಟನಾಗಿ ರಾಕೇಶ್ ಅಡಿಗ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ರಾಕೇಶ್ ಆಟೋ ಡ್ರೈವರ್ ಶಂಕರನ ಪುತ್ರನ ಪಾತ್ರದಲ್ಲಿ ಕಥೆಯನ್ನು ಮುಂದುವರೆಸಲಿದ್ದಾರೆ. ಈಗಾಗಲೇ ಬೆಂಗಳೂರು, ಶಿವಮೊಗ್ಗ, ತೀರ್ಥಹಳ್ಳಿ, ಶೃಂಗೇರಿಯಲ್ಲಿ ಚಿತ್ರದ ಶೂಟಿಂಗ್ ನಡೆದಿದೆ. 45 ದಿನಗಳ ಚಿತ್ರೀಕರಣ ಮುಗಿದಿದ್ದು, ಇನ್ನೊಂದು ವಾರದ ಶೂಟಿಂಗ್ ಊಟಿಯಲ್ಲಿ ನಡೆಯಲಿದೆಯಂತೆ.

Bigg Boss Fame Rakesh Adiga on board for Naanu Mattu Gunda- 2
ಐದು ಭಾಷೆಗಳಲ್ಲಿ ಸಿನಿಮಾ ರಿಲೀಸ್

ಈ ಚಿತ್ರದಲ್ಲಿ ರಾಕೇಶ್ ಅವರೊಂದಿಗೆ ಅವಿನಾಶ್ ಮುಖ್ಯ ಭೂಮಿಕೆಯಲ್ಲಿಲಿದ್ದಾರೆ. ನಾಯಕಿ ಬಗ್ಗೆ ಇನ್ನೂ ಯಾವುದೇ ಮಾಹಿತಿಯನ್ನು ಚಿತ್ರತಂಡ ನೀಡಿಲ್ಲ. ಇದರಲ್ಲಿ ಪ್ರಮುಖವಾಗಿ ಸಿಂಬ ಮತ್ತು ಬಂಟಿ ಎಂಬ ಲ್ಯಾಬ್ರಡಾರ್ ಶ್ವಾನಗಳು ಕಾಣಿಸಿಕೊಳ್ಳಲಿವೆ. ಮೊದಲ ಚಿತ್ರ ತೆಲುಗು ಹಾಗೂ ಹಿಂದಿಯಲ್ಲಿ ಡಬ್ ಆಗಿ ರಿಲೀಸ್ ಆಗಿತ್ತು. ಈ ಬಾರಿ ಮೂರು ಪ್ಲಸ್ ಎರಡು ಅಂದರೆ, ಮಲಯಾಳಂ ಹಾಗೂ ತಮಿಳಿನಲ್ಲೂ ಬಿಡುಗಡೆ ಮಾಡಲು ಚಿತ್ರ ತಂಡ ಯೋಜನೆ ರೂಪಿಸಿದೆ.

More from Filmibeat

English summary
actor Rakesh adiga debute with naanu matthu gunda- 2 film
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X