ಮಾನಸಾ ಜೊತೆ ಸಪ್ತಪದಿ ತುಳಿದ ಬಿಗ್ ಬಾಸ್ ರಂಜಿತ್, ಮುನಿಸು ಮರೆತು ಮದುವೆಗೆ ಹಾಜರಾದ ಲಾಯರ್ ಜಗದೀಶ್..!
ಬಿಗ್ ಬಾಸ್ ಮೂಲಕ ಅನೇಕರು ಬೆಳಕಿಗೆ ಬಂದಿದ್ದಾರೆ. ಆ ನಂತರ ತಮ್ಮಲ್ಲಿನ ಪ್ರತಿಭೆಯಿಂದ ಬೆಳೆದಿದ್ದಾರೆ. ಕೆಲವರು ಕಿರುತೆರೆಯಲ್ಲಿ .. ಇನ್ನು ಕೆಲವರು ಚಿತ್ರರಂಗದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಮಿಂಚಿದ್ದಾರೆ. ಇನ್ನು ಕೆಲವರಿಗೆ ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಕಂಕಣ ಭಾಗ್ಯ ಕೂಡಿ ಬಂದಿದೆ. ಇದಕ್ಕೆ ರಂಜಿತ್ ಸದ್ಯದ ಉದಾಹರಣೆ. ಹೌದು, ರಂಜಿತ್.. ಬಿಗ್ ಬಾಸ್ 11ರ ಸ್ಫರ್ಧಿ.
ಬಿಗ್ ಬಾಸ್‌ನಲ್ಲಿ ಪ್ರೇಕ್ಷಕರ ತೀರ್ಪಿಂದ ಹೊರ ಬರದೇ ಲಾಯರ್ ಜಗದೀಶ್ ಜೊತೆ ವಾದ ಮಾಡಿಕೊಂಡು ಹೊರ ಬಂದ ರಂಜಿತ್ ಮನೆಯಲ್ಲಿ ಕೆಲ ದಿನಗಳಿದ್ದರೂ ಕೂಡ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಇಂಥಾ ರಂಜಿತ್ ಇಂದು ತಮ್ಮ ಬಹುಕಾಲದ ಗೆಳತಿ ಮಾನಸಾ ಅವರ ಜೊತೆ ಸಪ್ತ ಪದಿ ತುಳಿದಿದ್ದಾರೆ. ಹೊಸ ಬದುಕಿಗೆ ಮುನ್ನುಡಿ ಬರೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿನ ವೈರತ್ವವನ್ನು ಮರೆತು, ಮೊನ್ನೆ ಮೊನ್ನೆಯಷ್ಟೇ ಜೈಲಿಂದ ಹೊರ ಬಂದ ಲಾಯರ್ ಜಗದೀಶ್ ರಂಜಿತ್ ಮತ್ತು ಮಾನಸಾ ಮದುವೆಗೆ ಸಾಕ್ಷಿಯಾಗಿದ್ದು ನವಜೋಡಿಗೆ ಶುಭ ಕೋರಿದ್ದು ವಿಶೇಷ.
ಕೇವಲ ಲಾಯರ್ ಜಗದೀಶ್ ಮಾತ್ರವಲ್ಲ ತುಕಾಲಿ ಸಂತೋಷ್, ಅವರ ಪತ್ನಿ ಮಾನಸಾ, ಗೋಲ್ಡ್ ಸುರೇಶ್, ಅನುಷಾ ರೈ, ಯುಮುನಾ ಶ್ರೀನಿಧಿ ಹೀಗೆ ಹಲವು ಬಿಗ್ ಬಾಸ್ ಸ್ಫರ್ಧಿಗಳು ರಂಜಿತ್ ಮತ್ತು ಮಾನಸಾ ಮದುವೆಗೆ ಇಂದು ಆಗಮಿಸಿದ್ದಾರೆ. ಶುಭ ಕೋರಿದ್ದಾರೆ.

ಅಂದ್ಹಾಗೇ ರಂಜಿತ್ ಅವರ ಕೈ ಹಿಡಿದಿರುವ ಮಾನಸಾ ವೃತ್ತಿಯಲ್ಲಿ ಫ್ಯಾಶನ್ ಡಿಸೈನರ್. ಇಬ್ಬರದ್ದು ಅರೆಂಜ್ ಅಲ್ಲ ಬದಲಿಗೆ ಲವ್ ಮ್ಯಾರೇಜ್. ಕೆಲ ದಿನಗಳ ಹಿಂದೆ ಇಬ್ಬರ ನಿಶ್ಚಿತಾರ್ಥ ಸಮಾರಂಭ ನೆರವೇರಿತ್ತು. ಈ ಸಮಯದಲ್ಲಿ ತಮ್ಮ ಲವ್ ಸ್ಟೋರಿಯನ್ನು ಮಾನಸಾ ಮಾಧ್ಯಮದವರ ಜೊತೆ ಹಂಚಿಕೊಂಡಿದ್ದರು.
ಈ ಕುರಿತು ಅವತ್ತು ಮಾತನಾಡಿದ್ದ ಮಾನಸಾ ಗೌಡ ನನ್ನದು ಮತ್ತು ರಂಜಿತ್ ಅವರದ್ದು ಕೆಲವು ವರ್ಷಗಳ ಸ್ನೇಹ ಎಂದು ಹೇಳಿದ್ದರು. ನಿಧಾನಕ್ಕೆ ರಂಜಿತ್ ನನಗೆ ಇಷ್ಟವಾಗಲು ಶುರುವಾದರು ಎಂದಿದ್ದರು. ಆರಂಭದಲ್ಲಿ ನಾವು ಒಳ್ಳೆಯ ಸ್ನೇಹಿತರಾಗಿದ್ದೇವು ರಂಜಿತ್ ನನ್ನ ಫ್ಯಾಶನ್ ಸ್ಟುಡಿಯೋಗೆ ಬರುತ್ತಿದ್ದರು ಎಂದಿದ್ದ ಮಾನಸಾ ಹೀಗೆ ಅವರು ಬಂದಾಗೆಲ್ಲ ನಾವು ಹರಟೆ ಹೊಡೆಯುತ್ತಾ ಕುರುತ್ತಿದ್ದೇವು ಎಂದು ಹೇಳಿದ್ದರು.
ತಮ್ಮ ಬದುಕಿನ ಸಂಗಾತಿಯ ಕುರಿತು ರಂಜಿತ್ ಮಾತನಾಡುವಾಗ ಹಲವು ಬಾರಿ ಅವರು ಹೇಳುವ ಎಲ್ಲಾ ಗುಣಲಕ್ಷಣಗಳು ನನ್ನನ್ನೇ ಹೋಲುವಂತಿರುತ್ತಿತ್ತು ಎಂದು ಮಾನಸಾ ಹೇಳಿದ್ದರು.
ಇನ್ನು ಹೀಗೆ ಒಂದು ದಿನ ಮಾತನಾಡುತ್ತಾ ಕುಳಿತ ಸಮಯದಲ್ಲಿ ರಂಜಿತ್ ಗೋಧೂಳಿ ಲಗ್ನಕ್ಕೆ ಕಾಯುತ್ತಿದ್ದರು. ಯಾಕೆ ಎಂದು ಕೇಳಿದಾಗ ಗೋಧೂಳಿ ಲಗ್ನದಲ್ಲಿ ತುಂಬಾನೇ ಮುಖ್ಯವಾದ ಕೆಲಸ ಮಾಡುವುದಿದೆ ಎಂದಷ್ಟೇ ಹೇಳಿದ್ದರು ಎಂದು ನೆನಪು ಮಾಡಿಕೊಂಡಿದ್ದ ಮಾನಸಾ ಆ ನಂತರ ಸರಿಯಾದ ಸಮಯ ನೋಡಿ ಗೋಧೂಳಿ ಲಗ್ನದಲ್ಲಿ ನನಗೆ ರಂಜಿತ್ ಪ್ರಪೋಸ್ ಮಾಡಿದರು ಎಂದು ಹೇಳಿದ್ದರು. ನಾಚಿ ನೀರಾಗಿದ್ದರು.
ರಂಜಿತ್ ಪ್ರಪೋಸ್ ಮಾಡಿದ ತಕ್ಷಣ ನನಗಂತೂ ಬಹಳ ಶಾಕ್ ಆಗಿತ್ತು, ಹೀಗಾಗಿ ನಾನು ಆ ಕ್ಷಣಕ್ಕೆ ಏನೂ ಉತ್ತರಿಸಲಿಲ್ಲ ಎಂದು ಹೇಳಿದ್ದ ಮಾನಸಾ ಒಂದು ವಾರದ ನಂತರ ಮತ್ತೆ ಅವರು ಆ ಪ್ರಶ್ನೆ ನನ್ನ ಮುಂದೆ ಇಟ್ಟಾಗ ನನಗೂ ಇಷ್ಟವಿದೆ ಎಂದು ಹೇಳಿದ್ದೆ ಎಂದು ಹೇಳಿದ್ದರು ಮಾನಸ ಗೌಡ.


Click it and Unblock the Notifications











