Saanya Iyer: ಫಿಶ್ ಕಟ್ ಗೌನ್‌ನಲ್ಲಿ ಸಾನ್ಯ ಅಯ್ಯರ್ ಫುಲ್ ಮಿಂಚಿಂಗ್
ಬಿಗ್‌ಬಾಸ್ ಖ್ಯಾತಿಯ ಸಾನ್ಯ ಅಯ್ಯರ್ ಇದೀಗ ಸ್ಯಾಂಡಲ್‌ವುಡ್ ಎಂಟ್ರಿಗೆ ಸಜ್ಜಾಗಿದ್ದಾರೆ. ಆಕೆಯ ಮೊದಲ ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಆಕ್ವೀಟ್ ಆಗಿರುವ ಚೆಲುವೆ ಆಗ್ಗಿಂದಾಗ್ಗೆ ಫೋಟೊಶೂಟ್ ಮಾಡಿಸಿ ಶೇರ್ ಮಾಡುತ್ತಿರುತ್ತಾರೆ.
'ಗೌರಿ' ಎನ್ನುವ ಚಿತ್ರದಲ್ಲಿ ಸಾನ್ಯ ನಟಿಸುತ್ತಿದ್ದಾರೆ. ಇಂದ್ರಜಿತ್ ಲಂಕೇಶ್ ಪುತ್ರ ಸರ್ಮಜಿತ್ ಈ ಸಿನಿಮಾ ಮೂಲಕ ಹೀರೊ ಆಗಿ ಎಂಟ್ರಿ ಕೊಡುತ್ತಿದ್ದಾರೆ. ಸಾನ್ಯಾಗೆ ತಾಯಿಯ ಫುಲ್ ಸಪೋರ್ಟ್ ಇದ್ದು ಆಕೆಗೆ ಆನೆ ಬಲ ಎಂದರೆ ತಪ್ಪಾಗದು. ಸಾನ್ಯ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಆಕೆಗೆ ಅದೃಷ್ಟ ಒಲಿದು ಬಂದಿದೆ.

ಚಿಕ್ಕಂದಿನಲ್ಲೇ ನಟಿಸಲು ಆರಂಭಿಸಿದ ಸಾನ್ಯಗೆ 'ಪುಟ್ಟ ಗೌರಿ ಮದುವೆ' ಧಾರಾವಾಹಿ ಹೆಚ್ಚು ಹೆಸರು ತಂದುಕೊಟ್ಟಿತ್ತು. ಇವತ್ತಿಗೂ ಆಕೆಯನ್ನು ಜನ ಪುಟ್ಟಗೌರಿ ಎಂದೇ ಗುರ್ತಿಸುತ್ತಾರೆ. ಅದಾದ ಬಳಿಕ ಕಿರುತೆರೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡ ಸಾನ್ಯ ಅಯ್ಯರ್ ಬಿಗ್ ಬಾಸ್ ಕನ್ನಡ ಓಟಿಟಿ ಶೋನಲ್ಲಿ ಕಾಣಿಸಿಕೊಂಡರು. ಸಾನಿಯಾ ಚಿಕ್ಕ ವಯಸ್ಸಿನಿಂದಲೂ ತಾನೊಬ್ಬ ಉತ್ತಮ ನಟಿ ಆಗಬೇಕು ಎಂದು ಕನಸು ಕಂಡಾಕೆ. ಇದೀಗ ಚಿತ್ರ ರಂಗಕ್ಕೆ ನಟಿಯಾಗಿ ಪಾದಾರ್ಪಣೆ ಆಗಿದ್ದಾರೆ. ಗೌರಿ ಸಿನಿಮಾದಲ್ಲಿ ಸಾನ್ಯ ನಾಯಕಿ ನಟಿಯಾಗಿ ನಟನೆ ಮಾಡುತ್ತಿದ್ದಾರೆ.
'ಗೌರಿ' ಸಿನಿಮಾದಲ್ಲಿ ನಟನೆ
ಇದೊಂದು ಮಹಿಳಾ ಪ್ರಧಾನವಾದ ಚಿತ್ರವಾಗಿದೆ. ಸದ್ಯ ಸಾನ್ಯ ಫಿಶ್ ಕಟ್ ಗೌನ್‌ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಗೆದ್ದಿದ್ದಾರೆ. ಸ್ಟೈಲಿಶ್ ಆಗಿ ಸಾನ್ಯ ಗ್ರೀನ್ ಗೌನ್ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಫಿಶ್ ಕಟ್‌ನಂತಿರೋ ಡ್ರೆಸ್ ಧರಿಸಿ ಸಾನ್ಯ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ತಾಯಿ ಜೊತೆಗಿರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಫೋಟೊಶೂಟ್ ಫೋಟೊಗಳು ರಿವೀಲ್ ಆಗುವ ಸಾಧ್ಯತೆಯಿದೆ.

ಸಾನ್ಯ ಫೋಟೋಶೂಟ್ ವೈರಲ್
ಕೆಲ ದಿನಗಳ ಹಿಂದೆ ಬಾಲಿವುಡ್‌ನ ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಬಳಿ ಸಾನ್ಯ ಫೋಟೋ ಶೂಟ್ ಮಾಡಿಸಿದ್ದರು. ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಒಟ್ಟಿನಲ್ಲಿ ಸಾನಿಯಾ ಅಯ್ಯರ್ ಅವರ ನಾಯಕಿ ಆಗಬೇಕು ಎಂಬ ಕನಸು ನನಸಾಗಿದೆ. ಕನ್ನಡ ಮಾತ್ರವಲ್ಲದೆ ಪರಭಾಷೆಗಳಲ್ಲಿ ನಟಿಸಬೇಕು ಎಂದು ಕನಸು ಕಂಡಿದ್ದಾರೆ. ಬಾಲಿವುಡ್ ಪ್ರವೇಶಿಸುವ ಲೆಕ್ಕಾಚಾರದಲ್ಲಿದ್ದಾರೆ.
'ಗೌರಿ' ಸಿನಿಮಾ
3 ವರ್ಷಗಳ ಹಿಂದೆ ಇಂದ್ರಜಿತ್ ಲಂಕೇಶ್ 'ಶಕೀಲಾ' ಸಿನಿಮಾ ಮಾಡಿದ್ದರು. ಆ ಬಳಿಕ 'ಗೌರಿ' ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಜೆಸ್ಸಿ ಗಿಫ್ಟ್ ಹಾಗೂ ಚಂದನ್ ಶೆಟ್ಟಿ ಸಂಗೀತ ಚಿತ್ರಕ್ಕಿದೆ. ಎ. ಜೆ ಶೆಟ್ಟಿ ಛಾಯಾಗ್ರಹಣ ಹಾಗೂ ಮಾಸ್ತಿ ಮಂಜು ಮತ್ತು ಬಿ. ಮಧು ಸಂಭಾಷಣೆ ಬರೆದಿದ್ದಾರೆ. ಇಂದ್ರಜಿತಿ ಪತ್ನಿ ಅರ್ಪಿತಾ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಸಾನ್ಯ ಅಯ್ಯರ್ ಟ್ರೋಲ್
ಫೋಟೊಶೂಟ್‌ಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಸಾನ್ಯ ಇದೇ ಕಾರಣಕ್ಕೆ ಟ್ರೋಲ್ ಆಗಿರುವುದು ಇದೆ. ಡಬ್ಬೂ ರತ್ನಾನಿ ಫೋಟೊಶೂಟ್‌ನಲ್ಲಿ ಆಕೆಯ ಬೋಲ್ಡ್‌ನೆಸ್ ನೋಡಿ ಕೆಲವರು ಹುಬ್ಬೇರಿಸಿದ್ದರು. ಇನ್ನು ನಟಿಯಾಗಲು ಬೇಕಾದ ಎಲ್ಲ ತಯಾರಿ ನಡೆಸಿ ಸಾನ್ಯಾ ಚಿತ್ರರಂಗಕ್ಕೆ ಬಂದಿದ್ದಾರೆ.


Click it and Unblock the Notifications











