Anubandha: ವೇದಿಕೆ ಮೇಲೆ ಬಂದ ಸಂಗೀತ.. ಕಾಲೆಳೆದ ಅನುಪಮಾ.. ಚೆನ್ನಾಗಿ ಹಾಕ್ಕೊಟ್ರಿ ಎಂದ ತುಕಾಲಿ..

By ಎಸ್ ಸುಮಂತ್

ಬಿಗ್ ಬಾಸ್ ಸೀಸನ್ 11 ಶುರುವಾಗ್ತಾ ಇದೆ. ಆದರೂ ಬಿಗ್ ಬಾಸ್ 10ನಲ್ಲಿ ಇದ್ದಂತ ಸ್ಪರ್ಧಿಗಳ ಕ್ರೇಜ್ ಇನ್ನು ಕಡಿಮೆಯಾಗಿಲ್ಲ. ಎಲ್ಲಿಯೇ ಹೋದರು ಎಲ್ಲಿಯೇ ಬಂದರೂ ಅವರನ್ನ ಫ್ಯಾನ್ಸ್ ಅಷ್ಟೇ ಖುಷಿಯಾಗಿ ಮಾತನಾಡಿಸುತ್ತಾರೆ. ಇದೀಗ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲೂ ಬಿಗ್ ಬಾಸ್ ಸೀಸನ್ 10 ಸ್ಪರ್ಧಿಗಳು ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸಂಗೀತ ಮತ್ತು ತುಕಾಲಿಯನ್ನು ಕಂಡು ಅನುಪಮಾ ಕಾಲೆಳೆದಿದ್ದಾರೆ.

ಸಂಗೀತಾ ಅಂದ್ರೆ ಎಲ್ಲರ ಕಣ್ಣಲ್ಲೂ ಈಗಲೂ ಸಿಂಹಿಣಿಯಾಗಿಯೇ ಇದ್ದಾರೆ. ಈಗಲೂ ಅದೇ ಗತ್ತು, ಅದೇ ತಾಕತ್ತು. ಹೀಗಾಗಿಯೇ ಸಂಗೀತಾಗೆ ದಿನೇ ದಿನೇ ಫ್ಯಾನ್ಸ್ ಕ್ರೇಜ್ ಜಾಸ್ತಿಯಾಗುತ್ತಿದೆ. ಇಂದು ಕಲರ್ಸ್ ಕನ್ನಡ ವೇದಿಕೆಗೆ ಬಂದು ಫೈನಲಿ ಕಪ್ ಗೆದ್ದಿದ್ದಾರೆ. ಆ ಖುಷಿಯಲ್ಲಿಯೇ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ.

Bigg boss Fame Sangeetha Sringeri receives the colors kannada Youth Icon Award

ಯೂಥ್ ಐಕಾನ್ ಅವಾರ್ಡ್

ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ ಕಾರ್ಯಕ್ರಮದಲ್ಲಿ ಯೂಥ್ ಐಕಾನ್ ಅವಾರ್ಡ್ ಅನ್ನು ಸಂಗೀತಾ ಪಡೆದಿದ್ದಾರೆ. ವೋಟ್ ಮೂಲಕ ಜನ ಅವರನ್ನೇ ಗೆಲ್ಲಿಸಿದ್ದಾರೆ. ರವಿ ಬಸ್ರೂರು ಕಡೆಯಿಂದ ಅವಾರ್ಡ್ ಪಡೆದ ಸಂಗೀತ,'ಈ ಅವಾರ್ಡ್ ಪಡೆದದ್ದು ತುಂಬಾ ಖುಷಿ ಆಗ್ತಾ ಇದೆ. ಕೊನೆಗೂ ಒಂದು ಕಪ್ ಹಿಡಿದಿದ್ದೀನಿ. ನನ್ನ ಸೋಲಲ್ಲಿ ಸುಮಾರು ಜನ ಅತ್ತಿದ್ದಾರೆ. ನೀವೂ ನಡೀರಿ ನಾವಿದ್ದೀವಿ ಅಂದಿದ್ದಾರೆ. ಯಾರಾದ್ರೂ ಏನಾದ್ರೂ ಅಂದ್ರೆ ನೀವೂ ಮುನ್ನಡೆಯಿರಿ ಅಂತ ಧೈರ್ಯ ತುಂಬಿದ್ದಾರೆ. ಈ ಅವಾರ್ಡ್ ನನ್ನ ಕುಟುಂಬದವರಿಗಾಗಿ.. ಈ ಸಲ ಕಪ್ ನಮ್ಮದೆ' ಎಂದಿದ್ದಾರೆ.

ಕಲರ್ಸ್ ಕನ್ನಡದಿಂದ ಸ್ಪೆಷಲ್ ಗಿಫ್ಟ್

ಎಲ್ಲರಿಗೂ ನೆನಪಿದ್ದೆ ಇರುತ್ತೆ. ಬಿಗ್ ಬಾಸ್ ಒಳಗೆ ಸಂಗೀತಾ ಬಳೆ ಹಾಕಿಕೊಂಡು ಘರ್ಜಿಸಿದ್ದು. ಇದೀಗ ಆ ಬಳೆಗಳನ್ನ ಕಲರ್ಸ್ ಕನ್ನಡ ಗಿಫ್ಟ್ ಆಗಿ ನೀಡಿದೆ. ಈ ವೇಳೆ ಮಾತನಾಡಿದ ಸಂಗೀತ, 'ನನ್ನ ನಿಜವಾದ ಜೀವನದಲ್ಲೂ ತಪ್ಪು ಅನ್ನಿಸಿದಾಗ ನಿಂತು ಮಾತಾಡಿದ್ದೀನಿ. ಈ ಬಳೆ ಆ ಒಂದು ಮೂಮೆಂಟ್ ಗೋಸ್ಕರ ಇತ್ತು. ಈಗಲೂ ಯಾರೇ ಸಿಕ್ಕಿದರೂ ಆ ಮೂಮೆಂಟ್ ಬಗ್ಗೆ ಮಾತಾಡಿದ್ದಾರೆ. ಈ ಬಳೆ, ನಾವೂ ನಮಗೋಸ್ಕರ ನಿಲ್ಲಬೇಕು ಎಂಬ ಸಂಕೇತ' ಎಂದಿದ್ದಾರೆ.

Bigg boss Fame Sangeetha Sringeri receives the colors kannada Youth Icon Award

ತಗಲಾಕಿಕೊಂಡ್ರು ತುಕಾಲಿ ಸಂತೋಷ್

ಬಿಗ್ ಬಾಸ್‌ನಲ್ಲಿ ಸಂಗೀತಾ ಮಾತ್ರವಲ್ಲ ತುಕಾಲಿ ಸಂತು ಎಲ್ಲಾ ಹೆಣ್ಣು ಮಕ್ಕಳ ಬಗ್ಗೆಯೂ ಮಾತನಾಡಿದ್ದಾರೆ. ಇದೀಗ ಅನುಬಂಧ ಅವಾರ್ಡ್ಸ್‌ನಲ್ಲಿ ಸಂಗೀತಾ ಅವರ ಮುಂದೆ ತುಕಾಲಿ ಸಂತು ಎದುರಾಗಿದ್ದಾರೆ. ಸಂಗೀತಾ ಯೂಥ್ ಐಕಾನ್ ಅವಾರ್ಡ್ ತೆಗೆದುಕೊಂಡಿದ್ದಕ್ಕೆ ಖುಷಿ ಆಯ್ತು ಅಂತ ಡವ್ ಕಚ್ಚಿದ್ದಾರೆ.

ತುಕಾಲಿ ಸಂತು ಕಾಲೆಳೆದ ಅನುಪಮಾ

ವೇದಿಕೆ ಮೇಲೆ ಸಂಗೀತಾ ಅವಾರ್ಡ್ ತೆಗೆದುಕೊಂಡ ಮೇಲೆ ಅನುಪಮಾ ಸೀದಾ ತುಕಾಲಿ ಸಂತು ಬಳಿ ಹೋಗಿದ್ದಾರೆ. ಏನ್ರೀ ಸಂತು, ಸಂಗೀತಾ ಅವರನ್ನ ಎಷ್ಟು ಮಿಸ್ ಮಾಡಿಕೊಂಡ್ರಿ ಅಂದ್ರೆ, ತುಂಬಾ ಮಿಸ್ ಮಾಡಿಕೊಂಡೆ. ನಾನು ಅವರಿಗೆ ಮೆಸೇಜ್ ಮಾಡಿದ್ದೆ. ಅವರು ರಿಪ್ಲೇ ಮಾಡಿದ್ರು ಅಂತ ಕಾಮಿಡಿ ಮಾಡಿದ್ದಾರೆ. ಆಗ ಸಂಗೀತ ತುಕಾಲಿ ಸಂತು ಅವ್ರೆ ಮನೆಗೆ ಹೋದ ಮೇಲೆ ಫುಲ್ ಎಪಿಸೋಡ್ ನೋಡಿದೆ ಅಂತ ರಿಯಾಲಿಟಿ ನೆನಪಿಸಿದ್ದಾರೆ.

More from Filmibeat

English summary
colors kannada Award program Written Update on anubandha September 22nd episode. Here is the details about Sangeetha Sringeri who received the Youth Icon Award;
Read more about: tv filmbeat original sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X