Sanya Iyer: ಕಾಲಿವುಡ್ ನಟನ ಜೊತೆ ನಟಿ ಸಾನ್ಯಾ ಐಯ್ಯರ್; ತಮಿಳು ಸಿನಿಮಾ ಮಾಡ್ತಿದ್ದಾರ?

By ಅನಿತಾ ಬನಾರಿ

ಪುಟ್ಟಗೌರಿ ಅಲಿಯಾಸ್ ನಟಿ ಸಾನ್ಯಾ ಅಯ್ಯರ್ ಕರುನಾಡ ಕಿರುತೆರೆ ಪ್ರೇಕ್ಷಕರ ಮನ ಗೆದ್ದು ದಶಕವೇ ಸಂದಿದೆ. 'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಸಾನ್ಯಾ ಅಯ್ಯರ್ ಧಾರಾವಾಹಿ ಮುಗಿದು ವರ್ಷ ಹತ್ತು ಸಂದರೂ ಇಂದಿಗೂ ಅದೇ ಪಾತ್ರದ ಮೂಲಕ ಫೇಮಸ್ಸು! 'ಪುಟ್ಟ ಗೌರಿ ಮದುವೆ' ಧಾರಾವಾಹಿಯ ನಂತರ ನಟನೆಯಿಂದ ದೂರವಿದ್ದ ಈಕೆ ಇದೀಗ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ತಮಿಳಿನ ಸೂಪರ್ ಹಿಟ್ ನಟ ಅಜಿತ್ ಅವರೊಂದಿಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ ನಟಿ ಸಾನ್ಯಾ ಅಯ್ಯರ್. ಅಷ್ಟು ಮಾತ್ರವಲ್ಲದೇ ನಟ ಅಜಿತ್ ಅವರನ್ನು ಹೊಗಳಿದ್ದಾರೆ ನಟಿ ಸಾನ್ಯಾ ಅಯ್ಯರ್.

Bigg Boss fame Sanya Iyer likely to act in Ajith Kumar Movie

ಈ ವಿಚಾರವಾಗಿ ಅವರ ಅಭಿಮಾನಿಗಳು ಹಾಗೂ ಸೋಶಿಯಲ್ ಮೀಡಿಯಾ ಫಾಲೋವರ್ಸ್ ತಲೆ ಕೆಡಸಿಕೊಂಡಿದ್ದಾರೆ. ನಟಿ ತಮಿಳು ಸಿನಿ ರಂಗಕ್ಕೆ ಕಾಲಿಡುತ್ತಿದ್ದಾರಾ ಎಂದು ಅನುಮಾನ ಹಾಗೂ ಕುತೂಹಲ ವ್ಯಕ್ತಪಡಿಸಿದ್ದಾರೆ.

ಸದ್ಯಕ್ಕೆ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಗೌರಿ' ಎಂಬ ಸಿನಿಮಾಗೆ ನಾಯಕ ನಟಿಯಾಗಿ ನಟಿ ಸಾನ್ಯಾ ಅಯ್ಯರ್ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಬಹಳಷ್ಟು ಫೋಟೋಶೂಟ್ ಮಾಡಿಸಿಕೊಂಡು ಸುದ್ದಿಯಾಗಿದ್ದರು. ಇನ್ನು ಇಂದ್ರಜಿತ್ ಅವರ ಮಗ ಸಮರ್ಜಿತ್ ಲಂಕೇಶ್ ಈ ಸಿನಿಮಾಗೆ ನಾಯಕ ನಟನಾಗಿದ್ದು, ಅವರೂ ಕೂಡಾ ಈ ಮೂಲಕ ಅವರೂ ಸಿನಿ ರಂಗಕ್ಕೆ ಕಾಲಿಡುತ್ತಿದ್ದಾರೆ.

Bigg Boss fame Sanya Iyer likely to act in Ajith Kumar Movie

ಇತ್ತೀಚೆಗೆ ಈ ಜೋಡಿ ಸಿನಿಮಾಗಾಗಿ ಮಾಡಿಸಿದ ಫೋಟೋಶೂಟ್ ಬಹಳ ವೈರಲ್ ಆಗಿತ್ತು. 'ಗೌರಿ' ಸಿನಿಮಾದ ಕಥೆ ಏನು? ಎಂಬಿತ್ಯಾದಿ ಕೂತೂಹಲಗಳು ಜನರಲ್ಲಿರುವ ಸಂದರ್ಭದಲ್ಲೇ ನಟಿ ಸಾನ್ಯಾ ಅಯ್ಯರ್ ಅವರ ಈ ಫೋಟೋ ಮತ್ತಷ್ಟು ವೈರಲ್ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಇರುವ ನಟಿ ಸಾನ್ಯಾ ಆಗಾಗ ಫೋಟೋಶೂಟ್ ಗಳನ್ನು ಮಾಡಿಸಿ ಪೋಸ್ಟ್ ಮಾಡುತ್ತಿರುತ್ತಾರೆ. ಬಿಗ್ ಬಾಸ್ ಒಟಿಟಿ ಸೀಸನ್ 1 ರಲ್ಲಿ ಭಾಗವಹಿಸಿದ್ದ ಈಕೆ ಮುಂದೆ ಬಿಗ್ ಬಾಸ್ ಸೀಸನ್ 9 ರಲ್ಲಿ ಭಾಗವಹಿಸಿ ಈಕೆ ಬಹಳಷ್ಟು ಹೆಸರು ಮಾಡಿದ್ದರು.

More from Filmibeat

English summary
Bigg Boss fame Sanya Iyer likely to act in Ajith Kumar Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X