ಕನ್ನಡದಲ್ಲೂ ಶುರು ಇನ್‌ಸ್ಟಾ ಸಬ್‌ಸ್ಕ್ರಿಪ್ಷನ್ ಟ್ರೆಂಡ್; ಸೋನು ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡಲು ಹಣ ಕಟ್ಟಬೇಕಾ?
ಸೋಶಿಯಲ್ ಮೀಡಿಯಾದಲ್ಲಿ ವಿಚಿತ್ರ ಟ್ರೆಂಡ್ ಶುರುವಾಗಿದೆ. ಕೆಲ ನಟಿಯರು, ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ಸ್ ಬಿಂದಾಸ್ ಅವತಾರದಲ್ಲಿ ದರ್ಶನ ಕೊಟ್ಟು ನೆಟ್ಟಿಗರ ಗಮನ ಸೆಳೆಯುತ್ತಿದ್ದಾರೆ. ಇಷ್ಟು ದಿನ ವೀವ್ಸ್, ಲೈಕ್ಸ್‌ಗಾಗಿ ಹೀಗೆಲ್ಲಾ ಮಾಡ್ತಿದ್ರು. ಈಗ ಇನ್‌ಸ್ಟಾಗ್ರಾಮ್‌ನಲ್ಲಿ ಕೂಡ ಸಬ್‌ಸ್ಕ್ರಿಪ್ಷನ್ ಫೀಚರ್ ಬಂದಿದೆ. ಹಣ ಕಟ್ಟಿ ನಟಿಯರ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡುವ ಅವಕಾಶ ಸಿಗುತ್ತಿದೆ.
ಈಗಾಗಲೇ ತೆಲುಗು, ತಮಿಳು, ಹಿಂದಿ, ಮಲಯಾಳಂ ನಟಿಯರು, ಖ್ಯಾತ ಇನ್‌ಫ್ಲುಯೆನ್ಸರ್ಸ್ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಎಕ್ಸ್‌ಕ್ಲೂಸಿವ್ ಬಟನ್ ಓಪನ್ ಮಾಡಿದ್ದಾರೆ. ಕೆಲವರು ಹಣ ಕಟ್ಟಿ ಸಬ್‌ಸ್ಕ್ರಿಪ್ಷನ್ ಕೂಡ ಪಡೆದುಕೊಂಡಿದ್ದಾರೆ. ಕೆಲ ನಟಿಯರು ಇದರಿಂದ ಲಕ್ಷ ಲಕ್ಷ ಹಣ ದುಡಿಯುತ್ತಿದ್ದಾರೆ ಎನ್ನಲಾಗ್ತಿದೆ. ಬಿಗ್‌ಬಾಸ್ ಖ್ಯಾತಿಯ ಸೋನು ಶ್ರೀನಿವಾಸ್ ಗೌಡ ಕೂಡ ಈ ಟ್ರೆಂಡ್ ಫಾಲೋ ಮಾಡ್ತಿದ್ದಾರೆ.

ತಮ್ಮ ಬಿಂದಾಸ್ ಫೋಟೊ, ವೀಡಿಯೋಗಳ ಮೂಲಕ ಸೋನು ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಾರೆ. ಇದೀಗ ಸಬ್‌ಸ್ಕ್ರಿಪ್ಷನ್ ಪಡೆದವರಿಗೆ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೋಡುವ ಅವಕಾಶ ಕೂಡ ಸಿಗುತ್ತಿದೆ. ಈ ಮೂಲಕ ಕನ್ನಡದಲ್ಲಿ ಕೂಡ ಈ ಕ್ರೇಜ್ ಶುರುವಾದಂತಾಗಿದೆ. ಬಾಲಿವುಡ್ ನಟಿ ನೇಹಾ ಶರ್ಮಾ, ತಮಿಳು ನಟಿ ವೇದಿಕಾ, ತೆಲುಗು ನಿರೂಪಕಿ ವಿಷ್ಣುಪ್ರಿಯಾ ಸೇರಿ ಕೆಲವರು ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸಬ್‌ಸ್ಕ್ರಿಪ್ಷನ್ ಮಾಡಿಕೊಳ್ಳುವ ಆಯ್ಕೆ ಕೊಟ್ಟಿದ್ದಾರೆ.
ತಿಂಗಳಿಗೆ 390 ರೂ. ಪಾವತಿಸಿ ಸೋನು ಶ್ರೀನಿವಾಸ್ ಗೌಡ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆ ಚಂದಾದಾರರಾಗಬಹುದು. ಈಗಾಗಲೇ 112 ಮಂದಿ ಸಬ್‌ಸ್ಕ್ರಿಪ್ಷನ್ ಪಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ. ಇಷ್ಟೆ ಅಲ್ಲ ಸೋನು ಫ್ಯಾನ್ಸ್ ಪೇಜ್‌ಗಳಲ್ಲಿ ಕೂಡ ಸಬ್‌ಸ್ಕ್ರಿಪ್ಷನ್ ಆಯ್ಕೆ ಇರುವುದು ವಿಶೇಷ. ನೇಹಾ ಶರ್ಮಾ, ವಿಷ್ಣು ಪ್ರಿಯಾ, ವೇದಿಕಾ ಎಲ್ಲರೂ ಮೈಮಾಟ ಪ್ರದರ್ಶಿಸುತ್ತಾ ಇನ್‌ಸ್ಟಾಗ್ರಾಮ್‌ನಲ್ಲಿ ಕಾಣಿಸಿಕೊಳ್ಳುವುದೇ ಹೆಚ್ಚು. ಎಕ್ಸ್‌ಕ್ಲೂಸಿವ್ ಕಂಟೆಂಟ್ ಕೂಡ ಇದೇ ರೀತಿ ಇರುವಂತೆ ಕಾಣ್ತಿದೆ.

ಮೆಟಾ ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಬ್‌ಸ್ಕ್ರಿಪ್ಷನ್ ಫೀಚರ್ ಪರಿಚಯಿಸಿದೆ ಎನ್ನಲಾಗ್ತಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಬದಲಾವಣೆಗೆ ಕಾರಣವಾಗುವಂತೆ ಕಾಣುತ್ತಿದೆ. ಆದರೆ ಇದನ್ನು ಒಳ್ಳೆ ರೀತಿಯಲ್ಲಿ ಬಳಸಿಕೊಳ್ಳುತ್ತಿಲ್ಲ. ಬದಲಿಗೆ ಬೆಡಗಿಯರು ಮೈಮಾಟ ಪ್ರದರ್ಶಿಸಿ ಪಡ್ಡೆ ಹುಡುಗರನ್ನು ಸೆಳೆಯುವ ಸ್ಕ್ಯಾಮ್ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಕೇರಳ ಮೂಲದ ಇನ್‌ಫ್ಲುಯೆನ್ಸರ್ ಅಶ್ವನಿ ಎ ಇನ್‌ಸ್ಟಾಗ್ರಾಮ್(ಪರ್ಪಲ್ ಹಾಲ್ಸಿಯಾನ್) ಖಾತೆಯನ್ನು 25 ಸಾವಿರಕ್ಕೂ ಅಧಿಕ ಜನ ಸಬ್‌ಸ್ಕ್ರಿಪ್ಷನ್ ಪಡೆದಿದ್ದಾರೆ. ಒಬ್ಬರಿಗೆ 390 ರೂಪಾಯಿ ಅಂದರೆ ತಿಂಗಳಿಗೆ ಎಷ್ಟು ಆದಾಯ ಆಕೆಗೆ ಬರ್ತಿದೆ ಎನ್ನುವ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ನಡೀತಿದೆ.
ಇಷ್ಟು ದಿನ ಜನ ಓಟಿಟಿ ಪ್ಲಾಟ್‌ಫಾರ್ಮ್‌ಗಳ ಸಬ್‌ಸ್ಕ್ರಿಪ್ಷನ್ ಪಡೆಯುತ್ತಿದ್ದರು. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾಗಳು ತಿಂಗಳಿಗೆ ಓಟಿಟಿಗೆ ಬರ್ತಿವೆ. ಅದರ ಜೊತೆಗೆ ಎಕ್ಸ್‌ಕ್ಲೂಸಿವ್ ಆಗಿ ಕೆಲ ಸಿನಿಮಾಗಳು ಹಾಗೂ ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತದೆ. ಆದರೆ ಇನ್‌ಸ್ಟಾ ಸಬ್‌ಸ್ಕ್ರಿಪ್ಷನ್ ಅನ್ನುವುದು ಹೊಸ ಪ್ರಯೋಗವೇ ಸರಿ. ಮುಂದೆ ಯಾರೆಲ್ಲಾ ಇದೇ ರೀತಿ ಸಬ್‌ಸ್ಕ್ರಿಪ್ಷನ್ ಬಟನ್ ಆನ್ ಮಾಡಿ ಆದಾಯ ಗಳಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಅಷ್ಟು ಹಣ ಖಾತೆ ಹೊಂದಿರುವವರಿಗೆ ಹೋಗುತ್ತಾ, ಇನ್‌ಸ್ಟಾಗೂ ಪಾಲು ಸಿಗುತ್ತಾ ಎನ್ನುವ ಬಗ್ಗೆ ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











