Trimokshi ಲವ್ ಸ್ಟೋರಿಗೆ ಸುದೀಪ್-ರಮ್ಯಾ ಹೋಲಿಕೆ; ಗಳಗಳನೆ ಕಣ್ಣೀರಿಟ್ಟ ಫ್ಯಾನ್ಸ್!

By ಎಸ್ ಸುಮಂತ್

ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದು ಎಲ್ಲಾ ಸ್ಪರ್ಧಿಗಳು ಅವರವರ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಆದರೂ ಹೊರಗಡೆ ಕ್ರೇಜ್ ಮಾತ್ರ ಕಡಿಮೆಯಾಗಿಲ್ಲ. ಸ್ಪರ್ಧಿಗಳು ಎಲ್ಲೇ ಕಂಡರೂ ಸಾರ್ವಜನಿಕರು ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಓಡೋಡಿ ಬರುತ್ತಾರೆ. ಹಾಗೇ ಟ್ರೋಲರ್ಸ್‌ಗೂ ಅಷ್ಟೇ ಬಿಗ್ ಬಾಸ್ ಮನೆಯೊಳಗಿನ ಲವ್ ಸ್ಟೋರಿಗಳು ಇನ್ನು ಫ್ರೆಶ್ ಕಂಟೆಂಟ್‌ಗಳೇ ಆಗಿವೆ.

ಬಿಗ್ ಬಾಸ್ ಮನೆಯಲ್ಲಿ ಗೆಳೆಯ, ಗೆಳತಿಯರಾಗುವುದು, ಲವ್‌ಗಳು ಹುಟ್ಟಿಕೊಳ್ಳುವುದು, ಬ್ರೇಕಪ್ ಆಗುವುದೇನು ಹೊಸದಲ್ಲ. ಕೆಲ ಸ್ಪರ್ಧಿಗಳು ಅದನ್ನ ಉಳಿದುಕೊಳ್ಳಬೇಕು ಅಂತಾನು ಮಾಡ್ತಾರೆ, ಇನ್ನು ಕೆಲವೊಂದಿಷ್ಟು ಮಂದಿ ಪ್ರಾಮಾಣಿಕವಾಗಿಯೂ ಲವ್ ಮಾಡ್ತಾರೆ. ಇಷ್ಟು ಸೀಸನ್‌ನಲ್ಲೂ ಲವ್ ಸ್ಟೋರಿಗಳು ರಿಯಲ್ ಲೈಫ್‌ನಲ್ಲಿ ಉಳಿದಿರೋದು ತುಂಬಾ ಕಡಿಮೆ. ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ತ್ರಿವ್ಯಾ, ತ್ರಿಮೋಕ್ಷಿಯ ಹೊಸ ಟ್ರೋಲ್ ಬಂದಿದೆ ನೋಡಿ. ಕಣ್ಣೀರಾಕ್ಬೇಡಿ ನಕ್ಕು ಸುಮ್ಮನಾಗಿ.

Bigg Boss Fame Trivikram and Mokshita love story memes Goes viral

ಟ್ರೋಲ್‌ಗಳನ್ನ ನೋಡಿದ್ದಾರೆ

ತ್ರಿವಿಕ್ರಂ ಕೊನೆವರೆಗೂ ಬಿಗ್ ಬಾಸ್‌ನಲ್ಲಿದ್ದವರು. ವಿನ್ನರ್ ಹಾಗೇ ಆಗ್ತೀನಿ ಎಂದುಕೊಂಡಿದ್ದ ಹೀರೋಗೆ ಒಲಿದಿದ್ದು ರನ್ನರ್ ಅಪ್ ಸ್ಥಾನ. ಅಷ್ಟಕ್ಕೇ ಖುಷಿ ಪಟ್ಟು ಈಗ ಸದ್ಯ ಕ್ರಿಕೆಟ್ ಕಡೆ ಗಮನ ಕೊಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿದ್ದಾಗ ಭವ್ಯಾ ಅವರನ್ನ ಬಿಟ್ಟಿರಲಾರದಷ್ಟು ನಂಟು. ಮೋಕ್ಷಿಯನ್ನ ಮನಸ್ಸೊಳಗೆ ಆರಾಧಿಸುತ್ತಿದ್ದರು. ಆದರೆ ಬಿಗ್ ಬಾಸ್‌ನಿಂದ ಬಂದ ಮೇಲೂ ಭವ್ಯಾ ಜೊತೆಗೆ ಒಡನಾಟ ಮುಂದುವರೆದಿದೆ. ಆದರೂ ತ್ರಿವಿಕ್ರಂ ಅಭಿಮಾನಿಗಳಿಗೆ ಮಾತ್ರ ತ್ರಿಮೋಕ್ಷಿ ಮೇಲೆ ಲವ್ ಜಾಸ್ತಿ.

ಧನು ತೋರಿಸಿದ ಟ್ರೋಲ್ ನೋಡಿ ಶಾಕ್

ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೂ ತ್ರಿಮೊಕ್ಷಿ, ತ್ರಿವ್ಯಾ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಆಗಿದ್ದವು. ಈ ಬಗ್ಗೆ ಮತ್ತೊಬ್ಬ ಸ್ಪರ್ಧಿಯಾಗಿರುವ ಧನು ಕೇಳಿದ್ದಾರೆ. ನೀನು ಟ್ರೋಲ್‌ಗಳನ್ನ ನೋಡಿದ್ದೀಯಾ ಅಂತ. ಹೌದು ಎಂದು ತ್ರಿವಿಕ್ರಂ ಕೂಡ ಒಪ್ಪಿಕೊಂಡಿದ್ದಾರೆ. ಆದರೆ ಹೊಸ ಟ್ರೋಲ್ ಅನ್ನ ನೋಡಿರಲ್ಲ ಎಂದು ಆ ಹೊಸ ಟ್ರೋಲ್ ಅನ್ನು ತೋರಿಸಿದ್ದಾರೆ.‌ ಅದನ್ನು ನೋಡಿದ ತ್ರಿವಿಕ್ರಂ ಅಂಡ್ ಭವ್ಯಾ ಇಬ್ಬರು ಶಾಕ್ ಆಗಿದ್ದಾರೆ.

'ಮುಸ್ಸಂಜೆ ಮಾತು' ಸೀನ್

ಹೊಸದಾಗಿ ಮಾಡಿರುವ ಟ್ರೋಲ್ ಯಾವ ಮಟ್ಟಕ್ಕೆ ಇದೆ ಅಂದ್ರೆ ಸುದೀಪ್ ಹಾಗೂ ರಮ್ಯಾ ಅವರ ಲವ್ ಸ್ಟೋರಿಯ ಸೀನ್‌ಗೆ ಬಿಗ್ ಬಾಸ್ ಸ್ಪರ್ಧಿಗಳ ಹೆಸರನ್ನ ಹಾಕಿ, ಯಾರ್ಯಾರ ರಿಯಾಕ್ಷನ್ ಹೇಗಿರುತ್ತೆ ಅಂತ ಟ್ರೋಲ್ ಮಾಡಿದ್ದಾರೆ. ಸುದೀಪ್ ಪಾತ್ರದಲ್ಲಿ ತ್ರಿವಿಕ್ರಂ ಹಾಗೂ ರಮ್ಯಾ ಪಾತ್ರದಲ್ಲಿ ಮೋಕ್ಷಿತಾ. 'ಮುಸ್ಸಂಜೆ ಮಾತು' ಸಿನಿಮಾ ಕ್ಲೈಮ್ಯಾಕ್ಸ್ ಸೀನ್ ಅದು.

ನೋಡುಗರ ಕಣ್ಣಲ್ಲೂ ಕಣ್ಣೀರು

ಇಷ್ಟು ದಿನ ಯಾಕೆ ಹೇಳಲಿಲ್ಲ ಎಂಬ ಡೈಲಾಗ್. ಇದಕ್ಕೆ ಭವ್ಯಾ ಹಾಗೂ ಮಂಜಣ್ಣ ಖುಷಿ ಪಡ್ತಾರೆ. ಹೊರಗಿಂದ ಯಮುನಾ ಹಾಗೂ ಗೌತಮಿ ಓಡಿ ಬಂದು ಸೈಲೆಂಟ್ ಆಗಿ ನಿಲ್ತಾರೆ. ಅದನ್ನ ನೋಡುಗರು ಕೂಡ ಆ ಭಾವನಾತ್ಕ ದೃಶ್ಯ ನೋಡಿ ಕಣ್ಣೀರಾಗುತ್ತಾರೆ. ಈ ಮೀಮ್ಸ್ ನೋಡಿದ ತ್ರಿವಿಕ್ರಂ ಅಂತು ಹೊಟ್ಟೆ ಹುಣ್ಣಾಗುವಷ್ಟು ನಕ್ಕಿದ್ದಾರೆ. ಟ್ರೋಲರ್ಸ್ ಹೇಗೆಗೆಲ್ಲಾ ಕಲ್ಪನೆ ಮಾಡ್ಕೊಳ್ತಾರಪ್ಪ ಅಂತ ಆಶ್ಚರ್ಯ ಪಟ್ಟಿದ್ದಾರೆ. ಆದರೂ ತ್ರಮೋಕ್ಷಿ ಫ್ಯಾನ್ಸ್ ಈಗ್ಲೂ ಕಾಯ್ತಾ ಇದಾರೆ ಈ ದೃಶ್ಯಕ್ಕೆ.

More from Filmibeat

English summary
Here is the details about Fans comparing Trivikram and Mokshita love story with Mussanjemaatu movie scene;
Read more about: bigg boss sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X